ಈ ಪ್ರಯಾಣಕ್ಕೆ ಟೆಲಿಸ್ಕೋಪ್‌ಗೆ ಒಂದೂವರೆ ತಿಂಗಳು ಬೇಕಾಗಲಿದ್ದು, ಬಳಿಕ 6 ವರ್ಷ ಕಾಲ ನಿಗದಿತ ಸ್ಥಳದಲ್ಲಿ ಸಂಚರಿಸುವ ಮೂಲಕ ಮಾಹಿತಿ ಕಲೆ ಹಾಕುವ ಕೆಲಸ ಮಾಡಲಿದೆ.

ಕೇಪ್‌ ಕೆನವರೆಲ್‌ (ಜುಲೈ 2, 2023): ವಿಶ್ವದ ಉಗಮ ಹಾಗೂ ಡಾರ್ಕ್ ಎನರ್ಜಿಯ ಬಗ್ಗೆ ಮತ್ತಷ್ಟು ಅರಿಯುವ ನಿಟ್ಟಿನಲ್ಲಿ ಯುರೋಪಿಯನ್‌ ಸ್ಪೇಸ್‌ ಏಜೆನ್ಸಿ ತಯಾರಿಸಿರುವ ‘ಯೂಕ್ಲಿಡ್‌’ ಟೆಲಿಸ್ಕೋಪ್‌ ಅನ್ನು ಶನಿವಾರ ಅಮೆರಿಕದ ಕೇಪ್‌ ಕೆನವರೆಲ್‌ ಕೇಂದ್ರದಿಂದ ಯಶಸ್ವಿಯಾಗಿ ಉಡ್ಡಯನ ಮಾಡಲಾಗಿದೆ. ಈ ಟೆಲಿಸ್ಕೋಪ್‌, 15 ಕಿ.ಮೀ ದೂರ ಪ್ರಯಾಣ ಮಾಡಿ ಅಲ್ಲಿ ತನ್ನ ಸಂಶೋಧನೆ ಮಾಡಿ ಭೂಮಿಗೆ ಮಾಹಿತಿ ರವಾನಿಸಲಿದೆ. 

ಈ ಪ್ರಯಾಣಕ್ಕೆ ಟೆಲಿಸ್ಕೋಪ್‌ಗೆ ಒಂದೂವರೆ ತಿಂಗಳು ಬೇಕಾಗಲಿದ್ದು, ಬಳಿಕ 6 ವರ್ಷ ಕಾಲ ನಿಗದಿತ ಸ್ಥಳದಲ್ಲಿ ಸಂಚರಿಸುವ ಮೂಲಕ ಮಾಹಿತಿ ಕಲೆ ಹಾಕುವ ಕೆಲಸ ಮಾಡಲಿದೆ. ಈ ಸ್ಥಳದಿಂದ ಟೆಲಿಸ್ಕೋಪ್‌ 10 ಶತಕೋಟಿ ಬೆಳಕಿನ ವರ್ಷ ದೂರದಲ್ಲಿರುವ ನಕ್ಷತ್ರ ಪುಂಜಗಳ ಮೇಲೆ ಗಮನ ಇಟ್ಟು, ಬಿಗ್‌ಬ್ಯಾಂಗ್‌ಗೆ ಕಾರಣವಾದ ಘಟನೆಗಳು, ಡಾರ್ಕ್ ಎನರ್ಜಿ, ಡಾರ್ಕ್ ಮ್ಯಾಟರ್‌ ಮೊದಲಾದ ವಿಷಯಗಳ ಕುರಿತು ವಿಜ್ಞಾನಿಗಳಿಗೆ ಇನ್ನಷ್ಟು ಹೆಚ್ಚಿನ ಅರಿವು ಮೂಡಿಸುವ ಯತ್ನ ಮಾಡಲಿದೆ. 

ಇದನ್ನು ಓದಿ: ಭೂಮಿಯಡಿ ಎವರೆಸ್ಟ್‌ಗಿಂತ 4 ಪಟ್ಟು ಎತ್ತರದ ಪರ್ವತ ಪತ್ತೆ: ಅಂಟಾರ್ಟಿಕಾದ ಆಳದಲ್ಲಿ ಭಾರಿ ಗಾತ್ರದ ಪರ್ವತಗಳು

14,000 ಕೋಟಿ ರೂ. ವೆಚ್ಚದ ಈ ಯೋಜನೆಯನ್ನು ವಿಜ್ಞಾನಿಗಳ ತಂಡ 10 ವರ್ಷಗಳ ಸತತ ಶ್ರಮದ ಬಳಿಕ ಪೂರ್ಣಗೊಳಿಸಿದೆ. ಟೆಲಿಸ್ಕೋಪ್‌ ಬ್ರಹ್ಮಾಂಡದ 3 ಡಿ ಮ್ಯಾಪ್‌ ರಚಿಸಲಿದ್ದು, ಇದು ಬ್ರಹ್ಮಾಂಡದ ಕುರಿತ ಇದುವರೆಗಿನ ಅರಿವಿಗಿಂತ ಹೆಚ್ಚಿನ ಮಾಹಿತಿ ನೀಡುವ ಭರವಸೆ ವಿಜ್ಞಾನಿಗಳದ್ದು.

  • 14,000 ಕೋಟಿ - ಯೋಜನಾ ವೆಚ್ಚ
  • 6 ವರ್ಷ - ಯೋಜನಾ ಅವಧಿ
  • 15 ಲಕ್ಷ ಕಿ.ಮೀ. - ಸಾಗುವ ದೂರ
  • 848 ಕೆ.ಜಿ. - ಟೆಲಿಸ್ಕೋಪ್‌ನ ತೂಕ
  • 15 ಅಡಿ - ಟೆಲಿಸ್ಕೋಪ್‌ನ ಉದ್ದ, ಅಗಲ

ಇದನ್ನೂ ಓದಿ: ಮಾನವನ ಮೆದುಳಿಗೆ ಚಿಪ್‌ ಜೋಡಿಸಿ ಪ್ರಯೋಗ: ಎಲಾನ್‌ ಮಸ್ಕ್‌ ಕಂಪನಿಗೆ ಅಮೆರಿಕ ಅಸ್ತು

ಹೊರ ಹೊಮ್ಮುತ್ತಿದೆ ಹೂಂಕಾರ ನಾದ, ಬ್ರಹ್ಮಾಂಡ ರಹಸ್ಯ ಭೇದಿಸಿದ ಭಾರತೀಯ ಖಗೋಳಶಾಸ್ತ್ರಜ್ಞರ ತಂಡ!
ಖಗೋಳಶಾಸ್ತ್ರದಲ್ಲಿ ಭಾರತ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದೆ. ಬ್ರಹ್ಮಾಂಡದೊಳಗಿಂದ ಹಮ್ಮಿಂಗ್ ಸೌಂಡ್ ಹೊರಸೂಸುತ್ತಿರುವ ಮಹತ್ವದ ಅಂಶವನ್ನು ಭಾರತೀಯ ಟೆಲಿಸ್ಕೋಪ್ ಪತ್ತೆ ಹಚ್ಚಿದೆ. 7 ಮಂದಿಯ ಖಗೋಳಶಾಸ್ತ್ರಜ್ಞರ ತಂಡ ನಡೆಸಿದ ಮಹತ್ವದ ಸಂಶೋಧನೆಯಲ್ಲಿ ಬ್ರಹ್ಮಾಂಡದೊಳಗಿನಿಂದ ಹೂಂಕಾರ ನಾದ ಹೊರ ಹೊಮ್ಮುತ್ತಿರುವ ರಹಸ್ಯವನ್ನು ಭಾರತ ಬಯಲೆಗೆಳಿದಿದೆ. ಭಾರತ ಸೇರಿದಂತೆ ಹಲವು ದೇಶಗಳ ತಂಡಗಳು ಜಂಟಿಯಾಗಿ ಸಂಶೋಧನೆ ನಡೆಸಿತ್ತು. ಈ ಸಂಶೋಧನೆಯಲ್ಲಿ ಭಾರತ ಪ್ರಮುಖ ಪಾತ್ರ ನಿರ್ವಹಿಸಿದೆ.

ಆಲ್ಬರ್ಟ್ ಐನ್‌ಸ್ಟೈನ್ ತಮ್ಮ ಸಿದ್ಧಾಂತರದಲ್ಲಿ ಬ್ರಹ್ಮಾಂಡದೊಳಗೆ ಹೂಂಕಾರ ನಾದ ಹೊರಹೊಮ್ಮುತ್ತಿದೆ ಅನ್ನೋ ಸಿದ್ಧಾಂತವನ್ನು ಪ್ರತಿಪಾದಿಸಿದ್ದರು. ಇದಕ್ಕೆ ಪುಷ್ಠಿ ನೀಡುವ ಅಂಶವನ್ನು ಇದೀಗ ಭಾರತೀಯ ಖಗೋಳಶಾಸ್ತ್ರಜ್ಞರ ತಂಡ ಪತ್ತೆ ಹಚ್ಚಿದೆ. ಪುಣೆಯಲ್ಲಿರುವ ಜೈಂಟ್ ಮೆಟ್ರೆವೇವ್ ರೇಡಿಯೊ ಟೆಲಿಸ್ಕೋಪ್ ಬಳಸಿ ಭಾರತೀಯ ಖಗೋಳಶಾಸ್ತ್ರಜ್ಞರ ತಂಡ ಹೂಂಕಾರ ನಾದವನ್ನು ಪತ್ತೆ ಹಚ್ಚಿದೆ. ಗುರುತ್ವಾಕರ್ಷಣೆ ಅಲೆಯ ಸ್ಫೋಟದ ಬಳಿಕ ಸೂಪರ್ಮಾಸಿವ್ ಕಪ್ಪು ರಂಧ್ರಗಳ ಘರ್ಷಣೆ ಹುಟ್ಟಿಕೊಳ್ಳುತ್ತದೆ. ಈ ವೇಳೆ ಬ್ರಹ್ಮಾಂಡದಿಂದ ಹೂಂಕಾರ ನಾದ ಹೊರಹೊಮ್ಮುತ್ತದೆ. ಈ ಹೂಂಕಾರ ನಾದವನ್ನು ಪುಣೆಯ ಅತ್ಯಾಧುನಿಕ ಟೆಲಿಸ್ಕೋಪ್ ಪತ್ತೆ ಹಚ್ಚಿದೆ.

ಇದನ್ನೂ ಓದಿ: ಇನ್ನು 20 ವರ್ಷದಲ್ಲಿ ಜಗತ್ತಲ್ಲಿ ನಕ್ಷತ್ರಗಳೇ ಕಾಣಲ್ಲ! ಕಾರಣ ಹೀಗಿದೆ..