ಚಂದ್ರಯಾನ ಲೂನಾ 25 ನೌಕೆ ಪತನದಿಂದ ಅಸ್ವಸ್ಥಗೊಂಡ ರಷ್ಯಾ ವಿಜ್ಞಾನಿ ಆಸ್ಪತ್ರೆ ದಾಖಲು!

ರಷ್ಯಾದ ಚಂದ್ರಯಾನ ನೌಕೆ ಲೂನಾ 25 ಅಭಿವೃದ್ಧಿಪಡಿಸಿ ಬಾಹ್ಯಾಕಾಶಕ್ಕೆ ಹಾರಿಬಿಡುವಲ್ಲಿ ಪ್ರಮುಖ ಪಾತ್ರನಿರ್ವಹಿಸಿದ ಖಗೋಳಶಾಸ್ತ್ರಜ್ಞ ಆಸ್ಪತ್ರೆ ದಾಖಲಾಗಿದ್ದಾರೆ. ಲೂನಾ ನೌಕೆ ಪತನದ ಬೆನ್ನಲ್ಲೇ ವಿಜ್ಞಾನಿ ಆಘಾತಕ್ಕೊಳಗಾಗಿದ್ದಾರೆ. ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

Russian key astronomer who worked Luna 25 hospitalized after spacecraft crash ckm

ಮಾಸ್ಕೋ(ಆ.22) ರಷ್ಯಾದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ‘ರೋಸ್‌ಕಾಸ್ಮೋಸ್‌’ ಹಾರಿಬಿಟ್ಟಿದ್ದ ಲೂನಾ-25 ಚಂದ್ರಯಾನ ನೌಕೆ ಪತನಗೊಂಡಿದೆ. ಮಹತ್ವಾಕಾಂಕ್ಷಿ ಯೋಜನೆ ಅರ್ಧಕ್ಕೆ ಮೊಟಕುಗೊಂಡಿದೆ. ಲೂನಾ 25 ಅಭಿವೃದ್ಧಿ ಮಾಡಿ ಬಾಹ್ಯಾಕಾಶಕ್ಕೆ ಹಾರಿಬಿಟ್ಟ ಖಗೋಳಶಾಸ್ತ್ರಜ್ಞ ಮಿಖೈಲ್ ಮಾರೋವ್ ನೌಕೆ ಪತನದಿಂದ ಆಘಾತಕ್ಕೊಳಗಾಗಿದ್ದಾರೆ. ತೀವ್ರ ಅಸ್ವಸ್ಥಗೊಂಡ ವಿಜ್ಞಾನಿಯನ್ನು ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

90 ವರ್ಷದ ಖಗೋಳ ಶಾಸ್ತ್ರಜ್ಞ  ರಷ್ಯಾದ ಲೂನಾ 25 ಉಪಗ್ರಹ ಅಭಿವೃದ್ಧಿ ಸೇರಿದಂತೆ ಪ್ರಮುಖ ವಿಜ್ಞಾನಿಯಾಗಿ ಕೆಲಸ ನಿರ್ವಹಿಸಿದ್ದರು. ಇದು ರಷ್ಯಾದ ಮಹತ್ವಾಕಾಂಕ್ಷಿ ಯೋಜನೆಯಾಗಿತ್ತು. ಲೂನಾ 25 ಯಶಸ್ವಿ ಲ್ಯಾಂಡಿಂಗ್ ಕುರಿತು ಸಾಕಷ್ಟು ತಯಾರಿ ನಡೆಸಲಾಗಿತ್ತು. ಹಲವು ವರ್ಷಗಳ ಕಾಲ ಸತತ ಪ್ರಯತ್ನ, ಪರೀಕ್ಷೆಗಳನ್ನು ಮಾಡಿದ್ದರು. ಲೂನಾ 25 ಯಶಸ್ವಿಯಾಗುವ ಎಲ್ಲಾ ವಿಶ್ವಾಸ ರಷ್ಯಾ ಬಾಹ್ಯಾಕಾಶ ಸಂಸ್ಥೆಗಿತ್ತು. ಇದಕ್ಕೂ ಹೆಚ್ಚಾಗಿ ಮಿಖೈಲ್ ಮಾರೋವ್ ಲೂನಾ 25 ಮೇಲೆ ಅಪಾರ ನಂಬಿಕೆ ಇಟ್ಟಿದ್ದರು.

 

Chandrayaan-3 Updates: 70 ಕಿ.ಮೀ ದೂರದಿಂದ ಚಂದ್ರ ಕಾಣೋದು ಹೀಗೆ.. ಹೊಸ ಚಿತ್ರ ಕಳಿಸಿದ ವಿಕ್ರಮ್‌!

ಆದರೆ ಆಗಸ್ಟ್ 19 ರಂದು ಲೂನಾ 25 ತನ್ನ ಎಲ್ಲಾ ನಿರೀಕ್ಷೆ ಬುಡಮೇಲು ಮಾಡಿತ್ತು. ನೌಕೆ ಪತನಗೊಂಡಿತ್ತು. ಚಂದ್ರನ ದಕ್ಷಿಣ ಧ್ರುವ ಅಧ್ಯಯನಕ್ಕೆಂದು ಲೂನಾ-25 ಚಂದ್ರಯಾನ ಕಳುಹಿಸಲಾಗಿತ್ತು. ಭಾರತೀಯ ಕಾಲಮಾನ ಶನಿವಾರ ರಾತ್ರಿ ಲೂನಾ 25 ನೌಕೆಯನ್ನು ಲ್ಯಾಂಡಿಂಗ್‌ ಪೂರ್ವ ಕಡೆಯ ಹಂತದ ಕಕ್ಷೆ ಬದಲಾವಣೆ ಮಾಡಬೇಕಿತ್ತು. ಆದರೆ ಈ ಪ್ರಕ್ರಿಯೆ ವೇಳೆ ನೌಕೆಯಲ್ಲಿನ ಆಟೋಮೇಟಿಕ್‌ ಸ್ಟೇಷನ್‌ನಲ್ಲಿ ಅಸಹಜ ಪರಿಸ್ಥಿತಿ ಸೃಷ್ಟಿಯಾಗಿ, ವಿಜ್ಞಾನಿಗಳು ನಿಗದಿತ ಮಾನದಂಡದಲ್ಲಿ ಕಕ್ಷೆ ಬದಲಾವಣೆ ಮಾಡಲಾಗದ ಪರಿಸ್ಥಿತಿ ನಿರ್ಮಾಣವಾಯಿತು. ಹೀಗಾಗಿ ನೌಕೆಯು ನಿಯಂತ್ರಣ ತಪ್ಪಿ ಊಹಿಸಲಾಗದ ಕಕ್ಷೆಗೆ ಸೇರಿಕೊಂಡು ವಿಜ್ಞಾನಿಗಳ ಜೊತೆ ಸಂಪರ್ಕ ಕಡಿದುಕೊಂಡಿತು. ಬಳಿಕ ನೌಕೆ ಚಂದ್ರನ ಮೇಲೆ ಪತನಗೊಂಡಿತು ಎಂದು ರೋಸ್‌ಕಾಸ್ಮೋಸ್‌ ಮಾಹಿತಿ ನೀಡಿದೆ.

ಲ್ಯಾಂಡಿಂಗ್‌ ಪೂರ್ವ ಕಕ್ಷೆಗೆ ನೌಕೆ ಇಳಿಸುವ ವೇಳೆ ತಾಂತ್ರಿಕ ಸಮಸ್ಯೆ ಉಂಟಾಗಿದೆ’ ಎಂದು ಹೇಳಿದೆ. ಚಂದ್ರಯಾನ-3 ಉಡಾವಣೆಯ ಬಳಿಕ ರಷ್ಯಾ ಈ ರಾಕೆಟ್‌ ಉಡಾವಣೆ ಮಾಡಿದ್ದರೂ ಭಾರತಕ್ಕಿಂತಲೂ ಮೊದಲೇ ಚಂದ್ರನ ದಕ್ಷಿಣ ಧ್ರುವದಲ್ಲಿ ನೌಕೆ ಇಳಿಸುವುದಾಗಿ ಹೇಳಿತ್ತು. ಆದರೆ ಇದೀಗ ತಾಂತ್ರಿಕ ಸಮಸ್ಯೆ ಉಂಟಾಗಿರುವುದರಿಂದ ಲ್ಯಾಂಡಿಂಗ್‌ ವಿಳಂಬವಾಗಲಿದೆಯೇ ಅಥವಾ ಈ ಸಮಸ್ಯೆಯನ್ನು ಸರಿಪಡಿಸಿ ನೌಕೆಯನ್ನು ಸರಿಯಾದ ಕಕ್ಷೆಗೆ ಕೂರಿಸಲಾಗಿದೆಯೇ ಎಂಬ ಮಾಹಿತಿಯನ್ನು ರಷ್ಯಾ ಹಂಚಿಕೊಂಡಿಲ್ಲ.

ಜೂನ್‌ನಲ್ಲೇ ಈ ಯೋಜನೆಯ ಬಗ್ಗೆ ಮಾಹಿತಿ ನೀಡಿದ್ದ ರಾಸ್‌ಕಾಸ್ಮೋಸ್‌ನ ಮುಖ್ಯಸ್ಥ ಯೂರಿ ಬೋರಿಸೋವ್‌, ರಷ್ಯಾದ ಈ ಯೋಜನೆ ಸಾಕಷ್ಟುಸಮಸ್ಯೆಯಿಂದ ಕೂಡಿದ್ದು, ಇದು ಯಶಸ್ವಿಯಾಗುವ ಸಾಧ್ಯತೆ ಶೇ.70ರಷ್ಟಿದೆ ಎಂದು ಹೇಳಿದ್ದರು.

Chandrayaan Mission: ಕನಸು ಕಂಡಿದ್ದು ವಾಜಪೇಯಿ, ನೆಹರು ಜನ್ಮದಿನಕ್ಕೆ ಚಂದ್ರನಲ್ಲಿತ್ತು ಇಸ್ರೋ!

ಈವರೆಗೆ ಸೋವಿಯತ್‌ ಒಕ್ಕೂಟ, ಅಮೆರಿಕ ಮತ್ತು ಚೀನಾ ದೇಶಗಳು ಮಾತ್ರವೇ ಚಂದ್ರನ ಮೇಲೆ ನೌಕೆ ಇಳಿಸುವಲ್ಲಿ ಯಶಸ್ವಿಯಾಗಿವೆ. ಆದರೆ ಯಾರೂ ದಕ್ಷಿಣ ಧ್ರುವದ ಮೇಲೆ ಇಳಿಸಿಲ್ಲ. 2019ರಲ್ಲಿ ಭಾರತ ತನ್ನ ಚಂದ್ರಯಾನ 2ನಲ್ಲಿ ಇದೇ ರೀತಿಯ ಪ್ರಯತ್ನ ಮಾಡಿತ್ತಾದರೂ, ಸಾಫ್‌್ಟಲ್ಯಾಂಡಿಂಗ್‌ ಆಗಿರಲಿಲ್ಲ. ಲ್ಯಾಂಡರ್‌ ಚಂದ್ರನ ಮೇಲೆ ಅಪ್ಪಳಿಸಿತ್ತು.

Latest Videos
Follow Us:
Download App:
  • android
  • ios