Asianet Suvarna News Asianet Suvarna News

ಆಗ ಕೆಮಿಸ್ಟ್ರಿಯಲ್ಲಿ ಫೇಲ್‌ : ಈಗ ರಸಾಯನಶಾಸ್ತ್ರದಲ್ಲಿ ನೊಬೆಲ್‌: ವಿಜ್ಞಾನಿ ಬವೆಂಡಿ ರೋಚಕ ಕಹಾನಿ

ಇತ್ತೀಷೆಗಷ್ಟೇ ರಸಾಯನಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ (Nobel award)ಪಡೆದ ಫ್ರಾನ್ಸ್‌ ಮೂಲದ ಪ್ರಸ್ತುತ ಅಮೆರಿಕಾ ನಿವಾಸಿ ಮೌಂಗಿ ಬವೆಂಡಿ (Moungi Bawendi) ಕೂಡ ಪಿಯುಸಿಯಲ್ಲಿ ರಸಾಯನಶಾಸ್ತ್ರದಲ್ಲಿ ಫೇಲ್ ಆಗಿದ್ದರಂತೆ...!

Failed in Chemistry while studing Now got Nobel award in Chemistry Interesting Story of Scientist Moungi Bawendi akb
Author
First Published Oct 6, 2023, 1:09 PM IST

ನ್ಯೂಯಾರ್ಕ್‌: ಪಿಯುಸಿಯಲ್ಲಿ ವಿಜ್ಞಾನ ವಿಷಯ ಆಯ್ಕೆ ಮಾಡಿಕೊಂಡವರಿಗೆ ರಸಾಯನಶಾಸ್ತ್ರ ಎಷ್ಟು ಕಷ್ಟ ಎಂಬುದು ಬಹಳ ಚೆನ್ನಾಗಿ ಗೊತ್ತಿರುತ್ತದೆ. ರಸಾಯನಶಾಸ್ತ್ರದ ಕಾರಣಕ್ಕೆ ವಿಜ್ಞಾನದ ಸಹವಾಸ ಬೇಡ ಎಂದು ಬೇರೆ ವಿಷಯ ಆಯ್ಕೆ ಮಾಡಿಕೊಂಡ ಅನೇಕರಿದ್ದಾರೆ. ಕೆಲವೇ ಕೆಲವರಿಗೆ ಇದು ಸುಲಭವೆನಿಸಿದರೆ, ಬಹುಸಂಖ್ಯಾತರಿಗೆ ಈ ರಸಾಯನಶಾಸ್ತ್ರ ಎಂಬುದು ಕಬ್ಬಿಣದ ಕಡಲೆ. ಅನೇಕರು ಈ ವಿಷಯದಲ್ಲಿ ಫೇಲ್ ಆಗಿ ಕೋರ್ಸ್‌ನ್ನೇ ಬದಲಿಸಿದ್ದಾರೆ. ಆದರೆ ಈ ರಸಾಯನಶಾಸ್ತ್ರ ನಮಗೆ ಮಾತ್ರ ಕಷ್ಟ ಎಂದುಕೊಂಡಿದ್ದರೆ ನಿಮ್ಮ ಊಹೆ ತಪ್ಪು...! ಇತ್ತೀಷೆಗಷ್ಟೇ ರಸಾಯನಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ (Nobel award)ಪಡೆದ ಫ್ರಾನ್ಸ್‌ ಮೂಲದ ಪ್ರಸ್ತುತ ಅಮೆರಿಕಾ ನಿವಾಸಿ ಮೌಂಗಿ ಬವೆಂಡಿ (Moungi Bawendi) ಕೂಡ ಪಿಯುಸಿಯಲ್ಲಿ ರಸಾಯನಶಾಸ್ತ್ರದಲ್ಲಿ ಫೇಲ್ ಆಗಿದ್ದರಂತೆ...!

ಆದರೆ ಫೇಲಾದೆ ಎಂದು ಅವರೆಂದು ಆ ವಿಷಯದಲ್ಲಿ ಆಸಕ್ತಿ ಕಳೆದುಕೊಳ್ಳದೇ ಮತ್ತಷ್ಟು ಆಸಕ್ತಿಯಿಂದ ಅಧ್ಯಯನ ನಡೆಸಿದ ಪರಿಣಾಮ ಇಂದು ಅವರು ಅದೇ ವಿಷಯದಲ್ಲಿ ನೊಬೆಲ್ ಪ್ರಶಸ್ತಿ ಪಡೆಯುವಷ್ಟರ ಮಟ್ಟಿಗೆ ಸಾಧನೆ ಮಾಡಿದ್ದಾರೆ. ಬವೆಂಡಿ ಅವರು 1990 ರಿಂದಲೂ ಎಂಐಟಿಯಲ್ಲಿ ರಸಾಯನಶಾಸ್ತ್ರದ ಪ್ರಾಧ್ಯಾಪಕರಾಗಿ ಕೆಲಸ ಮಾಡ್ತಿದ್ದಾರೆ.  ಪ್ಯಾರಿಸ್‌ನಲ್ಲಿ ಫ್ರೆಂಚ್ ತಾಯಿ ಮತ್ತು ಟ್ಯುನಿಷಿಯಾ ಮೂಲದ ತಂದೆಗೆ ಜನಿಸಿದ ಇವರು ತಮ್ಮ ಚಿಕ್ಕವಯಸ್ಸಿನಲ್ಲೇ  ಇಂಡಿಯಾನಾದ ವೆಸ್ಟ್ ಲಫಯೆಟ್ಟೆಗೆ ತಮ್ಮ ಕುಟುಂಬದೊಂದಿಗೆ ವಲಸೆ  ಹೋಗಿದ್ದರು. ಇವರು ತಂದೆಯೂ ಕೂಡ  ಪ್ರಾಧ್ಯಾಪಕ ವೃತ್ತಿಯಲ್ಲಿದ್ದು, ಪರ್ಡ್ಯೂ ವಿಶ್ವವಿದ್ಯಾಲಯದಲ್ಲಿ ಗಣಿತಶಾಸ್ತ್ರ ಬೋಧನೆ ಮಾಡುತ್ತಿದ್ದರು.

ಒಂದೇ ದಿನ ಆರು ಬಾರಿ ಹೃದಯಾಘಾತವಾದ ವಿದ್ಯಾರ್ಥಿಯ ಬದುಕಿಸಿದ ವೈದ್ಯರು

ತಮಗೆ ನೊಬೆಲ್ ಸಮಿತಿಯಿಂದ ಕರೆ ಬಂದ ಬಗ್ಗೆ ಎಂಐಟಿ (MIT)ನ್ಯೂಸ್ ಜೊತೆ ಮಾತನಾಡಿದ ಅವರು ನನಗೆ ಇದರಿಂದ ಅಚ್ಚರಿ ಆಘಾತ ಎರಡು ಒಟ್ಟೊಟ್ಟಿಗೆ ಆಯ್ತು, ಇದೊಂದು ದೊಡ್ಡಗೌರವ ಎಂದು ಅವರು ಹೇಳಿಕೊಂಡಿದ್ದಾರೆ. 1982ರಲ್ಲಿ ಹಾರ್ವರ್ಡ್‌ ವಿವಿಯಲ್ಲಿ ತಮ್ಮ ಪದವಿಪೂರ್ವ  ಶಿಕ್ಷಣ ಪಡೆದ ಅವರು ಅದಕ್ಕೂ ಮೊದಲು ಪ್ರಥಮ ವರ್ಷದಲ್ಲಿ ಕೆಮಿಸ್ಟ್ರಿ ವಿಷಯದಲ್ಲಿ ಫೇಲ್ ಅಗಿದ್ದರು. ಆ ಅನುಭವ ಅವರಿಗೆ ಪರಿಶ್ರಮದ ಅಮೂಲ್ಯ ಪಾಠ ಕಲಿಸಿತು ಎಂದು ಅವರು ಸುದ್ದಿಗೋಷ್ಠಿಯಲ್ಲಿ ಹೇಳಿಕೊಂಡಿದ್ದಾರೆ. 

ಮಗಳಿಗೆ ಬುದ್ಧಿ ಕಲಿಸಲು ಬರ್ತ್‌ಡೇಗೆ ಕೊಳಚೆ ನೀರು ಗಿಫ್ಟ್ ಕೊಟ್ಟ ಅಪ್ಪ

ಆದರೆ ಹೈಸ್ಕೂಲ್‌ನಲ್ಲಿ ಯಾವುದೇ ಪರಿಶ್ರಮವಿಲ್ಲದೇ ಉತ್ತಮ ಅಂಕಗಳೊಂದಿಗೆ ಪಾಸಾದ ಅವರಿಗೆ ಮೊದಲ ಬಾರಿ ಪಿಯುಸಿಯಲ್ಲಿ ಫೇಲ್ ಆದಾಗ ಬಹುತೇಕ ಸರ್ವನಾಶವಾದ ಅನುಭವವಾಗಿತ್ತು ಎಂದು ಅವರು ಹೇಳಿದ್ದಾರೆ. ಹಾರ್ವರ್ಡ್‌ ವಿವಿಗೆ ಮೊದಲ ಬಾರಿಗೆ ಬಂದಾಗ ನಾನು ಶಿಕ್ಷಣದ ಬಗ್ಗೆ ಬಹಳಷ್ಟು ಕೇರ್‌ಲೆಸ್ ಆಗಿದ್ದೆ. ಪರೀಕ್ಷೆಗೆ ಓದುವ ಅಭ್ಯಾಸವೇ ಇರಲಿಲ್ಲ. ಆದರೆ ಅದೊಂದು ಪರೀಕ್ಷಾ ಫಲಿತಾಂಶ ಜೀವನ ಬದಲಿಸಿತ್ತು. ಆ ಪರೀಕ್ಷೆಯಲ್ಲಿ ನಾನು 100ರಲ್ಲಿ ಕೇವಲ 20 ಅಂಕ ಗಳಿಸಿದ್ದೆ. ಜೊತೆಗೆ ನನ್ನ ಬದುಕು ಇಲ್ಲಿಗೆ ಮುಗಿತ್ತು ಎಂದು ಭಾವಿಸಿದೆ. 

ಆದರೆ ರಸಾಯನಶಾಸ್ತ್ರದಲ್ಲಿ ಆಸಕ್ತಿ ಇತ್ತು.  ಆದರೆ ಪರೀಕ್ಷೆಯಲ್ಲಿ ಪಾಸಾಗುವ ಕಲೆ ನನಗೆ ತಿಳಿದಿರಲಿಲ್ಲ, ಒಂದು ಫೈಲ್ಯೂರ್‌ ನನಗೆ ನನ್ನ ಸರಿಪಡಿಸಿಕೊಳ್ಳುವ ಅವಕಾಶ ನೀಡಿತ್ತು. ಹೇಗೆ ಅಧ್ಯಯನ ಮಾಡಬೇಕು ಎಂಬುದನ್ನು ಕಲಿತೆ. ಇದಾದದ ನಂತರ ನ ಪ್ರತಿ ಪರೀಕ್ಷೆಯಲ್ಲೂ 100 ಅಂಕ ಗಳಿಸುತ್ತಿದ್ದೆ ಎಂದು ಅವರು ಹೇಳಿಕೊಂಡಿದ್ದಾರೆ.  ಪರಿಸ್ಥಿತಿ ಹೇಗೆ ಇದ್ದರೂ ಮುನ್ನಡೆಯಿರಿ ಹಾಗೂ ಒಂದು ಸೋಲು ನಿಮ್ಮನ್ನು ನಾಶ ಮಾಡಲು ಬಿಡದಿರಿ ಎಂದು ಯುವ ಸಮೂಹಕ್ಕೆ ಅವರು ಸಲಹೆ ನೀಡಿದರು.

ಪತಿ ರಿಷಿಗಾಗಿ ಮೊದಲ ಬಾರಿ ರಾಜಕೀಯ ವೇದಿಕೆ ಏರಿದ ಇನ್ಪಿ ಮೂರ್ತಿ ಪುತ್ರಿ ಅಕ್ಷತಾ ಮೂರ್ತಿ

ಮೂವರು ವಿಜ್ಞಾನಿಗಳಿಗೆ ಕೆಮಿಸ್ಟ್ರಿ ನೊಬೆಲ್

ಅತ್ಯಂತ ಪ್ರಖರ ಬೆಳಕನ್ನು ಹೊರಹೊಮ್ಮಿಸುವ ಅತ್ಯಂತ ಚಿಕ್ಕ ಕಣವಾದ 'ಕ್ವಾಂಟಮ್‌ ಡಾಟ್ಸ್‌'ನ ಅಭಿವೃದ್ಧಿಯ ಬಗ್ಗೆ ಅಧ್ಯಯನ ನಡೆಸಿದ ಎಂಐಟಿಯ ಮೌಂಗಿ ಬವೆಂಡಿ, ಕೊಲಂಬಿಯ ವಿಶ್ವವಿದ್ಯಾಲಯದ (Columbia University) ಲೂಯಿಸ್‌ ಬ್ರಸ್‌ ಮತ್ತು ನ್ಯಾನೋಕ್ರಿಸ್ಟಲ್ಸ್‌ ಟೆಕ್ನಾಲಜಿ ಸಂಸ್ಥೆಯ ಅಲೆಕ್ಸಿ ಎಕಿಮೋವ್‌ ಅವರಿಗೆ ಈ ಬಾರಿಯ ನೊಬೆಲ್ ಪ್ರಶಸ್ತಿ ಸಿಕ್ಕಿದೆ.  . ಈ ಮೂವರು ವಿಜ್ಞಾನಿಗಳು ಎಲೆಕ್ಟ್ರಾನಿಕ್ಸ್‌ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಬಳಕೆಯಾಗುವ ಅತ್ಯಂತ ಪ್ರಖರ ಬೆಳಕನ್ನು ಉತ್ಪಾದಿಸುವ ಕ್ವಾಂಟಮ್‌ ಚುಕ್ಕಿಗಳ ಬಗ್ಗೆ ಅಧ್ಯಯನ ನಡೆಸಿದ್ದರು.

ಈ ಕ್ವಾಂಟಮ್‌ ಚುಕ್ಕಿಗಳು (quantum dots) ಕೆಲವೇ ಕೆಲವು ಅಣುಗಳಷ್ಟು ವ್ಯಾಸವನ್ನು ಹೊಂದಿದ್ದು, ಇವು ಈಗಾಗಲೇ ಟೆಲಿವಿಷನ್‌ ಪರದೆ ಮತ್ತು ಎಲ್‌ಇಡಿ ಲ್ಯಾಂಪ್‌ಗಳಲ್ಲಿ ಬಳಕೆಯಾಗುತ್ತಿದೆ. ಇವು ರಸಾಯನ ಪ್ರಕ್ರಿಯೆಗಳನ್ನು ವೇಗಗೊಳಿಸಲಿವೆ ಮತ್ತು ಇವುಗಳ ಸ್ಪಷ್ಟವಾದ ಬೆಳಕು ಟ್ಯೂಮರ್‌ ಕೋಶಗಳನ್ನು ವೈದ್ಯರಿಗೆ ಸ್ಪಷ್ಟವಾಗಿ ತೋರಿಸುತ್ತವೆ. ಕ್ವಾಂಟಮ್‌ ಡಾಟ್ಸ್‌ನಲ್ಲಿರುವ ಎಲೆಕ್ಟ್ರಾನ್‌ಗಳು ನಿರ್ಬಂಧಿತ ಚಲನೆಯನ್ನು ಹೊಂದಿದ್ದು, ಇದು ಅವುಗಳು ನಿರ್ದಿಷ್ಟ ಪ್ರಮಾಣದಲ್ಲಿ ಬೆಳಕನ್ನು ಹೀರಿಕೊಂಡು, ಅತ್ಯಂತ ಪ್ರಖರ ಬೆಳಕನ್ನು ಉತ್ಪಾದಿಸುತ್ತವೆ’ ಎಂದು ರಾಯಲ್‌ ಸ್ವೀಡಿಷ್‌ ಅಕಾಡೆಮಿ ಆಫ್‌ ಸೈನ್ಸಸ್‌ (Swedish Academy of Sciences) ಹೇಳಿದೆ.

80 ವರ್ಷದ ಬ್ರಸ್‌ ಹಾಗೂ 78 ವರ್ಷದ ಎಕಿಮೋವ್‌ ಕ್ವಾಂಟಮ್‌ ಡಾಟ್ಸ್‌ ತಂತ್ರಜ್ಞಾನದಲ್ಲಿ ಹೆಚ್ಚಿನ ಕೆಲಸ ಮಾಡಿದ್ದರೆ, 68 ವರ್ಷದ ಬವೆಂಡಿ ಇದರ ಬಳಕೆಯನ್ನು ಪ್ರಸ್ತುತವಾಗಿಸುವ ಕಾರ್ಯದಲ್ಲಿ ಹೆಚ್ಚಿನ ಕೆಲಸ ಮಾಡಿದ್ದಾರೆ.

Follow Us:
Download App:
  • android
  • ios