Asianet Suvarna News Asianet Suvarna News

Chandrayaan-3 ಯಶಸ್ಸಿನ ಗುಟ್ಟು ಬಿಚ್ಚಿಟ್ಟ ಇಸ್ರೋ ವಿಜ್ಞಾನಿ ಮುತ್ತುವೇಲ್

ಚಂದ್ರಯಾನ-3 ವಾಹಕವನ್ನು ಉಡಾವಣೆ ಮಾಡಿದ ದಿನದಿಂದಲೂ ವಿಕ್ರಮ ಲ್ಯಾಂಡರ್‌ ಚಂದ್ರನ ಮೇಲೆ ಲ್ಯಾಂಡ್‌ ಆಗುವವರೆಗೂ ನಾವು ಅಂದುಕೊಂಡಂತೆ ಆಗಿದೆ.

Chandrayaan 3 from launch to landing went as expected Scientist Muthuvel sat
Author
First Published Aug 23, 2023, 6:40 PM IST

ಬೆಂಗಳೂರು (ಆ.23): ಭಾರತದ ತ್ರಿವಿಕ್ರಮ ಸಾಧನೆಯಾದ ಚಂದ್ರಯಾನ-3 ವಾಹಕವನ್ನು ಉಡಾವಣೆ ಮಾಡಿದ ದಿನದಿಂದಲೂ ವಿಕ್ರಮ ಲ್ಯಾಂಡರ್‌ ಚಂದ್ರನ ಮೇಲೆ ಲ್ಯಾಂಡ್‌ ಆಗುವವರೆಗೂ ನಾವು ಅಂದುಕೊಂಡಂತೆ ಆಗಿದೆ. ಎಲ್ಲವೂ ಟೈಮ್‌ಲೈನ್‌ ಪ್ರಕಾರವೇ ನಡೆದಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಪ್ರಾಜೆಕ್ಟ್ ಡೈರೆಕ್ಟರ್ ಮುತ್ತುವೇಲ್ ಹೇಳಿದರು.

ಚಂದ್ರಯಾನ-3 ಯಶಸ್ವಿಯಾದ ಬೆನ್ನಲ್ಲಿಯೇ ಇಸ್ರೋ ವಿಜ್ಞಾನಿ ಹಾಗೂ ಇಸ್ರೋ ಯೋಜನಾ ನಿರ್ದೇಶಕ ಮುತ್ತುವೇಲ್‌ ಅವರು ಮಾತನಾಡಿ, ಚಂದ್ರಯಾನ-3 ನೌಕೆ ಉಡಾವಣೆಯಿಂದ ಈವರೆಗೆ ನಾವು ಅಂದುಕೊಂಡಂತೆಯೇ ಪ್ರಕ್ರಿಯೆ ನಡೆದಿದೆ. ಇನ್ನು ಸಾಫ್ಟ್ ಲ್ಯಾಂಡಿಂಗ್ ವಿಚಾರ ತುಂಬಾ ಸಂತೋಪ ತಂದಿದೆ. ದಕ್ಷಿಣ ಧ್ರುವದಲ್ಲಿ ಲ್ಯಾಂಡ್ ಮಾಡಿದ ಮೊದಲ ದೇಶ ಎಂಬ ಹೆಮ್ಮೆ ಹೆಗ್ಗಳಿಕೆ ಇದೆ. ಈ ಪ್ರಕ್ರಿಯೆ ಯಶಸ್ವಿಯಾಗಿ ನೆರವೇರಿಸಿದ ನಾಲ್ಕನೇ ದೇಶ ಭಾರತವಾಗಿದೆ ಎಂದು ತಿಳಿಸಿದರು.

ಇಸ್ರೋ ಅಧಿಕಾರಿಗಳೆಲ್ಲರಿಗೂ ಧನ್ಯವಾದಗಳನ್ನ ತಿಳಿಸ್ತೇನೆ. ಲಾಂಚ್ ಆದಾಗಿಂನಿಂದ ಲ್ಯಾಂಡ್ ಆಗುವ ತನಕ ನಾವು ಅಂದುಕೊಂಡಂತೆ ನಡೆದಿದೆ ಟೈಮ್ ಲೈನ್ ಪ್ರಕಾರವೇ ಎಲ್ಲಾ ಪ್ರಕ್ರಿಯೆ ನಡೆದಿದೆ. ಪ್ರಕ್ರಿಯೆಗೆ ಎಲ್ಲಾ ಟೀಂ ಗಳ ಸಹಕಾರ ಮಹತ್ವದ್ದಾಗಿತ್ತು. ಹೀಗಾಗಿ ನಮ್ಮ ಜೊತೆ ಕೆಲಸ ಮಾಡಿದ ತಂಡಕ್ಕೆ ಧನ್ಯವಾದಗಳು ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಯೋಜನಾ ನಿರ್ದೇಶಕ ಮುತ್ತುವೇಲ್‌ ಹೇಳಿದರು. 

ಮಾನವಸಹಿತ ಉಪಗ್ರಹ ಉಡಾವಣೆಗೆ ಸಹಕಾರಿ: ಯು.ಆರ್ ರಾವ್ ಸ್ಯಾಟಲೈಟ್ ಸೆಂಟರ್ ಮುಖ್ಯಸ್ಥ ಶಂಕರನ್ ಮಾತನಾಡಿ, ಚಂದ್ರಯಾನ-3 ಗೆ ಸಾಕಷ್ಟು ಬೆಂಬಲ ಸಿಕ್ಕಿತ್ತು. ಸಾಕಷ್ಟು ಪರಿಶ್ರಮ ಹಾಕಿದ್ದು ಫಲ ಕೊಟ್ಟಿದೆ. ಚಂದ್ರಯಾನ-2 ಆದ ನೋವು ಮರೆಯಾಗಿದೆ ಎಂದು ಮಾತಿನ ಮಧ್ಯೆ ಭಾವುಕರಾದರು. ಚಂದ್ರಯಾನ 3 ನಮಗೆ ಹೊಸ ಟಾಸ್ಕ್ ಕೊಟ್ಟಿದೆ. ಮಾನವ ಸಹಿತ ಉಪಗ್ರಹ ಉಡಾವಣೆ ಮಾಡಲು ಇದು ಸಹಕಾರಿಯಾಗಿದೆ. ಪರೋಕ್ಷ, ಪ್ರತ್ಯಕ್ಷವಾಗಿ ಸಹಕರಿಸಿದ ಎಲ್ಲರಿಗೂ ಧನ್ಯವಾದ ಎಂದು ತಿಳಿಸಿದರು.

ಚಂದ್ರ ಬಹಳ ದೂರದಲ್ಲಿಲ್ಲ, ಚಂದ್ರನ ಮೇಲೆ ನಾವಿದ್ದೇವೆ, ಇಸ್ರೋ ಸಾಧನೆಗೆ ಮೋದಿ ಅಭಿನಂದನೆ!

ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿನಂದನೆ: ದೇಶದ ವಿಜ್ಞಾನಿಗಳ ನಿರಂತರ ಪ್ರಯತ್ನ ಮತ್ತು ದಶಕಗಳ ಪರಿಶ್ರಮ ಇಂದು ಫಲನೀಡಿದೆ. ಚಂದ್ರನ ದಕ್ಷಿಣ ಧೃವದಲ್ಲಿ ಚಂದ್ರಯಾನ-3 ರ ವಿಕ್ರಂ ಲ್ಯಾಂಡರ್ ಯಶಸ್ವಿಯಾಗಿ ಇಳಿಯುವ ಮೂಲಕ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಸಾಧನೆಯನ್ನು ಜಗತ್ತು ಬೆರಗುಗಣ್ಣಿನಿಂದ ನೋಡುವಂತೆ ಮಾಡಿದೆ. ಪ್ರತಿಯೊಬ್ಬ ಭಾರತೀಯನಿಗೂ ಇದು ಹೆಮ್ಮೆಯ ಕ್ಷಣ. ಇಂಥದ್ದೊಂದು ಅಸಾಧಾರಣ ಸಾಧನೆಗೈದ ನಾಡಿನ ವಿಜ್ಞಾನಿಗಳಿಗೆ ಅಭಿನಂದನೆಗಳು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಸ್ರೋ ವಿಜ್ಞಾನಿಗಳ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

Follow Us:
Download App:
  • android
  • ios