Chandrayaan: ಮೂರು ಮುಖ್ಯ ಉದ್ದೇಶಗಳಲ್ಲಿ 2 ಪೂರ್ಣ; ಇನ್ನೊಂದು ಪ್ರಗತಿಯಲ್ಲಿದೆ: ಇಸ್ರೋ
ಚಂದ್ರಯಾನ-3 ಮಿಷನ್ ತನ್ನ ಮೂರು ಮುಖ್ಯ ಉದ್ದೇಶಗಳಲ್ಲಿ ಎರಡನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ ಎಂದು ಇಸ್ರೋ ಹೇಳಿದೆ.
ನವದೆಹಲಿ (ಆಗಸ್ಟ್ 26, 2023): ಚಂದ್ರನ ಅಂಗಳಕ್ಕೆ ಚಂದ್ರಯಾನ - 3 ಯೋಜನೆಯ ವಿಕ್ರಮ್ ಲ್ಯಾಂಡರ್ ಇಳಿದಿದ್ದೂ ಆಯ್ತು ಹಾಗೂ ಪ್ರಗ್ಯಾನ್ ರೋವರ್ ಚಂದ್ರನಲ್ಲಿ ಸಂಚಾರವನ್ನೂ ಮಾಡ್ತಿದೆ. ಈ ಬಗ್ಗೆ ಜಗತ್ತೇ ನಿಬ್ಬೆರಗಾಗಿದೆ. ಇನ್ನು, ಈ ಬಗ್ಗೆ ಶನಿವಾರ ಸಂಜೆ ಟ್ವೀಟ್ ಮಾಡಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಚಂದ್ರಯಾನ-3 ಮಿಷನ್ ತನ್ನ ಮೂರು ಮುಖ್ಯ ಉದ್ದೇಶಗಳಲ್ಲಿ ಎರಡನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ ಎಂದು ಹೇಳಿದೆ.
ಚಂದ್ರಯಾನ -3 ರ ಲ್ಯಾಂಡರ್ ವಿಕ್ರಮ್ ಚಂದ್ರನ ಮೇಲ್ಮೈಯಲ್ಲಿ ಸುರಕ್ಷಿತ ಮತ್ತು ಸಾಫ್ಟ್ ಲ್ಯಾಂಡಿಂಗ್ ಅನ್ನು ಸಾಧಿಸಿದೆ. ಅಲ್ಲದೆ, ರೋವರ್ ಪ್ರಗ್ಯಾನ್ ಚಂದ್ರನ ಮೇಲ್ಮೈಯಲ್ಲಿ ಯಶಸ್ವಿಯಾಗಿ ಸಂಚರಿಸಿದೆ ಎಂದು ಇಸ್ರೋ X ನಲ್ಲಿನ (ಹಿಂದಿನ ಟ್ವಿಟ್ಟರ್) ಪೋಸ್ಟ್‌ನಲ್ಲಿ ಹೇಳಿದೆ. ಹಾಗೂ, ಇನ್ನು, ಉಳಿದಿರುವ ಕೊನೆಯ ಉದ್ದೇಶವೆಂದರೆ ಇನ್-ಸಿಟು ವೈಜ್ಞಾನಿಕ ಪ್ರಯೋಗಗಳನ್ನು ನಡೆಸುವುದು, ಅದು "ಪ್ರಗತಿಯಲ್ಲಿದೆ". ಎಲ್ಲಾ ಪೇಲೋಡ್‌ಗಳು ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿವೆ ಎಂದೂ ಇಸ್ರೋ ಹೇಳಿದೆ.
ಇದನ್ನು ಓದಿ: ಯಾರಪ್ಪಾ ಇವ್ನು ಪುಂಗಿದಾಸ! ನಾನೇ CHANDRAYAAN 3 ಲ್ಯಾಂಡರ್ ಡಿಸೈನರ್; ನಾಸಾ ಜತೆಗೂ ಕೆಲಸ ಮಾಡ್ತೀನಿ ಎಂದ ಭೂಪ
ಅದಕ್ಕೂ ಮುನ್ನ, ಇಂದು ಬೆಳಗ್ಗೆ ಇಸ್ರೋ ರೋವರ್ ಪ್ರಗ್ಯಾನ್, ಚಂದ್ರನ ಮೇಲ್ಮೈಯಲ್ಲಿ ನ್ಯಾವಿಗೇಟ್ ಮಾಡುತ್ತಿರುವ ಅಥವಾ ಸಂಚರಿಸುತ್ತಿರುವ ಹೊಸ ವಿಡಿಯೋವನ್ನು ಬಿಡುಗಡೆ ಮಾಡಿತ್ತು. "ದಕ್ಷಿಣ ಧ್ರುವದಲ್ಲಿ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಪ್ರಗ್ಯಾನ್ ರೋವರ್ ಶಿವಶಕ್ತಿ ಪಾಯಿಂಟ್ ಸುತ್ತಲೂ ತಿರುಗುತ್ತದೆ!" ಎಂದು ಬಾಹ್ಯಾಕಾಶ ಸಂಸ್ಥೆ ಎಕ್ಸ್‌ನಲ್ಲಿ (ಹಿಂದಿನ ಟ್ವಿಟ್ಟರ್) ನಲ್ಲಿ ಪೋಸ್ಟ್ ಮಾಡಿದೆ.
ಶನಿವಾರ ಬೆಂಗಳೂರಿನಲ್ಲಿ ಇಸ್ರೋ ವಿಜ್ಞಾನಿಗಳನ್ನು ಭೇಟಿ ಮಾಡಿದ ಪ್ರಧಾನಿ ನರೇಂದ್ರ ಮೋದಿ, ಚಂದ್ರಯಾನ-3 ಚಂದ್ರನ ಮೇಲೆ ಇಳಿದ ಸ್ಥಳವನ್ನು ಇನ್ನು ಮುಂದೆ 'ಶಿವಶಕ್ತಿ ಪಾಯಿಂಟ್' ಎಂದು ಕರೆಯಲಾಗುವುದು ಎಂದು ಘೋಷಿಸಿದರು. ಹಾಗೂ, ಚಂದ್ರನ ಇಳಿಯುವಿಕೆಯ ದಿನಾಂಕವಾದ ಆಗಸ್ಟ್ 23 ಅನ್ನು ರಾಷ್ಟ್ರೀಯ ಬಾಹ್ಯಾಕಾಶ ದಿನವನ್ನಾಗಿ ಆಚರಿಸಲಾಗುವುದು ಎಂದೂ ಮೋದಿ ಘೋಷಿಸಿದರು.
ಇದನ್ನೂ ಓದಿ: ಚಂದ್ರಯಾನ ಆಯ್ತು, ಈಗ ಬಾಹ್ಯಾಕಾಶಕ್ಕೆ ಮಹಿಳಾ ರೋಬೋಟ್ ಕಳಿಸಲಿದೆ ಭಾರತ!
ಇಸ್ರೋ ತನ್ನ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ನಲ್ಲಿ ಐತಿಹಾಸಿಕ ಚಂದ್ರನ ಮಿಷನ್ ಕುರಿತು ಆಗಾಗ್ಗೆ ಅಪ್ಡೇಟ್, ಚಂದ್ರನ ಅಂಗಳದ ಫೋಟೋ, ವಿಡಿಯೋಗಳನ್ನು ಹಂಚಿಕೊಳ್ಳುತ್ತಿದೆ.
ಇದನ್ನೂ ಓದಿ: Chandrayaan 3 ಯಶಸ್ಸಿನಲ್ಲಿ ಈ ಎಂಜಿನಿಯರಿಂಗ್ ಕಾಲೇಜಿನ ಪಾತ್ರವೇನು ನೋಡಿ..!