200 ಚಿತ್ರಮಂದಿರಗಳಲ್ಲಿ ಲೂಸ್ ಮಾದ ಯೋಗೇಶ್ ನಟನೆಯ ಲಂಕೆ ಸಿನಿಮಾ ಬಿಡುಗಡೆ ಮಾಡಲಾಗುತ್ತಿದೆ. ಗಣೇಶ್ ಹಬ್ಬದಂದು ಬಿಡುಗಡೆ ಅಗುತ್ತಿರುವ ಮೊದಲ ಬಿಗ್ ಬಜೆಟ್ ಸಿನಿಮಾ ಇದಾಗಲಿದೆ. 

ಲೂಸ್ ಮಾದ ಯೋಗಿ ನಾಯಕನಾಗಿರುವ ‘ಲಂಕೆ’ ಚಿತ್ರ ಗಣೇಶ ಹಬ್ಬದಂದು(ಸೆ 10) ಥಿಯೇಟರ್‌ಗೆ ಬರಲಿದೆ. ರಾಜ್ಯಾದ್ಯಂತ ಸುಮಾರು 200 ಥಿಯೇಟರ್‌ಗಳಲ್ಲಿ ಚಿತ್ರ ತೆರೆ ಕಾಣಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

‘ಈಗ ತಮಿಳು, ತೆಲುಗು ಸಿನಿಮಾಗಳೆಲ್ಲ ನಮ್ಮ ಥಿಯೇಟರ್‌ಗೆ ಲಗ್ಗೆ ಇಡಲಾರಂಭಿಸಿವೆ. ಇದು ಕನ್ನಡ ಚಿತ್ರರಂಗದ ಮಾನಾಭಿಮಾನದ ಪ್ರಶ್ನೆ. ಕನ್ನಡಿಗರು ಒಳ್ಳೆಯ ಸಿನಿಮಾವನ್ನು ಯಾವತ್ತೂ ಕೈಬಿಡಲ್ಲ. ಮನಸ್ಸು ಮಾಡಿದರೆ ಇಲ್ಲಿ ಯಾವುದೂ ಅಸಾಧ್ಯ ಅಲ್ಲ ಅನ್ನೋದನ್ನು ಈ ಸಿನಿಮಾದ ಮೂಲಕ ಹೇಳಲು ಹೊರಟಿದ್ದೀವಿ. ಜೊತೆಗೆ ಶಿಕ್ಷಣದ ಮಹತ್ವವನ್ನು ಚಿತ್ರ ವಿಭಿನ್ನ ರೀತಿಯಲ್ಲಿ ಪ್ರಸ್ತುತಪಡಿಸುತ್ತದೆ. ಇಂದಿನ ಪರಿಸ್ಥಿತಿಯಿಂದ ಜನ ಬಸವಳಿದಿದ್ದಾರೆ.ಈ ಹಿನ್ನೆಲೆಯಲ್ಲಿ ಪಕ್ಕಾ ಮನರಂಜನೆಯ ಈ ಚಿತ್ರವನ್ನು ಅವರಿಗಾಗಿ ಬಿಡುಗಡೆ ಮಾಡುತ್ತಿದ್ದೇವೆ’ ಎಂದು ನಿರ್ದೇಶಕ ರಾಮ್ ಪ್ರಸಾದ್ ಹೇಳಿದ್ದಾರೆ.

ಧನಂಜಯ್ 'ಹೆಡ್‌ಬುಷ್' ಚಿತ್ರಕ್ಕೆ ಲೂಸ್‌ಮಾದ ಯೋಗೀಶ್ ಎಂಟ್ರಿ!

ಚಿತ್ರಕ್ಕೆ ಎಸ್ತರ್ ನೊರೋನ್ಹಾ, ಕಾವ್ಯಾ ಶೆಟ್ಟಿ ಹಾಗೂ ಕೃಷಿ ತಪಂಡ ನಾಯಕಿಯರು. ಸಂಚಾರಿ ವಿಜಯ್ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ. ರಮೇಶ್ ಬಾಬು ಸಿನಿಮಟೋಗ್ರಫಿ ಇದೆ. ಪಟೇಲ್ ಶ್ರೀನಿವಾಸ್ ಚಿತ್ರದ ನಿರ್ಮಾಪಕರು

YouTube video player