Asianet Suvarna News Asianet Suvarna News

ಗಗನಯಾನ ಪ್ಯಾರಾಚೂಟ್‌ ಲ್ಯಾಂಡಿಂಗ್‌ ಪರೀಕ್ಷೆ ಯಶಸ್ವಿ

: ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರದ (ಇಸ್ರೋ) ಮಹತ್ವಾಕಾಂಕ್ಷಿ ಯೋಜನೆಯಾದ ಗಗನಯಾನಕ್ಕೆ ಸಂಬಂಧಿಸಿದಂತೆ ‘ಏಕೀಕೃತ ಮುಖ್ಯ ಪ್ಯಾರಾಚೂಟ್‌ ಏರ್‌ಡ್ರಾಪ್‌ ಪರೀಕ್ಷೆ’(ಐಎಂಎಟಿ)ಯನ್ನು ಶುಕ್ರವಾರ ಯಶಸ್ವಿಯಾಗಿ ನಡೆಸಿದೆ.

Aeronautical parachute landing test successful, Ensuring safe landing of astronauts akb
Author
First Published Nov 20, 2022, 9:02 AM IST

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರದ (ಇಸ್ರೋ) ಮಹತ್ವಾಕಾಂಕ್ಷಿ ಯೋಜನೆಯಾದ ಗಗನಯಾನಕ್ಕೆ ಸಂಬಂಧಿಸಿದಂತೆ ‘ಏಕೀಕೃತ ಮುಖ್ಯ ಪ್ಯಾರಾಚೂಟ್‌ ಏರ್‌ಡ್ರಾಪ್‌ ಪರೀಕ್ಷೆ’(ಐಎಂಎಟಿ)ಯನ್ನು ಶುಕ್ರವಾರ ಯಶಸ್ವಿಯಾಗಿ ನಡೆಸಿದೆ. ಬಾಹ್ಯಾಕಾಶಯಾನ ಕೈಗೊಳ್ಳುವ ಗಗನಯಾತ್ರಿಗಳಿರುವ ಕ್ಯಾಪ್ಯೂಲ್‌ ಅನ್ನು ಸುರಕ್ಷಿತವಾಗಿ ಭೂಮಿಗೆ ಇಳಿಸುವ ಈ ಪ್ರಯೋಗದಲ್ಲಿ ಇಸ್ರೋ ಯಶಸ್ಸು ಸಾಧಿಸಿದಂತಾಗಿದೆ.

ಇಸ್ರೋದ ವಿಕ್ರಮ್‌ ಸಾರಾಭಾಯಿ ಬಾಹ್ಯಾಕಾಶ ಕೇಂದ್ರ (Vikram Sarabhai Space Center) ಈ ಪರೀಕ್ಷೆಯನ್ನು ಉತ್ತರ ಪ್ರದೇಶದ (Uttar Pradesh') ಝಾನ್ಸಿ ಜಿಲ್ಲೆಯಲ್ಲಿರುವ (Jhansi district) ಬಬೀನಾ ಫೀಲ್ಡ್‌ ಫೈರ್‌ ರೇಂಜ್‌ನಲ್ಲಿ (Babina Field Fire Range) ಕೈಗೊಂಡಿತ್ತು. ಇದರಲ್ಲಿ ಯಶಸ್ಸು ಸಾಧಿಸುವ ಮೂಲಕ ಗಗನಯಾನ ಯೋಜನೆಯ ಬಗ್ಗೆ ಇದ್ದ ಪ್ರಮುಖ ಆತಂಕವನ್ನು ಇಸ್ರೋ ದೂರ ಮಾಡಿದೆ. ಈ ಮೂಲಕ ಬಾಹ್ಯಾಕಾಶ ಪ್ರಯೋಗಗಳಲ್ಲಿ ಮತ್ತೊಂದು ಮೈಲಿಗಲ್ಲು ಸಾಧಿಸಿದೆ.

ಗಗನಯಾತ್ರಿಗಳನ್ನು(astronauts)  ಹೊತ್ತಿರುವ ಕ್ಯಾಪ್ಸೂಲ್‌ಗೆ 3 ಪ್ಯಾರಾಚೂಟ್‌ಗಳನ್ನು ಅಳವಡಿಸಲಾಗಿದ್ದು, ಇವು ಸುರಕ್ಷಿತವಾಗಿ ಕ್ಯಾಪ್ಸೂಲನ್ನು ಭೂಮಿಗೆ ಇಳಿಸಲು ಸಹಾಯ ಮಾಡುತ್ತವೆ. ಕ್ಯಾಪ್ಸೂಲ್‌ (capsule) ಅನ್ನು ಇಳಿಸುವ ಸಂದರ್ಭದಲ್ಲಿ ಒಂದು ಪ್ಯಾರಾಚೂಟ್‌ ತೆರೆದುಕೊಳ್ಳಲು ವಿಫಲವಾದರೂ ಸಹ ಉಳಿದ ಪ್ಯಾರಾಚೂಟ್‌ಗಳು ಸುರಕ್ಷಿತವಾಗಿ ಕ್ಯಾಪ್ಸೂಲನ್ನು ಲ್ಯಾಂಡ್‌ ಮಾಡಲಿವೆ ಎಂದು ಇಸ್ರೋ ಹೇಳಿದೆ.

Skyroot Aerospace: ದೇಶದ ಮೊದಲ ಖಾಸಗಿ ರಾಕೆಟ್‌ ವಿಕ್ರಮ್‌ ಎಸ್‌ ನಭಕ್ಕೆ ಯಶಸ್ವಿ ಉಡಾವಣೆ!

Artemis mission: 50 ವರ್ಷ ಬಳಿಕ ಮತ್ತೆ ಚಂದ್ರಯಾನದ ಕನಸಿಗೆ ಅಮೆರಿಕದ ನಾಸಾ ಯಶಸ್ವಿ ಮುನ್ನುಡಿ

Follow Us:
Download App:
  • android
  • ios