ನಿಮ್ಮ ಮದುವೆಯಲ್ಲಿ ಧರಿಸಿದ ಚಿನ್ನದ ಉಂಗುರಕ್ಕೆ ಕೋಟ್ಯಾಂತರ ವರ್ಷಗಳ ಇತಿಹಾಸವಿದೆ. ಭೂಮಿಗಿಂತ ಸಾವಿರಾರು ವರ್ಷ ಹಳೇ ಇತಿಹಾಸ ಚಿನ್ನಕ್ಕಿದೆ. ಈ ಕಾರಣ ನಿಮ್ಮನ್ನು ಮತ್ತೆ ರೊಮ್ಯಾಂಟಿಕ್ ಮೂಡ್‌ಗೆ ಕೊಂಡೊಯ್ಯಲಿದೆ.
ಭಾರತೀಯರಿಗೆ ಚಿನ್ನ ಪ್ರಮುಖ ವಸ್ತು. ಮದುವೆಯಲ್ಲಿ ಚಿನ್ನ ಅತ್ಯಂತ ಪ್ರಧಾನ. ವಿಜಯನಗರ ಸಾಮ್ರಾಜ್ಯಗಳಲ್ಲಿ ಚಿನ್ನವನ್ನು ಬೀದಿ ಬೀದಿಯಲ್ಲಿ ರಾಶಿ ಹಾಕಿ ತರಕಾರಿ ರೀತಿ ಮಾರಾಟ ಮಾಡಲಾಗುತ್ತಿತ್ತು ಅನ್ನೋದು ಇತಿಹಾಸ. ಆದರೆ ಇದೀಗ ಚಿನ್ನದ ಬೆಲೆ, ಪ್ರಾಮುಖ್ಯತೆ ಎಲ್ಲರಿಗೂ ತಿಳಿದಿದೆ. ಇತ್ತೀಚೆಗೆ ನಡೆದ ಸಂಶೋಧನೆ ಚಿನ್ನದ ಕುರಿತು ಹಲವು ಸ್ಫೋಟಕ ಮಾಹಿತಿ ಬಹಿರಂಗಪಡಿಸಿದೆ. ನೀವು ಮದುವೆಗೆ ಧರಿಸಿದ ಚಿನ್ನದ ಉಂಗುರ, ತಾಳಿ, ಸರ ಸೇರಿದಂತೆ ಚಿನ್ನದ ಆಭರಣಗಳ ಇತಿಹಾಸವನ್ನು ವಿಜ್ಞಾನಿಗಳು ಬಹಿರಂಗಪಡಿಸಿದ್ದಾರೆ. ಭೂಮಿಯಲ್ಲಿ ಸಿಕ್ಕ ಚಿನ್ನದ ನಿಕ್ಷೇಪ ಸೌರ ಮಂಡಲ ರೂಪುಗೊಳ್ಳುವ ಮೊದಲು ಸೃಷ್ಟಿಯಾಗಿದೆ ಎಂದು ಸಂಶೋಧನೆ ಹೇಳುತ್ತಿದೆ.
ನಕ್ಷತ್ರಗಳ ಚುಂಬನದಿಂದ ಸೃಷ್ಟಿಯಾಯ್ತು ಚಿನ್ನ
ಸೈನ್ಸ್ ಬ್ಲಾಗ್ ಪ್ರಕಾರ ವಿಜ್ಞಾನಿಗಳ ಸಂಶೋಧನೆಯಲ್ಲಿ ಹಲವು ಕುತೂಹಲಕರ ಅಂಶ ಬಯಲಾಗಿದೆ. ಭೂಮಿಯಲ್ಲಿ ಸಿಗುವ ಚಿನ್ನಗಳ ಸೃಷ್ಟಿ ಹೇಗಾಯಿತು ಅನ್ನೋದನ್ನು ವಿಜ್ಞಾನಿಗಳು ಬಹಿರಂಗಪಡಿಸಿದ್ದಾರೆ. ಸಂಶೋಧನೆಯಲ್ಲಿ ವೈಜ್ಞಾನಿಕವಾಗಿ ಚಿನ್ನದ ಸೃಷ್ಟಿಯನ್ನು ನ್ಯೂಟ್ರಾನ್ ನಕ್ಷತ್ರಗಳು ಡಿಕ್ಕಿಯಾದಾಗ ಚಿಮ್ಮುವು ಧೂಳಿನಿಂದ ಚಿನ್ನ ಸೃಷ್ಟಿಯಾಗಿ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಇದನ್ನು ವೈಜ್ಞಾನಿಕವಾಗಿ ಕಿಲೋನೋವಾ ಎಂದು ಕರೆಯಲಾಗುತ್ತದೆ. ಇದನ್ನೇ ಕಾವ್ಯಾತ್ಮಕವಾಗಿ ವಿವರಿಸಲಾಗುತ್ತಿದೆ. ನಕ್ಷತ್ರಗಳ ಚುಂಬನದಿಂದ ಚಿನ್ನವು ಸೃಷ್ಟಿಯಾಗಿದೆ. ಇದೇ ಚಿನ್ನವನ್ನು ಮದುವೆ, ನಿಶ್ಚಿತಾರ್ಥ ವರ ವಧುವಿಗೆ ತೊಡಿಸಿದ್ದಾರೆ.ತಾಳಿ ಕಟ್ಟಿದ್ದಾರೆ ಎಂದು ವಿವರಿಸಲಾಗುತ್ತಿದೆ. ನಕ್ಷತ್ರಗಳ ಪರಸ್ಪರ ಡಿಕ್ಕಿಯಿಂದ ಚಿನ್ನವೊಂದು ಸೃಷ್ಟಿಯಾಗಿದೆ.
ನಕ್ಷತ್ರಗಳ ಡಿಕ್ಕಿ, ಘರ್ಷಣೆಯಿಂದ ಹುಟ್ಟಿತು ಚಿನ್ನ
ನಕ್ಷತ್ರಗಳಲ್ಲಿನ ಹೈಡ್ರೋಜನ್ ಹಾಗೂ ಹೀಲಿಯಂ ಧಾತುಗಳಿವೆ. ಆದರೆ ಸತ್ತ ಅಂದರೆ ಜೀವ ಕಳೆದುಕೊಂಡ ನಕ್ಷತ್ರಗಳು ಅತ್ಯಂತ ವೇಗಾಗಿ ಬೀಳುವ ಸಂದರ್ಭದಲ್ಲಿ ಆಗುವ ಡಿಕ್ಕಿಯಿಂದ ಚಿನ್ನ ಸೇರಿದಂತೆ ಪ್ಲಾಟಿಂನಂತ ಲೋಹ ಸೃಷ್ಟಿಯಾಗಲು ಸಾಧ್ಯ. ಆಗಾಧ ಒಕ್ಕಡದಿಂದ ಈ ಸೃಷ್ಟಿಗಳು ಸಂಭವಿಸಿದೆ. ಹೀಗೆ ಸಂಭವಿಸಿದ ಡಿಕ್ಕಿಯಿಂದ ಚಿನ್ನಗಳು ಉತ್ಪತ್ತಿಯಾಗಿದೆ ಎಂದು ಸಂಶೋಧನೆಯಲ್ಲಿ ವಿತ್ರಜ್ಞಾನಿಗಳು ಕಂಡುಕೊಂಡಿದ್ದಾರೆ.
ಭೂಮಿಗಿಂತ ಹಳೇದು ಚಿನ್ನ
ವಿಜ್ಞಾನಿಗಳ ಸಂಶೋಧನೆ ಪ್ರಕಾರ ಚಿನ್ನ ಭೂಮಿಗಿಂತ ಸಾವಿರಾರು ವರ್ಷಗಳಿಗಿಂದ ಹಳೇದು. ಸೌರಮಂಡಲ ಹಾಗೂ ಭೂಮಿ ರೂಪುಗೊಂಡ ವರ್ಷ ಸರಿ ಸುಮಾರು 4.5 ಬಿಲಿಯನ್ ವರ್ಷಗಳಿಗಿಂತ ಹಿಂದೆ. ಚಿನ್ನ ಉತ್ಪಿಯಾತ್ತ ನಕ್ಷತ್ರಗಳ ಸ್ಫೋಟ ಸೌರಮಂಡಲ ಸೃಷ್ಟಿಗಿಂತ ಕೋಟ್ಯಾಂತರ ವರ್ಷಗಳ ಮೊದಲೇ ಬ್ರಹ್ಮಾಂಡದಲ್ಲಿ ನಡೆದಿತ್ತು. ಡಿಕ್ಕಿಯಾಗುವಾಗ ಹೊರಬಂದ ಧೂಳು, ಅನಿಲಗಳು ತೇಲುತ್ತಾ ಬಂದು ಸೌರಮಂಡಲ ಗ್ರಹಗಳ ರೂಪುಗೊಳ್ಳುವಾಗ ಭೂಮಿ ಗರ್ಭದಲ್ಲಿ ಸೇರಿಕೊಂಡಿತು ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಭೂಮಿ ರೂಪುಗೊಳ್ಳುವಾಗ ಅತ್ಯಂತ ಬಿಸಿಯಾದ ದ್ರವರೂಪದಲ್ಲಿತ್ತು. ಇದರಿಂದ ಚಿನ್ನ, ಪ್ಲಾಟಿನಂ ಸೇರಿದಂತೆ ಅತ್ಯಂತ ಭಾರವಾದ ವೋಹಗಳು ಭೂಮಿಯ ಕೆಳಭಾಗಕ್ಕೆ ಇಳಿದು ಹೋಯಿತು. ಭೂಮಿಯ ರೂಪುಗೊಳ್ಳುವ ಪ್ರಕ್ರಿಯೆಯಲ್ಲಿ ಹಲವು ಉಲ್ಕಾಪಾತಗಳು ಅಪ್ಪಳಿಸಿದೆ. ಬಳಿಕವೂ ಸಂಭವಿಸಿದೆ. ಹೀಗೆ ಉಲ್ಕಾಪಾತಗಳು ಅಪ್ಪಳಿಸುವಾಗ ಚಿನ್ನದ ನಿಕ್ಷೇಪಗಳು ಭೂಮಿಯ ಮೇಲ್ಮೈಗೆ ಬಂದಿತು ಅಥವಾ ಗೋಚರಿಸಿತು. ಇದ ಚಿನ್ನದ ಗಣಿಗಳಲ್ಲಿ ಆಳದಿಂದ ತೆಗೆಯುವ ಚಿನ್ನ ನಕ್ಷತ್ರಗಳ ಡಿಕ್ಕಿಯಿಂದ ಹುಟ್ಟಿದ ಚಿನ್ನ ಎಂದು ವಿಜ್ಞಾನಿಗಳು ಹೇಳಿದ್ದಾರೆ.


