Asianet Suvarna News Asianet Suvarna News

ಆಕಾಶದಲ್ಲಿ ಶುಕ್ರ, ಮಂಗಳ, ಗುರು ಮತ್ತು ಶನಿ ಗ್ರಹ ಒಟ್ಟಿಗೆ ಗೋಚರ : ವೀಕ್ಷಿಸುವುದು ಹೇಗೆ?

ನಮ್ಮ ಸೌರವ್ಯೂಹದ ನಾಲ್ಕು ಗ್ರಹಗಳು - ಶುಕ್ರ, ಮಂಗಳ, ಶನಿ ಮತ್ತು ಗುರು ಈ ತಿಂಗಳು ಜೋಡಿಯಾಗಲು ಸಿದ್ಧವಾಗಿವೆ. ಗೋಚರ ಗ್ರಹಗಳ ಎಣಿಕೆಯನ್ನು ಐದಕ್ಕೆ ಏರಿಸಲು ಬುಧವು ಜೂನ್ 24 ರ ಸುಮಾರಿಗೆ ಈ ಗ್ರಹಗಳನ್ನು ಸೇರಿಕೊಳ್ಳಲಿದೆ

Venus Mars Jupiter and Saturn will align in April how to watch it mnj
Author
Bengaluru, First Published Apr 24, 2022, 3:44 PM IST

ನವದೆಹಲಿ (ಏ. 24): ನಾಲ್ಕು ಗ್ರಹಗಳ ಅಪರೂಪದ ಸಂಯೋಗ -ಶುಕ್ರ, ಮಂಗಳ, ಗುರು ಮತ್ತು ಶನಿ ಈ ತಿಂಗಳು ಸಂಭವಿಸುವ ನಿರೀಕ್ಷೆಯಿದೆ. ಈ ಗ್ರಹಗಳು, ಒಂದಕ್ಕೊಂದು ಸಾಕಷ್ಟು ದೂರದಲ್ಲಿದ್ದರೂ, ಅವು ಸರಳ ರೇಖೆಯಲ್ಲಿರುವಂತೆ ಗೋಚರಿಸಲಿವೆ. ಇದಲ್ಲದೆ, ಇನ್ನೂ ಎರಡು ಗ್ರಹಗಳು - ಬುಧ ಮತ್ತು ಯುರೇನಸ್ ಈ ವರ್ಷದ ನಂತರ ಈ ಗುಂಪಿಗೆ ಸೇರುವ ನಿರೀಕ್ಷೆಯಿದೆ. ಈ ಅಪರೂಪದ ಆಕಾಶದ ಘಟನೆಯ ಬಗ್ಗೆ ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌

ಬರಿಗಣ್ಣಿಗೆ ಗೋಚರ: ನಾಸಾ ಪ್ರಕಾರ, ದೂರದರ್ಶಕ ಅಥವಾ ಇತರ ವೀಕ್ಷಣಾ ಉಪಕರಣದ ಅಗತ್ಯವಿಲ್ಲದೇ ವೀಕ್ಷಕರಿಗೆ ವಾಸ್ತವವಾಗಿ ಗೋಚರಿಸುವ ಕೆಲವು ಅಪರೂಪದ ವಿದ್ಯಮಾನಗಳಲ್ಲಿ ಈ ಸಂಯೋಗವು ಒಂದಾಗಿದೆ. ಇದರರ್ಥ ಆಸಕ್ತ ವೀಕ್ಷಕರು ಆಕಾಶವನ್ನು ನೋಡುವ ಮೂಲಕ ಜೋಡಣೆಯನ್ನು ವೀಕ್ಷಿಸಲು ಸಾಧ್ಯವಾಗುತ್ತದೆ. ಆದರೆ ಆಕಾಶದಲ್ಲಿ ಹೆಚ್ಚು ಮೋಡಗಳಿದ್ದರೆ ಈ ವಿದ್ಯಮಾನ ನೋಡುವುದು ಸ್ವಲ್ಪ ಕಷ್ಟವಾಗಬಹುದು. 

ಇದನ್ನೂ ಓದಿ: ಮಂಗಳ ಗ್ರಹದಲ್ಲಿ ಸೂರ್ಯಗ್ರಹಣ ಹೇಗೆ ಕಾಣುತ್ತೆ ಗೊತ್ತಾ? ಈ ಅದ್ಭುತ ವಿಡಿಯೋ ನೋಡಿ

"ಏಪ್ರಿಲ್ ಆರಂಭದಲ್ಲಿ, ಶುಕ್ರ, ಮಂಗಳ ಮತ್ತು ಶನಿ ಸೂರ್ಯೋದಯಕ್ಕೆ ಮುಂಚಿತವಾಗಿ ಆಗ್ನೇಯದಲ್ಲಿ ಕಾಣಿಸುತ್ತವೆ, ಶನಿಯು ಪ್ರತಿದಿನ ಮಂಗಳದ ಕಡೆಗೆ ಸ್ಥಿರವಾಗಿ ಚಲಿಸುವಂತೆ ಕಾಣುತ್ತದೆ. ತಿಂಗಳ ಮಧ್ಯದಲ್ಲಿ, ಗುರುವು ಮುಂಜಾನೆ ಅವಧಿಯಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ, ಗಈ ಮೂಲಕ ಗ್ರಹಗಳ ಕ್ವಾರ್ಟೆಟನ್ನು ನಿರ್ಮಿಸುತ್ತದೆ. ಹೀಗಾಗಿ ಬೆಳಗಿನ ಜಾವದಲ್ಲಿ ಆಕಾಶದಾದ್ಯಂತ ಒಂದು ಸಾಲಿನಲ್ಲಿ ಸುತ್ತುತ್ತವೆ" ಎಂದು ನಾಸಾ ವೆಬ್ಸೈಟ್‌ನಲ್ಲಿ ತಿಳಿಸಲಾಗಿದೆ. 

ಅಮೇರಿಕನ್ ಬಾಹ್ಯಾಕಾಶ ಸಂಸ್ಥೆಯ ಪ್ರಕಾರ, ರಾತ್ರಿಯ ಆಕಾಶದಲ್ಲಿ ಪ್ರಕಾಶಮಾನವಾದ ಗ್ರಹಗಳಾದ ಗುರು ಮತ್ತು ಶುಕ್ರವು ಅತಿ-ಸಮೀಪದ ಸಂಯೋಗದತ್ತ ಸಾಗುತ್ತಿದೆ, ಅಲ್ಲಿ ಈ ತಿಂಗಳ ಹಿಂದೆ ಸಂಭವಿಸಿದ ಮಂಗಳ ಮತ್ತು ಶನಿಯ ಸಂಯೋಗದಂತೆಯೇ ಇವೆರಡೂ ಆಕಾಶದಲ್ಲಿ ಅತಿಕ್ರಮಿಸುತ್ತದೆ. ಈ ರೀತಿಯ ಗ್ರಹಗಳ ಜೋಡಣೆಗಳು ಮತ್ತು ಆಕಾಶದಲ್ಲಿ ಅವುಗಳ ಗೋಚರತೆಯು ಅಪರೂಪವಾಗಿದ್ದರೂ, ಅವು ಕೆಲವು ವರ್ಷಗಳಿಗೊಮ್ಮೆ ಸಂಭವಿಸುತ್ತವೆ.

ಈ ಆಕಾಶ ಜೋಡಣೆಯನ್ನು ಯಾವಾಗ ವೀಕ್ಷಿಸಬಹುದು?: ಅರ್ಥ್‌ಸ್ಕೈ ಪ್ರಕಾರ, ಕ್ವಾರ್ಟೆಟ್ ಬೆಳಿಗ್ಗೆ ಸೂರ್ಯೋದಯಕ್ಕೆ ಮುಂಚೆಯೇ ಉತ್ತಮವಾಗಿ ಕಾಣುತ್ತದೆ. ಭಾರತದ ಹೆಚ್ಚಿನ ಸ್ಥಳಗಳಿಗಲ್ಲಿ ಇದು 5 AM ಮತ್ತು 6 AM ನಡುವೆ ಇರುತ್ತದೆ. ಈ ವಿದ್ಯಮಾನವು ಕನಿಷ್ಠ ಏಪ್ರಿಲ್ ಅಂತ್ಯದವರೆಗೆ ಗೋಚರಿಸುತ್ತದೆ. ಹೀಗಾಗಿ ನೀವು ಆಕಾಶದ ಜೋಡಣೆಯನ್ನು ಪರಿಶೀಲಿಸಲು ಇನ್ನು ಸಾಕಷ್ಟು  ಅವಕಾಶಗಳನ್ನು ಹೊಂದಿದ್ದೀರಿ. 

ಇದನ್ನೂ ಓದಿ: ಗುರುಗ್ರಹದ ಚಂದ್ರ ಯುರೋಪಾದಲ್ಲಿ ವಾಸಯೋಗ್ಯ ಪ್ರದೇಶ ಪತ್ತೆ: ಏಲಿಯನ್ಸ್ ಅಸ್ತಿತ್ವಕ್ಕೆ ಮತ್ತಷ್ಟು ಪುಷ್ಟಿ?

ಬುಧ ಮತ್ತು ಯುರೇನಸ್ ಕೂಡ ಸೇರ್ಪಡೆ: ಪೆಟಾ ಪಿಕ್ಸೆಲ್‌  (PetaPixel) ಪ್ರಕಾರ, ಬುಧವು ರಾತ್ರಿಯ ಆಕಾಶದಲ್ಲಿ ಗೋಚರಿಸುವ ಗ್ರಹಗಳ ಸಂಖ್ಯೆಯನ್ನು ಐದಕ್ಕೆರಿಸಲು ಜೂನ್ 24 ರ ಸುಮಾರಿಗೆ ಈ ಕ್ವಾರ್ಟೆಟ್‌ಗೆ ಸೇರಲಿದೆ: ಬುಧ, ಶುಕ್ರ, ಮಂಗಳ, ಶನಿ ಮತ್ತು ಗುರು. 2016ರ ಜನವರಿಯಲ್ಲಿ ಕೊನೆಯ ಬಾರಿ ಇಂತಹ ಘಟನೆ ನಡೆದಿತ್ತು.

ನಮ್ಮ ಸೌರವ್ಯೂಹದಿಂದ ಆರನೇ ಗ್ರಹ, ಯುರೇನಸ್, ಈ ಜೋಡಣೆಯ ಭಾಗವಾಗಲಿದೆ ಆದರೆ ಬರಿಗಣ್ಣಿನಿಂದ ಅದನ್ನು ನೋಡಲು ಅಸಾಧ್ಯವಾಗಿದೆ. ಅಲ್ಲದೆ,  ಅರ್ಧಚಂದ್ರನ ಜೊತೆಯಲ್ಲಿ ಒಂದೇ ಸಮಯದಲ್ಲಿ ಈ ಐದು ಗ್ರಹಗಳು ರಾತ್ರಿಯ ಆಕಾಶದಲ್ಲಿ ಗೋಚರಿಸಲಿವೆ

Follow Us:
Download App:
  • android
  • ios