ಕಾಳಿಂಗ ಸರ್ಪವನ್ನು ಅತ್ಯಂತ ಅಪಾಯಕಾರಿ ಎಂದು ಭಾವಿಸಲಾಗಿದ್ದರೂ, ವಾಸ್ತವದಲ್ಲಿ ಭಾರತೀಯ ನಾಗರಹಾವು ಹೆಚ್ಚು ವಿಷಕಾರಿಯಾಗಿದೆ. ಈ ಲೇಖನವು ಈ ಎರಡು ಪ್ರಮುಖ ಹಾವುಗಳ ನಡುವಿನ ವ್ಯತ್ಯಾಸ, ಅವುಗಳ ವಿಷದ ಪ್ರಮಾಣ, ಕಚ್ಚುವಿಕೆಯ ವಿಧಾನದ ಕುರಿತು ವಿವರಿಸುತ್ತದೆ.

King Cobra ನೋಡಿದ್ರೇನೆ ಸಾಕು, ಎದೆ ಝಲ್ಲೆನ್ನುತ್ತೆ. ಅದು ಗತ್ತಿನಿಂದ ಹರಿದು ಹೋಗುತ್ತಿದ್ದರೆ, ಒಮ್ಮೆ ಗುಂಡಿಗೆ ಎಷ್ಟೇ ಗಟ್ಟಿ ಇದ್ದರೂ ನಿಂತಂತಾಗುತ್ತದೆ. ಅಷ್ಟಕ್ಕೂ ಭೂಮಿ ಮೇಲಿರುವ ಇದೇ ಅಪಾಯಕಾರಿ ಸರ್ಪವೇ?

Social Mediaದಲ್ಲಿ ಕಾಳಿಂಗ ಸರ್ಪ ಮನೆಗೆ ಬಂದಿದ್ದು, ಅದನ್ನು ಉರಗ ತಜ್ಞರು ಹಿಡಿದಿದ್ದು ವಿಡಿಯೋಸ್ ವೈರಲ್ ಆಗುತ್ತಲೇ ಇರುತ್ತೆ. ಜನರಿಗೆ ಹಾವೆಂದರೆ ವಿಶೇಷ ಆಕರ್ಷಣೆ ಜೊತೆಗೆ ಭಯ. ಈ ರೀತಿ ವೈರಲ್ ಆಗುವ ವೀಡಿಯೋದಲ್ಲಿ ಒಮ್ಮೆ ಸಿಕ್ಹಾಕಿಕೊಂಡ ಹಾವು, ತಕ್ಷಣ ಹೊಟ್ಟೆಯಲ್ಲಿ ಏನು ನುಂಗಿರುತ್ತೋ ಅದನ್ನು ಭಯದಲ್ಲಿ ಉಗುಳಿ ಬಿಡುತ್ತೆ. ಇದಕ್ಕೆ ಕೆರೆ ಹಾವು ಅಚ್ಚು ಮೆಚ್ಚಿನ ಆಹಾರ ಎನ್ನಲಾಗುತ್ತದೆ. ಅದನ್ನು ಹಿಡಿಯಲು ಮನೆ ಹತ್ತಿರ ದಾಂಗುಡಿ ಇಟ್ಟು ಸಿಕ್ಹಾಕಿಕೊಳ್ಳುತ್ತದೆ.

ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ ಇತ್ತೀಚೆಗೆ ಮನೆಗೆ ಪಾಯ ತೋಡುವಾಗ ಪುರಾತನ ಕಾಲದ ಆಭರಣಗಳು ಸಿಕ್ಕಿದ್ದು, ಅಲ್ಲಿ ಘಟಸರ್ಪದ ಶಿಲೆ ಕಾಣಿಸಿ ಕೊಂಡಿದ್ದಲ್ಲದೇ, ಪುರಾತತ್ವ ಅಧಿಕಾರಿಗಳು ಮಾಡುತ್ತಿರುವ ಉತ್ಖನನ ಕಾರ್ಯಾಚರಣೆಯಲ್ಲಿ ನಾಗ ಮಣಿ ಇರವ ಏಳು ಹೆಡೆ ಇರುವ ನಾಗ ಶಿಲೆಯೂ ಕಾಣಿಸಿದೆ. ಅಲ್ಲಿ ಜೀವಂತ ಹಾವೂ ಕಾಣಿಸಿಕೊಳ್ಳುತ್ತಿದೆ ಎನ್ನುವ ಸುದ್ದಿಗಳೂ ಹರಿದಾಡುತ್ತಿವೆ. ಈ ಹಿನ್ನೆಲೆಯಲ್ಲಿ ಉರಗ ತಜ್ಞರು ಅಲ್ಲಿಗೆ ಆಗಮಿಸಿದ್ದಾರೆ. ಭಾರತೀಯ ಪುರಾಣ ಕತೆಗಳಲ್ಲಿ ಈ ಏಳು ಹೆಡೆ ಸರ್ಪ ಹಾಗೂ ನಿಧಿ ಇರುವೆಡೆ ಹಾವು ಇರುತ್ತೆ ಎಂಬ ನಂಬಿಕೆ ಬೇರೂರಿರುವುದರಿಂದ ಈ ಸುದ್ದಿ ಜನರ ಕುತೂಹಲ ಕೆರಳಿಸುತ್ತದೆ.

ಅಷ್ಟಕ್ಕೂ ಕಾಳಿಂಗ ಸರ್ಪವೇ ವಿಷಕಾರಿನಾ?

ಜಗತ್ತಿನ ವಿಷಕಾರಿ ಸರ್ಪಗಳಲ್ಲಿ ಕಾಳಿಂಗ ಸರ್ಪವೂ ಪ್ರಮುಖ ಸ್ಥಾನ ಪಡೆಯೋದು ಹೌದು. ಸುಮಾರು 19 ಅಡಿಯಷ್ಟು ಉದ್ದ, 7 ಕೆಜಿಯಷ್ಟು ತೂಗುವ ಈ ಕಾಳಿಂಗ ಸರ್ಪವೆಂಬ ಸರಿಸೃಪ ಬೇರೆ ಪ್ರಾಣಿಗಳನ್ನು ತಿನ್ನುವ ಪರಭಕ್ಷಕಗಳು. ಭಾರತದಲ್ಲಿ ಕಾಣ ಸಿಗುವ ಹಾವುಗಳಲ್ಲಿ ಕಾಳಿಂಗ ಸರ್ಪ ಹಾಗೂ ನಾಗರಹಾವು ಹೆಚ್ಚು ವಿಷಕಾರಿ ಎನ್ನಲಾಗುತ್ತದೆ. ನಾಗರ ಹಾವು ತನ್ನ ಹಲ್ಲಿನಲ್ಲಿಯೇ ಭಯಾನಕ ವಿಷ ಇಟ್ಟಕೊಂಡಿದ್ದು, ಕಾಳಿಂಗ ಸರ್ಪಕ್ಕಿಂತಲೂ ಅಪಾಯಕಾರಿ ಎನ್ನಲಾಗುತ್ತದೆ. ಏಳಡಿ ಉದ್ದ, ಸುಮಾರು ಮೂರು ಕೆಜಿ ತೂಗುವ ನಾಗರಹಾವಿಗೆ ಹೋಲಿಸಿದರೆ ಕಾಳಿಂಗ ಸರ್ಪದ ರೋಷ ತುಸು ಕಡಿಮೆ, ಇದರ ದೊಡ್ಡ ದೇಹವೇ ಕ್ವಿಕ್ ಆಗಿ ಕಾರ್ಯ ನಿರ್ವಹಿಸಲು ಇದಕ್ಕಿರುವ ಅಡ್ಡಿ. ಹಾಗಾಗಿ ನಾಗರ ಹಾವೇ ಹೆಚ್ಚು ವಿಷಕಾರಿ.

ಕಾಳಿಗ ಸರ್ಪ ಕಚ್ಚಿದರೆ ಎಷ್ಟು ವಿಷ ಉಗುಳುತ್ತದೆ?

ಕಾಳಿಂಗ ಸರ್ಪ ಕಚ್ಚಿದರೆ ಸುಮಾರು 1.28 ಮಿಲಿಗ್ರಾಂನಷ್ಟು ವಿಷ ಬಿಡುಗಡೆಯಾದರೆ, Indian Cobra ಅಥವಾ ನಾಗರಹಾವು ಕಚ್ಚಿದರೆ ಸುಮಾರು 170ರಿಂದ 250 ಮಿಲಿಗ್ರಾಂನಷ್ಟು ವಿಷ ಬಿಡುಗಡೆ ಮಾಡುತ್ತದೆ. ಭಾರತದಲ್ಲಿ ಬೇರೆ ಬೇರೆ ಜಾತಿಯ ಹಾವನ್ನು ಕಚ್ಚಿಸಿಕೊಂಡು ದಿನಕ್ಕೆ ಸುಮಾರು 150 ರಿಂದ 160 ಮಂದಿ ಸಾಯುತ್ತಾರೆಂದು ವರದಿಯೊಂದು ಹೇಳುತ್ತದೆ.

ನಾಗರ ಹಾವು ಹಾಗೂ ಕಾಳಿಂಗ ಸರ್ಪಗಳ ಹಲ್ಲೂಗಳೂ ವಿಭಿನ್ನವಾಗಿರುತ್ತದೆ. ಕಾಳಿಂಗ ಸರ್ಪದಲ್ಲಿ ಸುಮಾರು 0.3 ಇಂಚಿನ ಗಾತ್ರದ ಹಲ್ಲುಗಳಿರುತ್ತವೆ. ಕಚ್ಚಿದರೆ ಸರಿಯಾಗಿ ಗ್ರಿಪ್ ಸಿಗುವಂತೆ ಕಾಳಿಂಗ ಸರ್ಪದ ಹಲ್ಲಿನ ವಿನ್ಯಾಸ ಇರುತ್ತದೆ. ಗಟ್ಟಿಯಾಗಿ ಕಚ್ಚಿ ಹಿಡಿದು ಈ ಹಾವು ವಿಷವನ್ನು ಬಿಡುಗಡೆ ಮಾಡುತ್ತವೆ. ಆದ್ರೆ ನಾಗರಹಾವು ಕಚ್ಚಿದಾಗ, ಏನಾದರೂ ಆಹಾರ ತಿಂದು ಜಗಿಯುವಂತೆ ಕಚ್ಚಿ ತನ್ನ ವಿಷವನ್ನು ರಿಲೀಸ್ ಮಾಡುತ್ತವೆ. ಕಿಂಗ್ ಕೋಬ್ರಾಗೆ ಹೋಲಿಸಿದರೆ ನಾಗರಹಾವಿನ ಹಲ್ಲುಗಳ ಗಾತ್ರ ಚಿಕ್ಕದು.

ಓಫಿಯೋಫಾಗಸ್ ಹನ್ನಾ ಎಂಬ ವೈಜ್ಞಾನಿಕ ಹೆಸರಿರುವ ಕಾಳಿಂಗ ಸರ್ಪ ಆಕಾರದಲ್ಲಿ ದಢೂತಿಯಾಗಿದ್ದರೂ, ಕೆರೆ ಹಾವು, ಕೋಳಿ, ಇಲಿಯಂಥ ಸಣ್ಣ ಪುಟ್ಟ ಪ್ರಾಣಿಗಳನ್ನೇ ತಿಂದು ಬದುಕುತ್ತದೆ. ಹಾಗಂಥ ಕುರಿಯಂಥ ಸ್ವಲ್ಪ ದೊಡ್ಡ ಪ್ರಾಣಿಯನ್ನು ಹಿಡಿದು, ಒದ್ದಾಡುವುದನ್ನೂ ನೋಡಬಹುದು. ಇದು ಸ್ವಲ್ಪ ಶೀತಲ ಪ್ರದೇಶದಲ್ಲಿ ಹೆಚ್ಚು ಕಾಣಿಸುತ್ತದೆ. ಉರಗ ತಜ್ಞರು ಹಿಡಿದ ಹಾವನ್ನು, ಅವುಗಳ ಜೀವಕ್ಕೆ ಯಾವುದೇ ಅಪಾಯವಿಲ್ಲದಂತೆ ಸುಮಾರು ಮೂರು ಕಿಮೀ. ರೇಡಿಯಸ್‌ನಲ್ಲಿಯೇ ಬಿಡುತ್ತಾರೆ.