ಕಕ್ಷೆ ಸೇರಲಿಲ್ಲ ಚೀನಾ ಊಡಾಯಿಸಿದ ಆಪ್ಟಿಕಲ್ ರಿಮೂಟ್ ಸೆನ್ಸಿಂಗ್ ಸ್ಯಾಟಲೈಟ್!
ಚೀನಾ ಸರ್ಕಾರ ತನ್ನ ಎಲ್ಲಾ ಗಮನವನ್ನು ಭಾರತ ಗಡಿ ನಿಯಂತ್ರ ರೇಖೆ ಸೇರಿದಂತೆ ಇತರ ದೇಶಗಳ ಗಡಿ ಭಾಗದತ್ತ ನೆಟ್ಟಿದೆ. ಪ್ರತಿ ದಿನ ತನ್ನ ಸಾಮ್ರಾಜ್ಯ ವಿಸ್ತರಣೆಗಾಗಿ ಮಾಸ್ಟರ್ ಪ್ಲಾನ್ ರೆಡಿ ಮಾಡುತ್ತಿದೆ. ಜೊತೆಗೆ ಹೆಚ್ಚಿನ ಹಣ ವಿನಿಯೋಗಿಸುತ್ತಿದೆ. ಇತ್ತ ಚೀನಾ ಉಡಾಯಿಸಿದ ಸ್ಯಾಟಲೈಟ್ ಕಕ್ಷೆ ಸೇರದೆ ವಿಫಲಗೊಂಡಿದ್ದು, ಭಾರಿ ಚರ್ಚೆಗೆ ಕಾರಣವಾಗಿದೆ.
ಬೀಜಿಂಗ್(ಸೆ.13): ಚೀನಾ ಹೆಚ್ಚಿನ ಹಣವನ್ನು ಭಾರತ ವಿರುದ್ಧ ಕತ್ತಿ ಮಸೆಯಲು ಉಪಯೋಗಿಸುತ್ತಿದೆ. ಇನ್ನು ಚೀನಾ ಅಧೀನದಲ್ಲಿರುವ ಹಾಂಕಾಂಗ್ ಸೇರಿದಂತೆ ಇತರ ರಾಷ್ಟ್ರಗಳ ಮೇಲೆ ಪ್ರಭುತ್ವ ಸಾಧಿಸಲು ಹಣ ವಿನಿಯೋಗಿಸುತ್ತಿದೆ. ಹೆಚ್ಚಿನ ಸಮಯ ತನ್ನ ಗಡಿ ವಿಸ್ತರಣೆ ಕುರಿತು ಆಲೋಚಿಸುತ್ತಿದೆ. ಇದರ ನಡುವೆ ಚೀನಾ ಆಪ್ಟಿಕಲ್ ರಿಮೂಟ್ ಸೆನ್ಸಿಂಗ್ ಸ್ಯಾಟಲೈಟ್ ಉಡಾಯಿಸಿತ್ತು. ಆದರೆ ಇದು ಆರ್ಬಿಟ್ ಸೇರುವಲ್ಲಿ ವಿಫಲವಾಗಿದೆ.
ಇಸ್ರೋದ ಜಿಸ್ಯಾಟ್-30 ಉಪಗ್ರಹ ಯಶಸ್ವಿ ಉಡಾವಣೆ!
ಚೀನಾ ಜಿಲಿನ್ 1 ಗಾವೋಫೆನ್ 02ಸಿ ಸ್ಯಾಟಲೈಟ್ ಕಕ್ಷೆ ಸೇರಲು ವಿಫಲವಾಗಿದೆ. ಸ್ಯಾಟಲೈಟ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಕಾರಣ ಕೆಲ ಹೊತ್ತಲ್ಲೇ ಸ್ಯಾಟಲೈಟ್ ಸಂಪೂರ್ಣ ವಿಫಲಗೊಂಡಿದೆ. ವೈಫಲ್ಯಕ್ಕೆ ಸ್ಪಷ್ಟ ಕಾರಣ ತಿಳಿಯಲು ತನಿಖೆ ನಡೆಯುತ್ತಿದೆ ಎಂದು ಚೀನಾ ಹೇಳಿದೆ.
ಪಿಎಸ್‌ಎಲ್‌ವಿ-ಸಿ48 ಉಡಾವಣೆ ಯಶಸ್ವಿ: ಇಸ್ರೋ ಸಾಧನೆಗೆ ಮತ್ತೊಂದು ಗರಿ!
ಚೀನಾ ಸ್ಯಾಟಲೈಟ್ ವೈಫಲ್ಯ ಅನುಭವಿಸಿದ ಬೆನ್ನಲ್ಲೇ ಹಲವರು ಇದು ಚೀನಾ ಅತೀ ಬುದ್ದಿಯ ಪರಿಣಾಮ ಎಂದಿದ್ದಾರೆ. ಚೀನಾ ತನ್ನ ಎಲ್ಲಾ ಗಮನವನ್ನು ಗಡಿ ವಿಸ್ತರಿಸಲು ವಿನಿಯೋಗಿಸುತ್ತಿದೆ. ತನ್ನ ದೇಶದೊಳಗೆ ಗಮನ ಹರಿಸುತ್ತಿಲ್ಲ. ಹೀಗಾಗಿ ಈ ರೀತಿ ಆಗಿದೆ ಎಂದು ಚರ್ಚೆ ನಡೆಯುತ್ತಿದೆ.