ಬೆಂಗಳೂರು [ಆ.13]:  ಭಾರತದ ಅತಿ ದೊಡ್ಡ ಹಣಕಾಸು ಶಿಕ್ಷಣ ಸಂಸ್ಥೆ ಇಂಡಿಯನ್ ಮನಿ ಡಾಟ್ ಕಾಂ ಪ್ರವಾಹ ಪೀಡಿತ ಪ್ರದೇಶದ 500 ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸಲು ಮುಂದಾಗಿದೆ. 

ಉತ್ತರ ಕರ್ನಾಟಕ ಭಾಗದ ಬಿಕಾಂ, ಬಿಬಿಎಂ, ಎಂಬಿಎ ಪದವೀಧರರಿಗೆ ಆಕರ್ಷಕ ಹುದ್ದೆಗಳನ್ನು ಮೀಸಲಿಟ್ಟಿದೆ. ಸಂದರ್ಶನ ಪ್ರಕ್ರಿಯೆಯಲ್ಲಿ ಆಯ್ಕೆಯಾದವರಿಗೆ ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ಉದ್ಯೋಗಾವಕಾಶ ಲಭಿಸಲಿದ್ದು, 18 ರಿಂದ 30 ಸಾವಿರದ ವರೆಗೆ ವೇತನ ಸಿಗಲಿದೆ.

ಉದ್ಯೋಗಾವಕಾಶ ಕಲ್ಪಿಸುವ ಕುರಿತು ಮಾತನಾಡಿದ ಇಂಡಿಯನ್ ಮನಿ ಡಾಟ್ ಕಾಂ ಸಂಸ್ಥಾಪಕ ಮತ್ತು ಸಿಇಒ ಸಿ ಎಸ್ ಸುಧೀರ್, “ನೆರೆಯಲ್ಲಿ ನೊಂದವರಿಗೆ ನೆರವಾಗಬೇಕು ಎನ್ನುವ ದೃಷ್ಟಿಯಿಂದ ಇಂಡಿಯನ್ ಮನಿ ಡಾಟ್ ಕಾಂ ಈ ಜವಾಬ್ದಾರಿ ತೆಗೆದುಕೊಂಡಿದೆ. ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಉದ್ಯೋಗದ ಅವಶ್ಯಕತೆ ಇರುತ್ತದೆ. ನಾನು ಕೂಡ ಹಳ್ಳಿಯ ಹಿನ್ನಲೆಯಿಂದ ಬಂದವನಾಗಿರುವುದರಿಂದ ಕಷ್ಟದ ತೀವ್ರತೆ ನನಗೆ ಅರ್ಥವಾಗುತ್ತದೆ. ನಮ್ಮ ಸಂಸ್ಥೆ ಈ ಉದ್ಯೋಗಾವಕಾಶ ಕಲ್ಪಿಸುವುದು ಸಾಮಾಜಿಕ ಹೊಣೆಗಾರಿಕೆಯ ಭಾಗ ಎಂದು ಭಾವಿಸಿದ್ದೇನೆ ” ಎಂದರು.

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಉದ್ಯೋಗಾವಕಾಶ ಕುರಿತ ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ನಂಬರ್ 9980372007 ಅಥವಾ 080- 42687207 ಸಂಪರ್ಕಿಸಲು ಕೋರಲಾಗಿದೆ. ಕಚೇರಿ ವಿಳಾಸ: ಕೈಕಾ ಬಿಸಿನೆಸ್ ಪಾರ್ಕ್ , ಕೆಎಚ್ ರಸ್ತೆ, ಶಾಂತಿನಗರ ಬಿಎಂಟಿಸಿ ಬಸ್ ನಿಲ್ದಾಣದ ಹತ್ತಿರ, ಶಾಂತಿನಗರ, ಬೆಂಗಳೂರು - 560027