Ghost ಫ್ಯಾನ್ಸ್ ಶೋ ವೇಳೆ ಶಿವಣ್ಣನ ಅಭಿಮಾನಿಗಳ ಆಕ್ರೋಶ: ಸಂತೋಷ್ ಥಿಯೇಟರ್ ಗಾಜು ಪುಡಿಪುಡಿ

ಘೋಸ್ಟ್ ಸಿನಿಮಾ ಫ್ಯಾನ್ಸ್ ಶೋ ವೇಳೆ ಶಿವರಾಜ್ ಕುಮಾರ್ ಅಭಿಮಾನಿಗಳ ಆಕ್ರೋಶ ವ್ಯಕ್ತವಾಗಿದ್ದು, ಸಂತೋಷ್ ಥಿಯೇಟರ್ ಕಚೇರಿ ಗಾಜು ಪುಡಿ ಪುಡಿಯಾಗಿದೆ. ಸಿಬ್ಬಂದಿ ಕಾಲಿಗೆ ಗಾಜು ಚುಚ್ಚಿದ್ದು, ಕಚೇರಿ ತುಂಬ ರಕ್ತವಾಗಿದೆ. 

While Ghost Movie Show Santosh Theater Glass Break In Bengaluru gvd

ಘೋಸ್ಟ್ ಸಿನಿಮಾ ಫ್ಯಾನ್ಸ್ ಶೋ ವೇಳೆ ಶಿವರಾಜ್ ಕುಮಾರ್ ಅಭಿಮಾನಿಗಳ ಆಕ್ರೋಶ ವ್ಯಕ್ತವಾಗಿದ್ದು, ಸಂತೋಷ್ ಥಿಯೇಟರ್ ಕಚೇರಿ ಗಾಜು ಪುಡಿ ಪುಡಿಯಾಗಿದೆ. ಸಿಬ್ಬಂದಿ ಕಾಲಿಗೆ ಗಾಜು ಚುಚ್ಚಿದ್ದು, ಕಚೇರಿ ತುಂಬ ರಕ್ತವಾಗಿದೆ. ಫ್ಯಾನ್ಸ್ ಶೋ ವೇಳೆ ಕಿಕ್ಕಿರಿದು ಜನಸಾಗರ ತುಂಬಿತ್ತು. ಈ ವೇಳೆ ಥಿಯೇಟರ್ ಒಳಗೆ ಜನರನ್ನು ಬಿಡಲು ಸಿಬ್ಬಂದಿ ತಡ ಮಾಡಿದ್ದರು.  ಅಷ್ಟರಲ್ಲಾಗಲೇ ಸಿನಿಮಾ ಶುರುವಾಗಿತ್ತು. ಹಾಗಾಗಿ ಅಭಿಮಾನಿಗಳು ಆಕ್ರೋಶಗೊಂಡು ಥಿಯೇಟರ್‌ನಲ್ಲಿರುವ ಕಚೇರಿ ಗಾಜು ಪುಡಿ ಪುಡಿ ಮಾಡಿದ್ದಾರೆ. ತಳ್ಳಾಟ ವೇಳೆ ಹಲವೆಡೆ ಇದ್ದ ಗಾಜು ಒಡೆದುಹೋಗಿದೆ. ಈ ವೇಳೆಕೆಲಸ ಮಾಡ್ತಿದ್ದ ಸಿಬ್ಬಂದಿ ಕಾಲಿಗೆ ಗಾಜು ಚುಚ್ಚಿದೆ. 

ಹಾಗಾಗಿ ಕಚೇರಿ ಪೂರ್ತಿ ರಕ್ತವಾಗಿದೆ ನಂತರ ಆತನನ್ನ ಆಸ್ಪತ್ರೆಗೆ ಪೊಲೀಸರು ಕರೆದೊಯ್ದಿದ್ದಾರೆ. ಇದರಿಂದ ಕೆಲವು ಕಾಲ ಥಿಯೇಟರ್​ನಲ್ಲಿ ಆತಂಕದ ವಾತಾವರಣ ನಿರ್ಮಾಣ ಆಯಿತು. 'ಹ್ಯಾಟ್ರಿಕ್ ಹೀರೋ' ಶಿವರಾಜ್‌ಕುಮಾರ್ ಅಭಿನಯದ 'ಘೋಸ್ಟ್‌' ಸಿನಿಮಾವು ಅ.19ರಂದು ಅದ್ದೂರಿಯಾಗಿ ತೆರೆಗೆ ಬರುತ್ತಿದೆ. 'ಘೋಸ್ಟ್‌' ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು, ಫ್ಯಾನ್ಸ್ ಕ್ರೇಜ್ ಜೋರಾಗಿದೆ. ಶಿವರಾಜ್‌ಕುಮಾರ್ ಕೂಡ ಈ ಸಿನಿಮಾದಲ್ಲಿ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಅಂದಹಾಗೆ, ಬೆಂಗಳೂರಿನಲ್ಲಿ 'ಘೋಸ್ಟ್‌'ಗೆ ಭಾರಿ ಕ್ರೇಜ್ ಶುರುವಾಗಿದ್ದು, ಅಕ್ಟೋಬರ್ 18ರ ಮಧ್ಯರಾತ್ರಿಯಿಂದಲೇ ಸ್ಪೆಷಲ್ ಶೋ ಆರಂಭವಾಗಿದೆ. 

ಯುವ ದಸರಾಗೆ ರಂಗು ತಂದ 'ಘೋಸ್ಟ್': ಹಾಡಿ-ಕುಣಿದು ರಂಜಿಸಿದ ಶಿವಣ್ಣ

ಶಿವರಾಜ್ ಕುಮಾರ್ ಕಟೌಟ್ ಹಿಡಿದು ಅಭಿಮಾನಿಗಳು ಸಂಭ್ರಮಿಸಿದ್ದು, ಶಿವಣ್ಣನ ಕಟೌಟ್‌ಗೆ ಹಾರ ಹಾಕಿದ್ದಾರೆ. ಜೊತೆಗೆ ಪಟಾಕಿ ಸಿಡಿಸಿ ಅಭಿಮಾನಿಗಳು ಖುಷಿ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಶಿವಣ್ಣನಿಗೆ ಅಭಿಮಾನಿಗಳು ಜೈಕಾರ ಹಾಕಿದ್ದಾರೆ. ‘ಘೋಸ್ಟ್’ ಚಿತ್ರದಲ್ಲಿ ಶಿವರಾಜ್​ಕುಮಾರ್, ಅನುಪಮ್ ಖೇರ್ ಮೊದಲಾದವರು ನಟಿಸಿದ್ದಾರೆ. ಶ್ರೀನಿ ಅವರು ನಿರ್ದೇಶನ ಮಾಡಿದ್ದಾರೆ. ಈ ಚಿತ್ರಕ್ಕೆ ಮೆಚ್ಚುಗೆ ಸಿಗುತ್ತಿದೆ. ಶಿವಣ್ಣ ಘೋಸ್ಟ್‌ನಲ್ಲಿ 32ರ ಹರೆಯದ ಆನಂದ್ ಆಗಿದ್ದಾರೆ. 38 ವರ್ಷದ ಹಿಂದೆ ಸೆಂಚ್ಯುರಿ ಸ್ಟಾರ್ ಶಿವರಾಜ್ ಕುಮಾರ್ರನ್ನ ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ ಸಿನಿಮಾ ಆನಂದ್. ಈಗ ಘೋಸ್ಟ್ನಲ್ಲಿ ಇದೇ ಆನಂದ್ ರಿಕ್ರಿಯೇಟ್ ಆಗಿದ್ದು, ಹೊಸ ಕ್ರೇಜ್ ಸೃಷ್ಟಿಸಿದ್ದಾನೆ. ಘೋಸ್ಟ್ ಹಲವು ಸರ್ಪ್ರೈಸ್ಗಳ ಹೂರಣ. ಶಿವಣ್ಣ ಇಲ್ಲಿ ಮೂರು ಶೇಡ್ಗಳಲ್ಲಿ ವಿಜೃಂಬಿಸುತ್ತಾರೆ. 

ಆದ್ರೆ ದೊಡ್ಡ ಕುತೂಹಲ ಸೃಷ್ಟಿಸಿರೋದು ಕರುನಾಡ ಚಕ್ರವರ್ತಿಯ ಯಂಗರ್ ಲುಕ್. ಈ ಯಂಗ್ ಲುಕ್ ಸೃಷ್ಟಿಯಾಗಿದ್ದು ಡಿಎಜಿಂಗ್ ಮೋಷನ್ ಪಿಕ್ಚರ್ಸ್ ಅನ್ನೋ ಟೆಕ್ನಾಲಜಿಯಿಂದ. ಘೋಸ್ಟ್‌ನಲ್ಲಿ ಡಿಎಜಿಂಗ್ ಮೋಷನ್ ಪಿಕ್ಚರ್ಸ್ ಟೆಕ್ನಾಲಜಿ ಬಳಸಿ ಶಿವಣ್ಣರನ್ನ 38 ವರ್ಷ ಹಿಂದಿನ ಆನಂದ್ ಮಾಡಿದ್ದಾರೆ ನಿರ್ದೇಶಕ ಶ್ರೀನಿ. ಈ ಟೆಕ್ನಾಲಜಿ ಬಳಸಿ ಯಂಗ್ ಲುಕ್ ಮಾಡೋದು ಅಷ್ಟು ಸುಲಭವೂ ಅಲ್ಲವಂತೆ. ಯಂಗ್ ಲುಕ್ ಬರೋಕೆ ಮೇಕಪ್ ಕೂಡ ಮುಖ್ಯ. ಆ ಮೇಕಪ್ ಮಾಡಿದಾಗ ಕ್ಯಾಮೆರಾ ಮುಂದೆ ನಗೋ ಹಾಗಿರಲಿಲ್ವಂತೆ. ಘೋಸ್ಟ್ ಪ್ಯಾನ್ ಇಂಡಿಯಾದಲ್ಲಿ ರಿಲೀಸ್ ಆಗ್ತಿದೆ. 

ಬಾಳೆಹಣ್ಣು ಸಿಪ್ಪೆಯನ್ನೇ Bra ಮಾಡಿಕೊಂಡ Urfi Javed: ಈ ಕಣ್ಣಿಂದ ಇನ್ನೂ ಏನೇನ್‌ ನೋಡ್ಬೇಕು ಅನ್ನೋದಾ!

ಮುಂಬೈ, ಹೈದರಾಬಾದ್, ಚೆನ್ನೈ ಮಾರ್ಕೆಟ್ನಲ್ಲಿ ಘೋಸ್ಟ್ ಕ್ರೇಜ್ ಹೈ ಇದೆ. ಅದಕ್ಕು 100 ಪಟ್ಟು ಕ್ರೇಜ್ ಇರೋದು ಕರುನಾಡಲ್ಲಿ. ನಾಳೆ ಮಧ್ಯರಾತ್ರಿ 12 ಗಂಟೆಯಿಂದಲೇ ಬೆಂಗಳೂರು, ಮೈಸೂರು, ಹೊಸಪೇಟೆ, ಬಳ್ಳಾರಿ, ಶಿವಮೊಗ್ಗ ಸೇರಿದಂತೆ ಕರ್ನಾಟಕದ ಹಲವು ಚಿತ್ರಮಂದಿರದಲ್ಲಿ ಘೋಸ್ಟ್ ಪ್ರದರ್ಶನ ಶುರುವಾಗ್ತಿದೆ. ಘೋಸ್ಟ್‌ನ ಫ್ಯಾನ್ಸ್ ಶೋ ಹಾಗು ಫಸ್ಟ್ ಶೋ ಟಿಕೆಟ್ಗಳು ಸೋಲ್ಡ್ ಔಟ್ ಆಗ್ತಿದೆ. ಈ ಸಿನಿಮಾದ ಫಸ್ಟ್ ಡೇ ಕಲೆಕ್ಷನ್ ಕರ್ನಾಟಕದಲ್ಲಿ ಬರೋಬ್ಬರಿ 10 ಕೋಟಿ ದಾಟುತ್ತೆ ಅಂತ ಹೇಳಲಾಗ್ತಿದೆ. ಇದನ್ನೆಲ್ಲಾ ನೋಡ್ತಿದ್ರೆ ಈ ವರ್ಷದ ಮೆಗಾ ಹಿಟ್ ಸಿನಿಮಾ ಘೋಸ್ಟ್ ಆಗೋದ್ರಲ್ಲಿ ನೋ ಡೌಟ್ ಅನ್ನಿಸುತ್ತೆ. 

Latest Videos
Follow Us:
Download App:
  • android
  • ios