Asianet Suvarna News Asianet Suvarna News

ಇಸ್ರೋದ ಚಂದ್ರಯಾನ-3 ಕುರಿತಾದ ಮಹಾಕ್ವಿಜ್‌ನಲ್ಲಿ ಭಾಗವಹಿಸಿ 1 ಲಕ್ಷ ಗೆಲ್ಲಿ!

ಚಂದ್ರಯಾನ-3 ಮಹಾಕ್ವಿಜ್‌ನಲ್ಲಿ ಭಾಗವಹಿಸಲು ಅಭ್ಯರ್ಥಿಗಳು MyGov ನಲ್ಲಿ ಅಕೌಂಟ್‌ ರಚಿಸಬೇಕಾಗುತ್ತದೆ. ಭಾಗವಹಿಸುವವರು ಡೌನ್‌ಲೋಡ್ ಮಾಡಬಹುದಾದ ಭಾಗವಹಿಸುವಿಕೆಯ ಪ್ರಮಾಣಪತ್ರವನ್ನು ಸ್ವೀಕರಿಸುತ್ತಾರೆ ಮತ್ತು ರಸಪ್ರಶ್ನೆ ವಿಜೇತರಿಗೆ ನಗದು ಬಹುಮಾನ ನೀಡಲಾಗುತ್ತದೆ.

after Achieves Historic Lunar Landing ISRO Chandrayaan 3 Mahaquiz you can win 1 Lakh san
Author
First Published Sep 5, 2023, 5:24 PM IST

ನವದೆಹಲಿ (ಸೆ.5): ಐತಿಹಾಸಿಕ ಚಂದ್ರಯಾನ ಸಾಫ್ಟ್‌ ಲ್ಯಾಂಡಿಂಗ್‌ ಸಾಹಸ ಮಾಡಿರುವ ಇಸ್ರೋ, ದೇಶದ ಜನರಿಗಾಗಿ ಚಂದ್ರಯಾನ ಕುರಿತಾಗಿ ಇನ್ನಷ್ಟು ಅರಿವಾಗುವ ನಿಟ್ಟಿನಲ್ಲಿ ಚಂದ್ರಯಾನ-3 ಮಹಾಕ್ವಿಜ್‌ಅನ್ನು ಆರಂಭ ಮಾಡಿದೆ. ದೇಶದ ಜನತೆ ಇದರಲ್ಲಿ ಭಾಗವಹಿಸಬಹುದಾಗಿದ್ದು 1 ಲಕ್ಷ ರೂಪಾಯಿಯವರೆಗೆ ನಗದು ಬಹುಮಾನ ಗೆಲ್ಲಬಹುದಾಗಿದೆ. ಚಂದ್ರಯಾನ-3 ಸಾಹಸ ಮಾಡಿದ ಇಸ್ರೋ ವಿಜ್ಞಾನಿಗಳನ್ನು ಉದ್ದೇಶಿಸಿ ಬೆಂಗಳೂರಿನ ಇಸ್ರೋ ಪ್ರಧಾನ ಕಚೇರಿಯಲ್ಲಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಶೀಘ್ರದಲ್ಲಿಯೇ ಚಂದ್ರಯಾನದ ಕುರಿತಾಗಿ ಇನ್ನಷ್ಟು ಮಾಹಿತಿ, ಜ್ಞಾನ ಜನರಿಗೆ ಸಿಗಬೇಕು ಎನ್ನುವ ನಿಟ್ಟಿನಲ್ಲಿ ದೇಶವ್ಯಾಪಿ ಮಹಾಕ್ವಿಜ್‌ಅನ್ನು ಆಯೋಜನೆ ಮಾಡುವುದಾಗಿ ಘೋಷಣೆ ಮಾಡಿದ್ದರು. ಅದರಂತೆ ಇಸ್ರೋದಸಹಾಯದೊಂದಿಗೆ ಮೈಗವ್‌ ವೆಬ್‌ಸೈಟ್‌ನಲ್ಲಿ ಕ್ವಿಜ್‌ಅನ್ನು ಮಂಗಳವಾರದಿಂದ ಆರಂಭಿಸಲಾಗಿದೆ. ಭಾರತ ಸರ್ಕಾರದ ಈ ವೆಬ್‌ಸೈಟ್‌ (https://isroquiz.mygov.in/) "ಚಂದ್ರನ ಅದ್ಭುತಗಳನ್ನು ಅನ್ವೇಷಿಸಲು ಮತ್ತು ನಮ್ಮ ವಿಜ್ಞಾನ ಮತ್ತು ಅನ್ವೇಷಣೆಯ ಪ್ರೀತಿಯನ್ನು ಪ್ರದರ್ಶಿಸಲು" ಭಾರತದ ಅದ್ಭುತ ಬಾಹ್ಯಾಕಾಶ ಪರಿಶೋಧನೆಯ ಪ್ರಯಾಣವನ್ನು ಗೌರವಿಸುವ ಚಂದ್ರಯಾನ-3 ಮಹಾಕ್ವಿಜ್ ಅನ್ನು ಆಯೋಜಿಸಿದೆ.

ಭಾರತದ ಬಾಹ್ಯಾಕಾಶ ಯೋಜನೆಯ ಅತಿದೊಡ್ಡ ಯಶಸ್ಸಿನಲ್ಲಿ ಭಾರತದ ಚಂದ್ರಯಾನ-3 ಬಾಹ್ಯಾಕಾಶ ಯೋಜನೆಯ ವಿಕ್ರಮ್‌ ಲ್ಯಾಂಡರ್‌ ಆಗಸ್ಟ್‌ 23 ರಂದು ಸಂಜೆ 6 ಗಂಟೆ 4 ನಿಮಿಷಕ್ಕೆ ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಲ್ಯಾಂಡರ್‌ ಆಗಿತತು. ಅದರೊಂದಿಗೆ ಚಂದ್ರನ ದಕ್ಷಿಣ ಧ್ರುವಕ್ಕೆ ಕಾಲಿಟ್ಟ ವಿಶ್ವದ ಮೊದಲ ದೇಶ ಎನಿಸಿಕೊಂಡ ಭಾರತ, ಚಂದ್ರನ ಮೇಲೆ ಕಾಲಿರಿಸಿದ ವಿಶ್ವದ ನಾಲ್ಕನೇ ದೇಶ ಎನಿಸಿಕೊಂಡಿತು.

ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಇಸ್ರೋ, ಎಲ್ಲಾ ಭಾರತೀಯ ಪ್ರಜೆಗಳು ಕೂಡ ಈ ಕ್ವಿಜ್‌ನಲ್ಲಿ ಭಾಗವಹಿಸಬಹುದು ಎಂದು ಹೇಳಿದೆ. ಚಂದ್ರಯಾನ-3 ಮಹಾಕ್ವಿಜ್‌ನಲ್ಲಿ ಭಾಗವಹಿಸಲು ಅಭ್ಯರ್ಥಿಗಳು MyGov ನಲ್ಲಿಅಕೌಂಟ್‌ ರಚಿಸಬೇಕಾಗುತ್ತದೆ. ಭಾಗವಹಿಸುವ ಎಲ್ಲರಿಗೂ ಡೌನ್‌ಲೋಡ್‌ ಮಾಡಬಹುದಾದ ಪ್ರಮಾಣಪತ್ರವನ್ನು ಸ್ವೀಕರಿಸಲಿದ್ದಾರೆ. ವಿಜೇತರಿಗೆ ನಗದು ಬಹುಮಾನ ಕೂಡ ನೀಡಲಾಗುತ್ತಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಕ್ವಿಜ್‌ ಕುರಿತು ಮಾತನಾಡಿದ್ದು, "ದೇಶದ ಚಂದ್ರನ ಮಿಷನ್ ಬಗ್ಗೆ ಅನ್ವೇಷಿಸಲು ಸಹಾಯ ಮಾಡುವ ಚಂದ್ರಯಾನ-3 ಮಹಾಕ್ವಿಜ್‌ನಲ್ಲಿ ಭಾಗವಹಿಸಲು ನಾನು ವಿದ್ಯಾರ್ಥಿಗಳನ್ನು ವಿನಂತಿಸುತ್ತೇನೆ" ಎಂದು ಹೇಳಿದ್ದಾರೆ.

ಚಂದ್ರಯಾನ-3 ಮಹಾಕ್ವಿಜ್: ಬಹುಮಾನಗಳು
ವೆಬ್‌ಸೈಟ್‌ನಲ್ಲಿನ ಮಾಹಿತಿಯ ಪ್ರಕಾರ, ಅತ್ಯುತ್ತಮ ಪ್ರದರ್ಶನ ನೀಡಿದವರಿಗೆ 1 ಲಕ್ಷ ರೂಪಾಯಿ ನಗದು ಬಹುಮಾನ ನೀಡಲಾಗುತ್ತದೆ. ಎರಡನೇ ಅತ್ಯುತ್ತಮ ಪ್ರದರ್ಶನ ನೀಡುವವರಿಗೆ 75,000 ರೂಪಾಯಿ ನಗದು ಬಹುಮಾನ. ಮೂರನೇ ಅತ್ಯುತ್ತಮ ಪ್ರದರ್ಶನ ನೀಡುವವರಿಗೆ ರೂ 50,000 ನಗದು ಬಹುಮಾನ ನೀಡಲಾಗುತ್ತದೆ. ಮುಂದಿನ 100 ಉತ್ತಮ ಸಾಧಕರಿಗೆ ತಲಾ 2000 ರೂ ಸಮಾಧಾನಕರ ಬಹುಮಾನ ನೀಡಲಾಗುವುದು. ಮುಂದಿನ 200 ಉತ್ತಮ ಸಾಧಕರಿಗೆ ತಲಾ 1,000 ರೂ.ಗಳ ಸಮಾಧಾನಕರ ಬಹುಮಾನ ನೀಡಲಾಗುತ್ತದೆ.

ಚಂದ್ರಯಾನ-3 ಮಹಾಕ್ವಿಜ್: ನಿಯಮಗಳು 
1. ರಸಪ್ರಶ್ನೆಯು ಎಲ್ಲಾ ಭಾರತೀಯ ನಾಗರಿಕರಿಗೆ ಮುಕ್ತವಾಗಿದೆ.

2. 300 ಸೆಕೆಂಡ್‌ಗಳಲ್ಲಿ 10 ಪ್ರಶ್ನೆಗೆ ಉತ್ತರ ನೀಡುವ ಕ್ವಿಜ್‌ ಇದಾಗಿದೆ. ಯಾವುದೇ ನೆಗೆಟಿವ್ ಮಾರ್ಕಿಂಗ್ ಇರುವುದಿಲ್ಲ.

3. ಭಾಗವಹಿಸುವವರು ಪ್ರೊಫೈಲ್ ಪುಟದಲ್ಲಿ ಎಲ್ಲಾ ಮಾನ್ಯ ಮತ್ತು ಸರಿಯಾದ ವಿವರಗಳನ್ನು ನೀಡಬೇಕು..ಇದೇ ಮಾಹಿತಿಯನ್ನು ಮುಂದಿನ ಸಂವಹನಕ್ಕಾಗಿ ಬಳಸಲಾಗುತ್ತದೆ. ಅಪೂರ್ಣ ಪ್ರೊಫೈಲ್ ವಿಜೇತರಾಗಲು ಅರ್ಹತೆ ಹೊಂದಿರುವುದಿಲ್ಲ.

Chandrayaan-3: ಗುಡ್‌ನೈಟ್‌ ಹೇಳಿದ ವಿಕ್ರಮ್‌ ಲ್ಯಾಂಡರ್‌, ಪ್ರಗ್ಯಾನ್‌, ಇನ್ನು ಸೆ.22ರ ಕುತೂಹಲ!

4. ರಸಪ್ರಶ್ನೆಯನ್ನು ಪ್ರಾರಂಭಿಸುವ ಮೊದಲು ಮೊಬೈಲ್ ಸಂಖ್ಯೆಯನ್ನು ಮೌಲ್ಯೀಕರಿಸಲು ಒನ್ ಟೈಮ್ ಪಾಸ್‌ವರ್ಡ್ (OTP) ಕಳುಹಿಸಲಾಗುವುದು ಮತ್ತು ಅಂತರರಾಷ್ಟ್ರೀಯ ಬಳಕೆದಾರರು ಮಾನ್ಯವಾದ ಇಮೇಲ್ ಐಡಿಯನ್ನು ಒನ್ ಟೈಮ್ ಪಾಸ್‌ವರ್ಡ್ (OTP) ಆಗಿ ಬಳಸಿಕೊಂಡು ಆಡಬಹುದು. ಇಮೇಲ್ ಐಡಿಯನ್ನು ಮೌಲ್ಯೀಕರಿಸಲು ಕಳುಹಿಸಲಾಗುವುದು.

Chandrayaan-3: ಚಂದ್ರನ ಮೇಲೆ ಮತ್ತೊಮ್ಮೆ ಐತಿಹಾಸಿಕ ಸಾಫ್ಟ್‌ ಲ್ಯಾಂಡಿಂಗ್‌ ಮಾಡಿದ ವಿಕ್ರಮ್‌ ಲ್ಯಾಂಡರ್‌!

5. ISRO ಮತ್ತು MyGov ಯಾವುದೇ ಭಾಗವಹಿಸುವವರ ಭಾಗವಹಿಸುವಿಕೆ ಅಥವಾ ಸಹಭಾಗಿತ್ವವು ರಸಪ್ರಶ್ನೆಗೆ ಹಾನಿಕಾರಕವಾಗಿದ್ದರೆ ಅವರನ್ನು ಅನರ್ಹಗೊಳಿಸಲು ಅಥವಾ ಭಾಗವಹಿಸುವಿಕೆಯನ್ನು ನಿರಾಕರಿಸಲು ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸುತ್ತದೆ. ಸ್ವೀಕರಿಸಿದ ಮಾಹಿತಿಯು ಅಸ್ಪಷ್ಟ, ಅಪೂರ್ಣ, ಹಾನಿಗೊಳಗಾದ, ಸುಳ್ಳು ಅಥವಾ ತಪ್ಪಾಗಿದ್ದರೆ ಭಾಗವಹಿಸುವಿಕೆಯು ಅನೂರ್ಜಿತವಾಗಿರುತ್ತದೆ.

Follow Us:
Download App:
  • android
  • ios