ಬಾಗಲಕೋಟೆ [ಆ.13]: ರಾಜ್ಯದಲ್ಲಿ ಭೀಕರ ಪ್ರವಾಹ ಪರಿಸ್ಥಿತಿ ನಡುವೆ ನೆರೆ ಪೀಡಿತ ಪ್ರದೇಶಕ್ಕೆ ತೆರಳಿದ ಬಿಜೆಪಿ ಶಾಸಕರೋರ್ವರ  ಕಷ್ಟದ ಸಮಯದಲ್ಲೂ ತಮ್ಮ ರಾಜಕೀಯ ನಡೆ ಪ್ರದರ್ಶಿಸಿದ್ದಾರೆ.

ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿ, ಅವರು ಸುಳ್ಳು ಭರವಸೆಗಳನ್ನು ನೀಡಿ ಹೋಗುತ್ತಾರೆ. ನೀವು ಅವರನ್ನೇ ನಂಬಿಕೊಂಡು ಕೂರುತ್ತೀರಿ ಎಂದಿದ್ದಾರೆ.

ಬಾಗಲಕೋಟೆ ಬಿಜೆಪಿ ಶಾಸಕ ವೀರಣ್ಣ ಚರಂತಿಮಠ  ನಗರದ ಎಸ್ ಸಿ ಕಾಲೋನಿಗೆ ಭೇಟಿ ನೀಡಿದ್ದ ಹೇಳಿಕೆ ಎಲ್ಲೆಡೆ ವೈರಲ್ ಆಗಿದೆ. ಶಾಸಕರು ತಮ್ಮ ಪ್ರದೇಶಕ್ಕೆ ಆಗಮಿಸಿದ್ದ ವೇಳೆ  ಸಾಹೇಬ್ರೆ ನಮ್ಗೇ ಹಕ್ಕು ಪತ್ರ ಕೊಡ್ಸಿ ಎಂದು ಕೇಳಿದ ಸಂತ್ರಸ್ತರ ಎದುರಿನಲ್ಲೇ ಸಾಂತ್ವನದ ಮಾತು ಬಿಟ್ಟು  ಕೈ ನಾಯಕರ ವಿರುದ್ಧ ವಾಕ್ ಪ್ರಹಾರ ನಡೆಸಿ ಹೋಗಿದ್ದಾರೆ.    

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕಾಂಗ್ರೆಸಿನವರು ನಿಮಗಾಗಿ ಏನು ಮಾಡಿದ್ದಾರೆ. ಆದರೆ ನೀವು ಮಾತ್ರ ಅಂತವರನ್ನೇ ನಂಬಿಕೊಂಡು ಕುಳಿತಿದ್ದೀರಿ ಎಂದಿದ್ದಲ್ಲೇ ವಿವಾದಾತ್ಮಕ ಹೇಳಿಕೆಗಳನ್ನೂ ಶಾಸಕರು ನೀಡಿದ್ದಾರೆ. ಈ ಮೂಲಕ ಪ್ರವಾಹದ ಸ್ಥಳದಲ್ಲಿಯೂ ರಾಜಕೀಯ ಮಾಡಿದ್ದಾರೆ.