ದಾವಣಗೆರೆ(ಆ.11): ಚನ್ನಗಿರಿ ರಾಜ್ಯದಲ್ಲಿ ಅತಿವೃಷ್ಟಿಮಳೆಗೆ ನೆರೆಹಾವಳಿಗೆ ತತ್ತರಿಸಿರುವ ಉತ್ತರ ಕರ್ನಾಟಕದ ಜನತೆಗೆ ನೆರವಾಗುವ ಉದ್ದೇಶದಿಂದ ತಾಲೂಕಿನ ಕಾಕನೂರು, ಬುಸ್ಸೇನಹಳ್ಳಿ, ಹಿರೇಕೋಗಲೂರು ಗ್ರಾಮದ ಗ್ರಾಮಸ್ಥರು ಬಟ್ಟೆ, ಹೊದಿಕೆ, ಧಾನ್ಯ ಮತ್ತು ಸಿದ್ಧಪಡಿಸಿದ ರೊಟ್ಟಿಚಟ್ನಿ ಪುಡಿ ಇಂತಹ ಆಹಾರ ಸಾಮಾಗ್ರಿಗಳನ್ನು ನೆರೆ ಸಂತ್ರಸ್ತರ ಗ್ರಾಮಗಳಿಗೆ ತೆರಳಿ ಸಂತ್ರಸ್ತರಿಗೆ ಆಹಾರ ವಿತರಿಸಿದರು.

15,000 ರೊಟ್ಟಿ, 20 ಕ್ವಿಂಟಲ್ ಅಕ್ಕಿ:

ಕಾಕನೂರು ಗ್ರಾಮದ ನಾಗರಿಕರು 15ಸಾವಿರ ರೊಟ್ಟಿ, 20 ಕ್ವಿಂಟಲ್‌ ಅಕ್ಕಿ, 40 ಬಾಕ್ಸ್‌ ಬಿಸ್ಕೇಟ್‌, 150 ಚಾಪೆ, 150 ಹೊದಿಕೆ, ಒಂದುನೂರು ಟವಲ್‌, ಒಂದು ಕ್ವಿಂಟಾಲ್‌ ಚಟ್ನಿ ಪುಡಿ ಈ ಪದಾರ್ಥಗಳನ್ನು ಉತ್ತರ ಕರ್ನಾಟಕದ ಗೋಕಾಕ್‌ ಪ್ರದೇಶದಲ್ಲಿ ಸ್ಥಾಪಿಸಿರುವ ಉತ್ತಲಗುಡ್ಡ ಎಂಬ ಗಂಜೀ ಕೇಂದ್ರಕ್ಕೆ ಗ್ರಾಮದ 11ಜನರ ಯುವಕರ ತಂಡ ನೇರವಾಗಿ ತೆರಳಿ ಆಹಾರ ಸಾಮಾಗ್ರಿಗಳನ್ನು ವಿತರಿಸಿ ನೊಂದವರಿಗೆ ಸಾಂತ್ವನ ಹೇಳಿದರು.

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಒಂದು ತಿಂಗಳ  ಪಡಿತರ ಸಂತ್ರಸ್ತರಿಗೆ:

ತಾಲೂಕಿನ ಬುಸ್ಸೇನಹಳ್ಳಿಯ ಗ್ರಾಮಸ್ಥರು 10ಸಾವಿರ ರೊಟ್ಟಿ, 1ಕ್ವಿಂಟಾಲ್‌ ಕಡ್ಲೆಯ ಚಟ್ನಿ ಪುಡಿ ತಯಾರುಮಾಡಿಕೊಂಡು ಪ್ಯಾಕೇಟ್‌ ಮಾಡುವಲ್ಲಿ ನಿರತರಾಗಿದ್ದಾರೆ. ಕೋಗಲೂರು ಗ್ರಾಮದ ಗ್ರಾಮಸ್ಥರು 15ಸಾವಿರ ರೊಟ್ಟಿ, 10ಸಾವಿರ ನೀರಿನ ಬಾಟಲ್‌, 500ಸೀರೆ ಗ್ರಾಮದ ಶಾಲಾಕಾಲೇಜುಗಳ ಶಿಕ್ಷಕರಿಂದ ಒಂದು ದಿನದ ವೇತನವನ್ನು ನೀಡುವುದಾಗಿ ತಿಳಿಸಿದ್ದು, ಗ್ರಾಮದ ಜನರು ಎಲ್ಲರೂ 1ತಿಂಗಳ ಪಡಿತರ ಆಹಾರ ಪದಾರ್ಥಗಳನ್ನು ನೀಡಲು ಒಪ್ಪಿಕೊಂಡಿದ್ದಾರೆ.

ದಾವಣಗೆರೆ: ನೆರೆ ಸಂತ್ರಸ್ಥರಿಗೆ ಬಿಜೆಪಿ ದೇಣಿಗೆ ಸಂಗ್ರಹ

ಅಕ್ಕಿ, ಬೇಳೆ ಮೊದಲಾದವುಗಳನ್ನು ಜಿಲ್ಲಾಧಿಕಾರಿಗಳ ಮೂಲಕ ಸಂತ್ರಸ್ತರಿಗೆ ಕಳುಹಿಸಿದ್ದು ಸಿದ್ಧಪಡಿಸಿದ ಆಹಾರ ಪದಾರ್ಥಗಳನ್ನು ಗ್ರಾಮದ ಜನರೇ ಮಂಗಳವಾರ ಬೆಳಗಾವಿ ಜಿಲ್ಲೆಯ ಆಥಣಿ ತಾಲೂಕಿನಲ್ಲಿರುವ ಗಂಜೀ ಕೇಂದ್ರಗಳಿಗೆ ನೀಡಲಾಗುವುದು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.