ಕೆಜಿಎಫ್ ಚಿನ್ನದ ಗಣಿ ರೀತಿ ಎಲ್ಲಾ ಕಡೆ ಚಿನ್ನ ಸಿಗಲ್ಲ. ಹಾಗಾದರೆ ಚಿನ್ನ ಎಲ್ಲಿದೆ ಎಂದು ವಿಜ್ಞಾನಿಗಳ ತಂಡ ಸತತ ಸಂಶೋಧನೆ ನಡೆಸಿ ಅಧ್ಯಯನ ವರದಿ ಬಹಿರಂಗಪಡಿಸಿದೆ. ಇದೀಗ ಎಲ್ಲಾ ದೇಶಗಳು ಅಲರ್ಟ್ ಆಗಿದೆ.

ನವದೆಹಲಿ (ಆ.11) ಚಿನ್ನದ ಕೈಗೆಟುಕದಷ್ಟು ದುಬಾರಿಯಾಗಿದೆ. ಭಾರತದ ಚಿನ್ನದ ಗಣಿಗಳಲ್ಲಿ ಸಾಕಷ್ಟು ಪ್ರಮಾಣದ ಚಿನ್ನ ಸಿಗುತ್ತಿಲ್ಲ. ಹೊಸದಾಗಿ ಗಣಿಗಾರಿಗೆ ಮಾಡಲು ಸಂಶೋಧನೆಗಳು ನಡೆಯುತ್ತಿದೆ. ಇದರ ನಡುವೆ ವಿಶ್ವವಿದ್ಯಾಲಯದ ವಿಜ್ಞಾನಿಗಳ ತಂಡ ನಡೆಸಿದ ಸಂಶೋಧನೆಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಭೂಮಿಯಲ್ಲಿ ಅಪಾರ ಪ್ರಮಾಣದ ಚಿನ್ನದ ನಿಧಿ ಸೇರಿದಂತೆ ಇತರ ಲೋಹಗಳಿವೆ ಅನ್ನೋದು ಪತ್ತೆಯಾಗಿದೆ. ಈ ಅಧ್ಯಯನ ವರದಿ ಪ್ರಕಟಗೊಳ್ಳುತ್ತಿದ್ದಂತೆ ಹಲವರ ಕಿವಿಗಳು ನೆಟ್ಟಗಾಗಿವೆ.

ಶೇಕಡಾ 99.999 ರಷ್ಟು ಚಿನ್ನದ ನಿಧಿ

ಭೂಗರ್ಭಗಳ ರಹಸ್ಯ ಕುರಿತು ಜರ್ಮನಿಯ ಗೋಟಿಂಗೆನ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಸಂಶೋಧನೆ ನಡೆಸಿದ್ದಾರೆ. ಈ ಸಂಶೋಧನಾ ವರದಿಯನ್ನು ನೇಚರ್ ಮ್ಯಾಗ್‌ಜೀನ್‌ನಲ್ಲಿ ಪ್ರಕಟಿಸಲಾಗಿದೆ. ಭೂಮಿಯೊಳಗೆ ಚಿನ್ನ ಎಲ್ಲಿದೆ ಅನ್ನೋ ಕುತೂಹಲಕ್ಕೆ ಉತ್ತರ ನೀಡಿದೆ. ಭೂಮಿಯ ಶೇಕಡಾ 99.999 ರಷ್ಟು ಚಿನ್ನ ಭೂಗರ್ಭದಲ್ಲೇ ಇದೆ ಎಂದು ಈ ವರದಿ ಹೇಳುತ್ತಿದೆ. ವಿಜ್ಞಾನಿಗಳ ವರದಿ ಪ್ರಕಾರ ಭೂಮಿಯಿಂದ ಸುಮಾರು 3000 ಕಿಲೋಮೀಟರ್ ಆಳದಲ್ಲಿ ಅತ್ಯಂತ ಕಠಿಣ ಬಂಡೆಗಳಿವೆ. ಇದರ ಕೆಳಗೆ ಭೂಮಿಯ ಲೋಹಿಯ ಗರ್ಭದಲ್ಲಿದೆ. ಈ ಸಂಶೋಧನೆಯಲ್ಲಿ ಮತ್ತೊಂದು ಪ್ರಮುಖ ವಿಚಾರವೂ ಬಯಲಾಗಿದೆ. ಭೂಗರ್ಭದಲ್ಲಿರುವ ಅಪಾರ ಸಂಪತ್ತು ಅದರ ಮೇಲಿರುವ ಮ್ಯಾಂಟಲ್ ಪದರದಿಂದ ಸಂಪೂರ್ಣವಾಗಿ ಬೇರ್ಪಟ್ಟಿದೆ ಎಂದೇ ನಂಬಲಾಗಿತ್ತು. ಆದರೆ ಹೊಸ ಸಂಶೋಧನೆಯಲ್ಲಿ ಲೋಹದ ಅಂಶಗಳು ಮೇಲ್ಬಾಗದ ಮ್ಯಾಂಟಲ್ ಪದರಕ್ಕೆ ಸೋರಿಕೆಯಾಗುತ್ತಿದೆ ಅನ್ನೋದು ಬಯಲಾಗಿದೆ.

ಜ್ವಾಲಾಮುಖಿ ಅಧ್ಯಯನದಲ್ಲಿ ಸತ್ಯ ಬಹಿರಂಗ

ಹವಾಯ್ ದ್ವೀಪದ ಪರ್ವತಗಳ ಜ್ವಾಲಾಮುಖಿಗಳ ಅಧ್ಯಯನ ನಡೆಸಿದಾಗ ಈ ವಿಚಾರ ಬಯಲಾಗಿದೆ. ರುಥೇನಿಯಂ ಸೋಟೋಪ್ ಪತ್ತೆಯಾಗಿದೆ. ರುಥೇನಿಯಂ ಲೋಹ ಭೂಮಿಯ ಮೇಲ್ಮೆಗಿಂತ ಭೂಗರ್ಭದಲ್ಲಿ ಹೆಚ್ಚಿದೆ.4.5 ಕೋಟಿ ಶತಕೋಟಿ ವರ್ಷಗಳ ಹಿಂದ ಭೂಮಿ ರೂಪುಗೊಂಡಾಗ ಚಿನ್ನದೊಂದಿಗೆ ಬಂಧಿಯಾಗಿರುವ ರುಥೇನಿಯಂ ಲೋಹಕ್ಕೂ, ಉಲ್ಕಾಪಾತಗಳ ಮೂಲಕ ಪತ್ತೆಯಾದ ರುಥೇನಿಯಂಗೂ ಕೆಲ ವ್ಯತ್ಯಾಸಗಳಿವೆ. ಲಾವಾ ಬಂಡೆಗಳಲ್ಲಿ ಪತ್ತೆಯಾದ ರುಥೇನಿಯಂ ಲೋಹ, ಭೂಗರ್ಭದಿಂದ ಹೊರಬಂದ ಲೋಹವಾಗಿದೆ ಎಂಬುದು ಅಧ್ಯಯನದಿಂದ ಸ್ಪಷ್ಟಪಡಿಸಿದೆ.

ಭೂಗರ್ಭದಲ್ಲಿ ಚಿನ್ನ ಗಣಿಗಾರಿಕೆ ಸಾಧ್ಯವೇ?

ಭೂಗರ್ಭದಲ್ಲಿ ಅಪಾರ ಪ್ರಮಾಣದ ಚಿನ್ನ ಸೇರಿದಂತೆ ಇತರ ಲೋಹಗಳಿವೆ. ಬರೋಬ್ಬಬರಿ 3000 ಕಿಲೋಮೀಟ್‌ಗಿಂತಲೂ ಹೆಚ್ಚಿನ ಆಳದಲ್ಲಿರುವ ಈ ಭೂಗರ್ಭ ಅತೀ ಹೆಚ್ಚು ತಾಪಮಾನ, ಜ್ವಾಲಾಮುಖಿಗಳಿಂದ ಆಳದಲ್ಲಿದೆ. ಈ ತಾಪಮಾನದಲ್ಲಿ ಗಣಿಗಾರಿಕೆ ಮಾಡಲು ಸಾಧ್ಯವಿಲ್ಲ. ಇಷ್ಟೇ ಅಲ್ಲ ಈ ರೀತಿಯ ಗಣಿಗಾರಿಕೆಯಿಂದ ಭೂಮಿ ಮೇಲೂ ಗಂಭೀರ ಪರಿಣಾಮ ಬೀರಲಿದೆ. ಇದಕ್ಕೆ ಅವಕಾಶವೂ ಇಲ್ಲ. ಇನ್ನು ಜ್ವಾಲಾಮುಖಿಗಳ ಮೂಲಕ ಅಲ್ಪ ಪ್ರಮಾಣದ ಚಿನ್ನ ಹೊರಬರುತ್ತದೆ. ಆದರೆ ಅತೀಯಾದ ಶಾಖದಿಂದ ಈ ಚಿನ್ನ ಲಾವಾ ಜೊತೆ ಬೆರೆತು ಹೋಗುತ್ತದೆ ಎಂದು ಅಧ್ಯಯನ ವರದಿ ಹೇಳಿದೆ.