ಸದ್ಯ ಗಾಂಧಿನಗರದಲ್ಲಿ ಮೂರು ದೊಡ್ಡ ಸುದ್ದಿಗಳು ಸದ್ದು ಮಾಡುತ್ತಿವೆ. ಈ ಸುದ್ದಿಗಳ ಪೈಕಿ ಮುಂದೆ ಯಾವುದು ನಿಜ ಆಗುತ್ತೋ ಗೊತ್ತಿಲ್ಲ. ಆದರೆ, ಸುದ್ದಿಯಂತೂ ಓಡಾಡುತ್ತಿದೆ. ಅಂಥ ಮೂರು ಸುದ್ದಿಗಳ ಒಂದು ನೋಟ ಇಲ್ಲಿದೆ.

1. ಯಶ್‌ ಜತೆ ಬಾಲಿವುಡ್‌ ಬೆಡಗಿ ನೋರಾ ಫತೇಹಿ

ಯಶ್‌ ಹಾಗೂ ಪ್ರಶಾಂತ್‌ ನೀಲ್‌ ಕಾಂಬಿನೇಷನ್‌ನ ‘ಕೆಜಿಎಫ್‌ 2’ ಚಿತ್ರದ ಒಂದು ವಿಶೇಷವಾದ ಐಟಂ ಹಾಡಿಗೆ ಬಾಲಿವುಡ್‌ ಬೆಡಗಿ ನೋರಾ ಫತೇಹಿ ಹೆಜ್ಜೆ ಹಾಕಲಿದ್ದಾರಂತೆ. ಈ ಹಾಡಿನ ಚಿತ್ರೀಕರಣ ಈಗಾಗಲೇ ಹೈದರಾಬಾದ್‌ನಲ್ಲಿ ಚಿತ್ರೀಕರಣ ಕೂಡ ಮಾಡಲಾಗಿದೆ ಎನ್ನುವುದು ಸುದ್ದಿ. ಮೊದಲ ಭಾಗದಲ್ಲಿ ತಮನ್ನಾ ಹಾಗೂ ಮೌನಿ ರಾಯ್‌ ಐಟಂ ಹಾಡಿಗೆ ಕುಣಿದಿದ್ದರು. ಈಗ ಪಾರ್ಟ್‌ 2 ಕತೆಯಲ್ಲಿ ‘ಶೋಲೆ’ ಚಿತ್ರದ ಮೆಹಬೂಬಾ ಹಾಡನ್ನು ರೀ-ಕ್ರಿಯೇಟ್‌ ಮಾಡಲಾಗಿದೆ ಎನ್ನಲಾಗಿದೆ. ಇದೇ ಹಾಡಿಗೆ ನೋರಾ ಫತೇಹಿ ನೃತ್ಯ ಮಾಡಿದ್ದಾರೆ.

2. ಅಲ್ಲೂ ಅರ್ಜುನ್‌ ವರ್ಸಸ್‌ ಸುದೀಪ್‌

ತೆಲುಗಿನ ಅಲ್ಲೂ ಅರ್ಜುನ್‌ ಚಿತ್ರದಲ್ಲಿ ಸುದೀಪ್‌ ನಟಿಸಲಿದ್ದಾರೆ. ಹೀಗೊಂದು ಸುದ್ದಿ ಓಡಾಡುತ್ತಿದೆ. ಅಲ್ಲೂ ಅರ್ಜುನ್‌ ‘ಪುಷ್ಪ’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತ ನಟ ಸುದೀಪ್‌ ಅವರು ‘ವಿಕ್ರಾಂತ್‌ ರೋಣ’ ಚಿತ್ರಕ್ಕೆ ವಿರಾಮ ಕೊಟ್ಟು ವಿಶ್ರಾಂತಿ ಪಡೆಯುತ್ತಿದ್ದಾರೆ. ‘ಪುಷ್ಪ’ ಚಿತ್ರದ ನಂತರ ಸೆಟ್ಟೇರಲಿರುವ ಅಲ್ಲೂ ಚಿತ್ರದಲ್ಲಿ ಕಿಚ್ಚ ಖಡಕ್‌ ಪಾತ್ರ ಮಾಡಲಿದ್ದಾರಂತೆ. ಈ ಚಿತ್ರದ ವಿವರಣೆಗಳು ಇನ್ನಷ್ಟೆಗೊತ್ತಾಗಬೇಕಿದೆ.

ಯಾರೂ ಮಾಡದ ದಾಖಲೆ ಮಾಡಲು ಮುಂದಾದ ಪೊಗರು; ಈಗೆಷ್ಟು ಕಲೆಕ್ಷನ್? 

3. ಧ್ರುವ ಸರ್ಜಾ ಜತೆ ಜೋಗಿ ಪ್ರೇಮ್‌

ನಿರ್ದೇಶಕ ಜೋಗಿ ಪ್ರೇಮ್‌ ಅವರು ಧ್ರುವ ಸರ್ಜಾ ಅವರಿಗೆ ಸಿನಿಮಾ ನಿರ್ದೇಶನ ಮಾಡಲಿದ್ದಾರೆ. ‘ಏಕ್‌ ಲವ್‌ ಯಾ’ ಶೂಟಿಂಗ್‌ ಮುಗಿಸಿರುವ ಪ್ರೇಮ್‌, ಧ್ರುವ ಸರ್ಜಾಗೆ ಆ್ಯಕ್ಷನ್‌ ಕಟ್‌ ಹೇಳುವ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಆ್ಯಕ್ಷನ್‌ ಪ್ರಿನ್ಸ್‌ಗೆ ಹೊಸ ರೀತಿಯ ಸಿನಿಮಾ ಬೇಕು, ಬೇರೆ ಕತೆ ಬೇಕು ಎನ್ನುವ ಕಾರಣಕ್ಕೆ ತಮ್ಮ ವಲಯದ ನಿರ್ದೇಶಕರ ಆಚೆಗೆ ಹೆಜ್ಜೆ ಇಟ್ಟಿದ್ದಾರೆ. ಹೀಗಾಗಿಯೇ ಧ್ರುವ ಸರ್ಜಾ ವಲಯದಲ್ಲಿ ಈಗ ಜೋಗಿ ಪ್ರೇಮ್‌ ಹೆಸರು ಕೇಳಿ ಬರುತ್ತಿದೆ.