ಇನ್ನು 2 ವರ್ಷದಲ್ಲಿ ಇಂಟರ್ನೆಟ್‌ ಅಂತ್ಯ, ಆರ್ಥಿಕತೆ ಮೇಲೆ ತೀವ್ರ ಪರಿಣಾಮ: ಇದರ ಹಿಂದಿದೆ ಅಚ್ಚರಿಯ ಕಾರಣ!

ಸೂರ್ಯನು 2025 ರಲ್ಲಿ ಸೋಲಾರ್‌ ಮ್ಯಾಕ್ಸಿಮಮ್‌ ಅಂದರೆ ನಿರ್ದಿಷ್ಟವಾಗಿ ಸಕ್ರಿಯ ಅವಧಿಯನ್ನು ತಲುಪುತ್ತಾನೆ ಮತ್ತು ಇಂದಿನ ಡಿಜಿಟಲ್ ಪ್ರಪಂಚವು ಅದಕ್ಕೆ ಸಿದ್ಧವಾಗಿಲ್ಲ ಎನ್ನಲಾಗಿದೆ. ಈ ಹಿನ್ನೆಲೆ "ಇಂಟರ್ನೆಟ್ ಅಪೋಕ್ಯಾಲಿಪ್ಸ್" ನಂತಹ ಪದಗಳು ಸಾಮಾಜಿಕ ಮಾಧ್ಯಮ ಬಳಕೆದಾರರ ಗಮನವನ್ನು ಸೆಳೆದಿವೆ.

solar storm sun to reach solar maximum in 2 years may lead to internet apocalypse ash

ನವದೆಹಲಿ (ಜುಲೈ 12, 2023): ಸೂರ್ಯನ ಸೌರ ಚಕ್ರಗಳಲ್ಲಿ ಹೊಸ ಆಸಕ್ತಿಯು ಕಂಡುಬಂದಿದೆ. ಏಕೆಂದರೆ ಅದು ಸೌರ ಚಂಡಮಾರುತವನ್ನು (Solar Storm) ಕಳುಹಿಸುತ್ತದೆ,. ಈ ಸೋಲಾರ್‌ ಸ್ಟಾರ್ಮ್‌ ಕೆಲವೊಮ್ಮೆ ಭೂಮಿಯ ಮೇಲಿನ ಎಲ್ಲಾ ಸಂವಹನಗಳನ್ನು ಕಡಿತಗೊಳಿಸುವಷ್ಟು ವಿನಾಶಕಾರಿಯಾಗಿದೆ. ಸೂರ್ಯನು 2025 ರಲ್ಲಿ "ಸೌರ ಗರಿಷ್ಠ" (Solar Maximum) - ನಿರ್ದಿಷ್ಟವಾಗಿ ಸಕ್ರಿಯ ಅವಧಿಯನ್ನು ತಲುಪುತ್ತದೆ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ. ಇದರಿಂದ ಉಂಟಾಗೋ ಪರಿಣಾಮಗಳು ಅಷ್ಟಿಷ್ಟಲ್ಲ.

ಸೂರ್ಯನು 2025 ರಲ್ಲಿ ಸೋಲಾರ್‌ ಮ್ಯಾಕ್ಸಿಮಮ್‌ ಅಂದರೆ ನಿರ್ದಿಷ್ಟವಾಗಿ ಸಕ್ರಿಯ ಅವಧಿಯನ್ನು ತಲುಪುತ್ತಾನೆ ಮತ್ತು ಇಂದಿನ ಡಿಜಿಟಲ್ ಪ್ರಪಂಚವು ಅದಕ್ಕೆ ಸಿದ್ಧವಾಗಿಲ್ಲ ಎನ್ನಲಾಗಿದೆ. ಈ ಹಿನ್ನೆಲೆ "ಇಂಟರ್ನೆಟ್ ಅಪೋಕ್ಯಾಲಿಪ್ಸ್" ನಂತಹ ಪದಗಳು ಸಾಮಾಜಿಕ ಮಾಧ್ಯಮ ಬಳಕೆದಾರರ ಗಮನವನ್ನು ಸೆಳೆದಿವೆ. ಇದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದಿಂದ ತಪ್ಪು ಮಾಹಿತಿ ಮತ್ತು ಆಧಾರರಹಿತ ಎಚ್ಚರಿಕೆಗಳ ಸುರಿಮಳೆಗೆ ಕಾರಣವಾಯಿತು.

ಇದನ್ನು ಓದಿ: ಸತ್ತರೂ ಹೊತ್ತುಕೊಂಡು ರಕ್ಷಿಸಿದ್ದ ಮರಿ ಕೋತಿಯನ್ನೇ ತಿಂದ ಹೆತ್ತ ತಾಯಿ: ಕಾರಣ ಕಂಡುಕೊಂಡ ಸಂಶೋಧಕರೇ ಶಾಕ್‌!

‘’ಇಂಟರ್ನೆಟ್ ಅಪೋಕ್ಯಾಲಿಪ್ಸ್" ಅಂದ್ರೆ ಜಗತ್ತಿನಲ್ಲಿ ಇಂಟರ್ನೆಟ್‌ ಸಂಪೂರ್ಣ ಅಂತ್ಯಗೊಳ್ಳುವುದು. ಹೌದು, 2025 ರ ಸೌರ ಚಂಡಮಾರುತದಿಂದ ಇಂಟರ್ನೆಟ್ ಅಂತ್ಯಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗ್ತಿದ್ದು, ಈ ಬಗ್ಗೆ ನಾಸಾ ಸಂಸ್ಥೆ ಇನ್ನೂ ಪ್ರತಿಕ್ರಿಯಿಸಿಲ್ಲ. ಆದರೆ ಇಂತಹ ಘಟನೆ ನಡೆದರೆ "ಯಾವಾಗಲೂ ಆನ್‌ಲೈನ್" ನಲ್ಲಿರುವ ಜನರು ಏನು ಮಾಡುತ್ತಾರೆ ಎಂದು ಜನರು ಚರ್ಚಿಸಲು ಪ್ರಾರಂಭಿಸಿದ್ದಾರೆ. ಆದರೆ ಇದು ಕೇವಲ ಹೈಪ್‌ ಎನ್ನಬಹುದಾ ಅಂತೀರಾ..? ಈ ಆತಂಕಗಳು ಸಂಪೂರ್ಣವಾಗಿ ಕಾಲ್ಪನಿಕವಲ್ಲ ಎಂದು ದಿ ಪೋಸ್ಟ್ ಹೇಳುತ್ತದೆ.

ಹಾಗಾದ್ರೆ, 2025 ರಲ್ಲಿ ಏನಾಗಬಹುದು? ಪ್ರಬಲವಾದ ಸೌರ ಚಂಡಮಾರುತವು ಭೂಮಿಗೆ ಅಪ್ಪಳಿಸಬಹುದು. ಇದುವರೆಗೆ ಅಂತರ್‌ಸಂಪರ್ಕಿತ ಜಗತ್ತಿನಲ್ಲಿ ಸಂಭವಿಸದ ಅಪರೂಪದ ಘಟನೆ ನಡೆಯಬಹುದು. ಇದರಿಂದ ವ್ಯಾಪಕವಾದ ಇಂಟರ್ನೆಟ್ ಔಟೇಜ್‌ಗೆ ಕಾರಣವಾಗುತ್ತದೆ. ಇದು 1859 ರಲ್ಲಿ ಕ್ಯಾರಿಂಗ್‌ಟನ್ ಈವೆಂಟ್ ಅನ್ನು ಉಲ್ಲೇಖಿಸಿದೆ. ಆ ವೇಳೆ, ಟೆಲಿಗ್ರಾಫ್ ಲೈನ್‌ಗಳು ಬೆಂಕಿ ಹೊತ್ತಿಕೊಂಡಿದ್ದು, ಇದರಿಂದ ಸಿಬ್ಬಂದಿ ಸಹ ಎಲೆಕ್ಟ್ರೋಕ್ಯೂಟ್‌ ಆಗಿದ್ದರು. ಹಾಗೆಯೇ 1989 ರ ಸೌರ ಚಂಡಮಾರುತವು ಕ್ವಿಬೆಕ್ ಪವರ್ ಗ್ರಿಡ್ ಅನ್ನು ಗಂಟೆಗಳ ಕಾಲ ಬಂದ್‌ ಮಾಡಿತ್ತು.

ಇದನ್ನೂ ಓದಿ: ಇನ್ಮುಂದೆ ಡೇಟಾ ದುರ್ಬಳಕೆ ಮಾಡಿದ್ರೆ ಬರೋಬ್ಬರಿ 250 ಕೋಟಿ ರೂ. ದಂಡ: ಮಸೂದೆಗೆ ಕೇಂದ್ರ ಸಚಿವ ಸಂಪುಟ ಅಸ್ತು

ಈ ಸಂಬಂಧ ದಿ ಪೋಸ್ಟ್‌ಗೆ ಮಾಹಿತಿ ನೀಡಿರುವ ಸಂಗೀತಾ ಅಬ್ದು ಜ್ಯೋತಿ, ಇರ್ವಿನ್‌ನಲ್ಲಿರುವ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದ ಕಂಪ್ಯೂಟರ್ ವಿಜ್ಞಾನ ಪ್ರಾಧ್ಯಾಪಕಿ ಸಂಗೀತಾ ಅಬ್ದು ಜ್ಯೋತಿ, "ನಾವು ಎಂದಿಗೂ ತೀವ್ರವಾದ ಘಟನೆಗಳನ್ನು ಅನುಭವಿಸಿಲ್ಲ ಮತ್ತು ನಮ್ಮ ಮೂಲಸೌಕರ್ಯವು ಅದಕ್ಕೆ ಹೇಗೆ ಪ್ರತಿಕ್ರಿಯಿಸುತ್ತದೆ ಎಂದು ನಮಗೆ ತಿಳಿದಿಲ್ಲ. ನಮ್ಮ ವೈಫಲ್ಯ ಪರೀಕ್ಷೆಯು ಅಂತಹ ಸನ್ನಿವೇಶಗಳನ್ನು ಸಹ ಒಳಗೊಂಡಿಲ್ಲ," ಎಂದು ತಿಳಿಸಿದ್ದಾರೆ.

ಆಕೆಯ ಸಂಶೋಧನೆ 'ಸೋಲಾರ್ ಸೂಪರ್‌ಸ್ಟಾರ್ಮ್ಸ್: ಪ್ಲ್ಯಾನಿಂಗ್ ಫಾರ್ ಆನ್ ಇಂಟರ್‌ನೆಟ್ ಅಪೋಕ್ಯಾಲಿಪ್ಸ್' ಈ ಪದವನ್ನು ಜನಪ್ರಿಯಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ತೀವ್ರ ಸೌರ ಚಂಡಮಾರುತವು ಸಮುದ್ರದೊಳಗಿನ ಸಂವಹನ ಕೇಬಲ್‌ಗಳಂತಹ ದೊಡ್ಡ-ಪ್ರಮಾಣದ ಮೂಲಸೌಕರ್ಯಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಇವರು ಹೇಳಿದ್ದು, ಇದು ದೂರ ಸಂಪರ್ಕವನ್ನು ಅಡ್ಡಿಪಡಿಸುತ್ತದೆ. ಹಾಗೆ, ಅಂತಹ ಔಟೇಜ್‌ಗಳು ತಿಂಗಳುಗಳವರೆಗೆ ಇರುತ್ತದೆ ಎಂದು ದಿ ಪೋಸ್ಟ್‌ ಹೇಳಿದೆ. ಹಾಗೆ, ಅಮೆರಿಕದಲ್ಲಿ ಕೇವಲ ಒಂದು ದಿನದ ಇಂರ್ನೆಟ್‌ ಸಂಪರ್ಕ ಕಡಿತದ ಆರ್ಥಿಕ ಪರಿಣಾಮವು 11 ಬಿಲಿಯನ್‌ ಡಾಲರ್‌ಗಿಂತ ಹೆಚ್ಚು ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ; ವಿಶ್ವದ ಉಗಮ ಅರಿಯಲು ಯುರೋಪ್‌ನ ಯೂಕ್ಲಿಡ್‌ ಟೆಲಿಸ್ಕೋಪ್‌ ಉಡಾವಣೆ

Latest Videos
Follow Us:
Download App:
  • android
  • ios