ಚಂದ್ರಯಾನ-3 ಯೋಜನೆಯ ಹೊಸ ಚಿತ್ರಗಳನ್ನು ವಿಕ್ರಮ್‌ ಲ್ಯಾಂಡರ್‌ ಕಳುಹಿಸಿಕೊಟ್ಟಿದೆ. ಚಂದ್ರನಿಂದ 70 ಕಿಲೋಮೀಟರ್‌ ಎತ್ತರದಿಂದ ಈ ಚಿತ್ರಗಳನ್ನು ತೆಗೆಯಲಾಗಿದೆ. 

ಬೆಂಗಳೂರು (ಆ.22): ಚಂದ್ರನ ಮೇಲೆ ಇಸ್ರೋ ಕಳಿಸಿಕೊಟ್ಟಿರುವ ವಿಕ್ರಮ್‌ ಲ್ಯಾಂಡರ್‌ ಇಳಿಯುವ ಒಂದು ದಿನ ಮುನ್ನ ಚಂದ್ರನ ಹೊಸ ಚಿತ್ರಗಳನ್ನು ಭೂಮಿಗೆ ಕಳುಹಿಸಿಕೊಟ್ಟಿದೆ. ವಿಕ್ರಮ್‌ ಲ್ಯಾಂಡರ್‌ನಲ್ಲಿ ಇರಿಸಲಾಗಿರುವ ಲ್ಯಾಂಡರ್‌ ಪೊಸಿಷನ್‌ ಡಿಟೆಕ್ಷನ್‌ ಕ್ಯಾಮೆರಾದಿಂದ ಈ ಚಿತ್ರಗಳನ್ನು ಸೆರೆಹಿಡಿಯಲಾಗಿದೆ ಎಂದು ಇಸ್ರೋ ತಿಳಿಸಿದ್ದು, ಚಂದ್ರನ ಇನ್ನೊಂದು ಮುಖ ಮತ್ತಷ್ಟು ಸ್ಪಷ್ಟವಾಗಿ ಇದರಲ್ಲಿ ಕಾಣುತ್ತದೆ. ಅದರೊಂದಿಗೆ ಚಂದ್ರಯಾನ-3 ಯೋಜನೆಯ ಎಲ್ಲಾ ಕಾರ್ಯಾಚರಣೆಗಳು ಈಗಾಗಲೇ ಘೋಷಿಸಿರುವ ವೇಳಾಪಟ್ಟಿಯಂತೆ ನಡೆಯಲಿದೆ ಎಂದು ಹೇಳುವ ಮೂಲಕ ಆಗಸ್ಟ್‌ 23ರಂದೇ ವಿಕ್ರಮ್‌ ಲ್ಯಾಂಡರ್‌ ಚಂದ್ರನ ಮೇಲೆ ಇಳಿಯಲಿರೋದನ್ನ ಖಚಿತಪಡಿಸಿದೆ. ಅದರೊಂದಿಗೆ ವಿಕ್ರಮ್‌ ಲ್ಯಾಂಡರ್‌ನ ಎಲ್ಲಾ ಸಿಸ್ಟಮ್‌ಗಳನ್ನು ನಿರಂತರವಾಗಿ ಚೆಕ್‌ ಮಾಡಲಾಗುತ್ತಿದೆ. ಇಲ್ಲಿಯವರೆಗೂ ವಿಕ್ರಮ್‌ ನೌಕೆ ಅತ್ಯಂತ ಸಲುಲಿತವಾಗಿ ಚಂದ್ರನ ಕಕ್ಷೆಯಲ್ಲಿದೆ ಎಂದು ಮಾಹಿತಿ ನೀಡಿದೆ. ಅದರೊಂದಿಗೆ ಬೆಂಗಳೂರಿನಲ್ಲಿರುವ ಮಿಷನ್‌ ಆಪರೇಷನ್‌ ಕಾಂಪ್ಲೆಕ್ಸ್‌ ಉತ್ಸಾಹದ ಬುಗ್ಗೆಯಾಗಿ ಕಂಡಿದೆ ಎಂದು ಇಸ್ರೋ ಟ್ವೀಟ್‌ನಲ್ಲಿ ತಿಳಿಸಿದೆ.

ಅದರೊಂದಿಗೆ ಚಂದ್ರಯಾನ-3ಯ ಲ್ಯಾಂಡಿಂಗ್‌ನ ನೇರಪ್ರಸಾರ ಮಿಷನ್‌ ಆಪರೇಷನ್ಸ್‌ ಕಾಂಪ್ಲೆಕ್ಸ್‌/ಇಸ್ಟ್ರಾಕ್‌ನಿಂದ ಆಗಸ್ಟ್‌ 23ರ ಸಂಜೆ 5.20 ರಿಂದ ಆರಂಭವಾಗಲಿದೆ ಎಂದು ಇಸ್ರೋ ಮತ್ತೊಮ್ಮೆ ತಿಳಿಸಿದೆ. ಆಗಸ್ಟ್‌ 19 ರಂದು ಲ್ಯಾಂಡರ್‌ ಪೊಸಿಷಕ್‌ ಡಿಟೆಕ್ಷನ್‌ ಕ್ಯಾಮೆರಾ (ಎಲ್‌ಪಿಡಿಸಿ) ತೆಗೆದ ಚಂದ್ರನ ಚಿತ್ರಗಳು ಇದಾಗಿದೆ. ಈ ಹಂತದಲ್ಲಿ ವಿಕ್ರಮ್‌ ಲ್ಯಾಂಡರ್‌ ಚಂದ್ರನಿಂದ 70 ಕಿಲೋಮೀಟರ್‌ ಎತ್ತರದಲ್ಲಿದೆ ಎಂದು ತಿಳಿಸಿದೆ. ಎಲ್‌ಪಿಡಿಸಿ ಚಿತ್ರಗಳು ಲ್ಯಾಂಡರ್ ಮಾಡ್ಯೂಲ್ ಅನ್ನು ಆನ್‌ಬೋರ್ಡ್ ಚಂದ್ರನ ಉಲ್ಲೇಖ ನಕ್ಷೆಯೊಂದಿಗೆ ಹೊಂದಿಸುವ ಮೂಲಕ ಅದರ ಸ್ಥಾನವನ್ನು (ಅಕ್ಷಾಂಶ ಮತ್ತು ರೇಖಾಂಶ) ನಿರ್ಧರಿಸಲು ಸಹಾಯ ಮಾಡುತ್ತದೆ.

CHANDRAYAAN MISSION: ಕನಸು ಕಂಡಿದ್ದು ವಾಜಪೇಯಿ, ನೆಹರು ಜನ್ಮದಿನಕ್ಕೆ ಚಂದ್ರನಲ್ಲಿತ್ತು ಇಸ್ರೋ!

Chandrayaan-3 Updates: ಭಾರತ ಮಾತ್ರವಲ್ಲ, ಚಂದ್ರನಲ್ಲಿ ಇನ್ನೂ ಸಕ್ರಿಯವಾಗಿದೆ ಈ 6 ಮೂನ್‌ ಮಿಷನ್‌ಗಳು!

Scroll to load tweet…