ಬಾಳೆಹಣ್ಣು ಸಿಪ್ಪೆಯನ್ನೇ Bra ಮಾಡಿಕೊಂಡ Urfi Javed: ಈ ಕಣ್ಣಿಂದ ಇನ್ನೂ ಏನೇನ್ ನೋಡ್ಬೇಕು ಅನ್ನೋದಾ!
ಬಾಲಿವುಡ್ ನಟಿ, ಮಾಡೆಲ್ ಉರ್ಫಿ ಜಾವೇದ್ ಈ ಹೆಸರು ಕೇಳಿದ್ರೆ ಅರೆಕ್ಷಣ ತಲೆಯಲ್ಲಿ ಬರೋದು ಚಿತ್ರ ವಿಚಿತ್ರ ಬಟ್ಟೆ ತೊಟ್ಟ ಫೋಟೋಗಳು. ಈ ರೀತಿ ವಿಚಿತ್ರವಾದ ಉಡುಪುಗಳನ್ನು ಧರಿಸಿಯೇ ಉರ್ಫಿ ಎಲ್ಲರ ಗಮನಸೆಳೆದಿದ್ದಾರೆ. ಇದೀಗ ಬಾಳೆಹಣ್ಣಿನ ಸಿಪ್ಪೆಯಲ್ಲಿ ಉರ್ಫಿ ಮೈ ಮುಚ್ಚಿಕೊಂಡಿದ್ದಾರೆ.
ಪ್ರತಿ ಬಾರಿಯೂ ಉರ್ಫಿ ಜಾವೇದ್ ತನ್ನ ವಿವಾದಾತ್ಮಕ ಫ್ಯಾಷನ್‌ನೊಂದಿಗೆ ಟ್ರೋಲ್ ಆಗುತ್ತಾರೆ. ಅವರು ಕೆಲವೊಮ್ಮೆ ಕಸದ ಚೀಲಗಳು, ಬಟ್ಟೆಗೆ ಹಾಕುವ ಕ್ಲಿಪ್, ಸೇಫ್ಟಿ ಪಿನ್‌ಗಳೊಂದಿಗೆ ಉಡುಪುಗಳನ್ನು ಆವಿಷ್ಕರಿಸಿದ್ದೂ ಇದೆ.
ಅಷ್ಟೋ ಇಷ್ಟೋ ಬಟ್ಟೆ ಹಾಕ್ತೀದ್ದ ಉರ್ಫಿ ಜಾವೇದ್ ಇದೀಗ ಬಾಳೆಹಣ್ಣು ಸಿಪ್ಪೆಯನ್ನೇ ಬ್ರಾ ಮಾಡಿಕೊಂಡು ಮೈ ಮುಚ್ಚಿಕೊಂಡಿದ್ದಾರೆ. ನಟಿಯ ಅವತಾರ ಕಂಡು ನೆಟ್ಟಿಗರು ಫುಲ್ ಶಾಕ್ ಆಗಿದ್ದು, ಈ ಕಣ್ಣಿಂದ ಇನ್ನೂ ಏನೇನ್ ನೋಡ್ಬೇಕು ಎಂದಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಬಟ್ಟೆ ವಿಚಾರದಲ್ಲಿ ಸದಾ ಸೆನ್ಸೇಷನ್ ಕ್ರಿಯೇಟ್ ಮಾಡಿರುವ ಉರ್ಫಿ, ಇದೀಗ ಬಾಳೆ ಹಣ್ಣಿನ ಸಿಪ್ಪೆಯಿಂದ ಮೈ ಮುಚ್ಚಿಕೊಂಡು ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಬಾಳೆಹಣ್ಣು ತಿನ್ನುತ್ತ ಫೋಟೋಶೂಟ್ ಮಾಡಿಸಿದ್ದಾರೆ. ಉರ್ಫಿ ಅವತಾರ ನೋಡಿ ಧರಿಸೋಕೆ ಬೇರೆ ಏನು ಸಿಗಲಿಲ್ವಾ ಎಂದು ಪ್ರಶ್ನೆ ಮಾಡಿದ್ದಾರೆ.
ಬಿಗ್ ಬಾಸ್ ಒಟಿಟಿಯಿಂದ ಫೇಮಸ್ ಆಗಿರೋ ಉರ್ಫಿ ಜಾವೇದ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸುದ್ದಿಯಲ್ಲಿದ್ದಾರೆ. ತನ್ನ ಹೊಸ ಹೊಸ ವಿಡಿಯೋ, ಫೋಟೋಗಳ ಮೂಲಕ ಸಂಚಲನ ಮೂಡಿಸಿದ್ದಾರೆ.
ಉರ್ಫಿ ಜಾವೇದ್ 4.2 ಮಿಲಿಯನ್ ಫಾಲೋವರ್ಸ್ಗಳನ್ನು ಹೊಂದಿದ್ದಾರೆ. ದಿನನಿತ್ಯ ಆಕರ್ಷಕವಾದ, ಕ್ರಿಯೇಟಿವ್ ಡ್ರೆಸ್ ಧರಿಸುತ್ತಾ ಸೋಷಿಯಲ್ ಮೀಡಿಯಾದಲ್ಲಿ ಓಡಾಡುತ್ತಾರೆ. ಇದರಿಂದಲೇ ಉರ್ಫಿಯ ಖ್ಯಾತಿ ಹೆಚ್ಚಾಗಿದೆ.
ತನ್ನ ವಿಲಕ್ಷಣವಾದ ಫ್ಯಾಶನ್ ಸ್ಟೈಲ್ ಮತ್ತು ಬಟ್ಟೆಗಾಗಿ ಟ್ರೋಲ್ ಆಗುವ ಉರ್ಫಿ ಟ್ರೋಲರ್ಗಳಿಗೆ ಸಖತ್ ಆಗಿಯೇ ಉತ್ತರವನ್ನು ನೀಡುತ್ತಾರೆ. ಟ್ರೋಲರ್ಗಳ ವಿರುದ್ಧ ಕಿಡಿಕಾರಿದ ಉರ್ಫಿ, ಪೊಲೀಸ್ ಕಂಪ್ಲೇಂಟ್ ಕೊಟ್ಟ ಉದಾಹರಣೆ ಕೂಡ ಇದೆ.