ಯೂಟ್ಯೂಬ್‌ ಉತ್ತಮ ಸಾಮಾಜಿಕ ಜಾಲತಾಣವಾಗಿದ್ದು ಅನೇಕರು ತಮ್ಮ ಚಾನಲ್‌ನಲ್ಲಿ ವಿಭಿನ್ನ ವಿಚಾರಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ. ಇನ್ನೂ ಕೆಲವರು ಅದೇ ಚಾನೆಲ್‌ನಲ್ಲಿ ಅವರಿವರ ಬಗ್ಗೆ ಮಾತನಾಡಿಕೊಂಡು ವಿವಾದದಲ್ಲಿ ಸಿಲುಕಿಕೊಂಡು ಫಾಲೋವರ್ಸ್‌ನನ್ನು ಗಿಟ್ಟಿಸಿಕೊಳ್ಳುತ್ತಾರೆ.

ವನಿತಾ ವಿಜಯ್‌ಕುಮಾರ್‌-ಪೀಟರ್‌ ಮದುವೆ; ಆನ್‌ಲೈನ್‌ನಲ್ಲಿ ಮಾಜಿ-ಭಾವಿ ಪತ್ನಿಯರ ಜಗಳ!

ಹೌದು! 70 ಸಾವಿರಕ್ಕೂ ಹೆಚ್ಚು ಫಾಲೋವರ್ಸ್‌ ಹೊಂದಿರುವ ಯೂಟ್ಯೂಬರ್‌ ಸೂರ್ಯದೇವಿ ತಮ್ಮ ಚಾನೆಲ್‌ನಲ್ಲಿ ಇತ್ತಿಚಿಗೆ ವೈವಾಹಿಕ ಬದುಕಿಗೆ ಕಾಲಿಟ್ಟ ವನಿತಾವಿಜಯ್‌ಕುಮಾರ್‌ ಬಗ್ಗೆ ಮಾತನಾಡಿ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ. ಇದರಿಂದ ಕಂಬಿ ಎಣಿಸುವ ಪರಿಸ್ಥಿತಿ ಎದುರಾಗಿದೆ.

ಚಿತ್ರರಂಗದಲ್ಲೇ ತಂತ್ರಜ್ಞನಾಗಿ ಕೆಲಸ ಮಾಡುತ್ತಿರುವ ಪೀಟರ್‌ ಪೌಲ್‌ ಜೊತೆ ದಾಂಪತ್ಯ ಜೀವನಕ್ಕೆ  ನಂತರ ವನಿತಾ ಸುತ್ತಾ ವಿವಾದಗಳು ಹೆಚ್ಚಾಗುತ್ತಿದೆ ಅದರಲ್ಲೂ ಪೀಟರ್ ತಮ್ಮ ಮಾಜಿ ಪತ್ನಿಗೆ ಡಿವೂರ್ಸ್‌ ಕೊಡದೇ ವನಿತಾರನ್ನು ಮದುವೆಯಾಗಿರುವುದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಸೆಲೆಬ್ರಿಟಿಗಳು ತಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸುತ್ತಿದ್ದಾರೆ.  ಈ ವಿಚಾರ ಬಗ್ಗೆ ಯೂಟ್ಯೂಬರ್‌ ಸೂರ್ಯದೇವಿ ಕೂಡ ಬಾಯಿಗೆ ಬಂದ ಹಾಗೆ ಮಾತನಾಡಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ವನಿತಾ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಸೂರ್ಯದೇವಿಯನ್ನು ಬಂಧಿಸಿದ ನಂತರ ಸೂರ್ಯದೇವಿಯೂ ವನಿತಾ ವಿರುದ್ಧ ದೂರು ನೀಡಿದ್ದಾರೆ.

ಲಾಕ್‌ಡೌನ್‌ನಲ್ಲಿ ಅದ್ಧೂರಿಯಾಗಿ ಮೂರನೇ ಮದುವೆಯಾದ ನಟಿ; ಫೋಟೋ ವೈರಲ್!

'ಸೂರ್ಯದೇವಿ ವಿಡಿಯೋದಲ್ಲಿ ಮನಬಂದಂತೆ ಮಾತನಾಡಿದ್ದಾರೆ, ನನ್ನ ವೈಯಕ್ತಿಕ  ಜೀವನದ ಬಗ್ಗೆ ಈಕೆ ಅನೇಕ ವಿಚಾರಗಳನ್ನು ಮಾತನಾಡಿದ್ದಾರೆ. ಅದರಿಂದ ನನ್ನ ಕುಟುಂಬಸ್ಥರ ಮಾನಸಿಕ ಆರೋಗ್ಯ ಹದಗೆಟ್ಟಿದೆ' ಎಂದು ಹೇಳಿದ್ದಾರೆ. ಇನ್ನು ವಿಡಿಯೋವನ್ನು ತಮ್ಮ ವಾಲ್‌ ಮೇಲೆ ಶೇರ್ ಮಾಡಿಕೊಂಡು 'ಎಲ್ಲವನ್ನೂ ಆ ದೇವರು ನೋಡಿಕೊಳ್ಳುತ್ತಾನೆ' ಎಂದು ಬರೆದುಕೊಂಡಿದ್ದಾರೆ.