Asianet Suvarna News Asianet Suvarna News

ಸರಿಯಾದ ಸ್ಥಳದಲ್ಲಿ ಆದಿತ್ಯ ನಿಂತಿದ್ದಾನೆ, ಇಸ್ರೋ ಅಧ್ಯಕ್ಷ ಎಸ್‌.ಸೋಮನಾಥ್‌ ಹರ್ಷ!

ಆದಿತ್ಯ ಎಲ್‌1 ನಿಗದಿತ ಪಾಯಿಂಟ್‌ ತಲುಪಿದ ಖುಷಿ ಇಸ್ರೋದಲ್ಲಿ ಮನೆ ಮಾಡಿದೆ. ಸ್ವತಃ ಇಸ್ರೋ ಅಧ್ಯಕ್ಷ, ಆದಿತ್ಯ ಎಲ್‌1 ಸರಿಯಾದ ಸ್ಥಳದಲ್ಲಿ ನಿಂತಿದ್ದಾನೆ ಎಂದು ಹೇಳಿದ್ದಾರೆ.
 

ISRO Solar Mission Aditya L1 entering Halo Orbit hairman S Somanath Comments san
Author
First Published Jan 6, 2024, 6:38 PM IST

ಬೆಂಗಳೂರು (ಜ.6): ಭಾರತದ ಈವರೆಗಿನ ಅತ್ಯಂತ ಜಟಿಲ ಬಾಹ್ಯಾಕಾಶ ಯೋಜನೆಯಾಗಿದ್ದ ಆದಿತ್ಯ ಎಲ್‌1 ಸೌರ ವೀಕ್ಷಣಾಲಯದ ವಿಚಾರದಲ್ಲಿ ಇಸ್ರೋ ಶನಿವಾರ ದೊಡ್ಡ ಯಶಸ್ಸನ್ನು ಗಳಿಸಿದೆ. ಪ್ರಧಾನಿ ನರೇಂದ್ರ ಮೋದಿ, ಸಿಎಂ ಸಿದ್ಧರಾಮಯ್ಯ ಸೇರಿದಂತೆ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಇಸ್ರೋದ ಬೃಹತ್‌ ಯಶಸ್ಸನ್ನು ಸಂಭ್ರಮಿಸಿದ್ದಾರೆ. ಈ ಪ್ರಯಾಣದ ಕುರಿತಾಗಿ ಮಾತನಾಡಿರುವ ಇಸ್ರೋ ಅಧ್ಯಕ್ಷ ಎಸ್‌ ಸೋಮನಾಥ್‌, ಸರಿಯಾದ ಸ್ಥಳದಲ್ಲಿ ಆದಿತ್ಯ ನಿಂತಿದ್ದಾನೆ ಎಂದು ನಾವು ಭಾವಿಸಿದ್ದೇವೆ. ಆದರೆ, ಇದರ ಬಗ್ಗೆ ಇನ್ನೂ ಕೆಲವು ಘಂಟೆಗಳಲ್ಲಿ ಖಚಿತವಾದ ಉತ್ತರ ಸಿಗಲಿದೆ ಎಂದು ತಿಳಿಸಿದ್ದಾರೆ. 'ಇದು ನಮಗೆ ತುಂಬಾ ತೃಪ್ತಿ ತಂದಿದೆ. ಏಕೆಂದರೆ ಇದು ದೀರ್ಘ ಪ್ರಯಾಣದ ಅಂತ್ಯವಾಗಿದೆ. ಲಿಫ್ಟ್-ಆಫ್‌ನಿಂದ ಇಲ್ಲಿಯವರೆಗೆ 126 ದಿನಗಳು, ಇದು ಅಂತಿಮ ಹಂತವನ್ನು ತಲುಪಿದೆ. ಆದ್ದರಿಂದ ಅಂತಿಮ ಹಂತವನ್ನು ತಲುಪುವುದು ಯಾವಾಗಲೂ, ಆತಂಕದ ಕ್ಷಣವಾಗಿದೆ, ಆದರೆ ನಾವು ಅದರ ಬಗ್ಗೆ ತುಂಬಾ ಖಚಿತವಾಗಿದ್ದೆವು. ಆದ್ದರಿಂದ ಇದು ಊಹಿಸಿದಂತೆ ಸಂಭವಿಸಿತು. ನಾವು ತುಂಬಾ ಸಂತೋಷವಾಗಿದ್ದೇವೆ' ಎಂದು ಸೋಮನಾಥ್‌ ಹೇಳಿದ್ದಾರೆ.

ಇಂದಿನ ಕಾರ್ಯಕ್ರಮದ ಭಾಗವಾಗಿ ನಾವು ಆದಿತ್ಯ ಎಲ್‌1 ಅನ್ನು ನಿಖರವಾದ ಹಾಲೋ ಕಕ್ಷೆಯಲ್ಲಿ ಇರಿಸಲಾಗಿದೆ. ಅದು ಈವರೆಗೂ ಎತ್ತರದ ಕಕ್ಷೆಯಲ್ಲಿ ಚಲಿಸುತ್ತಿತ್ತು. ಹಾಗಾಗಿ ಕೆಲವೊಂದು ಕರೆಕ್ಷನ್‌ಗಳನ್ನು ನಾವು ಮಾಡಬೇಕಾಗಿತ್ತು.  ಇವೆಲ್ಲವನ್ನೂ ಮಾಡಿದ ಬಳಿಕ  ನಮ್ಮ ಲೆಕ್ಕಾಚಾರದಲ್ಲಿ, ಅದು ಸರಿಯಾದ ಸ್ಥಳದಲ್ಲಿದೆ ಎಂದು ಅಂದುಕೊಂಡಿದ್ದೇವೆಮ ಆದರೆ ಅದು ಸರಿಯಾದ ಸ್ಥಳದಲ್ಲಿದೆಯೇ ಎಂದು ನೋಡಲು ನಾವು ಮುಂದಿನ ಕೆಲವು ಗಂಟೆಗಳ ಕಾಲ ಅದನ್ನು ಮೇಲ್ವಿಚಾರಣೆ ಮಾಡಲಿದ್ದೇವೆ ಎಂದು ತಿಳಿಸಿದ್ದಾರೆ.

ಹಾಗೇನಾದರೂ ನೌಕೆ ಕೊಂಚ ವಾಲುತ್ತಿದ್ದರೆ, ಅದನ್ನು ಸ್ವಲ್ಪ ತಿದ್ದುಪಡಿ ಮಾಡುವ ಕೆಲಸ ಇರಬಹುದು. ಸದ್ಯದ ಮಟ್ಟಿಗೆ ಅಂಥ ಯಾವುದೇ ಸಂಗತಿ ಮಾಡುವ ಲಕ್ಷಣಗಳಿಲ್ಲ. ಈಗಾಗಲೇ ವೆಬ್‌ಸೈಟ್‌ನಲ್ಲಿ ಚಿತ್ರಗಳನ್ನು ಹಾಕಲಾಗಿದೆ. ನಮ್ಮಲ್ಲಿ ಕಣಗಳ ಮಾಪನಗಳಿವೆ, ಸೂರ್ಯನಿಂದ ಏನು ಹೊರಬರುತ್ತಿದೆ ಎನ್ನುವುದನ್ನು ಇದರಿಂದ ತಿಳಿದುಕೊಳ್ಳಬಹುದು. ನಂತರ ನಾವು ಕೂಡ ಕಡಿಮೆ ಶಕ್ತಿ ಮತ್ತು ಹೆಚ್ಚಿನ ಶಕ್ತಿಯ ಕ್ಷ-ಕಿರಣ ಮಾಪನಗಳನ್ನು ಹೊಂದಿರುವ ಕ್ಷ-ಕಿರಣ ಮಾಪನಗಳನ್ನು ಹೊಂದಿದ್ದೇವೆ. ನಮ್ಮಲ್ಲಿ ಮ್ಯಾಗ್ನೆಟೋಮೀಟರ್ ಕೂಡ ಇದೆ, ಇದು ಬಾಹ್ಯಾಕಾಶ ಕಾಂತೀಯ ಕ್ಷೇತ್ರವನ್ನು ನೋಡುತ್ತದೆ, ಇದು ಈ ಸೌರ ಮಾರುತಗಳಿಂದ ಬರುತ್ತಿದೆ. ಸೌರ ಮಾರುತವು ಮೂಲಭೂತವಾಗಿ ಕಣಗಳ ಹೊರಸೂಸುವಿಕೆಯಾಗಿದೆ ನಡೆಯುತ್ತಿದೆ... ಬಹಳಷ್ಟು ಜನರು ಈ ಪರಿಣಾಮವನ್ನು ಅರ್ಥಮಾಡಿಕೊಳ್ಳಲು ಆಸಕ್ತಿ ಹೊಂದಿದ್ದಾರೆ. ಆದ್ದರಿಂದ ಮುಂಬರುವ ದಿನಗಳಲ್ಲಿ ನಾವು ಬಹಳಷ್ಟು ವೈಜ್ಞಾನಿಕ ಫಲಿತಾಂಶಗಳನ್ನು ಎದುರುನೋಡುತ್ತೇವೆ. ಉಪಗ್ರಹದಲ್ಲಿ ಉಳಿದಿರುವ ಇಂಧನದಿಂದ ಕನಿಷ್ಠ ಐದು ವರ್ಷಗಳ ಜೀವಿತಾವಧಿ ಗ್ಯಾರಂಟಿ ನೀಡಬಹುದು ಎಂದು ತಿಳಿಸಿದ್ದಾರೆ.

Breaking: ಇತಿಹಾಸ ನಿರ್ಮಿಸಿದ ಇಸ್ರೋ, ಆದಿತ್ಯನ ಮೂಲಕ ಇನ್ನು ಸೂರ್ಯನತ್ತ ಭಾರತದ ಕಣ್ಣು!

ಇಸ್ರೋದ ಸೋಲಾರ್ ಮಿಷನ್ ಆದಿತ್ಯ-ಎಲ್ 1 ಹ್ಯಾಲೋ ಆರ್ಬಿಟ್‌ಗೆ ಪ್ರವೇಶಿಸುತ್ತಿರುವ ಕುರಿತು ಭಾರತೀಯ ಖಗೋಳ ಭೌತಶಾಸ್ತ್ರ ಸಂಸ್ಥೆಯ ನಿರ್ದೇಶಕಿ ಅನ್ನಪೂರ್ಣಿ ಸುಬ್ರಮಣ್ಯಂ ಮಾತನಾಡಿದ್ದು, "ನಾವು ಎಲ್ 1 ಪಾಯಿಂಟ್ ತಲುಪಿದ್ದೇವೆ, ಬಾಹ್ಯಾಕಾಶ ನೌಕೆಯನ್ನು ಹ್ಯಾಲೊ ಕಕ್ಷೆಗೆ ಸೇರಿಸಲಾಗಿದೆ. ಎಲ್ಲಾ ವಿಜ್ಞಾನ ಉಪಕರಣಗಳನ್ನು ತೆರೆಯಲು ಮತ್ತು ಕಾರ್ಯಾಚರಣೆಯನ್ನು ಪ್ರಾರಂಭಿಸಲು ಸಿದ್ಧವಾಗಿದೆ. ನಾವು ಆದಿತ್ಯ L1 ನಿಂದ ಕಾರ್ಯಕ್ಷಮತೆ ಪರಿಶೀಲನೆ ಹಂತ ಮತ್ತು ವಿಜ್ಞಾನದ ಫಲಿತಾಂಶಗಳನ್ನು ಪ್ರಾರಂಭಿಸಲು ಎದುರುನೋಡುತ್ತಿದ್ದೇವೆ... ಇದು ನಮಗೆ ಸಾಕಷ್ಟು ಸಾಮರ್ಥ್ಯ ವರ್ಧನೆ ಮತ್ತು ಕೆಲಸಗಳನ್ನು ಮಾಡಲು ಆತ್ಮವಿಶ್ವಾಸವನ್ನು ನೀಡುತ್ತದೆ ಎಂದು ಹೇಳಿದ್ದಾರೆ.

ಜ.6ಕ್ಕೆ ಸೂರ್ಯ ನಮಸ್ಕಾರ ಮಾಡಲಿದೆ ಆದಿತ್ಯ ಎಲ್‌-1, ಬಾಹ್ಯಾಕಾಶದಿಂದಲೇ ದೇಶದ 400 ಉಪಗ್ರಹಗಳ ರಕ್ಷಣೆ!

Follow Us:
Download App:
  • android
  • ios