ದಾವಣಗೆರೆ(ಆ.11): ಉತ್ತರ ಕರ್ನಾಟಕ, ಕರಾವಳಿ ಕರ್ನಾಟಕ ಹಾಗೂ ಜಿಲ್ಲೆಯ ನೆರೆ ಸಂತ್ರಸ್ಥರ ನೆರವಿಗಾಗಿ ಬಿಜೆಪಿ ಜಿಲ್ಲಾ ಘಟಕದಿಂದ ನಗರದಲ್ಲಿ ಶನಿವಾರ ನಿಧಿ ಸಂಗ್ರಹ ಕಾರ್ಯ ಕೈಗೊಳ್ಳಲಾಯಿತು.

ನಗರದ ಕೆ.ಬಿ.ಬಡಾವಣೆಯ ಬಿಜೆಪಿ ಕಚೇರಿಯಲ್ಲಿ ನಿಧಿ ಸಂಗ್ರಹ ಕಾರ್ಯಕ್ಕೆ ಚಾಲನೆ ನೀಡಿದ ಶಾಸಕ, ಮಾಜಿ ಸಚಿವ ಎಸ್‌.ಎ.ರವೀಂದ್ರನಾಥ, ನೆರೆ ಹಾವಳಿ, ಅತಿವೃಷ್ಟಿಯಿಂದಾಗಿ ರಾಜ್ಯವೇ ತತ್ತರಿಸಿದ್ದು, ಲಕ್ಷಾಂತರ ಜನರು ನೆರೆ ಸಂತ್ರಸ್ಥರಾಗಿದ್ದಾರೆ. ಸಂತ್ರಸ್ಥರಿಗೆ ನೆರವಿನ ಹಸ್ತ ಚಾಚಲು ಬಿಜೆಪಿ ಮುಂದಾಗಿದೆ ಎಂದರು.

ನೆರೆ ಸಂತ್ರಸ್ಥರಿಗೆ ಪರಿಹಾರ ಕಾರ್ಯ ಕೈಗೊಳ್ಳಲು ಸರ್ಕಾರ ಈಗಾಗಲೇ ಜಿಲ್ಲಾಡಳಿತಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ನೆರೆ ಸಂತ್ರಸ್ಥರು, ಪ್ರಕೃತಿ ವಿಕೋಪ ಪರಿಹಾರ ಕಾರ್ಯ ಕೈಗೊಳ್ಳಲು ಜಿಲ್ಲಾಡಳಿತದ ಬಳಿ ಯಾವುದೇ ಹಣದ ಕೊರತೆಯೂ ಇಲ್ಲ. 8 ಕೋಟಿ ರು. ಜಿಲ್ಲಾಡಳಿತದ ಬಳಿ ಇದ್ದು, ಮಾನವೀಯ ದೃಷ್ಟಿಯಿಂದ ಪ್ರತಿಯೊಬ್ಬ ಪ್ರಜೆಯೂ ನೆರೆ ಸಂತ್ರಸ್ಥರಿಗೆ ನೆರವಿನ ಹಸ್ತ ಚಾಚಬೇಕಿದೆ ಎಂದು ತಿಳಿಸಿದರು.

3 ಪರಿಹಾರ ಕೇಂದ್ರ:

ಹೊನ್ನಾಳಿ, ಹರಿಹರದಲ್ಲಿ ಒಟ್ಟು 3 ಗಂಜಿ ಕೇಂದ್ರ ಸ್ಥಾಪಿಸಿ, ಸುಮಾರು 60ಕ್ಕೂ ಹೆಚ್ಚು ಜನರಿಗೆ ಆಶ್ರಯ ಕಲ್ಪಿಸಲಾಗಿದೆ. ನೆರೆ ಸಂತ್ರಸ್ಥರಿಗೆ ಯಾವುದೇ ತೊಂದರೆಯಾಗದಂತೆ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಂಡಿದೆ. ದಾವಣಗೆರೆ ನಗರಾದ್ಯಂತ ದಾನಿಗಳಿಂದ ನಿಧಿ, ದೇಣಿಗೆ ಸಂಗ್ರಹಿಸುವ ಮೂಲಕ ಸಂತ್ರಸ್ಥರಿಗೆ ನೀಡಲಾಗುವುದು.ಇಂತಹ ಮಾನವೀಯ ಸಾರ್ವಜನಿಕರೂ ಸಹ ಸ್ಪಂದಿಸುತ್ತಿರುವುದು ಉತ್ತಮ ಕಾರ್ಯವಾಗಿದೆ ಎಂದು ಶ್ಲಾಘಿಸಿದರು.

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕೆರೆ ತುಂಬಿಸಲು ಕ್ರಮ:

ತುಂಗಭದ್ರಾ ನದಿ ತುಂಬಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ 22 ಕೆರೆಗಳ ಏತ ನೀರಾವರಿ ಯೋಜನೆಯ ಕೆರೆಗಳನ್ನು ತುಂಬಿಸಲು ಕ್ರಮ ಕೈಗೊಳ್ಳಲಾಗಿದೆ. ಕೊಡಗನೂರು ಕೆರೆ, ಹೆಬ್ಬಾಳ್‌, ಅಣಜಿ, ಕಂದನಕೋವಿ, ತುಪ್ಪದಹಳ್ಳಿ ಕೆರೆಗಳನ್ನು ತುಂಬಿಸಲಾಗುವುದು. ಜನ ಪ್ರತಿನಿಧಿಗಳು ನಿರ್ಲಕ್ಷ್ಯ ಮಾಡುತ್ತಿಲ್ಲ. ರಾಜ್ಯದಲ್ಲಿ 17 ಜಿಲ್ಲೆಗಳಲ್ಲಿ ನೆರೆ ಹಾವಳಿಯಿಂದ ತತ್ತರಿಸಿದ್ದು, ನೂರಾರು ಗ್ರಾಮಗಳು ನೀರಿಗೆ ಕೊಚ್ಚಿ ಹೋಗಿದ್ದು, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ಮಂಗಳೂರು, ಉಡುಪಿ ಸೇರಿದಂತೆ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಅತಿವೃಷ್ಟಿಯಾಗುತ್ತಿದೆ ಎಂದು ತಿಳಿಸಿದರು.

ವಮೊಗ್ಗ: ತ್ಯಾಗರ್ತಿ ಗ್ರಾಮ ಸಂಪೂರ್ಣ ಜಲಾವೃತ

ವಿಪ ಮಾಜಿ ಮುಖ್ಯ ಸಚೇತಕ ಡಾ.ಎ.ಎಚ್‌.ಶಿವಯೋಗಿಸ್ವಾಮಿ, ಶಾಬನೂರು ಎಚ್‌.ಆರ್‌.ಲಿಂಗರಾಜ, ಮುಕುಂದಪ್ಪ, ಪ್ರಭು ಕಲ್ಬುರ್ಗಿ, ದೊಗ್ಗಳ್ಳಿ ವೀರೇಶ, ಕಲ್ಲಪ್ಪ, ಶಿವರಾಜ ಪಾಟೀಲ, ಎಲ್‌.ಎನ್‌.ಕಲ್ಲೇಶ, ವೀರೇಶ ಪೈಲ್ವಾನ್‌, ದುರುಗೇಶ, ಉಮೇಶ ಪಾಟೀಲ, ವಸಂತ, ಸಿದ್ದೇಶ, ಅತೀಶ್‌ ಅಂಬರಕರ್‌, ಮಂಜುನಾಥ, ಕಾವ್ಯ, ರೇವಣಸಿದ್ದಪ್ಪ ಇತರರು ಇದ್ದರು.