ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಖಾನ್‌ ಪುತ್ರ ಜಾಯೀದ್ ಖಾನ್‌ 'ಬನಾರಸ್' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಕನ್ನಡ ಸಿನಿಮಾ ಅಂದ್ಮೇಲೆ ಕನ್ನಡದಲ್ಲಿ ಮಾತನಾಡಲೇ ಬೇಕು. ಹಾಗಾಗಿ ಜಾಯೀದ್ ಖಾನ್ ಹೀರೋ ಆಗಲು ಮಾಡಿಕೊಂಡ ತಯಾರಿ ಹೇಗಿದೆ ಗೊತ್ತಾ? ನಾಗಶೇಖರ್ ಚಿತ್ರಕ್ಕೆ ತಮನ್ನಾ ಅಥವಾ ಪೂಜೆ ಹೆಗ್ಡೆ ಬರೋದು ಕನ್ಫಾರ್ಮ್?

ಚಿತ್ರರಂಗಕ್ಕೆ ಕಾಲಿಟ್ಟ ಆರಂಭದಲ್ಲಿ ಜಾಯೀದ್ ಕನ್ನಡವನ್ನು ಸ್ಪಷ್ಟವಾಗಿ ಮೊದಲು ಮಾತನಾಡುತ್ತಿರಲಿಲ್ಲವಂತೆ. ಏನಾದರೂ ಮಾಡಿ ಕನ್ನಡದಲ್ಲಿ ಪರ್ಫೆಕ್ಟ್‌ ಆಗಬೇಕೆಂದು ರಂಗಕರ್ಮಿ ಗೌರಿದತ್ತು ಅವರ ಬಳಿ ಸುಮಾರು 8 ತಿಂಗಳ ಕಾಲ ತರಬೇತಿ ಪಡೆದುಕೊಂಡಿದ್ದಾರೆ. ಕನ್ನಡ ಮಾತನಾಡುವವರ ಜೊತೆ ಸ್ನೇಹ ಮಾಡಿ ಅವರೊಟ್ಟಿಗೆ ಕನ್ನಡದಲ್ಲಿ ಮಾತನಾಡಿ, ಈಗ ಪರ್ಫೆಕ್ಟ್ ಆಗಿದ್ದಾರಂತೆ. ಜಾಯೀದ್ ಶ್ರಮವನ್ನು ಬನಾರಸ್ ನಿರ್ದೇಶಕ ಜಯತೀರ್ಥ ಕೂಡ ಮೆಚ್ಚಿಕೊಂಡಿದ್ದಾರಂತೆ, ಈ ವಿಚಾರದ ಬಗ್ಗೆ ಸ್ವತಃ ಜಾಯೀದ್ ಖಾಸಗಿ ಸಂದರ್ಶವೊಂದರಲ್ಲಿ ಹಂಚಿಕೊಂಡಿದ್ದಾರೆ. 

ಜಮೀರ್‌ ಅಹಮದ್‌ ಪುತ್ರ ಜಾಯೇದ್‌ ನಟನೆಯ ಚಿತ್ರ ಸದ್ಯದಲ್ಲೇ ತೆರೆಗೆ

ಬನಾಸರ್‌ ಸಿನಿಮಾ ಶೇ.90 ಚಿತ್ರೀಕರಣ ಮುಗಿಸಿದೆ. ಈ ನಡುವೆ ಜಾಯೀದ್ ನಿರ್ದೇಶಕ ನಾಗಶೇಖರ್‌ ಬಳಿ ಮತ್ತೊಂದು ಚಿತ್ರದ ಬಗ್ಗೆ ಮಾತುಕತೆ ಮಾಡುತ್ತಿದ್ದಾರೆ. ಚಿತ್ರಕತೆ ತುಂಬಾನೇ ವಿಭಿನ್ನವಾಗಿದ್ದ ಕಾರಣ ಆಫ್ರಿಕಾ ಹಾಗೂ ಅಮೆರಿಕದಲ್ಲಿ ಚಿತ್ರೀಕರಣ ಮಾಡಬೇಕೆಂಬುದು ನಾಗಶೇಖರ್ ಕನಸಾಗಿದೆ. ನಾಯಕಿಯಾಗಿ ತಮನ್ನಾ ಹಾಗೂ ಪೂಜೆ ಹೆಗ್ಡೆ ಕರೆತರಲು ಮಾತುಕತೆ ನಡೆಯುತ್ತಿದ್ದು, ಖಂಡಿತವಾಗಿಯೂ ಜಾಯೀದ್‌ಗೆ ಬಿಗ್ ಓಪನಿಂಗ್ ಸಿಗುವುದರಲ್ಲಿ ಅನುಮಾವಿಲ್ಲ.