ಸ್ಯಾಂಡಲ್ವುಡ್ ಸ್ಟಾರ್ ನಟನ ಗುರುತಿಸಬಲ್ಲಿರಾ? ಹುಟ್ಟುಹಬ್ಬದ ದಿನವೇ ಹೊಸ ಚಿತ್ರದ ಘೋಷಣೆ
ಕುತೂಹಲ ಎನಿಸುವ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ ಸ್ಯಾಂಡಲ್ವುಡ್ ಸ್ಟಾರ್ ನಟ. ಇಂದು ಹುಟ್ಟುಹಬ್ಬ ಆಚರಿಸಿಕೊಳ್ತಿರೋ ಈ ನಟನ ಹೊಸ ಚಿತ್ರದ ಪೋಸ್ಟರ್ ರಿಲೀಸ್ ಆಗಿದೆ. ಯಾರಿವರು?
ಈ ಪೋಸ್ಟರ್ ನೋಡಿದರೆ ಬಹುತೇಕ ಮಂದಿಗೆ ಸ್ಯಾಂಡಲ್ವುಡ್ನ ಸ್ಟಾರ್ ನಟನನ್ನು ಗುರುತಿಸಲು ಸಾಧ್ಯವೇ ಇಲ್ಲ ಎನ್ನಬಹುದೇನೋ. ಹಿರಿತೆರೆ ಮಾತ್ರವಲ್ಲದೇ ಕಿರುತೆರೆಯಲ್ಲಿಯೂ ಇವರು ಸಕತ್ ಫೇಮಸ್. ಇಂದು ಅಂದರೆ ಸೆಪ್ಟೆಂಬರ್ 10 ಇವರ ಹುಟ್ಟುಹಬ್ಬವೂ ಹೌದು. ಇದೇ ದಿನ ಇವರ ಹೊಸ ಚಿತ್ರದ ಘೋಷಣೆಯಾಗಿದೆ. ಅದೇ ದೈಜಿ. ಕೊಂಕಣಿಯಲಿ ದೈಜಿ ಎಂದರೆ ರಕ್ತ ಸಂಬಂಧ. ಜಪಾನೀ ಭಾಷೆಯಲ್ಲಿ ದೈಜಿ ಎಂದರೆ ಬಹಳ ಕಾಳಜಿ ವಹಿಸಬೇಕಾದ ವಿಚಾರ ಎಂದು. ಹೀಗೆ ಹಲವು ಅರ್ಥಗಳನ್ನು ಹೊಂದಿರುವ ಕುತೂಹಲ ಕೆರಳಿಸುವ ಡೈಜಿ ಚಿತ್ರದ ಪೋಸ್ಟರ್ ಬಿಡುಗಡೆಯಾಗಿದೆ. ಇದೇ ದೈಜಿಯನ್ನು ಮಿಸ್ಟರಿ ಮತ್ತು ಹಾರರ್ ಶೈಲಿಯಲ್ಲಿ ಕಟ್ಟಿಕೊಡಲು ಸಿದ್ಧರಾಗಿದ್ದಾರೆ ನಿರ್ದೇಶಕ ಆಕಾಶ್ ಶ್ರೀವಾತ್ಸವ್. ಒಂದಷ್ಟು ನೈಜ ಘಟನೆ ಆಧರಿತ ಕಥೆಯೂ ಈ ಸಿನಿಮಾದಲ್ಲಿರಲಿದೆ ಎಂದಿದ್ದಾರೆ.
ಇಷ್ಟೆಲ್ಲಾ ಆದ ಮೇಲೆ ಈ ನಟನಾರು ಎನ್ನುವುದನ್ನು ಗುರುತುಹಿಡಿಯಲು ಸಾಧ್ಯವಾಯಿತೆ? ಇವರೇ ದಶಕಗಳಿಂದ ಹಿರಿ ಮತ್ತು ಕಿರಿತೆರೆಯಲ್ಲಿ ಎಲ್ಲರನ್ನೂ ರಂಜಿಸುತ್ತಿರುವ ನಟ ರಮೇಶ್ ಅರವಿಂದ್! ಹೌದು. ನಂಬಲು ಕಷ್ಟ ಎನಿಸಿದರೂ ಇದು ನಿಜ. ರಮೇಶ್ ಅರವಿಂದ್ (Ramesh Aravind) ಅವರಿಗೆ ಇಂದು 59 ವರ್ಷದ ಹುಟ್ಟುಹಬ್ಬದ ಸಂಭ್ರಮ. ಇಂದೇ ಅವರ ಹೊಸ ಸಿನಿಮಾ ಘೋಷಣೆ ಆಗಿದೆ. ಕನ್ನಡ ಸೇರಿ ತಮಿಳು, ತೆಲುಗು, ಮಲಯಾಳಂನಲ್ಲೂ ನಟಿಸಿರುವ ಬಹುಭಾಷಾ ನಟ ರಮೇಶ್ ಅರವಿಂದ್ ‘ದೈಜಿ’ ಚಿತ್ರದಲ್ಲಿ ತೀರಾ ವಿಭಿನ್ನ ಪಾತ್ರದಲ್ಲಿ, ಗೆಟಪ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಅದಕ್ಕೆ ಪೂರಕ ಎಂಬಂತೆ ಅವರ ಲುಕ್ ರಿವೀಲ್ ಆಗಿದ್ದು, ಮುಖಕ್ಕೆ ಥರಹೇವಾರಿ ಬಣ್ಣ ಹಚ್ಚಿಕೊಂಡು, ಕಿವಿಗೆ ಓಲೆ ಧರಿಸಿ, ಅದರ ಮೇಲೊಂದು ಹೂವಿಟ್ಟುಕೊಂಡಿರುವ ರಮೇಶ್ ಅರವಿಂದ್ ಲುಕ್ ವೈರಲ್ ಆಗಿದೆ.
ಯುವಕರು, ವಯಸ್ಸಾದೋರು ... ನಿಮ್ಗೆ ಸುಖ ಎಲ್ಲಿ ಸಿಗತ್ತೆ ಎಂದ ಪ್ರಶ್ನೆಗೆ ಶಿಲ್ಪಾ ಹೇಳಿದ್ದೇನು?
‘ಶಿವಾಜಿ ಸುರತ್ಕಲ್ 1’ ಹಾಗೂ ‘ಶಿವಾಜಿ ಸುರತ್ಕಲ್ 2’ ಯಶಸ್ಸಿನ ಬೆನ್ನಲ್ಲೇ ರಮೇಶ್ ಅರವಿಂದ್ ಮತ್ತು ನಿರ್ದೇಶಕ ಆಕಾಶ್ ಶ್ರೀವತ್ಸ ಮತ್ತೊಮ್ಮೆ ಕೈಜೋಡಿಸುತ್ತಿದ್ದಾರೆ. ಈ ಹಿಂದೆ ಕಾನ್ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ತೆರೆಕಂಡ ಕಿರು ಚಿತ್ರ ಸುಳ್ಳೇ ಸತ್ಯ, ಪವನ್ ಕುಮಾರ್ ಲೂಸಿಯಾ, ಡಾಲಿ ಧನಂಜಯ್ ನಟಿಸಿದ ಬದ್ಮಾಶ್ ಚಿತ್ರಕ್ಕೆ ಬಂಡವಾಳ ಹೂಡಿದ್ದ ವಿಭಾ ಕಶ್ಯಪ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ರವಿ ಕಶ್ಯಪ್ ದೈಜಿ ಸಿನಿಮಾ ನಿರ್ಮಿಸುತ್ತಿದ್ದಾರೆ.
ಅಂದಹಾಗೆ ಈ ಚಿತ್ರದ ಸಂಪೂರ್ಣ ಶೂಟಿಂಗ್ ಅಮೆರಿದಲ್ಲಿ ನಡೆಯಲಿದೆಯಂತೆ. ಇತ್ತೀಚೆಗಷ್ಟೇ 25 ವರ್ಷಗಳ ಸಂಭ್ರಮ ಆಚರಿಸಿದ ಅಮೆರಿಕ ಅಮೆರಿಕ ಚಿತ್ರದಂತೆಯೇ ಇದೂ ಕೂಡ ಬಹುತೇಕ ಅಮೆರಿಕದಲ್ಲಿಯೇ ನಡೆಯುವ ಕಥೆ. ಇದು ರಮೇಶ್ ಅವರ 106ನೇ ಸಿನಿಮಾ ಆಗಿದ್ದು, ಬರುವ ಡಿಸೆಂಬರ್ ಅಥವಾ 2024ರ ಜನವರಿ ತಿಂಗಳಲ್ಲಿ ಚಿತ್ರದ ಶೂಟಿಂಗ್ ಆರಂಭ ಆಗಲಿದೆ ಎಂದಿದೆ ಚಿತ್ರತಂಡ. ತಾರಾಬಳಗದ ವಿಚಾರದಲ್ಲಿ ರಮೇಶ್ ಅರವಿಂದ್ (Ramesh Aravind) ನಾಯಕನಾದರೆ, ನಾಯಕಿಯ ಹುಡುಕಾಟ ಆರಂಭವಾಗಿದೆ. ಚಿತ್ರಕ್ಕೆ ಒಂದು ಸಾರ್ವತ್ರಿಕವಾದ ನೆಲೆ ಕಂಡುಕೊಳ್ಳುವ ಸಾಮರ್ಥ್ಯವಿದೆ ಎಂಬುದು ಚಿತ್ರ ತಂಡದ ಬಲವಾದ ನಂಬಿಕೆ. ಚಿತ್ರವು ಮಿಸ್ಟರಿ ಕಥಾಹಂದರವನ್ನು ಹೊಂದಿದೆ ಎಂದು ತಂಡ ಹೇಳಿದೆ.
IAS ಅಧಿಕಾರಿಯಾಗ್ಬೇಕಿದ್ದ ಮಲ್ಲಿಕಾ ಮನೆಬಿಟ್ಟು ಓಡಿ ಬಿಚ್ಚೋಲೆ ಗಂಗಮ್ಮ ಆಗಿದ್ದೇ ರೋಚಕ!