ಸೂಪರ್‌ಸ್ಟಾರ್ ಚಿತ್ರದ ಟೀಸರ್‌ಗೆ ರಾಕಿಂಗ್ ಸ್ಟಾರ್ ಧ್ವನಿ
ಸೂಪರ್‌ಸ್ಟಾರ್’ ಚಿತ್ರದ ಟೀಸರ್ ಬಿಡುಗಡೆಗೆ ಸಜ್ಜಾಗಿದೆ. ರಾಕಿಂಗ್ ಸ್ಟಾರ್ ಯಶ್ ಧ್ವನಿಯಲ್ಲಿ ಚಿತ್ರದ ಟೀಸರ್ ಮೂಡಿ ಬರಲಿದೆ
ನಿರಂಜನ್ ಸುಧೀಂದ್ರ ಅಭಿನಯದ ‘ಸೂಪರ್‌ಸ್ಟಾರ್’ ಚಿತ್ರದ ಟೀಸರ್ ಬಿಡುಗಡೆಗೆ ಸಜ್ಜಾಗಿದೆ. ರಾಕಿಂಗ್ ಸ್ಟಾರ್ ಯಶ್ ಧ್ವನಿಯಲ್ಲಿ ಚಿತ್ರದ ಟೀಸರ್ ಮೂಡಿ ಬರಲಿದ್ದು, ಈಗಾಗಲೇ ಟೀಸರ್‌ಗಾಗಿ ಯಶ್ ಅವರ ಖಡಕ್ ಧ್ವನಿಯನ್ನು ರೆಕಾರ್ಡ್ ಮಾಡಿಕೊಂಡಿದೆ ಚಿತ್ರತಂಡ. ಟೀಸರ್ ಆಗಸ್ಟ್ 20ರಂದು ಬಿಡುಗಡೆಯಾಗಲಿದೆ.
ಉಪೇಂದ್ರ ಅವರ ಅಣ್ಣನ ಮಗ ನಿರಂಜನ್ ಸುಧೀಂದ್ರ ನಟನೆಯ ನಿರ್ದೇಶಕ ರಮೇಶ್ ವೆಂಕಟೇಶ್ ಬಾಬು. ಸ್ವತಃ ಉಪೇಂದ್ರ ಅವರು ಬೇರೆ ಬೇರೆ ನಟರ ಚಿತ್ರಗಳಿಗೆ ಹಾಡುವ ಜತೆಗೆ ಹಿನ್ನೆಲೆ ಧ್ವನಿಯೂ ಆಗಿದ್ದಾರೆ.
ಈ ಬಾರಿ ಹೀರೋ ಅಲ್ಲ, ವಿಲನ್ ಎಂಟ್ರಿ ಎಂದ ಯಶ್..! ರಾಕಿಂಗ್ ಸ್ಟಾರ್ ಹೀಗಂದಿದ್ದೇಕೆ
ಈಗ ಉಪ್ಪಿ ಅವರ ಕುಟುಂಬದ ಕುಡಿಯ ಚಿತ್ರಕ್ಕೆ ಯಶ್ ಸಾಥ್ ನೀಡುವ ಮೂಲಕ ಇಬ್ಬರ ಅಭಿಮಾನಿಗಳಲ್ಲಿ ಸಾಕಷ್ಟುಕುತೂಹಲ ಹಾಗೂ ಕ್ರೇಜ್ ಹುಟ್ಟು ಹಾಕಿದೆ ಸೂಪರ್‌ಸ್ಟಾರ್ ಸಿನಿಮಾ.