ವಿಜ್ಞಾನಿಗಳು ವಿಚಿತ್ರ ಮೀನನ್ನು ಪತ್ತೆ ಹಚ್ಚಿದ್ದಾರೆ. ತಲೆ ಸಂಪೂರ್ಣ ಪಾರದರ್ಶಕ, ಹೊಳೆಯುತ್ತಿರುವ ಹಸಿರು ಕಣ್ಣ, ತಲೆ ಸಂಪೂರ್ಣ ಭಾಗ ಎಲ್ಇಡಿ ಲೈಟ್ನಂತೆ ಹೊಳೆಯುತ್ತಿರುವ ವಿಚಿತ್ರ ಮೀನು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದೇ ಮೊದಲ ಬಾರಿಗೆ ಈ ಮೀನು ಪತ್ತೆಯಾಗಿದೆ.
ಸಮುದ್ರದ ಲಕ್ಷಾಂತರ ಜೀವಿಗಳಲ್ಲಿ ಮನುಷ್ಯನ ಕಣ್ಣಿಗೆ ಬಿದ್ದ ಜೀವಿಗಳು ಕಡಿಮೆ. ಆಳ ಸಮುದ್ರದಲ್ಲಿನ ರಹಸ್ಯವನ್ನು ಮಾನವನಿಗೆ ಭೇದಿಸಲು ಸಾಧ್ಯವಾಗಿಲ್ಲ. ಸಂಶೋಧನೆ ವೇಳೆ ವಿಜ್ಞಾನಿಗಳಿಗೆ ಹಲವು ಚಿತ್ರ ವಿಚಿತ್ರ ಜೀವಿಗಳು ಪತ್ತೆಯಾಗಿದೆ. ಇದೀಗ ವಿಜ್ಞಾನಿಗಳ ಕ್ಯಾಮೆರಾಗೆ ವಿಚಿತ್ರ ಮೀನೊಂದು ಪತ್ತೆಯಾಗಿದೆ. ಈ ಮೀನಿನ ತಲೆ ಪಾರದರ್ಶಕವಾಗಿದೆ. ಇಷ್ಟೇ ಅಲ್ಲ ಇಡೀ ತಲೆ ಎಲ್ಐಡಿ ಲೈಟ್ನಂತೆ ಹೊಳೆಯುತ್ತಿದೆ. ಕತ್ತಲಲ್ಲೂ ತಲೆ ಹಾಗೂ ಬಾಲ ಸ್ಪಷ್ಟವಾಗಿ ಗೋಚರಿಸುತ್ತದೆ. ಇನ್ನು ಹಸಿರು ಬಣ್ಣದ ಹೊಳೆಯುವ ಕಣ್ಣುಗಳನ್ನು ಈ ಮೀನು ಹೊಂದಿದೆ. ತಲೆ ಮಾತ್ರ ಪಾರದರ್ಶಕವಾಗಿದೆ. ಇನ್ನುಳಿದ ಭಾಗ ಇತರ ಮೀನುಗಳಂತೆ ಇದೆ. ಈ ವಿಚಿತ್ರ ಹಾಗೂ ಅಪರೂಪದ ಮೀನಿಗೆ ಬ್ಯಾರಲ್ಐಯ್ ಫಿಶ್ ಎಂದು ಕರೆಯುತ್ತಾರೆ.
ವಿಜ್ಞಾನಿಗಳ ಕ್ಯಾಮೆರಾದಲ್ಲಿ ವಿಚಿತ್ರ ಫಿಶ್
ಈ ವಿಚಿತ್ರ ಮೀನಿನ ಅದ್ಭುತ ದೃಶ್ಯ ವಿಜ್ಞಾನಿಗಳ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅಮೆರಿಕದ ಮೊಂಟರೆ ಬೇ ಅಕ್ವೇರಿಯಂ ರಿಸರ್ಚ್ ಸಂಸ್ಥೆ ವಿಜ್ಞಾನಿಗಳ ತಂಡದ ಅಧ್ಯಯನದಲ್ಲಿ ಈ ಮೀನು ಪತ್ತೆಯಾಗಿದೆ. ಪೆಸಿಫಿಕ್ ಮಹಾಸಾಗರದ ಮೊಂಟೆರಿ ಕ್ಯಾನನ್ನಿಂದ 55 ಮೈಲಿ ದೂರದ ಸಾಗರದ ಆಳದಲ್ಲಿ ಸಂಶೋಧನೆ ನಡೆಸಲಾಗಿತ್ತು. ಹಡಗಿನ ಮೂಲಕ ವಿಜ್ಞಾನಿಗಳ ತಂಡ ತೆರಳಿ ಡಾಕ್ ರಿಕೆಟ್ಸ್ ಅನ್ನೋ ರಿಮೂಟ್ ಕಂಟ್ರೋಲ್ ವಾಹನದ ಮೂಲಕ ಸಂಶೋಧನೆ ನಡೆಸಲಾಗಿದೆ. ಈ ರಿಮೂಟ್ ಕಂಟ್ರೋಲ್ ವಾಹನವನ್ನು ಸಮುದ್ರದ ಆಳಕ್ಕೆ ಇಳಿಸಲಾಗಿದೆ. ಮಹಾಸಾಗರದಲ್ಲಿ 1,970 ಅಡಿ ಆಳದಲ್ಲಿ ಈ ಮೀನು ಪತ್ತೆಯಾಗಿದೆ.
ಸೂರ್ಯನ ಬೆಳಕು ಪ್ರವೇಶಿಸದಷ್ಟು ಆಳದಲ್ಲಿ ಈ ಮೀನುಗಳು ಸ್ವಚ್ಚಂದವಾಗಿ ಆಹಾರ ಹುಡುಕುತ್ತಾ ಸಾಗುತ್ತಿರುವ ದೃಶ್ಯಗಳು ಪತ್ತೆಯಾಗಿದೆ. ಈ ವಿಚಿತ್ರ ಮೀನು ಪತ್ತೆಯಾಗುತ್ತಿದ್ದಂತೆ ವಿಜ್ಞಾನಿಗಳ ತಂಡ ಈ ಮೀನನ್ನೇ ಕೇಂದ್ರಿಕರಿಸಿ ದೃಶ್ಯ ಸೆರೆ ಹಿಡಿದಿದ್ದಾರೆ. ರಿಮೋಟ್ ಕಂಟ್ರೋಲ್ ವಾಹನದಲ್ಲಿ ಅಳವಡಿಸಿದ್ದ ಕ್ಯಾಮೆರಾ ಮೂಲಕ ಮೀನಿನ ಚಲನವಲನಗಳನ್ನು ಸೆರೆ ಹಿಡಿದ್ದಾರೆ.
ಮಂದ ಬೆಳಕಿನಲ್ಲಿ ತಲೆಯ ಬೆಳಕಿನಿಂದ ಆಹಾರ ಹುಡುಕಾಟ
ಸಮುದ್ರದ ಆಳದಲ್ಲಿ ಈ ಮೀನುಗಳು ವಾಸಿಸುತ್ತವೆ. ಇದೇ ಕಾರಣಕ್ಕೆ ಇದರ ತಲೆ ಪಾರದರ್ಶಕವಾಗಿದ್ದು, ಕಣ್ಣುಗಳು ಹೊಳೆಯುತ್ತಿದೆ. ಕಣ್ಣು ಹಾಗೂ ಹೊಳೆಯುವ ತಲೆಯಿಂದ ಬರವು ಬೆಳಕಿನಲ್ಲಿ ಸಾಗರದ ಆಳದಲ್ಲಿ ಇದು ಆಹಾರ ಹುಡುಕುತ್ತವೆ. ಶತಮಾನಗಳ ಹಿಂದೆ ಈ ಮೀನುಗಳು ಮೀನುಗಾರರ ಬಲೆಗೆ ಬೀಳುತ್ತಿತ್ತು. ಆದರೆ ಆಳ ಸಮುದ್ರ ಮೀನುಗಾರಿಕೆ ಮಾಡುವರು ದಡ ಸೇರುವಾಗ ಈ ಪಾರದರ್ಶಕ ಮೀನಿನ ತಲೆ ನಶಿಸುತ್ತಿತ್ತು. ಪಾರದರ್ಶಕ ಕಾರಣ ಬಹುಬೇಗನೆ ಈ ಮೀನಿನ ತಲೆ ನಾಶವಾಗುತ್ತಿತ್ತು. ಬಲೆಯಲ್ಲಿ ಸಿಲುಕಿದ ಈ ಮೀನುಗಳನ್ನು ಎಸೆಯಲಾಗುತ್ತಿತ್ತು. ಬಳಿಕ ಈ ಮೀನುಗಳು ನಾಶವಾಗಿತ್ತು. ಈ ಮೀನುಗಳು ಇದುವರೆಗೆ ಎಲ್ಲೂ ಪತ್ತೆಯಾಗಿರಲಿಲ್ಲ. ಇದೀಗ ಸಾಗರದ ಆಳದಲ್ಲಿ ಈ ಮೀನುಗಳು ಮೊದಲ ಬಾರಿಗೆ ಜೀವಂತವಾಗಿ ಪತ್ತೆಯಾಗಿದೆ ಎಂದು ಸಂಶೋಧನಾ ತಂಡದ ವಿಜ್ಞಾನಿ ಸ್ಟೀವನ್ ಹ್ಯಾಡಾಕ್ ಹೇಳಿದ್ದಾರೆ.
ಸರಿಸುಮಾರು 6 ಇಂಚಿನಷ್ಟು ಉದ್ದವಿರುವ ಈ ಮೀನು ಸಮುದ್ರದ 2000 ದಿಂದ 2600 ಅಡಿ ಆಳದಲ್ಲಿ ಈ ಮೀನುಗಳು ಜೀವಿಸುತ್ತದೆ. ತಲೆ ಸಂಪೂರ್ಣವಾಗಿ ಪಾರದರ್ಶಕವಾಗಿದೆ. ಈ ಮೀನಿನ ತಲೆಯ ಒಳಗೆ ಏನೆಲ್ಲಾ ಇದೆ ಅನ್ನೋದು ಗಾಜಿನಂತೆ ಹೊರಗೆ ಕಾಣಿಸುತ್ತಿದೆ. ಜೊತೆಗೆ ಹೊಳೆಯುವ ಕಣ್ಣುಗಳು, ಮೀನಿನ ಬಾಲಗಳು ಸ್ಪಷ್ಟವಾಗಿ ಕಾಣಿಸುತ್ತದೆ.
ಕಳೆದ 40 ವರ್ಷದ ಸಮುದ್ರ ಸಂಶೋಧನೆಯಲ್ಲಿ ಒಟ್ಟು 10 ಬಾರಿ ಬಹಳ ದೂರದಿಂದ ಈ ಮೀನುಗಳು ಪತ್ತೆಯಾಗಿದೆ. ಆದರೆ ಇದುವರೆಗೂ ಸ್ಪಷ್ಟ ಚಿತ್ರಣ ಸಿಕ್ಕಿರಲಿಲ್ಲ. ಇದೇ ಮೊದಲ ಬಾರಿಗೆ ಈ ಮೀನಿನ ಕುರಿತು ಸ್ಪಷ್ಟ ವಿಡಿಯೋ ಲಭ್ಯವಾಗಿದೆ ಎಂದು ಹ್ಯಾಡಾಕ್ ಹೇಳಿದ್ದಾರೆ.






