ಶಿವಮೊಗ್ಗ: ತಾತ್ಕಾಲಿಕ ಮನೆ ನಿರ್ಮಾಣಕ್ಕೆ 1000 ಶೀಟ್‌ ಕೊಡುಗೆ

ಕರ್ನಾಟಕ ಪ್ರವಾಹದಿಂದ ಸಂತ್ರಸ್ತರಾಗಿರುವ ಜನರಿಗೆ ತಾತ್ಕಾಲಿಕ ಸೂರು ಒದಗಿಸುವ ನಿಟ್ಟಿನಲ್ಲಿ ಹೊಂಬುಜ ಜೈನಮಠದಿಂದ 1000 ರೂಫಿಂಗ್ ಶೀಟ್‌ಗಳನ್ನು ಕೊಡುಗೆಯಾಗಿ ಕಳುಹಿಸಲಾಗಿದೆ. ಮುಂದಿನ ದಿನಗಳಲ್ಲಿ 50 ಗೋವುಗಳನ್ನು ಸಂತ್ರಸ್ತ ಕುಟುಂಬಕ್ಕೆ ನೀಡಲಾಗುವುದೆಂದು ಜಗದ್ಗುರು ಡಾ. ದೇವೇಂದ್ರಕಿರ್ತಿ ಭಟ್ಟಾರಕ ಸ್ವಾಮಿಜಿ ತಿಳಿಸಿದ್ದಾರೆ.

Hombuja Jain Math donates 1000 roofing sheets for flood victims

ಶಿವಮೊಗ್ಗ(ಆ.13): ರಿಪ್ಪನ್‌ಪೇಟೆ ದಕ್ಷಿಣ ಭಾರದ ಕೃಷ್ಣಾ ನದಿ ಉಕ್ಕಿ ಹರಿದ ಪರಿಣಾಮ ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಮನೆ ಕಳೆದುಕೊಂಡು ನಿರಾಶ್ರತರಾಗಿರುವ ಕುಟುಂಬಗಳಿಗೆ ತಾತ್ಕಾಲಿಕ ಶೆಡ್‌ ನಿರ್ಮಾಣಕ್ಕೆ ಹೊಂಬುಜ ಜೈನಮಠದಿಂದ 1000 ಶೀಟ್‌ (ರೂಪ್‌ ಶೀಟ್‌)ಗಳನ್ನು ಕೊಡುಗೆಯಾಗಿ ಕಳುಹಿಸಲಾಗಿದೆ ಎಂದು ಮಠದ ಶ್ರೀ ಜಗದ್ಗುರು ಡಾ. ದೇವೇಂದ್ರಕಿರ್ತಿ ಭಟ್ಟಾರಕ ಸ್ವಾಮಿಜಿ ತಿಳಿಸಿದ್ದಾರೆ.

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಿಂದಾಗಿ ನದಿಗಳು ತುಂಬಿ ಹರಿಯುತ್ತಿದ್ದು ಕೃಷ್ಣಾ ನದಿ ತೀರದ ಭಾಗಗಳಲ್ಲಿನ ರೈತರು ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ ಎಂದರು.

ಸಂತ್ರಸ್ತರಿಗೆ ಗೋವು ವಿತರಣೆ:

ಸಂತ್ರಸ್ತ ಕುಟುಂಬಗಳಿಗೆ ಸರ್ಕಾರ ಮತ್ತು ವಿವಿಧ ಸಂಘ ಸಂಸ್ಥೆಗಳವರು ಸಹಾಯ ಹಸ್ತ ನೀಡುತ್ತಿದ್ದು ಮಠದಿಂದ ನಿರಾಶ್ರಿತರಾಗಿರುವ ಕುಟುಂಬಗಳಿಗೆ ನೆರವು ನೀಡುವ ಉದ್ದೇಶದಿಂದಾಗಿ 1000 ಶೀಟ್‌ (ಮನೆ ಮೇಲ್ಚಾವಣಿ)ಗಳನ್ನು ಕಳುಹಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ 50 ಗೋವುಗಳನ್ನು ಸಂತ್ರಸ್ತ ಕುಟುಂಬಕ್ಕೆ ನೀಡಲಾಗುವುದೆಂದು ಸ್ವಾಮೀಜಿ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ದಾವಣಗೆರೆ: ನೆರೆ ಸಂತ್ರಸ್ತರಿಗೆ 15,000 ರೊಟ್ಟಿ ವಿತರಣೆ

Latest Videos
Follow Us:
Download App:
  • android
  • ios