ಪಿಟಿಐ ಶ್ರೀಹರಿಕೋಟ: ಭಾರತ ಹಾಗೂ ಅಮೆರಿಕ ಮೊದಲ ಬಾರಿ ಜಂಟಿಯಾಗಿ ಅಭಿವೃದ್ಧಿಪಡಿಸಿದ ಅತ್ಯಾಧುನಿಕ ಹಾಗೂ ವಿಶ್ವದ ಅತಿ ದುಬಾರಿ ಭೂಸರ್ವೇಕ್ಷಣಾ ಉಪಗ್ರಹ 'ನಿರ್ಸಾ' ಬುಧವಾರ ಸಂಜೆ 5.40ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆಯಾಗಿದೆ. ಈ ಮೂಲಕ ಶುಭಾಂಶು ಶುಕ್ಲಾ ಬಾಹ್ಯಾ ಕಾಶಯಾನದ ಬೆನ್ನಲ್ಲೇ, ಅಂತರಿಕ್ಷ ಕ್ಷೇತ್ರದಲ್ಲಿ ಭಾರತ ಮತ್ತೊಂದು ಮೈಲುಗಲ್ಲು ಸಾಧಿಸಿದೆ. 27.30 ಗಂಟೆಗಳ ಕ್ಷಣಗಣನೆ ಬಳಿಕ, ಇಸ್ರೋದ ಜಿಎಸ್ಎಲ್ವಿ-16 ರಾಕೆಟ್ ಸುಮಾರು 745 ಕಿ.ಮೀ. ದೂರ, 19 ನಿಮಿಷಗಳ ಕಾಲ ಹಾರಾಟ ನಡೆಸಿ ನಿಸಾರ್ಸಿಂಥೆಟಿಕ್ ಅಪರ್ಚ್ರ ರಾಡಾರ್ ಉಪಗ್ರಹವನ್ನು ಉದ್ದೇಶಿತ ಕಕ್ಷೆಗೆ ಸೇರಿಸಿದೆ. ಈ ಉಪಗ್ರಹದಲ್ಲಿನ ಎಸ್-ಬ್ಯಾಂಡ್ ಅನ್ನು ಒದಗಿಸಿದ್ದರೆ, ಎಲ್-ಬ್ಯಾಂಡ್ ಅನ್ನು ಇಸ್ರೋ ನಾಸಾ ಒದಗಿಸಿದೆ. ಕಾರಾಚರಣೆಯನ್ನು ಇಸ್ರೋ, ಕಕ್ಷೆ ಮತ್ತು ರಾಡಾರ್ನ ಕಾರ್ಯಾಚರಣೆಯನ್ನು ನಾಸಾ ವಹಿಸಿಕೊಂಡಿವೆ.