ಮಂಗಳೂರಿನ ಬೆಳ್ತಂಗಡಿ ತಾಲೂಕಿನಲ್ಲಿ ಜನರು ಇಂದಿಗೂ ಹೊಳೆ ದಾಟಲು ತೆಂಗಿನ ಮರವನ್ನೇ ಅವಲಂಬಿಸಿದ್ದಾರೆ. 400ಕ್ಕೂ ಹೆಚ್ಚು ಜನ ತುಂಬಿ ಹರಿಯುವ ಹೊಳೆಯನ್ನು ತೆಂಗಿನ ಮರದ ಸಹಾಯದಿಂದಲೇ ದಾಟುತ್ತಿದ್ದಾರೆ. ಸೇತುವೆ ಮುರಿದಿದ್ದರಿಂದ ಜನರು ಜೀವ ಪಣಕ್ಕಿಟ್ಟು ಹೊಳೆ ದಾಟಬೇಕಾಗಿದೆ.
Karnataka Districts Aug 13, 2019, 4:23 PM IST
ಪ್ರವಾಹದಲ್ಲಿ ಮನೆ ಕಳೆದುಕೊಂಡವರಿಗೆ ಮನೆ ಕಟ್ಟಿಸಿಕೊಡದಿದ್ದರೆ ಸರ್ಕಾರವನ್ನೇ ಕೆಡವುತ್ತೇನೆ ಎಂದು ಅರಭಾವಿ ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ಸರ್ಕಾರಕ್ಕೆ ಎಚ್ಚರಿಕೆ ನೀಡುವ ಮೂಲಕ ಸಂತ್ರಸ್ತರಿಗೆ ಅಭಯ ನೀಡಿದರು.
Karnataka Districts Aug 13, 2019, 4:23 PM IST
ರಾಜ್ಯದಲ್ಲಿ ಭೀಕರ ಪ್ರವಾಹ ಪರಿಸ್ಥಿತಿ ತಲೆದೋರಿದ್ದು, ಈ ಸಂದರ್ಭದಲ್ಲಿ ಭಾರತೀಯ ಸೇನಾ ಪಡೆ ಯೋಧರು ಪ್ರಾಣದ ಹಂಗು ತೊರೆದು ಸಾವಿರಾರು ಜನರ ಜೀವ ಕಾಪಾಡಿದ್ದಾರೆ. ಇಂತಹ ಯೊಧರಿಗೆ ಜಿಲ್ಲಾಡಳಿತದ ಮಹಿಳಾ ನೌಕರರು ರಾಝಿ ಕಟ್ಟಿ ಬಾಂಧವ್ಯ ಬೆಸೆದಿದ್ದಾರೆ.
Karnataka Districts Aug 13, 2019, 3:56 PM IST
ರಾಜ್ಯದಲ್ಲಿ ಭೀಕರ ಪ್ರವಾಹ ಪರಿಸ್ಥಿತಿಯಲ್ಲಿ ಜನರು ನಲುಗುತ್ತಿದ್ದರೆ. ಕೆಲ ರಾಜಕೀಯ ನಾಐಕರು ಮಾತ್ರ ತಮ್ಮ ರಾಜಕೀಯ ನಿಲ್ಲಿಸಿಲ್ಲ. ಬಿಜೆಪಿ ಶಾಸಕರೋರ್ವರು ಪ್ರವಾಹ ಸಂತ್ರಸ್ತರ ಎದುರಲ್ಲೆ ಕೈ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
Karnataka Districts Aug 13, 2019, 2:16 PM IST
ಹಾಸನದಲ್ಲಿ ಭಾರೀ ಮಳೆ ಹಾಗೂ ನೆರೆಯಿಂದ ಜಿಲ್ಲೆಯಲ್ಲಿ ಅಪಾರ ನಷ್ಟ ಸಂಭವಿಸಿದೆ. ಜಿಲ್ಲೆಯ ಆರು ತಾಲೂಕುಗಳಲ್ಲಿ ಅತಿವೃಷ್ಟಿಯಿಂದ ಮನೆಗಳು, ನಾನಾ ಬೆಳೆಗಳು ಹಾನಿ, ರಸ್ತೆ, ಸೇತುವೆ, ಕಟ್ಟಡಗಳು ಮತ್ತಿತರ ಸಾರ್ವಜನಿಕ ಸ್ವತ್ತುಗಳು ಸೇರಿ ಅಂದಾಜು 150 ಕೋಟಿ ರು. ನಷ್ಟಸಂಭವಿಸಿದೆ ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷ ತಿಳಿಸಿದ್ದಾರೆ.
Karnataka Districts Aug 13, 2019, 2:05 PM IST
ಜಲಪ್ರಳಯದಿಂದ ಉತ್ತರ ಕರ್ನಾಟಕ ಸೇರಿ 17 ಜಿಲ್ಲೆಯ ಜನರು ಸಂತ್ರಸ್ತರಾಗಿದ್ದು, ಇವರ ನೆರವಿಗೆ ಧಾವಿಸಿರುವ ಸಿದ್ಧಗಂಗಾ ಮಠಾಧ್ಯಕ್ಷ ಡಾ. ಸಿದ್ದಲಿಂಗ ಸ್ವಾಮೀಜಿ ಜೋಳಿಗೆ ಹಿಡಿದು ಧಾನ್ಯ ಸೇರಿ ಇತರ ವಸ್ತುಗಳನ್ನು ಸಂಗ್ರಹಿಸಿದ್ದಾರೆ. ಒಟ್ಟು 4 ಟನ್ ವಸ್ತುಗಳು ಸಂಗ್ರಹವಾಗಿದೆ. ನಗದು ನಿರಾಕರಿಸಿ ವಸ್ತುಗಳನ್ನಷ್ಟೇ ಸಂಗ್ರಹಿಸಲಾಗಿದೆ.
Karnataka Districts Aug 13, 2019, 1:58 PM IST
ಈ ಬಾರಿಯ ಮಳೆ ಸೃಷ್ಟಿಸಿದ ಅವಾಂತರ ಒಂದೆರಡಲ್ಲ. ಪ್ರವಾಹದಿಂದಾಗಿ ಸಾವಿರಾರು ಮಂದಿ ಮನೆ, ಜಮೀನು ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಊಟಕ್ಕೂ ಪರದಾಡುವ ಸ್ಥಿತಿಯಲ್ಲಿದ್ದಾರೆ. ಸಾರ್ವಜನಿಕರು ನೆರವಿನ ಹಸ್ತ ಚಾಚುತ್ತಿದ್ದಾರೆ. ನಟ ರಿತೇಶ್ ದೇಶ್ಮುಖ್ ದಂಪತಿ ಮುಖ್ಯಮಂತ್ರಿ ಪ್ರವಾಹ ಪರಿಹಾರ ನಿಧಿಗೆ ದೇಣಿಗೆ ನೀಡಿದ್ದಾರೆ.
ENTERTAINMENT Aug 13, 2019, 1:48 PM IST
ಇತ್ತ 17 ಜಿಲ್ಲೆಗಳು ಪ್ರವಾಹದಿಂದ ತತ್ತರಿಸುತ್ತಿದ್ದರೆ ಅತ್ತ ಕೆಲ ಜಿಲ್ಲೆಗಳು ಮಳೆ ಇಲ್ಲದೇ ಬರದಿಂದ ತಲುಗುತ್ತಿವೆ. ಮಂಡ್ಯದ ಶಾಸಕರೋರ್ವರು ಮಳೆಗಾಗಿ ಹಾಡಿನ ಮೂಲಕ ಪ್ರಾರ್ಥಿಸಿದ್ದಾರೆ.
Karnataka Districts Aug 13, 2019, 1:27 PM IST
ಪ್ರವಾಹ ಪೀಡಿತ ವಯನಾಡಿಗೆ ರಾಹುಲ್ ಸಾಂತ್ವನ| ನಿರಾಶ್ರಿತರಿಗೆ ಕಂಗಾಲಾಗದಂತೆ ರಾಹುಲ್ ಗಾಂಧಿ ಮನವಿ
NEWS Aug 13, 2019, 12:45 PM IST
ಕರುನಾಡನ್ನು ತಲ್ಲಣಗೊಳಿಸಿದ್ದ ಪ್ರವಾಹದಿಂದ ಅನೇಕರು ತಮ್ಮ ಮನೆ, ಜಾನುವಾರುಗಳನ್ನು ಕಳೆದುಕೊಂಡಿದ್ದಾರೆ. ಜೀವ ರಕ್ಷಣೆಗಾಗಿ ಉಟ್ಟ ಉಡುಗೆಯಲ್ಲೇ ಸುರಕ್ಷಿತ ಪ್ರದೆಶಕ್ಕೆ ತೆರಳಿದ್ದಾರೆ. ವರುಣನ ಅಬ್ಬರಕ್ಕೆ ಎಲ್ಲವನ್ನೂ ಕಳೆದುಕೊಂಡಿರುವ ಸಂತ್ರಸ್ತರ ನೆರವಿಗೆ ಕೈಲಾದಷ್ಟು ಸಹಾಯ ಮಾಡಲು ಸುವರ್ಣ ನ್ಯೂಸ್ ಹಾಗೂ ಕನ್ನಡಪ್ರಭ 'ಉತ್ತರ'ದೊಂದಿಗೆ ಕರುನಾಡು ಅಭಿಯಾನವನ್ನು ಆರಂಭಿಸಿತ್ತು. ಪ್ರವಾಹ ಪೀಡಿತರ ಸಂಕಷ್ಟಕ್ಕೆ ಸ್ಪಂದಿಸಲು ಸಾವಿರಾರು ಮಂದಿ ಸಹಾಯ ಮಾಡಿದ್ದು, ಆಹಾರ, ಮೆಡಿಸಿನ್, ಬಟ್ಟೆ, ಹೊದಿಕೆ ನೀಡಿ ಭಯಬೇಡ ನಾವಿದ್ದೇವೆ ಎಂಬ ಸಂದೇಶ ರವಾನಿಸಿದ್ದಾರೆ. ನೊಂದವರಿಗಾಗಿ ಮಿಡಿದ ಸಹೃದಯಿಗಳ ಪ್ರತಿಕ್ರಿಯೆ ಹೇಗಿತ್ತು? ಇಲ್ಲಿದೆ 'ಸುವರ್ಣ' ನುಡಿಗಳು
NEWS Aug 13, 2019, 12:30 PM IST
ಶಿವಮೊಗ್ಗದ ಗೋಪಾಳ ಬಡಾವಣೆಯಲ್ಲಿ ನೆರೆ ಸಂತ್ರಸ್ತರರಿಗೆ ನೆರವಾಗುವ ನಿಟ್ಟಿನಲ್ಲಿ ಪರಿಹಾರ ಸ್ವೀಕಾರ ಕೇಂದ್ರವೊಂದನ್ನು ಆರಂಭಿಸಲಾಗಿದೆ. ಆ.13ರಿಂದ ಇದು ಕಾರ್ಯನಿರ್ವಹಿಸಲಿದ್ದು, ಹೊಸ ಪಾತ್ರೆಗಳನ್ನು, ಬಳಸದೆ ಇರುವ ಬಟ್ಟೆ, ಟೂಥ್ ಪೇಸ್ಟ್, ಬ್ರಶ್, ಸೋಪ್, ಬೆಡ್ಶೀಟ್, ಟವಲ್ ಸೇರಿದಂತೆ ಅಗತ್ಯ ವಸ್ತುಗಳನ್ನು ಸಾರ್ವಜನಿಕರು ಇಲ್ಲಿಗೆ ತಂದು ಕೊಡಬಹುದಾಗಿದೆ.
Karnataka Districts Aug 13, 2019, 12:27 PM IST
ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿಯಿಂದ ಹಾನಿ ಉಂಟಾದ ಹಿನ್ನೆಲೆಯಲ್ಲಿ ಸಂತ್ರಸ್ತರಿಗೆ ನೆರವು ನೀಡುವ ಉದ್ದೇಶದಿಂದ ಸೋಮವಾರ ಸಂಸದ ಬಿ.ವೈ.ರಾಘವೇಂದ್ರ ಮತ್ತಿತರರು ನಿಧಿ ಸಂಗ್ರಹ ಮಾಡಿದರು. ವಿನೋಬನಗರ ಪೊಲೀಸ್ ಚೌಕಿ ವೃತ್ತದಲ್ಲಿ ನಿಧಿ ಸಂಗ್ರಹಣೆ ನಡೆಸಲಾಯಿತು.
Karnataka Districts Aug 13, 2019, 12:15 PM IST
ಕರ್ನಾಟಕ ಪ್ರವಾಹದಿಂದ ಸಂತ್ರಸ್ತರಾಗಿರುವ ಜನರಿಗೆ ತಾತ್ಕಾಲಿಕ ಸೂರು ಒದಗಿಸುವ ನಿಟ್ಟಿನಲ್ಲಿ ಹೊಂಬುಜ ಜೈನಮಠದಿಂದ 1000 ರೂಫಿಂಗ್ ಶೀಟ್ಗಳನ್ನು ಕೊಡುಗೆಯಾಗಿ ಕಳುಹಿಸಲಾಗಿದೆ. ಮುಂದಿನ ದಿನಗಳಲ್ಲಿ 50 ಗೋವುಗಳನ್ನು ಸಂತ್ರಸ್ತ ಕುಟುಂಬಕ್ಕೆ ನೀಡಲಾಗುವುದೆಂದು ಜಗದ್ಗುರು ಡಾ. ದೇವೇಂದ್ರಕಿರ್ತಿ ಭಟ್ಟಾರಕ ಸ್ವಾಮಿಜಿ ತಿಳಿಸಿದ್ದಾರೆ.
Karnataka Districts Aug 13, 2019, 12:01 PM IST
ಭಾರೀ ಪ್ರಮಾಣದಲ್ಲಿ ಸುರಿದ ಮಳೆಯಿಂದ ತುಂಗಭದ್ರಾ ಡ್ಯಾಂ ನಲ್ಲಿ ನೀರಿನ ರಭಸ ಹೆಚ್ಚಾಗಿದ್ದು, ಕಾಲುವೆ ಕೊಚ್ಚಿ ಹೋಗಿದ್ದು ಸುತ್ತಲಿನ ಪ್ರದೇಶಗಳಲ್ಲಿ ಆತಂಕ ಮನೆ ಮಾಡಿದೆ.
Karnataka Districts Aug 13, 2019, 11:54 AM IST
ಕರ್ನಾಟಕ ಪ್ರವಾಹ ಪೀಡಿತ ಪ್ರದೇಶಗಳ ಯುವಕರಿಗಾಗಿ ಇಲ್ಲೊಂದು ಸಂಸ್ಥೆ ಉದ್ಯೋಗಾವಕಾಶ ಕಲ್ಪಿಸುತ್ತಿದೆ. 500 ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸಲು ಇಂಡಿಯನ್ ಮನಿ ಡಾಟ್.ಕಾಂ ನಿರ್ಧರಿಸಿದೆ.
Jobs Aug 13, 2019, 11:40 AM IST