ಗದಗದ ಲಕ್ಕುಂಡಿಯಲ್ಲಿ ಮನೆ ಪಾಯ ಅಗೆಯುವಾಗ ಸಿಕ್ಕ ಚಿನ್ನದ ಆಭರಣಗಳು ಪುರಾತತ್ವ ಇಲಾಖೆಯ ಉತ್ಖನನಕ್ಕೆ ಕಾರಣವಾಯಿತು. ಈ ಕಾರ್ಯಾಚರಣೆಯಲ್ಲಿ ಪುರಾತನ ಶಿವಲಿಂಗ ಪತ್ತೆಯಾಗಿದ್ದು, ನಿಗೂಢ ಸರ್ಪವೊಂದು ಕಾಣಿಸಿಕೊಂಡು ನಿಧಿ ಮತ್ತು ನಾಗಬಂಧದ ರಹಸ್ಯವನ್ನು ಮತ್ತಷ್ಟು ಹೆಚ್ಚಿಸಿದೆ.

ಕೆಲವು ಸಲ ಅತ್ಯಂತ ವಿಚಿತ್ರ ಅಂತನ್ಸೋದು ಯಾವುದು ಗೊತ್ತಾ? ಇತಿಹಾಸದ ಪುಟಗಳನ್ನ ತಿರುವಿ ಹಾಕಿ ನೋಡ್ತಾ ಇದ್ರೆ, ಆಗ ಪುರಾಣ ಗ್ರಂಥಗಳ, ಅಮೂಲ್ಯ ತಂತ್ರಗಳ, ವಿಚಿತ್ರ ವಿಸ್ಮಯಗಳೂ ಎದುರಾಗ್ತಾವೆ. ಈಗ ಆಗ್ತಾ ಇರೋದು ಅದೇನೆ. ಗತವೈಭವದ ಒಡಲಲ್ಲಿದ್ದ ಸ್ವರ್ಣಭಂಡಾರದ ಹುಡುಕಾಟಕ್ಕೆ ಹೊರಟವರಿಗೆ, ನಿರೀಕ್ಷೆಗೂ ಮೀರಿದ ಅಚ್ಚರಿ. ಅಚ್ಚರಿಗೊಳ್ಳೋ ಮೊದಲೇ ಆಘಾತ ಎರಡೂ ಎದುರಾಗಿದೆ. ಅದರ ಹಿಂದಿರೋ ದೈವರಹಸ್ಯ ಮತ್ತಷ್ಟು ವಿಚಿತ್ರವಾಗಿದೆ. ಅದೇನು ಅನ್ನೋದು ಗೊತ್ತಾಗ್ಬೇಕು ಅಂದ್ರೆ, ನಾವೀಗ ಐತಿಹಾಸಕ ನಗರಕ್ಕೆ ಪ್ರಯಾಣ ಹೊರಡ್ಬೇಕು. ಅದ್ಯಾವುದು ಗೊತ್ತಾ?

ಅದು 10ನೇ ಶತಮಾನ. ಇವತ್ತಿನ ಮುಂಬೈ, ಬೆಂಗಳೂರು ತರ ಆ ಕಾಲಕ್ಕೆ ದಕ್ಷಿಣ ಭಾರತದಲ್ಲೇ ಒಂದು ಪವರ್ ಹೌಸ್ ಇತ್ತು. ಅಲ್ಲಿ ಬರೀ ವ್ಯಾಪಾರ ಅಷ್ಟೇ ಅಲ್ಲ, ಇಡೀ ದಕ್ಷಿಣ ಭಾರತಕ್ಕೆ ಬೇಕಾದ ಬಂಗಾರದ ನಾಣ್ಯಗಳನ್ನ ತಯಾರು ಮಾಡೋ ಟಂಕಸಾಲೆ ಇತ್ತು ಅಂದ್ರೆ, ಆ ಊರ ಶ್ರೀಮಂತಿಕೆ ಎಷ್ಟಿರಬೇಡ ಊಹಿಸಿ ನೋಡಿ? ಇನ್ನು ಅಲ್ಲಿರೋ ದೇವಸ್ಥಾನಗಳನ್ನ ನೋಡಿದ್ರೆ, ಕಲ್ಲಿನಲ್ಲೂ ಕವಿತೆ ಬರೆಯಬಹುದು ಅಂತ ಜಗತ್ತಿಗೆ ತೋರಿಸಿಕೊಟ್ಟ ಕಲೆಗಾರರ ಸಾಮ್ರಾಜ್ಯವದು

ಸಾವಿರ ವರ್ಷಗಳ ಹಿಂದೆಯೇ ನೂರಕ್ಕೂ ಹೆಚ್ಚು ದೇವಸ್ಥಾನಗಳು, ನೂರಕ್ಕೂ ಹೆಚ್ಚು ಮೆಟ್ಟಿಲು ಬಾವಿಗಳನ್ನ ಹೊಂದಿದ್ದ ಆ ಜಾಗ, ಅವತ್ತಿನ ಚಕ್ರವರ್ತಿಗಳ ಅತಿ ಪ್ರಿಯ ಸ್ಥಳ ಆಗಿತ್ತು. ಎಷ್ಟೋ ಜನ ರಾಜರು ಆ ಊರನ್ನ ಗೆಲ್ಲೋಕೆ ಯುದ್ಧ ಮಾಡಿದ್ರು, ಇನ್ನು ಹೊಯ್ಸಳ ಅರಸರಂತೂ ಅದನ್ನ ತಮ್ಮ ಪ್ರಾಣಕ್ಕಿಂತ ಹೆಚ್ಚಾಗಿರೋ, ಎರಡನೇ ರಾಜಧಾನಿಯನ್ನಾಗಿ ಮಾಡಿಕೊಂಡಿದ್ರು..

ಆ ಮಣ್ಣಿನ ಪ್ರತಿ ಕಣದಲ್ಲೂ ಇತಿಹಾಸ ಅಡಗಿದೆ. ಅಲ್ಲಿರೋ ಕಲ್ಲುಕಲ್ಲುಗಳೂ ಗತವೈಭವವನ್ನ ನೆನಪಿಸ್ತಾವೆ. 14ನೇ ಶತಮಾನದ ಸುಲ್ತಾನರ ದಾಳಿಯಿಂದ ಸೊರಗಿದ ಆ ಊರಲ್ಲಿ, ಹೆಜ್ಜೆ ಹೆಜ್ಜೆಗೂ ನಮ್ಮನ್ನ ಬೆರಗು ಸ್ವಾಗತಿಸುತ್ತೆ. ಇವತ್ತಿಗೂ ಅದರ ಗತ್ತು, ಮಹತ್ವ ಕಡಿಮೆ ಆಗಿಲ್ಲ. ಅಂದಿನ ಶಾಸನಗಳಲ್ಲಿ ಲೋಕಿಗುಂಡಿ ಅಂತ ಕರೆಸಿಕೊಳ್ತಾ, ಇವತ್ತು ನಮ್ಮ ಹೆಮ್ಮೆಯ ಗದಗ ಜಿಲ್ಲೆಯಲ್ಲಿ ಕರುನಾಡ ಕಲಾ ವೈಭವವನ್ನ ಸಾರಿ ಹೇಳ್ತಿರೋ ಆ ಐತಿಹಾಸಿಕ ನಗರವೇ ಲಕ್ಕುಂಡಿ

ಲಕ್ಕುಂಡಿ ಬಗ್ಗೆ ಈಗೀಗ ಹೆಚ್ಚೆಚ್ಚು ಚರ್ಚೆಯಾಗ್ತಾ ಇದೆ. ಅದಕ್ಕೆ ಕಾರಣ, ಅಲ್ಲಿರೋ ಸಂಪತ್ತು. ಅಲ್ಲಿರೋ ಕುತೂಹಲ. ಅಲ್ಲಿನ ಇತಿಹಾಸ. ಕಳೆದ ಕೆಲವು ದಿನಗಳ ಹಿಂದೆ, ಇದೇ ಲಕ್ಕುಂಡಿ ಗ್ರಾಮದ ಗಂಗವ್ವ ಬಸವರಾಜ ರಿತ್ತಿ ಮತ್ತು ಅವರ ಮಗನಿಗೆ ಆ ದಿನ ಕಾದಿದ್ದ ಅಚ್ಚರಿ ಸಾಮಾನ್ಯದ್ದಲ್ಲ. ತಮ್ಮ ಹಳೆಯ ಮನೆಯನ್ನ ಕೆಡವಿ, ಹೊಸ ಮನೆ ಕಟ್ಟೋಕೆ ಅಂತ ಪಾಯ ಅಗೀತಿದ್ದಾಗ ಮಣ್ಣಿನ ಅಡಿಯಲ್ಲಿ ಒಂದು ಪುಟ್ಟ ತಾಮ್ರದ ಬಿಂದಿಗೆ ಸಿಕ್ಕಿತ್ತು. ಕುತೂಹಲದಿಂದ ಅದನ್ನ ತೆಗೆದು ನೋಡಿದಾಗ ತಾಯಿ-ಮಗ ದಂಗಾಗಿ ಹೋದ್ರು. ಅದರೊಳಗೆ ಬರೋಬ್ಬರಿ 470 ಗ್ರಾಂ ತೂಕದ ಪುರಾತನ ಕಾಲದ ಚಿನ್ನದ ಸರಗಳು, ಉಂಗುರಗಳು, ಕಿವಿಯೋಲೆಗಳು ಹಾಗೂ ವಿಶಿಷ್ಟವಾದ ನಾಗಮುದ್ರೆಗಳಿದ್ದವು

ನಮ್ಮ ಪುರಾಣಗಳಲ್ಲಿ, ತಂತ್ರಶಾಸ್ತ್ರಗಳಲ್ಲಿ ಒಂದು ನಂಬಿಕೆ ಇದೆ. ಪುರಾತನ ನಿಧಿಗಳನ್ನ, ದೈವಸ್ಥಾನಗಳನ್ನ ಸರ್ಪ ಕಾವಲು ಕಾಯ್ತಾ ಇರುತ್ತೆ ಅಂತ. ಆ ಮಾತಿಗೆ ಸಾಕ್ಷಿ ಅನ್ನೋ ಹಾಗೆ, ಈಗೊಂದು ಘಟನೆ ನಡೆದಿದೆ. ಅದೂ ಕೂಡ, ಇದೇ ಲಕ್ಕುಂಡಿಯಲ್ಲಿ. ಆ ವಿಚಿತ್ರ ವಿಲಕ್ಷಣ ಕತೆ ನಿಜಕ್ಕೂ ರೋಚಕ. ಅಸಲಿಗೆ ಇದೆಲ್ಲಾ ಶುರುವಾಗಿದ್ದು ಹೇಗೆ ಗೊತ್ತಾ?

ಮಹಾ ನಿಧಿಯ ಸುಳಿವು ನೀಡಿತ್ತು ಆ ಘಟನೆ!

ಎಲ್ಲವೂ ಶುರುವಾಗಿದ್ದೇ ಆ ರಿತ್ತಿ ಕುಟುಂಬದ ಮನೆಯಲ್ಲಿ ಬಂಗಾರ ಸಿಕ್ಕ ಮೇಲೆ. ಯಾವಾಗ ಮಣ್ಣಿನ ಅಡಿಯಲ್ಲಿ ವಿಜಯನಗರ ಕಾಲದ ಆಭರಣಗಳು ಪತ್ತೆಯಾದವೋ, ಇಡೀ ಪುರಾತತ್ವ ಇಲಾಖೆ ಅಲರ್ಟ್ ಆಯ್ತು. ಒಂದು ಮನೆಯಲ್ಲೇ ಇಷ್ಟು ಸಿಕ್ಕಿದೆ ಅಂದ್ರೆ, ಈ ಐತಿಹಾಸಿಕ ಲಕ್ಕುಂಡಿಯ ಮಣ್ಣಿನ ಅಡಿಯಲ್ಲಿ ಇನ್ಯಾವ ಮಹಾ ಸಾಮ್ರಾಜ್ಯದ ರಹಸ್ಯ ಅಡಗಿರಬಹುದು? ಅನ್ನೋ ಕುತೂಹಲ ಅಧಿಕಾರಿಗಳಲ್ಲಿ ಶುರುವಾಯ್ತು. ಅದಕ್ಕೆಂದೇ ಅವರು ಟಾರ್ಗೆಟ್ ಮಾಡಿದ್ದು ಲಕ್ಕುಂಡಿಯ ಹೃದಯಭಾಗದಲ್ಲಿರೋ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಸುತ್ತಮುತ್ತಲಿನ ಜಾಗವನ್ನ.

ಈ ಸ್ಥಳ ಆಯ್ಕೆ ಮಾಡೋಕೂ ಒಂದು ಕಾರಣ ಇತ್ತು. ಅದೇನು ಅಂದ್ರೆ, ಹಳೆಯ ಕಾಲದಲ್ಲಿ ರಾಜರ ಟಂಕಶಾಲೆಗಳು ಅಥವಾ ಮುಖ್ಯವಾದ ಖಜಾನೆಗಳು ಇರೋದೇ ಇಂತಹ ಶಕ್ತಿಶಾಲಿ ದೇವಸ್ಥಾನಗಳ ಹತ್ತಿರ ಅನ್ನೋದು ಅವರ ಪ್ಲ್ಯಾನ್ ಆಗಿತ್ತು.

ಜನವರಿ 16ರಂದು ಗದಗ ಜಿಲ್ಲಾಧಿಕಾರಿಗಳಾದ ಸಿ.ಎನ್. ಶ್ರೀಧರ್ ಅವರು ಸ್ವತಃ ನಿಂತು ಈ ಉತ್ಖನನ ಕಾರ್ಯಕ್ಕೆ ಚಾಲನೆ ನೀಡಿದ್ರು. ಹಿರಿಯ ಪುರಾತತ್ವ ತಜ್ಞ ಟಿ.ಎಂ. ಕೇಶವ್ ಅವರನ್ನ ಈ ಮಿಷನ್‌ಗೆ ಡೈರೆಕ್ಟರ್ ಆಗಿ ನೇಮಿಸಲಾಯ್ತು. ಬರೀ ಮಣ್ಣು ಅಗೆಯೋದಲ್ಲ ಗುರು, ಪ್ರತಿ ಇಂಚು ಜಾಗವನ್ನೂ ಸ್ಕ್ಯಾನ್ ಮಾಡ್ತಾ, ಒಂದು ಸಣ್ಣ ಮಡಕೆ ಚೂರು ಸಿಕ್ಕರೂ ಅದರ ಹಿಸ್ಟರಿ ಏನು ಅಂತ ನೋಡ್ತಾ ಈ ಕಾರ್ಯಾಚರಣೆ ರೋಚಕವಾಗಿ ಶುರುವಾಯ್ತು. ಅಗೆದಷ್ಟು ಮಣ್ಣು ಬರ್ತಿಲ್ಲ, ಮಣ್ಣಿನ ಜೊತೆಗೆ ಹಳೆಯ ಕಾಲದ ಕಲ್ಲಿನ ರಚನೆಗಳು, ಕುರುಹುಗಳು ಹೊರಬರ್ತಾ ಇಡೀ ಲಕ್ಕುಂಡಿ ಜನರನ್ನ ದೇವಸ್ಥಾನದ ಕಡೆಗೆ ಕಣ್ಣು ನೆಡುವಂತೆ ಮಾಡಿತು. ಆಗಲೇ ಘಟಿಸಿದ್ದು ಮಹಾ ವಿಸ್ಮಯ.

ನಂಬಲಾಗದ ಚರಿತ್ರೆ ನೆನಪಿಸಿದ ಲೋಹದ ಶಿವಲಿಂಗ!

ಉತ್ಖನನ ಶುರುವಾಗಿ ಎರಡೇ ದಿನವಾಗಿತ್ತು. ಕೋಟೆ ಗೋಡೆಯ ಒಳಭಾಗದಲ್ಲಿ ಮಣ್ಣು ಸರಿಸ್ತಾ ಇದ್ದಾಗ ಏನೋ ಒಂದು ವಸ್ತುವಿಗೆ ಜೆಸಿಬಿ ತಗುಲಿದ ಶಬ್ದ ಕೇಳಿಸ್ತು. ಹತ್ತಿರ ಹೋಗಿ ನೋಡಿದ್ರೆ, ಅಚ್ಚರಿ ಅಂದ್ರೆ ಅಚ್ಚರಿ. ಅಲ್ಲಿ ಸುಮಾರು ಒಂದು-ಒಂದೂವರೆ ಅಡಿ ಉದ್ದದ, ಕಪ್ಪು ಕಲ್ಲಿನ ಪೀಠದ ಮೇಲೆ ಕುಳಿತಿರೋ ಒಂದು ಪುಟ್ಟ ಸುಂದರವಾದ ಲೋಹದ ಶಿವಲಿಂಗ ದರ್ಶನ ಕೊಟ್ಟಿದೆ. ಅದು ಕಂಚು, ತಾಮ್ರ ಅಥವಾ ಬೆಳ್ಳಿಯದ್ದೂ ಇರಬಹುದು ಅಂತ ಜನ ಮಾತಾಡ್ಕೊಳ್ತಿದ್ದಾರೆ. ಆ ಲಿಂಗದ ಹೊಳಪು ಎಷ್ಟಿತ್ತು ಅಂದ್ರೆ, ಸಾವಿರ ವರ್ಷ ಭೂಮಿಯ ಅಡಿಯಲ್ಲಿ ಮಣ್ಣು ಮುಚ್ಚಿಕೊಂಡಿದ್ರೂ ಅದರ ಕಳೆ ಕಿಂಚಿತ್ತೂ ಕಡಿಮೆ ಆಗಿರಲಿಲ್ಲ.

ಲಕ್ಕುಂಡಿ ಅನ್ನೋದು ಈಗ ಬರೀ ಊರಾಗಿ ಉಳಿದಿಲ್ಲ. ಅದೀಗ ರಹಸ್ಯಗಳ ತಾಣ. ಅದರಲ್ಲೂ, ಭೂಮಿ ಅಗೆದಾಗ ಅಡಿಗಡಿಗೂ ಸಿಕ್ತಾ ಇರೋ ಅಚ್ಚರಿಗಳು, ವಿಚಿತ್ರ ತಿರುವು ಕೊಡ್ತಾ ಇದಾವೆ. ಅದರಲ್ಲೊಂದು, ಆ ಸರ್ಪ ದರ್ಶನ. ಅರ್ಹತೆ ಇಲ್ಲದವರು ಆ ನಿಧಿಯನ್ನ ಮುಟ್ಟಿದ್ರೆ ಅವರಿಗೆ ಕೇಡಾಗಲಿ ಅನ್ನೋ ಉದ್ದೇಶದಿಂದಲೇ ಹಿಂದೆಲ್ಲಾ ಸರ್ಪಬಂಧ ಹಾಕ್ತಾ ಇದ್ರು. ಇದಕ್ಕೆ ಪೂರಕವಾಗಿ ವಿಷಕಾರಿ ಸರ್ಪಗಳನ್ನ ಆ ಜಾಗದಲ್ಲಿ ಬಿಡೋದು ಅಥವಾ ಆ ನಿಧಿಯನ್ನ ಕಾಯೋಕೆ ಅಂತಲೇ ಕೆಲವು ಶಕ್ತಿಗಳನ್ನ ಆವಾಹನೆ ಮಾಡೋದು ಅಂದಿನ ಕಾಲದ ದೊಡ್ಡ ಸೀಕ್ರೆಟ್ ಆಗಿತ್ತು ಅಂತಾರೆ. ಹಾಗಾಗಿನೇ ಲಕ್ಕುಂಡಿಯಲ್ಲಿ ಈ ವಿಚಿತ್ರ ವಿಸ್ಮಯಕಾರಿ ಹಾವು ಕಾಣಿಸಿಕೊಂಡಾಗ ಹಿರಿಯರು ಇದು ಸಾಮಾನ್ಯ ಹಾವಲ್ಲ. ಆ ಕಾಲದ ದಿಗ್ಬಂಧನದ ಫಲ ಅಂತ ಗುಸುಗುಸು ಮಾತಾಡ್ತಿರೋದು.

ಹಲವರ ನಂಬಿಕೆಯ ಪ್ರಕಾರ, ಎಲ್ಲೆಲ್ಲಿ ಸರ್ಪಸಂಚಾರ ಇರತ್ತೋ, ಅಲ್ಲೆಲ್ಲಾ ನಿಧಿಯ ಸುಳಿವು ಇರುತ್ತೆ ಅಂತಾರೆ.. ಇಂಥದ್ದೊಂದು ನಂಬಿಕೆಯ ಹಿಂದೆ, ಪುರಾಣದ ಉಲ್ಲೇಖವೂ ಇದೆ. ಮುತ್ತು, ರತ್ನ, ವಜ್ರವೈಢೂರ್ಯ, ಬಂಗಾರವನ್ನೆಲ್ಲಾ ಕಾವಲು ಕಾಯೋದೇ ಈ ನಾಗಗಳ ಮುಖ್ಯ ಕಾರ್ಯ. ತಂತ್ರವಿಧಿಗಳು ಹೇಳೋ ಪ್ರಕಾರ, ಹೀಗೆ ನಾಗಬಂಧದ ನಿಧಿಯನ್ನ ಯಾರು ಮತ್ತು ಯಾವಾಗ ತೆಗೀಬೇಕು ಅನ್ನೋದಕ್ಕೂ ಒಂದು ಸಮಯ ಮತ್ತು ವಿಧಿ ಇರುತ್ತಂತೆ. ಆ ವಿಧಿ ಗೊತ್ತಿಲ್ಲದೆ ಹೋದರೆ ಅಲ್ಲಿರೋ ನಾಗ ಅಥವಾ ಆ ಅದೃಶ್ಯ ಶಕ್ತಿ, ಆಘಾತ ನೀಡತ್ತೆ ಅನ್ನೋದು ಜನರ ನಂಬಿಕೆ. ಅದರ ಹಿಂದಿರೋ ಮತ್ತಷ್ಟು ಕೌತುಕದ ಮಾಹಿತಿಗಾಗಿ ಈ ವಿಡಿಯೋ ನೋಡಿ.