Asianet Suvarna News Asianet Suvarna News

9ನೇ ತರಗತಿಯಲ್ಲಿ 4 ಸಿನಿಮಾ ಘೋಷಣೆ ಮಾಡಿದ ಯುವ ನಟ ಅಕಾಶ್‌!

ಅತಿ ಕಡಿಮೆ ಸಮಯದಲ್ಲಿ ಹೆಚ್ಚೆಚ್ಚು ಅವಕಾಶಗಳು ಪಡೆಯುತ್ತಿರುವ ಯುವ ನಟ ಆಕಾಶ್. ನಾಲ್ಕು ಚಿತ್ರಗಳು ಯಾವುದು?

Young actor Akash announces 4 film on his birthday at age of 9 vcs
Author
First Published Jan 10, 2024, 10:49 AM IST

ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಸದ್ದು ಮಾಡಲು ಹೊರಟಿರುವ ಯುವ ನಟ ಆಕಾಶ್‌. ಇನ್ನೂ 9ನೇ ತರಗತಿಯಲ್ಲಿ ಓದುತ್ತಿರುವ ಈ ಯುವ ಪ್ರತಿಭೆ ಇತ್ತೀಚೆಗೆ ತೆರೆಕಂಡ ‘ಫೈಟರ್’ ಸಿನಿಮಾದಲ್ಲಿ ವಿನೋದ್ ಪ್ರಭಾಕರ್ ಅವರ ಚಿಕ್ಕ ವಯಸ್ಸಿನ ಪಾತ್ರವನ್ನು ಸಮರ್ಥವಾಗಿ ನಿಭಾಯಿಸಿದ್ದರು. ಇದೀಗ ಆಕಾಶ್‌ ಜನ್ಮದಿನ (ಜ.9) ದಂದು ಅವರ ನಟನೆಯ ನಾಲ್ಕೈದು ಸಿನಿಮಾಗಳ ಘೋಷಣೆಯಾಗಿದೆ. ಮೂಲಕ ಅತಿ ಕಡಿಮೆ ಸಮಯದಲ್ಲೇ ಹೆಚ್ಚೆಚ್ಚು ಅವಕಾಶಗಳು ಈ ನಟನನ್ನು ಹುಡುಕಿಕೊಂಡು ಬರುತ್ತಿವೆ.

ಸ್ಯಾಂಡಲ್‌ವುಡ್‌ನಲ್ಲಿ ಮಿಂಚುವ ಕನಸು ಕಾಣುತ್ತಿರುವ ಇವರು ನಟನೆಯ ಪಟ್ಟುಗಳನ್ನು ಕರಗತ ಮಾಡಿಕೊಂಡಿದ್ದಾರೆ. ಅಭಿನಯ, ಸಾಹಸ, ನೃತ್ಯ ಸೇರಿದಂತೆ ಕ್ಯಾಮೆರಾ ಮುಂದೆ ನಿಲ್ಲಲು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.

ಸಂಗೀತ ನಿರ್ದೇಶಕ ಗುರುಕಿರಣ್ ಮನೆಯಲ್ಲಿ ಕಳ್ಳತನ; ರೂಮ್‌ನಲ್ಲಿದ್ದ ಹಣ ಮಾಯಾ!

ಮುನೀಂದ್ರ ಕೆ ಪುರ ಆಕಾಶ್‌ಗಾಗಿ ಸಿನಿಮಾ ನಿರ್ಮಿಸಲು ಮುಂದಾಗಿದ್ದಾರೆ. ಸದ್ಯ ಸ್ಕ್ರಿಪ್ಟ್ ಹಂತದಲ್ಲಿರುವ ಈ ಸಿನಿಮಾ ಸದ್ಯದಲ್ಲೇ ಸೆಟ್ಟೇರಲಿದೆ. ಸಿ.ಎಸ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಪಕ ನವೀನ್ ಇದೇ ವರ್ಷ ಆಕಾಶ್‌ ನಟನೆಯ ಸಿನಿಮಾ ನಿರ್ಮಾಣ ಮಾಡಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಇನ್ನೊಬ್ಬ ನಿರ್ಮಾಪಕ ಜಗದೀಶ್ ಎನ್ ಚೇರ್ಮನ್ ನಿರ್ಮಾಣದಲ್ಲಿ ಆಕಾಶ್ ನಟನೆಯ ಹೊಸ ಸಿನಿಮಾ ಕುರಿತ ಸುದ್ದಿ ಶೀಘ್ರ ಹೊರಬೀಳಲಿದೆ. ಇವುಗಳ ಜೊತೆಗೆ ಆಕಾಶ್ ಎಂಟರ್‌ಪ್ರೈಸಸ್ ಲಾಂಛನದಲ್ಲಿ ಸೋಮಶೇಖರ್ ಕಟ್ಟಿಗೇನಹಳ್ಳಿ ಸಂಕ್ರಾಂತಿ ಹಬ್ಬದ ಬಳಿಕ ಸಿನಿಮಾವನ್ನು ದೊಡ್ಡ ಮಟ್ಟದಲ್ಲಿ ಶುರು ಮಾಡಲು ಯೋಜನೆ ಹಾಕಿಕೊಂಡಿದ್ದಾರೆ.

ತಪ್ಪದೆ ಈ ಎರಡನ್ನು ಫಾಲೋ ಮಾಡಿದರೆ ಸಣ್ಣ ಆಗೋದು ಗ್ಯಾರಂಟಿ ಅಂತಾರೆ 'ಸತ್ಯ' ಸೀರಿಯಲ್ ಕೀರ್ತನಾ!

ತಮ್ಮ ಕನಸುಗಳ ಬಗ್ಗೆ ಹಂಚಿಕೊಳ್ಳುವ ಆಕಾಶ್‌, ‘ಸಿನಿಮಾ ಬಗ್ಗೆ ಚಿಕ್ಕಂದಿನಿಂದಲೂ ತುಂಬಾ ಆಸಕ್ತಿ ಇತ್ತು. ಅದಕ್ಕೆ ನನ್ನ ಅಪ್ಪ ಅಮ್ಮನಿಂದ ತುಂಬಾ ಸಹಕಾರ ಸಿಕ್ಕಿದೆ. ಥ್ರಿಲ್ಲರ್ ಮಂಜು ಮಾಸ್ಟರ್ ಸ್ಟಂಟ್ ಕಲಿಸುತ್ತಿದ್ದಾರೆ. ಲಕ್ಕಿ ಶಂಕರ್ ಸರ್ ಆಕ್ಟಿಂಗ್ ಕಲಿಸುತ್ತಿದ್ದಾರೆ. ಹಾಗೆಯೇ ಡಾನ್ಸ್, ವರ್ಕೌಟ್ ಪ್ರಾಕ್ಟೀಸನ್ನೂ ಮಾಡುತ್ತಿದ್ದೇನೆ. ಒಂದೆರಡು ಕಥೆಗಳನ್ನೂ ಕೇಳಿದ್ದೀನಿ. ಈಗಾಗಲೇ ನಾಲ್ಕೈದು ಸಿನಿಮಾ ಅನೌನ್ಸ್ ಆಗುವ ಹಂತಕ್ಕೆ ಬಂದಿರುವುದು ಖುಷಿ ತಂದಿದೆ. ಈ ವರ್ಷ ನನ್ನ ಹುಟ್ಟು ಹಬ್ಬ ತುಂಬಾ ಸ್ಪೆಷಲ್ ಎನ್ನಬಹುದು. ನಾನು ಓದಿನ ಜತೆಗೆ ಅಭಿನಯವನ್ನೂ ಮುಂದುವರಿಸಿಕೊಂಡು ಹೋಗುತ್ತೇನೆ’ ಎನ್ನುತ್ತಾರೆ.

Follow Us:
Download App:
  • android
  • ios