ಕನ್ನಡ ಚಿತ್ರರಂಗಕ್ಕೆ ನಟ ಜಗ್ಗೇಶ್‌ ಪಾದಾರ್ಪಣೆ ಮಾಡಿ ನವೆಂಬರ್ 17, 2020ಕ್ಕೆ 40 ವರ್ಷಗಳಾಗಿವೆ. ಅಭಿಮಾನಿಗಳು, ಕಲಾ ಬಂಧುಗಳು ಹಾಗೂ ಫ್ಯಾನ್‌ ಪೇಜ್‌ಗಳು ಸೋಷಿಯಲ್ ಮೀಡಿಯಾದಲ್ಲಿ ಜಗ್ಗೇಶ್ ಅವರಿಗೆ ಈ ಸಂದರ್ಭದಲ್ಲಿ ಶುಭ ಹಾರೈಸುತ್ತಿವೆ. ಈ ನಡುವೆ ಅಭಿಮಾನಿಯೊಬ್ಬನಿಗೆ ಮೂಡಿದ ಕುತೂಹಲಕ್ಕೂ ಇಂದು ಉತ್ತರ ಸಿಕ್ಕಿದೆ.

ಅಮ್ಮನಿಗಾಗಿ ಜಗ್ಗೇಶ್ ಆಣೆ ಇಟ್ಟ ಲಿಂಗವಿದು; 'ನಾನು ಯಾವ ತಪ್ಪು ಮಾಡುವುದಿಲ್ಲ'! 

ಹೌದು! ಗೀತಾ ನಾಗರಾಜ್ ಎಂಬ ಟ್ಟಿಟರ್‌ ಖಾತೆಯುಳ್ಳ ಅಭಿಮಾನಿಯೊಬ್ಬರು ಜಗ್ಗೇಶ್‌ ಅವರನ್ನು ಪ್ರಶ್ನಿಸಿದ್ದಾರೆ. 'ನಂಗೊಂದು ಡೌಟು, ಅಕ್ಕ ಹೇಳ್ತಿದ್ಲು ನಾವು ಕೊಡೋ ಕಮೆಂಟಿಗೆ ರಿಪ್ಲೈ ಮಾಡೋದು ನೀವಲ್ಲ, ನಿಮ್ಮ ಅಸಿಸ್ಟೆಂಟ್ ಅಂತೆ. ನಿಜಾನ? ಅಣ್ಣ ಪ್ಲೀಸ್ ಉತ್ತರಿಸಿ' ಎಂದು ಕೇಳಿದ್ದಾರೆ. ಇದಕ್ಕೆ ಜಗ್ಗೇಶ್ ಉತ್ತರಿಸಿದ್ದಾರೆ.

 

'ನಾನು ನನ್ನ ಅಭಿಮಾನಿಗಳನ್ನು ರಾಯರಂತೆ ಪ್ರೀತಿಸುವೆ. ಪ್ರತಿ ಕಾಮೆಂಟೂ ನನ್ನ ಕೈ ಬೆರಳಿನಿಂದ ಅಚ್ಚಾಗುತ್ತದೆ. ರಾಯರ ಆಣೆ. ನನ್ನ ಸಾಮಾಜಿಕ ಮಾಧ್ಯಮದ ಖಾತೆಗಳನ್ನು ಯಾರಿಗೂ ಮುಟ್ಟಲು ಬಿಡೋಲ್ಲ. Am too possessive,' ಎಂದು ರಿಪ್ಲೈ ಮಾಡಿದ್ದಾರೆ.

ಕನ್ನಡ ಸ್ವಲ್ಪ ಗೊತ್ತು ಎನ್ನುವವರು ಚಿತ್ರರಂಗ ಹರಾಜು ಹಾಕುತ್ತಿದ್ದಾರೆ; ಕನ್ನಡಿಗರಿಗೆ ಜಗ್ಗೇಶ್‌ ಸಲಾಂ 

ಜಗ್ಗೇಶ್ ಖಾತೆಯಲ್ಲಿ ಮತ್ತೊಂದು ವಿಶೇಷತೆ ಇದೆ. ಜಗ್ಗೇಶ್ ಯಾವ ಸ್ಟಾರ್ ನಟನಾಗಲಿ ಅಥವಾ ಪವರ್‌ಫುಲ್‌ ವ್ಯಕ್ತಿಗಳನ್ನು ಫಾಲೋ ಮಾಡುವುದಿಲ್ಲ. ಈವರೆಗೂ ಅವರು 9 ಖಾತೆಗಳನ್ನು ಮಾತ್ರ ಫಾಲೋ ಮಾಡುತ್ತಾರೆ. ಅದರಲ್ಲಿ ಪತ್ನಿ ಪರಿಮಳಾ ಹಾಗೂ ನರೇಂದ್ರ ಮೋದಿ ಹೊರತು ಪಡಿಸಿದರೆ, ಎಲ್ಲವೂ ಅಭಿಮಾನಿಗಳು ಕ್ರಿಯೇಟ್ ಮಾಡಿರುವ ಫ್ಯಾನ್ ಪೇಜ್‌ಗಳೇ. ಸುಮಾರು  639.8K ಜನರು ನಟ ಜಗ್ಗೇಶ್‌ ಅವರನ್ನು ಫಾಲೋ ಮಾಡುತ್ತಿದ್ದಾರೆ.