ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಚಾಪ್ಟರ್ 2 ಸಿನಿಮಾ ಈಗಾಗಲೇ ಸಿಕ್ಕಾಪಟ್ಟೆ ಹವಾ ಸೃಷ್ಟಿಸಿದೆ. ಕರ್ನಾಟಕ ಮಾತ್ರವಲ್ಲದೆ ದೇಶ, ವಿದೇಶದಲ್ಲೂ ರಾಕಿ ಭಾಯ್ ಫಿಲ್ಮ್ ಸೌಂಡ್ ಮಾಡುತ್ತಿದೆ.

ಯಶ್, ಸಂಜಯ್ ದತ್, ಶ್ರೀನಿಧಿ ಶೆಟ್ಟಿ, ಪ್ರಕಾಶ್ ರಾಜ್, ರವೀನಾ ಟಂಡನ್ ಅಭಿನಯದ ಸಿನಿಮಾ ಜುಲೈ 16ರಂದು ರಿಲೀಸ್ ಆಗಲಿದೆ. ಮೊದಲ ಭಾಗ ರಿಲೀಸ್ ಆದಾಗಿನಿಂದಲೂ ಕೆಜಿಎಫ್ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿತ್ತು.

ತಮಿಳು ನಟನ ಫ್ಯಾನ್ಸ್ ಕೆಜಿಎಫ್-2 ಟೀಸರ್ ಮರು ಸೃಷ್ಟಿಸಿದ್ದು ಹೀಗೆ

ಇದೀಗ ಕೆಜಿಎಫ್ 2ಗಾಗಿ ಎಲ್ಲೆಡೆ ಸಿನಿಪ್ರಿಯರು ವೈಟ್ ಮಾಡುತ್ತಿದ್ದಾರೆ. ಇತ್ತೀಚೆಗೆ ಅಮೆರಿಕ ಕುಸ್ತಿಪಟು ನಟ ಯಶ್ ಅವರನ್ನು ಹೊಗಳಿ ಟ್ವೀಟ್ ಮಾಡಿದ್ದಾರೆ..

ಅಮೆರಿಕದ ಕುಸ್ತಿಪಟು ವಿಲ್ಲಿ ಮ್ಯಾಕ್ ಕೆಜಿಎಫ್ 2 ಸಿನಿಮಾದ ಟೀಸರ್ ಶೇರ್ ಮಾಡಿ, ಸಿನಿಮಾ ನೋಡೋಕೆ ಇನ್ನಷ್ಟು ಕಾಯಲಾರೆ ಎಂದು ಬರೆದಿದ್ದಾರೆ.