Asianet Suvarna News Asianet Suvarna News

ಜುಲೈ 20ಕ್ಕೆ ಭೂಮಿಗೆ ಅಪ್ಪಳಿಸಲಿದೆ ಸೌರ ಜ್ವಾಲೆ ಚಂಡಮಾರುತ, NOAA ಎಚ್ಚರಿಕೆ!

ಸೂರ್ಯನಿಂದ ಬೃಹತ್ ಗಾತ್ರದ ಜ್ವಾಲೆ ಭೂಮಿಯತ್ತ ಧಾವಿಸಿದೆ. ಇದು ಜುಲೈ 20 ರಂದು ಭೂಮಿಗೆ ಅಪ್ಪಳಿಸುವ ಸಾಧ್ಯತೆ ಇದೆ. ಇದರಿಂದ ಭೂಮಿ ಮೇಲಾಗುವ ಪರಿಣಾಮ ಏನು? ಇಲ್ಲಿದೆ.

Solar Storm expected to hit Earth on july 20th may impact GPS cell networks and create radio blackouts ckm
Author
Bengaluru, First Published Jul 19, 2022, 9:00 PM IST

ನವದೆಹಲಿ(ಜು.19):  ಮಳೆ, ಪ್ರವಾಹ , ಭೂಕುಸಿತ ಸೇರಿದಂತೆ ಹಲವು ಪ್ರಾಕೃತಿಕ ವಿಕೋಪದಿಂದ ಕಂಗೆಟ್ಟಿರುವ ಜನರಿಗೆ ಇದೀಗ ಸೌರ ಚಂಡಮಾರುತ ಆತಂಕ ಶುರುವಾಗಿದೆ. ವಾಯುಮಂಡಲ ಆಡಳಿತ ಸಂಸ್ಥೆ ಎಚ್ಚರಿಕೆ ಸಂದೇಶ ನೀಡಿದೆ. ಬೃಹತ್ ಗಾತ್ರದ ಸೂರ್ಯ ಜ್ವಾಲೆಯೊಂದು ಭೂಮಿಯತ್ತ ಚಲಿಸುತ್ತಿದ್ದು, ಸರಿಸುಮಾರು ಜುಲೈ 20 ರಂದು ಭೂಮಿಗೆ ಅಪ್ಪಳಿಸಲಿದೆ ಎಂಬ ಎಚ್ಚರಿಕೆಯನ್ನು ವಾಯುಮಂಡಲ ಆಡಳಿತ ಸಂಸ್ಥೆ ಎಚ್ಚರಿಸಿದೆ. ಈ ಸೌರ ಚಂಡಮಾರುತ ಭೂಮಿಗೆ ಅಪ್ಪಳಿಸುವುದರಿಂದ ಹಲವು ವ್ಯತಿರಿಕ್ತ ಪರಿಣಾಮಗಳು ಬೀರಲಿದೆ. ಸೌರಜ್ವಾಲೆ ಭೂಮಿಗೆ ಅಪ್ಪಳಿಸುವುದರಿಂದ ಭೂಮಿ ಮೇಲಿನ ಜಿಪಿಎಸ್ ಸಿಗ್ನಲ್ ಸಂಪರ್ಕ , ಸ್ಯಾಟಲೈಟ್ ಸಿಗ್ನಲ್, ನ್ಯಾವಿಗೇಶನ್, ಮೊಬೈಲ್ ಸಿಗ್ನಲ್ ಕಡಿತಗೊಳ್ಳುವ ಸಾಧ್ಯತೆ ಇದೆ. ನೇರವಾಗಿ ವಿಮಾನಾಯ ಸಂಚಾರ ವ್ಯತ್ಯಯವಾಗಲಿದೆ. 

ಪ್ರತಿದಿನ ಸೂರ್ಯನಿಂದ ಹೊರಸೂಸುವ ಅಪಾಯಕಾರಿ ಕಿರಿಣಗಳಿಂದ ಭೂಮಿ ತಡೆಯುತ್ತದೆ. ಇದು ಪ್ರತಿ ದಿನ, ಪ್ರತಿ ಕ್ಷಣ ನಡೆಯುವ ಸಾಮಾನ್ಯ ಪ್ರಕ್ರಿಯೆಯಾಗಿದೆ. ಆದರೆ ಸೂರ್ಯನಿಂದ ಹೊರಹೊಮ್ಮಿರುವ ಈ ಬೃಹತ್ ಗಾತ್ರದ ಜ್ವಾಲೆ ಜೂನ್ 19 ರಂದು ಭೂಮಿಗೆ ಅಪ್ಪಳಿಸಲಿದೆ ಎಂದು ಬಾಹ್ಯಾಕಾಶ ತಜ್ಞೆ ಡಾಯ ತಮಿತಾ ಸ್ಕೋವ್ ಹೇಳಿದ್ದರು. ಇದೀಗ ಜೂನ್ 20 ರಂದು ಈ ಸೌರ ಜ್ವಾಲೆ ಭೂಮಿಗೆ ಅಪ್ಪಳಲಿದೆ ಎಂದು ಅಂದಾಜಿಸಲಾದಿದೆ.

ಭಾರತದಲ್ಲಿ ಗೋಚರವಾಗಲಿರುವ ವರ್ಷದ ಮೂರನೇ ಗ್ರಹಣ, ಯಾವಾಗ ಗೊತ್ತಾ?

ಜುಲೈ 15 ರಂದು ಸೂರ್ಯನಿಂದ ಬೃಹತ್ ಗಾತ್ರದ ಜ್ವಾಲೆಯೊಂದು ಹೊರಸೂಸಿಸಿದೆ. ಇದು ಭೂಮಿಯತ್ತ ಧಾವಿಸುತ್ತಿದೆ ಎಂದು ತಮಿತಾ ಸ್ಕೋವ್ ಹೇಳಿದ್ದರು.  ಈ ಸನ್‌ಸ್ಪಾಟ್‌ಗಳು ಅಥವಾ ಸೌರ ಜ್ವಾಲೆ ಅಂದಾಜಿನ ಪ್ರಕಾರ X-ಕ್ಲಾಸ್ ಗರಿಷ್ಠ ಪ್ರಭಾವದೊಂದಿಗೆ ಉತ್ಪಾದನೆಯಾಗಿರುತ್ತದೆ. ಈ ಜ್ವಾಲೆ ಭೂಮಿ ಮೇಲಿನ ಜಿಪಿಎಸ್ ವ್ಯವಸ್ಥೆಗೆ ಧಕ್ಕೆ ತರವು ಸಾಧ್ಯತೆ ಇದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಈ ಜ್ವಾಲೆ ಭೂಮಿ ಮೇಲೆ ರೇಡಿಯಾ ಬ್ಲ್ಯಾಕೌಟ್ ರಚಿಸುವ ಸಾಧ್ಯತೆ ಹೆಚ್ಚಿದೆ. ಇದರಿಂದ ಮೊಬೈಲ್ ನೆಟ್‌ವರ್ಕ್ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆಗಳು ಹೆಚ್ಚಿವೆ ಎಂದಿದ್ದಾರೆ.

ಸೂರ್ಯನ ಮೇಲ್ಮೈನಿಂದ ಅಪಾಯಕಾರಿ ಕಿರಣಗಳು ಹೊರಸೂಸುತ್ತಲೇ ಇರುತ್ತದೆ. ಇದರ ಜೊತೆಗೆ ಜ್ವಾಲೆಗಳು ಹೊರಹೊಮ್ಮುತ್ತದೆ. ಕೆಲ ಜ್ವಾಲೆಗಳು ಗಾತ್ರ ದೊಡ್ಡದಾಗಿರುತ್ತದೆ. ಹೀಗಾಗಿ ದೊಡ್ಡದಾದ ಜ್ವಾಲೆಯೊಂದು ಹೊರಹೊಮ್ಮಿ ಇದೀಗ ಭೂಮಿಯತ್ತ ಧಾವಿಸುತ್ತಿದೆ. ಇದು ಭೂಮಿಗೆ ಅಪ್ಪಳಿಸಿದರೆ ಸೌರ ಜ್ವಾಲೆ ಚಂಡಮಾರುತ ಸೃಷ್ಟಿಯಾಗಲಿದೆ. 

ಗುರುಗ್ರಹದ ಕ್ಷುದ್ರ ಗ್ರಹಗಳ ಅಧ್ಯಯನಕ್ಕೆ ನಾಸಾದ ಲೂಸಿ
ಗುರುಗ್ರಹದ ಸುತ್ತಲೂ ಸುತ್ತುತ್ತಿರುವ 8 ಕ್ಷುದ್ರಗ್ರಹಗಳ ಅಧ್ಯಯನಕ್ಕೆಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಲೂಸಿ ಎಂಬ ಬಾಹ್ಯಾಕಾಶ ನೌಕೆಯೊಂದನ್ನು ಶುಕ್ರವಾರ ಹಾರಿಬಿಟ್ಟಿದೆ. ಭೂಮಿಯಿಂದ 630 ಕಿ.ಮೀ ದೂರದಲ್ಲಿರುವ ಈ ಕ್ಷುದ್ರಗಳ ಕುರಿತು ಅಧ್ಯಯನ ನಡೆಸಲು ಸುಮಾರು 12 ವರ್ಷಗಳ ಕಾಲ ಅವುಗಳನ್ನು ಸುತ್ತುವ ಕೆಲಸವನ್ನು ಲೂಸಿ ನೌಕೆ ಮಾಡಲಿದೆ. ಸೌರಮಂಡಲ ರಚನೆಯಾದ ವೇಳೆ ಛಿದ್ರಗೊಂಡ ದೊಡ್ಡ ಆಕೃತಿಗಳೇ ಗುರುಗ್ರಹದ ಸುತ್ತಲೂ ಕ್ಷುದ್ರಗ್ರಹಗಳಾಗಿ ಸುತ್ತುತ್ತಿದ್ದು, ಅವುಗಳ ಕುರಿತ ಯಾವುದೇ ಮಾಹಿತಿ ಸೌರ ಮಂಡಲ ರಚನೆಯ ಮೇಲೆ ಹೊಸ ಬೆಳಕು ಚೆಲ್ಲಬಹುದು ಎಂಬುದು ನಾಸಾ ವಿಜ್ಞಾನಿಗಳ ಆಲೋಚನೆ. ಹೀಗಾಗಿಯೇ ಅಂದಾಜು 7350 ಕೋಟಿ ರು. ವೆಚ್ಚದ ಈ ಬಹುನಿರೀಕ್ಷಿತ ಯೋಜನೆಯನ್ನು ನಾಸಾ ರೂಪಿಸಿದೆ. 

Follow Us:
Download App:
  • android
  • ios