ನಾಸಾದ ಆರ್ಟೆಮಿಸ್-2 ಮಿಷನ್ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ನಾಲ್ವರು ಗಗನಯಾನಿಗಳು ಚಂದ್ರನ ಪ್ರದಕ್ಷಿಣೆ ಹಾಕಿ ಸುರಕ್ಷಿತವಾಗಿ ಭೂಮಿಗೆ ಮರಳಿದ್ದಾರೆ. ಈ ಐತಿಹಾಸಿಕ ಸಾಧನೆಯ ಹಿಂದೆ ಭಾರತೀಯ ಮೂಲದ ವಿಜ್ಞಾನಿ ಅಮಿತ್ ಕ್ಷತ್ರಿಯ ಅವರ ಪ್ರಮುಖ ಪಾತ್ರವಿದೆ.

50 ವರ್ಷಗಳ ಬಳಿಕ ಮಾನವರು ಚಂದ್ರನತ್ತ ಬೆಳೆಸಿದ್ದ ಪ್ರಯಾಣ ಯಶಸ್ವಿ

ವಾಷಿಂಗ್ಟನ್: ನಾಸಾದ ಆರ್ಟೆಮಿಸ್-2 ಗಗನಯಾನಿಗಳು ಚಂದ್ರನನ್ನು ಒಂದು ಸುತ್ತು ಪ್ರದಕ್ಷಿಣೆ ಹಾಕಿ, ಭಾರತೀಯ ಕಾಲಮಾನ ಶನಿವಾರ ಬೆಳಿಗ್ಗೆ 5:30ಕ್ಕೆ ಕ್ಯಾಲಿಫೋರ್ನಿಯಾ ಬಳಿ ಪೆಸಿಫಿಕ್ ಮಹಾಸಾಗರದಲ್ಲಿ ಸುರಕ್ಷಿತವಾಗಿ ಬಂದಿಳಿದಿದ್ದಾರೆ. ಈ ಮೂಲಕ 50 ವರ್ಷಗಳ ಬಳಿಕ ಮಾನವರು ಚಂದ್ರನತ್ತ ಬೆಳೆಸಿದ್ದ ಪ್ರಯಾಣ ಯಶಸ್ವಿಯಾಗಿ ಪೂರ್ಣಗೊಂಡಿದೆ.

ನಾಸಾ ಮಿಷನ್ ಕಂಟ್ರೋಲ್‌ನಲ್ಲಿ ಸಂಭ್ರಮಾಚರಣೆ;

ಯಾನಿಗಳು ಕ್ಯಾಪ್ಸುಲ್‌ನಿಂದ ಹೊರಬಂದ ತಕ್ಷಣ ಹೂಸ್ಟನ್ನನ ನಾಸಾ ಮಿಷನ್ ಕಂಟ್ರೋಲ್‌ನಲ್ಲಿ ನೂರಾರು ಉದ್ಯೋಗಿಗಳು ಚಪಾಳೆ ತಟ್ಟಿ, ಸಂತೋಷದಿಂದ ಅವರನ್ನು ಬರಮಾಡಿ ಕೊಂಡರು. ಕುಟುಂಬಸ್ಥರು ವೀಕ್ಷಣಾ ಕೊಠಡಿಯಲ್ಲಿ ಕಣ್ಣೀರು ಸುರಿಸುತ್ತಾ ಹರ್ಷ ವ್ಯಕ್ತಪಡಿಸಿದರು. 'ನಾಲ್ವರೂ ಗಗನಯಾನಿಗಳು ಸುರಕ್ಷಿತ ಮತ್ತು ಸಂತೋಷವಾಗಿದ್ದಾರೆ. ಹೂಸ್ಟನ್‌ನ ಮನೆಗೆ ತೆರಳಲು ಸಿದ್ದರಾಗಿದ್ದಾರೆ. ಈ ಯೋಜನೆ ಕೇವಲ ಅದೃಷ್ಟದಿಂದ ಯಶಸ್ವಿಯಾಗಿದ್ದಲ್ಲ. ಇದರ ಹಿಂದೆ ಸಾವಿರಾರು ಜನರ ಪರಿಶ್ರಮವಿದೆ' ಎಂದು ವಿಮಾನದ ನಿರ್ದೇಶಕ ರಿಕ್ ಹೆನ್ ಪ್ಲಿಂಗ್ ಹೇಳಿದ್ದಾರೆ.

ನಾಸಾದಿಂದ ಆರ್ಟೆಮಿಸ್-3 ಮಿಷನ್‌ಗೆ ಸಿದ್ದತೆ

ನಾಸಾ ಈಗ ಆರ್ಟೆಮಿಸ್-3 ಮಿಷನ್‌ಗೆ ಸಿದ್ದತೆ ನಡೆಸುತ್ತಿದೆ. ಮುಂದಿನ ವರ್ಷ ಚಂದ್ರನ ಮೇಲೆ ಮಾನವರನ್ನು ಇಳಿಸುವ ಉದ್ದೇಶ ಹೊಂದಿದೆ. ಅದಕ್ಕೆ ಪೂರ್ವಭಾವಿಯಾಗಿ ಆರ್ಟೆಮಿಸ್-2 ಮಿಷನ್ ನಡೆಸಿದೆ. ಕಮಾಂಡರ್‌ ರೀಡ್ ವೈಸ್ಟಾನ್, ಪೈಲಟ್ ವಿಕ್ಟರ್ ಗ್ಲೋವರ್, ಕ್ರಿಸ್ಟಿನಾ ಕೋಚ್ ಮತ್ತು ಕೆನಡಾದ ಜೆರೆಮಿ ಹ್ಯಾನ್ಸನ್ ಎಂಬ ನಾಲ್ವರು ಯಾನಿಗಳು 700,237 ಮೈಲಿ ಪ್ರಯಾಣಿಸಿ ಚಂದ್ರನನ್ನು ಸುತ್ತು ಹಾಕಿದ್ದಾರೆ. 10 ದಿನಗಳ ಈ ಪ್ರಯಾಣದಲ್ಲಿ ಚಂದ್ರ ಹಾಗೂ ಅಲ್ಲಿನ ವಾತಾವರಣದ ಕುರಿತು ಹಲವು ವೈಜ್ಞಾನಿಕ ಪರೀಕ್ಷೆಗಳನ್ನು ನಡೆಸಿದ್ದಾರೆ. ಇದು ಚಂದ್ರನಲ್ಲಿ ಇಳಿಯುವ ಮುಂದಿನ ಪ್ರಕ್ರಿಯೆಗೆ ನೆರವಾಗಲಿದೆ.

ಆರ್ಟೆಮಿಸ್-2 ಯಶದ ಹಿಂದೆ ಭಾರತೀಯ ಅಮಿತ್ ಕ್ಷತ್ರಿಯ

ವಾಷಿಂಗ್ಟನ್: ನಾಸಾದ ಆರ್ಟೆಮಿಸ್-2 ಮಿಷನ್‌ನ ಗಗನಯಾನಿಗಳು ಚಂದ್ರನನ್ನು ಒಂದು ಸುತ್ತು ಯಶಸ್ವಿಯಾಗಿ ಸುತ್ತಿ, ಅಪರೂಪದ ಚಿತ್ರಗಳೊಂದಿಗೆ ಭೂಮಿಗೆ ಹಿಂದಿರುಗಿದ್ದಾರೆ. ಅವರ ಈ ಸಾಹಸದ ಹಿಂದೆ ಭಾರತ ಮೂಲದ ವಿಜ್ಞಾನಿ ಅಮಿತ್ ಕೃತ್ರಿಯ ಅವರ ಮಹತ್ವದ ಪಾತ್ರವಿದೆ ಎಂಬ ಹೆಮ್ಮೆಯ ಸಂಗತಿ ಹೊರಬಿದ್ದಿದೆ.

ವಿಸ್ಕಾನ್ಸಿನ್‌ನಲ್ಲಿ ಜನಿಸಿದ ಅಮಿತ್ ಹ್ಯೂಸ್ಟನ್ ಸಮೀಪದ ಕ್ಯಾಟಿಯಲ್ಲಿ ನೆಲೆಸಿದ್ದಾರೆ. ಅವರ ತಂದೆ ತಾಯಿ ಮೊದಲ ತಲೆಮಾರಿನ ಭಾರತೀಯ ವಲಸಿಗರು. ಪ್ರಸ್ತುತ ನಾಸಾದ ಸಹಾಯಕ ಆಡಳಿತಾಧಿಕಾರಿಯಾಗಿರುವ ಅವರು, ಸಂಸ್ಥೆಯಲ್ಲಿನ ಅತಿ ಹಿರಿಯ ನಾಗರಿಕ ಅಧಿಕಾರಿ ಹುದೆಯಲ್ಲಿದ್ದಾರೆ. ಆಡಳಿತಾಧಿಕಾರಿ ಜಾರಡ್ ಐಸಾ ಕ್‌ಮನ್ ರಿಗೆ ಹಿರಿಯ ಸಲಹೆಗಾರರಾಗಿದ್ದು, ನಾಸಾದ 10 ಕೇಂದ್ರದ ನಿರ್ದೇಶಕರನ್ನೂ, ವಾಷಿಂಗ್ಟನ್‌‌ ಮುಖ್ಯ ಕಚೇರಿಯ ಮಿಷನ್ ನಿರ್ದೇ ಶನಾಲಯಗಳು ಸಹ ಆಡಳಿತಾಧಿಕಾರಿಗಳನ್ನೂ ಮುನ್ನಡೆ ಸುತ್ತಿದ್ದಾರೆ. ನಾಸಾದ ಮುಖ್ಯ ಕಾರ್ಯಾ ಚರಣೆ ಅಧಿಕಾರಿಯಾಗಿಯೂ ಕೆಲಸ ಮಾಡುತ್ತಿದ್ದಾರೆ. ನಾಸಾದ ಎಲ್ಲ ತಂಡಗಳ ಮೇಲ್ವಿಚಾರಣೆ, ಕಾರ್ಯಾಚರಣೆ, ಸುರಕ್ಷತೆ ಮತ್ತು ಸಿದ್ದತೆ ಎಲ್ಲವನ್ನೂ ಸರಿಯಾಗಿ ಸಂಘಟಿಸಿ, ಆರ್ಟೆಮಿಸ್-2 ಯಶಸ್ವಿಯಾಗಲು ಮುಖ್ಯ ಕಾರಣರಾಗಿದ್ದಾರೆ.

ಇದನ್ನೂ ಓದಿ: ಉಡುಪಿ: ಪತಿ ಸುದೀಪ್ ರೈ ಆತ್ಮ*ಹತ್ಯೆ ಪ್ರಕರಣ: ನಟಿ ಸೌಮ್ಯ ಶೆಟ್ಟಿ ಬಂಧನ

ಐಎಸ್‌ಎಸ್ ನಿರ್ಮಾಣದಲ್ಲಿ ಕೆಲಸ: ಅಮಿತ್ ಈ ಹಿಂದೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್ಎಸ್) ನಿರ್ಮಿಸುವ ಕೆಲಸದಲ್ಲಿ ತೊಡಗಿದ್ದರು. 2024ರಿಂದ 2017ರವರೆಗೆ ಐಎಎಸ್‌ ಫ್ಲೈಟ್ ಡೈರೆಕ್ಟರ್ ಆಗಿದ್ದರು. 2021ರಲ್ಲಿ ನಾಸಾದ ಚಂದ್ರ, ಮಂಗಳ ಯೋಜನೆಗಳಲ್ಲಿ ಮುಖ್ಯ ಪಾತ್ರ ವಹಿಸಿದ್ದರು.