Asianet Suvarna News Asianet Suvarna News

ಸಂಗೀತ ನಿರ್ದೇಶಕ ಗುರುಕಿರಣ್ ಮನೆಯಲ್ಲಿ ಕಳ್ಳತನ; ರೂಮ್‌ನಲ್ಲಿದ್ದ ಹಣ ಮಾಯಾ!

ಹೊಸ ವರ್ಷದ ಆರಂಭದಲ್ಲೇ ಬ್ಯಾಡ್‌ ನ್ಯೂಸ್‌. ಗುರುಕಿರಣ್ ಮನೆಯಲ್ಲಿದ್ದ 2 ಲಕ್ಷ ಮಾಯಾ ಆಗಿದ್ದು ಹೇಗೆ? 

Kannada music director Gurukiran house Bengaluru cash robbery theft vcs
Author
First Published Jan 10, 2024, 9:34 AM IST

ಕನ್ನಡ ಚಿತ್ರರಂಗಕ್ಕೆ ಸೂಪರ್ ಡೂಪರ್ ಹಾಡುನ್ನು ನೀಡಿರುವ ಗುರುಕಿರಣ್ ಮನೆಯಲ್ಲಿ ಕಳ್ಳತನವಾಗಿದೆ ಎಂದು ದೂರು ನೀಡಿದ್ದಾರೆ. ಗುರುಕಿರಣ್ ಅವರ ಅತ್ತೆ ಕಸ್ತೂರಿ ಶೆಟ್ಟಿ ಅವರು ಚಂದ್ರಲೇಔಟ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ಮನೆ ಕೆಲಸ ಮಾಡುತ್ತಿದ್ದ ರತ್ನಮ್ಮೆ ಮೇಲೆ ಅನುಮಾನ ವ್ಯಕ್ತ ಪಡಿಸಿದ್ದಾರೆ.

ಹೌದು! ಕಳೆದ ಡಿಸೆಂಬರ್ 31ರಂದು ಗುರುಕಿರಣ್ ಅವರ ರೂಮ್‌ನ ಬೀರುವಿನಲ್ಲಿ 2 ಲಕ್ಷ ಹಣ ಇಟ್ಟಿದ್ದರಂತೆ. ಜನವರಿ 5ರಂದು ಬೀರು ಚೆಕ್ ಮಾಡಿದಾಗ ಅಲ್ಲಿದ್ದ ಹಣ ಕಾಣಿಸುತ್ತಿರಲಿಲ್ಲ. ಹೀಗಾಗಿ ಜನವರಿ 7ರಂದು ಚಂದ್ರಲೇಔಟ್‌ ಠಾಣೆಯಲ್ಲಿ ಗುರುಕಿರಣ್ ಅವರ ಅತ್ತೆ ಕಸ್ತೂರಿ ಶೆಟ್ಟಿ ದೂರು ದಾಖಲಿಸಿದ್ದಾರೆ. ಕಳೆದ ಆರು ತಿಂಗಳಿನಿಂದ ರತ್ನಮ್ಮ ಎಂಬುವವರು ಗುರುಕಿರಣ್ ಮನೆಯಲ್ಲಿ ಕೆಲಸ ಮಾಡುತ್ತಿದ್ದರು. ಹಣ ಇಟ್ಟಿದ್ದ ರೂಮ್‌ಗೆ ಹೊರಗಿನ ವ್ಯಕ್ತಿಗಳಲ್ಲಿ ರತ್ನಮ್ಮ ಬಿಟ್ಟು ಬೇರೆ ಯಾರೂ ಹೋಗುತ್ತಿರಲಿಲ್ಲ. ಹೀಗಾಗಿ ಮನೆ ಕೆಲಸ ಮಾಡುವ ರತ್ನಮ್ಮ ಹಣ ಕದ್ದಿರಬಹುದು ಎಂದು ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡು ಚಂದ್ರಲೇಔಟ್  ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

ಲಂಡನ್‌ನಲ್ಲಿ ಖ್ಯಾತ ನಟನ ಪುತ್ರಿ ಜೇಬಿಗೆ ಕನ್ನ, ಕಳ್ಳಿ ಬಗ್ಗೆ ಗೊತ್ತಾದ್ರೂ ಕ್ಯಾರೇ ಅನ್ನದ ಪೊಲೀಸರು!

ಹಲವು ದಿನಗಳ ನಂತರ ಗುರುಕಿರಣ್ 'ಛೂಮಂತರ್' ಚಿತ್ರದ ಮೂಲಕ ಬಣ್ಣ ಹಚ್ಚುತ್ತಿದ್ದಾರೆ. ತರುಣ್ ಶಿವಪ್ಪ ಬಂಡವಾಳ ಹಾಕಿದ್ದು ತರುಣ್‌ ಕೂಡ ನಟಿಸಲಿದ್ದಾರೆ. ಬಹುತೇಕ ಸಿನಿಮಾ ಚಿತ್ರೀಕರಣ ನಡೆದಿದ್ದು ಗುರುಕಿರಣ್ ಇರುವ ಸ್ಪೆಷಲ್ ಪೋಸ್ಟರ್ ರಿಲೀಸ್ ಮಾಡಿದ್ದರು. ಗುರು ಸ್ಪೆಷಲ್ ರೂಪ್‌ನ ಚಿತ್ರತಂಡ ಬಿಟ್ಟುಕೊಟ್ಟಿಲ್ಲ. 

Follow Us:
Download App:
  • android
  • ios