ರಾಕಿಂಗ್‌ ಸ್ಟಾರ್‌ ಯಶ್‌ ಅವರ ಮುಂದಿನ ಸಿನಿಮಾ ಟಾಕ್ಸಿಕ್‌ 2025ರ ಏಪ್ರಿಲ್‌ 10 ರಂದು ರಿಲೀಸ್‌ ಆಗಲಿದೆ ಎಂದು ಸಿನಿಮಾ ತಂಡ ಘೋಷಣೆ ಮಾಡಿತ್ತು. ಈಗ ಈ ಸಿನಿಮಾದ ರಿಲೀಸ್‌ ಡೇಟ್‌ ಮುಂದೂಡಿಕೆಯಾಗಿದೆ. 

ಬೆಂಗಳೂರು (ಜು.26): ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕಿ ಗೀತು ಮೋಹನ್‌ದಾಸ್‌ ಅವರ ನಿರ್ದೇಶನದಲ್ಲಿ ರಾಕಿಂಗ್‌ ಸ್ಟಾರ್‌ ಯಶ್‌ ಅವರ ಮುಂದಿನ ಸಿನಿಮಾ ಘೋಷಣೆ ಆಗಿದೆ. ಟಾಕ್ಸಿಕ್‌ ಹೆಸರಿನ ಸಿನಿಮಾದಲ್ಲಿ ಯಶ್‌ ನಟಿಸುತ್ತಿದ್ದು, 2025ರ ಏಪ್ರಿಲ್‌ 10 ರಂದು ಸಿನಿಮಾ ತೆರೆಗೆ ಬರಲಿದೆ ಎಂದು ಟೀಮ್‌ ಘೋಷಣೆ ಮಾಡಿತ್ತು. 2023ರ ಸೆಪ್ಟೆಂಬರ್‌ನಲ್ಲಿ ಸಿನಿಮಾದ ಶೂಟಿಂಗ್‌ ಕೂಡ ಆರಂಭವಾಗಿತ್ತು. ಈ ಸಿನಿಮಾದಲ್ಲಿ ಯಶ್‌ ಅವರೊಂದಿಗೆ ಕಿಯಾರಾ ಆಡ್ವಾಣಿ, ನಯನತಾರಾ, ತಾರಾ ಸೂತಾರಿಯಾ, ಶೃತಿ ಹಾಸನ್‌ ಹಾಗೂ ಹುಮಾ ಖುರೇಷಿ ಕೂಡ ನಟಿಸುತ್ತಿದ್ದಾರೆ. ಈಗ ಬಂದಿರುವ ಖಚಿತ ಮಾಹಿತಿಯ ಪ್ರಕಾರ ಯಶ್‌ ಅವರ ಟಾಕ್ಸಿಕ್‌ ಸಿನಿಮಾ ಮುಂದಿನ ವರ್ಷದ ಏಪ್ರಿಲ್‌ 10 ರಂದು ಬಿಡುಗಡೆ ಆಗೋದಿಲ್ಲ. 'ಟಾಕ್ಸಿಕ್‌ ಬಿಗ್‌ ಬಜೆಟ್‌ ಸಿನಿಮಾ. ಸರಿಯಾದ ರೀತಯಲ್ಲಿ ಶೂಟಿಂಗ್‌ ಮಾಡುವ ನಿಟ್ಟಿನಲ್ಲಿ ಸಿನಿಮಾದ ನಿರ್ಮಾಪಕರು ಹಾಗೂ ನಿರ್ದೇಶಕರು ಸಮಯ ತೆಗೆದುಕೊಳ್ಳುತ್ತಿದ್ದಾರರೆ. ಅದಲ್ಲದೆ, ಸಿನಿಮಾದ ತಾರಾಂಗಣ ಕೂಡ ದೊಡ್ಡದಾಗಿದೆ. ಅವರೆಲ್ಲರ ಡೇಟ್ಸ್‌ಗಳನ್ನು ತೆಗೆದುಕೊಂಡು ಸಿನಿಮಾ ಶೂಟಿಂಗ್‌ ಮಾಡಬೇಕಾಗಿದೆ. ಹಾಗಾಗಿ ನಮ್ಮ ವೇಳಾಪಟ್ಟಿಯಲ್ಲೂ ಕೆಲವು ವ್ಯತ್ಯಾಸವಾಗಿದೆ' ಎಂದು ಸಿನಿಮಾದ ಆಪ್ತರೊಬ್ಬರು ತಿಳಿಸಿದ್ದಾರೆ.

ಇನ್ನು ಯಶ್‌ ಹಾಗೂ ಟಾಕ್ಸಿಕ್‌ ಟೀಮ್‌ಗೂ ಕೂಡ ಸಿನಿಮಾ ಬಿಡುಗಡೆ ಲೇಟ್‌ ಆಗುವುದು ತಿಳಿಸಿದೆ. ಅದ್ಭುತ ಪಾನ್‌ ಇಂಡಿಯಾ ಸಿನಿಮಾ ಇದಾಗಿರುವ ಕಾರಣ, ಅಚ್ಟೇ ಅದ್ಭುತವಾಗಿ ತೆರೆಯ ಮೇಲೆ ತರಬೇಕು ಎನ್ನುವ ಗುರಿಯಲ್ಲಿದ್ದಾರೆ. 'ಈಗಾಗಲೇ ಸಿನಿಮಾಗೆ 100 ದಿನದ ಶೂಟಿಂಗ್‌ ಆಗಿದೆ. ವಿಶುವಲ್‌ ಎಫೆಕ್ಟ್‌ ಕೂಡ ಬೇಕಿದೆ. ರಿಲೀಸ್‌ ಡೇಟ್‌ ಮುಂದೂಡಿಕೆ ಆಗಲಿದೆ ಎನ್ನುವ ಬಗ್ಗೆ ಸಿನಿಮಾದ ನಿರ್ಮಾಪಕರಿಗೂ ತಿಳಿಸಿದ್ದಾರೆ. ಶೀಘ್ರದಲ್ಲಿಯೇ ಸಿನಿಮಾದ ಹೊಸ ಡೇಟ್‌ ಅನೌನ್ಸ್‌ ಕೂಡ ಆಗಲಿದೆ. ಅದಕ್ಕೂ ಮುನ್ನ ಸಿನಿಮಾದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ಹಾಗೂ ಲಾಜಿಸ್ಟಿಕ್‌ ಸಮಸ್ಯೆಗಳನ್ನು ಸಿನಿಮಾ ತಂಡ ಪರಿಹರಿಸಿಕೊಳ್ಳಬೇಕಿದೆ ಎಂದಿದ್ದಾರೆ.

ಯಶ್ ಗಡ್ಡಕ್ಕೆ ಕತ್ತರಿ ಹಾಕಿದ್ದು ಇವರೇ: ಸೆಲೆಬ್ರೆಟಿ ಹೇರ್‌ ಸ್ಟೈಲಿಸ್ಟ್ ಟಾಕ್ಸಿಕ್ ಬಗ್ಗೆ ಕೊಟ್ಟ ಸುಳಿವೇನು?

ಇನ್ನೊಂದಡೆ ಈಗಾಗಲೇ ಸಿನಿಮಾದ ಪೂರ್ಣ ಪ್ರಮಾಣದ ಶೂಟಿಂಗ್‌ ಆರಂಭವಾಗಿದೆ. ಬೆಂಗಳೂರಿನಲ್ಲಿ ಬೃಹತ್‌ ಸೆಟ್‌ಗಳನ್ನು ನಿರ್ಮಿಸಲಾಗಿದೆ. ಆಗಸ್ಟ್ ಆರಂಭದಲ್ಲಿ ಪ್ರಮುಖ ಸೀಕ್ವೆನ್ಸ್‌ಗಾಗಿ ಇಡೀ ಪ್ರಮುಖ ಪಾತ್ರವರ್ಗವನ್ನು ಒಟ್ಟುಗೂಡಿಸುವ ಸರಣಿಯನ್ನು ಚಿತ್ರೀಕರಿಸಲು ತಂಡವು ಸಿದ್ಧವಾಗಿದೆ. ಯಶ್ ಅವರ ಸಹೋದರಿಯ ಪಾತ್ರದಲ್ಲಿ ನಯನತಾರಾ ನಟಿಸುತ್ತಿದ್ದರೆ, ಈ ಗೀತು ಮೋಹನ್ ದಾಸ್ ನಿರ್ದೇಶನದಲ್ಲಿ ಕಿಯಾರಾ ಅಡ್ವಾಣಿ, ತಾರಾ ಸುತಾರಿಯಾ ಮತ್ತು ಶ್ರುತಿ ಹಾಸನ್ ಅವರ ಟ್ರ್ಯಾಕ್ ವಿವರಗಳನ್ನು ಮುಚ್ಚಿಡಲಾಗಿದೆ. ಮತ್ತೊಂದೆಡೆ ಹುಮಾ ಖುರೇಷಿ ವಿಲನ್‌ ಪಾತ್ರ ನಿರ್ವಹಿಸುತ್ತಿದ್ದಾರೆ ಎನ್ನಲಾಗಿದೆ.

ಯಶ್ ನಟನೆಯ 'ಟಾಕ್ಸಿಕ್' ಸಿನಿಮಾಗೆ ಸಂಕಷ್ಟ; ಚಿತ್ರೀಕರಣದ ಸೆಟ್ ತೆರವುಗೊಳಿಸಲು ಹೈಕೋರ್ಟ್ ನೋಟೀಸ್!