ಜ.6ಕ್ಕೆ ಸೂರ್ಯ ನಮಸ್ಕಾರ ಮಾಡಲಿದೆ ಆದಿತ್ಯ ಎಲ್-1, ಬಾಹ್ಯಾಕಾಶದಿಂದಲೇ ದೇಶದ 400 ಉಪಗ್ರಹಗಳ ರಕ್ಷಣೆ!
ಜನವರಿ 6ರ ಸಂಜೆ 4 ಗಂಟೆಗೆ, ಆದಿತ್ಯ ಉಪಗ್ರಹವನ್ನು L1 ಪಾಯಿಂಟ್ ಸುತ್ತಲಿನ ಹಾಲೋ ಕಕ್ಷೆಯಲ್ಲಿ ಇರಿಸಲಾಗುತ್ತದೆ. ಆಗ ಭೂಮಿಯಿಂದ ಭಾರತದ ಮೊದಲ ಸೌರ ವೀಕ್ಷಣಾಲಯದ ಅಂತರ 15 ಲಕ್ಷ ಕಿಲೋಮೀಟರ್. 400 ಕೋಟಿ ರೂಪಾಯಿಗಳ ಈ ಯೋಜನೆ, ಬಾಹ್ಯಾಕಾಶದಲ್ಲಿರುವ ಐವತ್ತು ಸಾವಿರ ಕೋಟಿ ಮೌಲ್ಯದ ಭಾರತದ ಐವತ್ತು ಉಪಗ್ರಹಗಳನ್ನು ರಕ್ಷಿಸುತ್ತದೆ.
ಬೆಂಗಳೂರು (ಜ.5): ಕಳೆದ ವರ್ಷದ ಸೆಪ್ಟೆಂಬರ್ 2 ರಂದು, ಇಸ್ರೋ ಭಾರತದ ಮೊದಲ ಸೌರ ಬಾಹ್ಯಾಕಾಶ ವೀಕ್ಷಣಾಲಯ ಆದಿತ್ಯ-ಎಲ್ 1 ಅನ್ನು ಇಸ್ರೋ ಬಾಹ್ಯಾಕಾಶಕ್ಕೆ ಉಡಾವಣೆ ಮಾಡಿತ್ತು. ಐದು ತಿಂಗಳ ನಂತರ ಅಂದರೆ, ಜನವರಿ 6ರ ಸಂಜೆ, ಈ ವೀಕ್ಷಣಾಲಯವು ನಿಗದಿತ ಎಲ್1 ಪಾಯಿಂಟ್‌ಅನ್ನು ತಲುಪುತ್ತದೆ. ಈ ವೀಕ್ಷಣಾಲಯವನ್ನು ಸೌರ ಪ್ರಭಾವದ ಕಕ್ಷೆಗೆ ಹಾಕಲಾಗುತ್ತದೆ. L1 ಪಾಯಿಂಟ್‌ನಲ್ಲಿರುವ ಆದಿತ್ಯ ಉಪಗ್ರಹದ ಅಂತರವು ಆ ಸಮಯದಲ್ಲಿ ಭೂಮಿಯಿಂದ 15 ಲಕ್ಷ ಕಿಲೋಮೀಟರ್‌ಗಳಷ್ಟಿರುತ್ತದೆ. ಇದರೊಂದಿಗೆ, ಇದು ಸೂರ್ಯನನ್ನು ಅಧ್ಯಯನ ಮಾಡುವ ಇತರ ನಾಲ್ಕು ನಾಸಾ ಉಪಗ್ರಹಗಳ ಗುಂಪಿಗೆ ಸೇರುತ್ತದೆ. ಈ ಉಪಗ್ರಹಗಳೆಂದರೆ- ವಿಂಡ್, ಅಡ್ವಾನ್ಸ್ಡ್ ಕಾಂಪೋಸಿಷನ್ ಎಕ್ಸ್‌ಪ್ಲೋರರ್ (ಎಸಿಇ), ಡೀಪ್ ಸ್ಪೇಸ್ ಕ್ಲೈಮೇಟ್ ಅಬ್ಸರ್ವೇಟರಿ (ಡಿಸ್ಕವರ್) ಮತ್ತು ನಾಸಾ-ಇಎಸ್‌ಎ ಜಂಟಿ ಮಿಷನ್ SOHO ಅಂದರೆ ಸೌರ ಮತ್ತು ಹೀಲಿಯೋಸ್ಫಿರಿಕ್ ಅಬ್ಸರ್ವೇಟರಿ.
ಜನವರಿ 6 ರ ಸಂಜೆ, ಆದಿತ್ಯ-ಎಲ್1 ಉಪಗ್ರಹದ ಥ್ರಸ್ಟರ್‌ಗಳನ್ನು ಹಲೋ ಕಕ್ಷೆಗೆ ಸೇರಿಸಲು ಸ್ವಲ್ಪ ಸಮಯದವರೆಗೆ ಸ್ವಿಚ್ ಆನ್ ಮಾಡಲಾಗುತ್ತದೆ. ಇದು 12 ಥ್ರಸ್ಟರ್‌ಗಳನ್ನು ಹೊಂದಿದೆ. ಪ್ರಸ್ತುತ ಎಷ್ಟು ಮತ್ತು ಯಾವ ಥ್ರಸ್ಟರ್‌ಗಳನ್ನು ಬಳಸಲಾಗುವುದು ಎಂಬುದನ್ನು ಬಹಿರಂಗಪಡಿಸಲಾಗಿಲ್ಲ. ಲಿಕ್ವಿಡ್ ಅಪೋಜಿ ಎಂಜಿನ್ ಕೂಡ ಆನ್ ಆಗಲಿದೆಯೇ ಅಥವಾ ಥ್ರಸ್ಟರ್‌ಗಳನ್ನು ಮಾತ್ರ ಬಳಸಬೇಕೇ ಎನ್ನುವುದನ್ನು ಇಸ್ರೋ ನಾಳೆ ನಿರ್ಧಾರ ಮಾಡಲಿದೆ.
ಉಪಗ್ರಹವನ್ನು L1 ಪಾಯಿಂಟ್‌ನಲ್ಲಿ ಇರಿಸುವುದು ಸವಾಲಿನ ಕೆಲಸ: ಆದಿತ್ಯ ಉಪಗ್ರಹವನ್ನು ಎಲ್1 ಪಾಯಿಂಟ್‌ನಲ್ಲಿ ಇರಿಸುವುದು ತುಂಬಾ ಸವಾಲಿನ ಕೆಲಸ. ಆದ್ದರಿಂದ ಇದನ್ನು ಹಲೋ ಆರ್ಬಿಟ್‌ನಲ್ಲಿ ಯಶಸ್ವಿಯಾಗಿ ನಿಯೋಜಿಸುವ ನಿಟ್ಟಿನ್ಲಿ ಇಸ್ರೋ ಎಚ್ಚರಿಕೆ ವಹಿಸಿದೆ. ಇದಕ್ಕಾಗಿ ಇಸ್ರೋ ತಮ್ಮ ಬಾಹ್ಯಾಕಾಶ ನೌಕೆ ಎಲ್ಲಿತ್ತು ಎನ್ನುವುದನ್ನು ತಿಳಿದುಕೊಳ್ಳಬೇಕಿದ್ದು, ಎಲ್ಲಿಂದ. ಇನ್ನೆಲ್ಲಿಗೆ ಹೋಗಬೇಕು ಎನ್ನುವುದನ್ನು ನಿರ್ಧಾರ ಮಾಡಬೇಕು. ಈ ರೀತಿ ಟ್ರ್ಯಾಕ್ ಮಾಡುವ ಪ್ರಕ್ರಿಯೆಯನ್ನು ಆರ್ಬಿಟ್ ಡಿಟರ್ಮಿನೇಷನ್ ಎಂದು ಕರೆಯಲಾಗುತ್ತದೆ. ಒಮ್ಮೆ ಈ ಕೆಲಸ ಮುಗಿದರೆ ಬೇರೆ ಬೇರೆ ಸಮಯಗಳಲ್ಲಿ ಕಕ್ಷೆಯ ಎತ್ತರಿಸುವ ಹಾಗೂ ಇಳಿಸುವ ಕೆಲಸವನ್ನು ಮಾಡಬೇಕಾಗುತ್ತದೆ. ಇದರಿಂದ ಆದಿತ್ಯ ಶಾಶ್ವತವಾಗಿ ಅದೇ ಸ್ಥಳದಲ್ಲಿ ಇರುತ್ತಾನೆ.
400 ಕೋಟಿಯ ಪ್ರಾಜೆಕ್ಟ್: ಆದಿತ್ಯ-ಎಲ್1 ಮಿಷನ್‌ನ ಯೋಜನಾ ನಿರ್ದೇಶಕ ನಿಗರ್ ಶಾಜಿ ಸಂದರ್ಶನವೊಂದರಲ್ಲಿ ಈ ಮಿಷನ್ ಸೂರ್ಯನನ್ನು ಅಧ್ಯಯನ ಮಾಡಲು ಮಾತ್ರವೇ ಸಹಾಯ ಮಾಡುವುದಿಲ್ಲ ಎಂದು ಹೇಳಿದ್ದಾರೆ. ವಾಸ್ತವವಾಗಿ, ಸುಮಾರು 400 ಕೋಟಿ ರೂಪಾಯಿಗಳ ಯೋಜನೆಯು ಸೌರ ಚಂಡಮಾರುತಗಳ ಬಗ್ಗೆಯೂ ಮಾಹಿತಿಯನ್ನು ಒದಗಿಸುತ್ತದೆ. ಇದರೊಂದಿಗೆ ಐವತ್ತು ಸಾವಿರ ಕೋಟಿ ರೂಪಾಯಿ ಮೌಲ್ಯದ ಭಾರತದ ಐವತ್ತು ಉಪಗ್ರಹಗಳ ಮೇಲೆ ನಿಗಾ ಇಡಬಹುದು. ಯಾವ ದೇಶವು ಅಂತಹ ಸಹಾಯವನ್ನು ಕೇಳುತ್ತದೆಯೋ, ಅವರಿಗೂ ಸಹಾಯ ಮಾಡಲಾಗುತ್ತದೆ. ಈ ಯೋಜನೆಯು ದೇಶಕ್ಕೆ ಅತ್ಯಂತ ಮಹತ್ವದ್ದಾಗಿದೆ ಎಂದಿದ್ದಾರೆ.
ಸೂರ್ಯನ ವಿವಿಧ ಬಣ್ಣಗಳ ಮೊದಲ ಚಿತ್ರಗಳನ್ನು ತೆಗೆದ ಆದಿತ್ಯ: ಈ ಉಪಗ್ರಹದ ಸೌರ ನೇರಳಾತೀತ ಇಮೇಜಿಂಗ್ ಟೆಲಿಸ್ಕೋಪ್ (SUIT) ಮೊದಲ ಬಾರಿಗೆ ಸೂರ್ಯನ ಸಂಪೂರ್ಣ ಚಿತ್ರಗಳನ್ನು ತೆಗೆದುಕೊಂಡಿದೆ. ಈ ಎಲ್ಲಾ ಚಿತ್ರಗಳು 200 ರಿಂದ 400 ನ್ಯಾನೋಮೀಟರ್ ತರಂಗಾಂತರವನ್ನು ಹೊಂದಿದ್ದವು. ಅಂದರೆ ನೀವು ಸೂರ್ಯನನ್ನು 11 ವಿವಿಧ ಬಣ್ಣಗಳಲ್ಲಿ ನೋಡುತ್ತೀರಿ. ಈ ಪೇಲೋಡ್ ಅನ್ನು 20 ನವೆಂಬರ್ 2023 ರಂದು ಪ್ರಾರಂಭಿಸಲಾಯಿತು. ಈ ದೂರದರ್ಶಕವು ಸೂರ್ಯನ ದ್ಯುತಿಗೋಳ ಮತ್ತು ವರ್ಣಗೋಳದ ಚಿತ್ರಗಳನ್ನು ತೆಗೆದುಕೊಂಡಿದೆ.
ಜನವರಿ 6ಕ್ಕೆ ಎಲ್1 ಪಾಯಿಂಟ್ ತಲುಪಲಿದೆ ಆದಿತ್ಯ, ಬಾಹ್ಯಾಕಾಶ ನಿಲ್ದಾಣದ ಹೆಸರು ಘೋಷಿಸಿದ ಇಸ್ರೋ!
ಫೋಟೋಸ್ಪಿಯರ್ ಎಂದರೆ ಸೂರ್ಯನ ಮೇಲ್ಮೈ ಮತ್ತು ಕ್ರೋಮೋಸ್ಪಿಯರ್ ಎಂದರೆ ಸೂರ್ಯನ ಮೇಲ್ಮೈ ಮತ್ತು ಹೊರಗಿನ ವಾತಾವರಣದ ಕರೋನಾ ನಡುವೆ ಇರುವ ತೆಳುವಾದ ಪದರ. ಕ್ರೋಮೋಸ್ಪಿಯರ್ ಸೂರ್ಯನ ಮೇಲ್ಮೈಯಿಂದ 2000 ಕಿಮೀ ವರೆಗೆ ವಿಸ್ತರಿಸುತ್ತದೆ. ಮೊದಲು ಸೂರ್ಯನ ಫೋಟೋವನ್ನು 6 ಡಿಸೆಂಬರ್ 2023 ರಂದು ತೆಗೆಯಲಾಗಿತ್ತು. ಆದರೆ ಅದು ಮೊದಲ ಬೆಳಕಿನ ವಿಜ್ಞಾನ ಚಿತ್ರವಾಗಿತ್ತು. ಆದರೆ ಈ ಬಾರಿ ಸಂಪೂರ್ಣ ಡಿಸ್ಕ್ ಚಿತ್ರವನ್ನು ತೆಗೆದುಕೊಳ್ಳಲಾಗಿದೆ. ಅಂದರೆ, ಸಂಪೂರ್ಣವಾಗಿ ಮುಂಭಾಗದಲ್ಲಿರುವ ಸೂರ್ಯನ ಭಾಗದ ಫೋಟೋ. ಈ ಛಾಯಾಚಿತ್ರಗಳ ಸಹಾಯದಿಂದ ವಿಜ್ಞಾನಿಗಳು ಸೂರ್ಯನನ್ನು ಸರಿಯಾಗಿ ಅಧ್ಯಯನ ಮಾಡಲು ಸಾಧ್ಯವಾಗುತ್ತದೆ.
ಭಾರತದಿಂದ ಬರುವ ಚಂದ್ರಯಾನ-3 ಮಾಹಿತಿಗಾಗಿ ರಷ್ಯಾ, ಅಮೆರಿಕ ಕಾಯುತ್ತಿದೆ: ಜೀತೇಂದ್ರ ಸಿಂಗ್!