Artemis mission: 50 ವರ್ಷ ಬಳಿಕ ಮತ್ತೆ ಚಂದ್ರಯಾನದ ಕನಸಿಗೆ ಅಮೆರಿಕದ ನಾಸಾ ಯಶಸ್ವಿ ಮುನ್ನುಡಿ

50 ವರ್ಷ ಬಳಿಕ ಮತ್ತೆ ನಾಸಾ ಚಂದ್ರಯಾನ ಯೋಜನೆಗೆ ಯಶಸ್ವಿ ಮುನ್ನುಡಿ ಇಟ್ಟಿದೆ. ಒರಾಯನ್‌ ಕ್ಯಾಪ್ಸೂಲ್‌ ಹೊತ್ತ ಆರ್ಟಿಮಿಸ್‌ 1 ರಾಕೆಟ್‌ ಯಶಸ್ವಿ ಉಡ್ಡಯನ ಆಗಿದ್ದು, 25 ದಿನ ಚಂದ್ರನ ಸುತ್ತಲಿರುವ ಕ್ಯಾಪ್ಸೂಲ್‌ ಡಿಸೆಂಬರ್‌ 11ರಂದು ಧರೆಗೆ ವಾಪಸ್‌ ಬರಲಿದೆ. 

artemis mission nasas mightiest rocket lifts off 50 years after apollo ash

ಕೇಪ್‌ ಕನವೆರಲ್‌: ಮತ್ತೊಮ್ಮೆ ಮಾನವ ಸಹಿತ ಚಂದ್ರಯಾನ (Moon Mission) ಕೈಗೊಳ್ಳುವ ತನ್ನ ಕನಸಿಗೆ ಅಮೆರಿಕದ ಬಾಹ್ಯಾಕಾಶ ಸಂಸ್ಥೆಯಾದ ನಾಸಾ (NASA) ಬುಧವಾರ ಯಶಸ್ವಿ ಮುನ್ನುಡಿ ಬರೆದಿದೆ. 2024ಕ್ಕೆ ಮಾನವ ಸಹಿತ ಚಂದ್ರಯಾನಕ್ಕೆ ನಾಸಾ ಉದ್ದೇಶಿಸಿದ್ದು, ಇದಕ್ಕೆ ಪೂರ್ವಭಾವಿಯಾಗಿ ಬುಧವಾರ ಅದು, ಒರಾಯನ್‌ ಕ್ಯಾಪ್ಸೂಲ್‌ (Orion Capsule) ಅನ್ನು ಚಂದ್ರನ (Moon) ಕಕ್ಷೆಗೆ ಕಳುಹಿಸಿದೆ. ಈ ಕ್ಯಾಪ್ಸೂಲ್‌ ಅನ್ನು ಜಗತ್ತಿನ ಅತ್ಯಂತ ಶಕ್ತಿಶಾಲಿ ರಾಕೆಟ್‌ ಎಂಬ ಹಿರಿಮೆ ಹೊಂದಿರುವ ‘ಆರ್ಟೆಮಿಸ್‌ 1’ (Artemis - 1) ಯಶಸ್ವಿಯಾಗಿ ಹೊತ್ತೊಯ್ದು ಕಕ್ಷೆಯತ್ತ ಕಳುಹಿಸಿಕೊಟ್ಟಿದೆ. ನಾಸಾ ಹೀಗೆ ಚಂದ್ರಯಾನಕ್ಕೆ ಕೈಹಾಕಿರುವುದು 50 ವರ್ಷಗಳ ಬಳಿಕ ಎಂಬುದು ವಿಶೇಷ.

ಮಧ್ಯಾಹ್ನ 12.17ಕ್ಕೆ ನಭಕ್ಕೆ:
‘ಆರ್ಟೆಮಿಸ್‌’ ಯೋಜನೆಯ ಮೊದಲ ಭಾಗವಾಗಿ (ಆರ್ಟೆಮಿಸ್‌-1 ಯೋಜನೆ) 3 ಟೆಸ್ಟ್‌ ಡಮ್ಮಿಗಳಿರುವ ‘ಒರಾಯನ್‌ ಕ್ಯಾಪ್ಸೂಲ್‌’ ಅನ್ನು ಒಳಗೊಂಡ ದೈತ್ಯ ಬಾಹ್ಯಾಕಾಶ ಉಡ್ಡಯನ ರಾಕೆಟ್‌ನಲ್ಲಿ ಇಡಲಾಗಿತ್ತು. ಈ ರಾಕೆಟ್‌ ಭಾರತೀಯ ಕಾಲಮಾನ ಬುಧವಾರ ಮಧ್ಯಾಹ್ನ 12.17ಕ್ಕೆ ನಭಕ್ಕೆ ಹಾರಿತು. ಕ್ಯಾಪ್ಸೂಲ್‌ ಅನ್ನು ಹೊತ್ತೊಯ್ದ ಸ್ಪೇಸ್‌ ಲಾಂಚ್‌ ಸಿಸ್ಟಮ್‌ (Space Launch System) (ಎಸ್‌ಎಲ್‌ಎಸ್‌) ರಾಕೆಟ್‌, 32 ಅಂತಸ್ತಿನಷ್ಟು ಎತ್ತರವಿದ್ದು ವಿಶ್ವದ ಅತಿ ಶಕ್ತಿಶಾಲಿ ರಾಕೆಟ್‌ ಎನ್ನಿಸಿಕೊಂಡಿದೆ.

ಇದನ್ನು ಓದಿ: ನಾಸಾ ಚಂದ್ರಯಾನಕ್ಕೆ ತಾಂತ್ರಿಕ ದೋಷ: ಆರ್ಟೆಮಿಸ್‌ 1 ಯೋಜನೆ ಮುಂದೂಡಿಕೆ

25 ದಿನ ಸಂಚಾರ:
ಬುಧವಾರ ಉಡ್ಡಯನಗೊಂಡ ಒರಾಯನ್‌ ಕ್ಯಾಪ್ಯೂಲ್‌ 25 ದಿನಗಳ ಕಾಲ ಚಂದ್ರನ ಕಕ್ಷೆಯಲ್ಲಿ ಸುತ್ತಿ ಡಿ. 11ರಂದು ತನ್ನ ಯಾತ್ರೆ ಪೂರ್ಣಗೊಳಿಸಿ ಪೆಸಿಫಿಕ್‌ ಸಾಗರದಲ್ಲಿ ಬಂದು ಬೀಳಲಿದೆ. ದು ಮಾನವಸಹಿತ ಚಂದ್ರಯಾನವಲ್ಲ. ಬದಲಾಗಿ ಮಾನವ ರಹಿತ ಚಂದ್ರಯಾನ. ಈಗ ಅಧ್ಯಯನಕ್ಕೆ ಮಾತ್ರ 3 ‘ಟೆಸ್ಟ್‌ ಡಮ್ಮಿ ಚಂದ್ರಯಾನಿ’ಗಳನ್ನು (ಪ್ರತಿಕೃತಿಗಳನ್ನು) ಇರಿಸಿ ಕಳಿಸಲಾಗಿದೆ. ಇದರ ಯಶಸ್ಸನ್ನು ಅರಿತುಕೊಂಡು ಮುಂದಿನ ದಿನಗಳಲ್ಲಿ ಆರ್ಟೆಮಿಸ್‌ 2 ಹಾಗೂ 3 ಹೆಸರಿನಲ್ಲಿ ಮಾನವಸಹಿತ ಯಾನ ಕೈಗೊಳ್ಳುವ ಉದ್ದೇಶ ನಾಸಾಗಿದೆ.

50 ವರ್ಷ ಬಳಿಕ:
ಈ ಹಿಂದೆ ನಾಸಾ, ಅಪೋಲೋ ಯಾನದ ಹೆಸರಿನಲ್ಲಿ 1969 ಹಾಗೂ 1972ರಲ್ಲಿ ಮಾನವಸಹಿತ ಚಂದ್ರಯಾನ ಕೈಗೊಂಡಿತ್ತು. ಇದಾಗಿ ಈಗ 50 ವರ್ಷ ಆಗುತ್ತಿದ್ದು, ಅರ್ಧ ಶತಕದ ಬಳಿಕ ಮತ್ತೆ ಸಾಹಸಕ್ಕೆ ಕೈಹಾಕುತ್ತಿದೆ. ಈ ಯೋಜನೆಗೆ ಆರ್ಟೆಮಿಸ್‌ 1, 2 ಹಾಗೂ 3 ಎಂದು 3 ಹಂತದ ಹೆಸರಿಟ್ಟಿದೆ.

ಇದನ್ನೂ ಓದಿ: NASA ಪ್ರಾಜೆಕ್ಟ್‌ಗೆ ಆಯ್ಕೆಯಾದ ಛತ್ತೀಸ್‌ಗಢದ 16 ವರ್ಷದ ಬುಡಕಟ್ಟು ಬಾಲಕಿ

ಯಾನದ ಉದ್ದೇಶವೇನು?:
50 ವರ್ಷ ಹಿಂದೆ ಚಂದ್ರಯಾನವನ್ನು ನಾಸಾ ಕೈಗೊಂಡಿತ್ತಾದರೂ, ಆಗ ತಂತ್ರಜ್ಞಾನ ಇಷ್ಟುಅಭಿವೃದ್ಧಿ ಆಗಿರಲಿಲ್ಲ. ಚಂದ್ರನ ಮೇಲ್ಭಾಗದಿಂದ ಯಾನಿಗಳು ತಂದ ವಸ್ತುಗಳನ್ನು ಅಧ್ಯಯನ ನಡೆಸಿದ್ದರೂ, ಅಧ್ಯಯನಕ್ಕೆ ಬಳಸಿದ ತಂತ್ರಜ್ಞಾನ ಹಳೆಯದಾಗಿದ್ದರಿಂದ ಅಷ್ಟೊಂದು ನಿಖರ ಫಲಿತಾಂಶ ಲಭ್ಯವಾಗಿರಲಿಲ್ಲ. ಹಾಗಾಗಿ ಈಗ ಸುಧಾರಿತ ತಂತ್ರಜ್ಞಾನದ ಮೂಲಕ ಚಂದ್ರನ ಅಧ್ಯಯನ ನಡೆಸುವ ಉದ್ದೇಶ ನಾಸಾಗಿದೆ. ಇದುವರೆಗೂ ವಿಶ್ವದ ಅರಿವಿಗೆ ಬಾರದ ಚಂದ್ರನ ದಕ್ಷಿಣ ಧ್ರುವದತ್ತ ತೆರಳಿ ಅಧ್ಯಯನ ನಡೆಸಲಿದೆ.

ಇದನ್ನೂ ಓದಿ: NASA ರಾಕೆಟ್‌ ಡಿಕ್ಕಿ ಹೊಡೆಸಿ ಕ್ಷುದ್ರಗ್ರಹದ ದಿಕ್ಕೇ ಬದಲು: ಅಮೆರಿಕ ಅಪೂರ್ವ ಸಾಹಸ

Latest Videos
Follow Us:
Download App:
  • android
  • ios