ಪಿಎಸ್‌ಎಲ್‌ವಿ-ಸಿ48 ಉಡಾವಣೆ ಯಶಸ್ವಿ: ಇಸ್ರೋ ಸಾಧನೆಗೆ ಮತ್ತೊಂದು ಗರಿ!

ಇಸ್ರೋದ ಪಿಎಸ್‌ಎಲ್‌ವಿ-ಸಿ48 ಉಡಾವಣೆ ಯಶಸ್ವಿ| ಇಸ್ರೋ ಬಾಹ್ಯಾಕಾಶ ಸಾಧನೆಗೆ ಮತ್ತೊಂದು ಗರಿ| 9 ವಿದೇಶಿ ಉಪಗ್ರಹಗಳೂ ಸೇರಿದಂತೆ ಒಟ್ಟು 10 ಉಪಗ್ರಹಗಳು ಕಕ್ಷೆಗೆ| ಆಂಧ್ರ ಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಉಡಾವಣಾ ಕೇಂದ್ರ| 50ನೇ ಯಶಸ್ವಿ ಉಡಾವಣೆಯ ಮೂಲಕ ದಾಖಲೆ ಬರೆದ ಸತೀಶ್ ಧವನ್ ಬಾಹ್ಯಾಕಾಶ ಉಡಾವಣಾ ಕೇಂದ್ರ | 

Isro Successfully Launches PSLV-C48 Rocket

ಶ್ರೀಹರಿಕೋಟಾ(ಡಿ.11): ಇಸ್ರೋ ನಿರ್ಮಿತ ಪಿಎಸ್ಎಲ್‌ವಿ-ಸಿ48 ರಾಕೆಟ್ ಯಶಸ್ವಿಯಾಗಿ ನಭಕ್ಕೆ ಹಾರಿದ್ದು, 9 ವಿದೇಶಿ ಉಪಗ್ರಹಗಳೂ ಸೇರಿದಂತೆ ಒಟ್ಟು 10 ಉಪಗ್ರಹಗಳನ್ನು ಯಶಸ್ವಿಯಾಗಿ ಬಾಹ್ಯಾಕಾಶದತ್ತ ಕೊಂಡೊಯ್ದಿದೆ.

ಇತಿಹಾಸ ಕೊರೆದ ಇಸ್ರೋ: ನಭಕ್ಕೆ ಚಿಮ್ಮಿದ ಕಾರ್ಟೊಸ್ಯಾಟ್-3!

ಆಂಧ್ರ ಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಉಡಾವಣಾ ಕೇಂದ್ರದಿಂದ ಪಿಎಸ್ಎಲ್‌ವಿ ಸಿ-48 ರಾಕೆಟ್ ಉಡಾವಣೆ ಮಾಡಲಾಗಿದ್ದು, ಭಾರತದ 628 ಕೆ.ಜಿ. ತೂಕದ ಭೂ ಪರಿವೀಕ್ಷಣಾ ಉಪಗ್ರಹ ರಿಸ್ಯಾಟ್-2ಬಿ ಆರ್‌ಐ ಸೇರಿದಂತೆ ಇತರ 9 ವಿದೇಶಿ ವಾಣಿಜ್ಯ ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿದೆ.

ಈ ಉಡಾವಣೆ ಮೂಲಕ ಶ್ರೀಹರಿಕೋಟಾ ಸತೀಶ್ ಧವನ್ ಬಾಹ್ಯಾಕಾಶ ಉಡಾವಣಾ ಕೇಂದ್ರ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದ್ದು, 50ನೇ ಯಶಸ್ವಿ ಉಡಾವಣೆಯ ಮೂಲಕ ಸತೀಶ್ ಧವನ್ ಬಾಹ್ಯಾಕಾಶ ಉಡಾವಣಾ ಕೇಂದ್ರ  ಭಾರತದ ಬಾಹ್ಯಾಕಾಶ ಕ್ಷೇತ್ರದಲ್ಲಿ ಅಚ್ಚಳಿಯದ ದಾಖಲೆ ಬರೆದಿದೆ. 

ನಾವು ವಚನಬದ್ಧ: ಚಂದ್ರಯಾನ-3 ಯೋಜನೆಗೆ ಇಸ್ರೋ ಸಿದ್ಧ!

ಇಂದು ಉಡಾವಣೆಗೊಂಡ ರಾಕೆಟ್‌ನಲ್ಲಿ ಅಮೆರಿಕದ 6, ಇಸ್ರೇಲ್‌ನ 1, ಇಟಲಿಯ 1 ಮತ್ತು ಜಪಾನ್‌ ನ 1 ಉಪಗ್ರಹಗಳು ಸೇರಿರುವುದು ವಿಶೇಷ.

Latest Videos
Follow Us:
Download App:
  • android
  • ios