Asianet Suvarna News Asianet Suvarna News

ಮನೆಯವರ ಮುಂದೆ ನೋಡಲಾಗದ ಒಂದು ಕನ್ನಡ ಸಿನಿಮಾ ಯಾವುದು? ಇದಕ್ಕೆ ಬಂದ ಉತ್ತರ ನೋಡಿದ್ರಾ..

ಸೋಶಿಯಲ್‌ ಮೀಡಿಯಾದಲ್ಲಿ ಸಾಕಷ್ಟು ವಿಚಾರಗಳು ಚರ್ಚೆಯಾಗುತ್ತವೆ. ಕೆಲವೊಮ್ಮೆ ಬೇಕಾದ ವಿಚಾರ ಚರ್ಚೆಯಾದರೆ, ಇನ್ನೂ ಕೆಲವೊಮ್ಮೆ ಇದ್ಯಾವ ವಿಚಾರದಲ್ಲಿ ಚರ್ಚೆ ಮಾಡ್ತಾ ಇದ್ದಾರೆ ಅನಿಸೋವಷ್ಟು ಮುಜುಗರದ ವಿಚಾರವನ್ನು ಚರ್ಚೆ ಮಾಡುತ್ತಿರುತ್ತಾರೆ.
 

Which Kannada movie that cannot be watched in front of the family See the answer san
Author
First Published Jun 6, 2024, 9:02 PM IST

ಸೋಶಿಯಲ್‌ ಮೀಡಿಯಾದಲ್ಲಿ ಏನೆಲ್ಲಾ ಚರ್ಚೆ ಆಗುತ್ತಿರುತ್ತದೆ ಅಂತಾ ಹೇಳೋಕೆ ಸಾಧ್ಯವಿಲ್ಲ. ಕೆಲವೊಮ್ಮೆ ತೀರಾ ಗಂಭೀರವಾದ ವಿಚಾರದ ಬಗ್ಗೆ ಚರ್ಚೆ ಆಗುತ್ತಿದ್ದರೆ, ಇನ್ನೂ ಕೆಲವು ಸಮಯದಲ್ಲಿ ಕೆಲಸಕ್ಕೆ ಬಾರದ ಯಾವುದೋ ವಿಚಾರದಲ್ಲಿ ಅಭಿಪ್ರಾಯಗಳನ್ನು ನೆಟ್ಟಿಗರು ವ್ಯಕ್ತಪಡಿಸುತ್ತಲೇ ಇರುತ್ತಾರೆ. ಒಮ್ಮೆ ಸೋಶಿಯಲ್‌ ಮೀಡಿಯಾ ಪೇಜ್‌ಗಳನ್ನು ಸುಮ್ಮನೆ ಸ್ಕ್ರೋಲ್‌ ಮಾಡಿದರೆ, ಇಂಥ ಹಲವಾರು ಸಂಗತಿಗಳು ಸಿಗುತ್ತದೆ. ಇತ್ತೀಚೆಗೆ ಅಂಥದ್ದೇ ಒಂದು ವಿಚಾರದಲ್ಲಿ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ಚರ್ಚೆಯಾಗುತ್ತದೆ. ಕನ್ನಡ ಸಿನಿಮಾರಂಗದಲ್ಲಿ ಈವರೆಗೂ ಸಾಕಷ್ಟು ಸಿನಿಮಾಗಳು ಬಂದಿವೆ. ಸದಭಿರುಚಿಯ ಸಿನಿಮಾಗಳಿಗೆ ಕನ್ನಡ ಸಿನಿಮಾಗಲೇ ಉದಾಹರಣೆ ಎಂದರೂ ತಪ್ಪಲ್ಲ. ಹೀಗಿರುವಾಗ ಮನೆಯವರ ಮುಂದೆ ನೋಡಲಾಗದ ಒಂದು ಕನ್ನಡ ಸಿನಿಮಾ ಯಾವುದು ಅನ್ನೋದರ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ. ಟ್ರೋಲ್‌ ಪೇಜ್‌ ಒಂದು ಹಾಕಿದ ಈ ಪೋಸ್ಟ್‌ಗೆ ಬಹಳ ಮಂದಿ ಕಾಮೆಂಟ್‌ ಮಾಡಿದ್ದಾರೆ. ಮೇ 29 ರಂದು ಮಾಡಲಾಗಿರುವ ಈ ಪೋಸ್ಟ್‌ಗೆ ಇಲ್ಲಿಯವರೆಗೂ 35 ಸಾವಿರ ವೀವ್ಸ್‌ಗಳು ಬಂದಿದ್ದರೆ, 2 ಸಾವಿರಕ್ಕೂ ಅಧಿಕ ಕಾಮೆಂಟ್‌ಗಳು ಬಂದಿವೆ.

ಇದಕ್ಕೆ ಹಲವು ಮಂದಿ ಹಲವು ಕನ್ನಡ ಸಿನಿಮಾಗಳನ್ನು ಉದಾಹರಣೆಯಾಗಿ ನೀಡಿದ್ದಾರೆ. ಈ ಸಿನಿಮಾಗಳನ್ನು ಮನೆಯವರು ಅಂದೆ ತಮ್ಮ ತಂದೆ-ತಾಯಿಯ ಜೊತೆ ನೋಡಲು ಆಗೋದಿಲ್ಲ ಎಂದು ಪ್ರಾಮಾಣಿಕವಾಗಿ ಹೇಳಿಕೊಂಡಿದ್ದಾರೆ. ಇನ್ನೂ ಕೆಲವರು ಕನ್ನಡ ಹೊರತಾದ ಇತರ ಭಾಷೆಯ ಸಿನಿಮಾಗಳನ್ನು ಹೇಳಿದ್ದಾರೆ. ಮತ್ತೂ ಕೆಲವರು ಇತ್ತೀಚೆಗೆ ಪ್ರಜ್ವಲ್‌ ರೇವಣ್ಣ ಅವರ ಪೆನ್‌ಡ್ರೈವ್‌ ವಿಡಿಯೋಗಳನ್ನು ಮನೆಯವರ ಜೊತೆ ಕುಳಿತು ನೋಡಲು ಸಾಧ್ಯವಾಗೋದಿಲ್ಲ ಎಂದು ವ್ಯಂಗ್ಯವಾಡಿದ್ದಾರೆ. ಮೂವಿ ಹೋಗ್ಲಿ ಬಿಡಿ, ನನ್ನ ಫ್ರೆಂಡ್ಸ್‌ಗಳು ಕಳಿಸೋ ರೀಲ್ಸ್‌ಗಳನ್ನೂ ಮನೆಯವರ ಜೊತೆ ನೆಮ್ಮದಿಯಾಗಿ ನೋಡೋಕೆ ಸಾಧ್ಯವಾಗೋದಿಲ್ಲ ಎಂದು ಕಾಮೆಂಟ್‌ ಮಾಡಿದ್ದಾರೆ.

ಉಪೇಂದ್ರ ಅಭಿನಯದ 'ಐ ಲವ್ ಯೂ' ಸಿನಿಮಾ ಹಾಗೂ ಜಗ್ಗೇಶ್‌ ಅವರ ತೋತಾಪುರಿ ಸಿನಿಮಾವನ್ನು ಹೆಚ್ಚಿನವರು ಹೇಳಿದ್ದಾರೆ. ಅದರೊಂದಿಗೆ ಉಪೇಂದ್ರ ಅವರ ಎಲ್ಲಾ ಸಿನಿಮಾಗಳನ್ನು ಮನೆಯವರ ಜೊತೆ ಕುಳಿತು ನೋಡಲು ಮುಜುಗರವಾಗುತ್ತದೆ ಎಂದಿದ್ದಾರೆ. ಅದರೊಂದಿಗೆ ಐಶಾನಿ ಶೆಟ್ಟಿ ಅಭಿನಯದ ನಡುವೆ ಅಂತರವಿರಲಿ ಸಿನಿಮಾವನ್ನೂ ಕೂಡ ಹೆಸರಿಸಿದ್ದಾರೆ.

ಇತ್ತೀಚೆಗೆ ಬಿಡುಗಡೆಯಾದ ಮಂಜುಮಲ್‌ ಬಾಯ್ಸ್ ಸಿನಿಮಾವನ್ನೂ ಕೂಡ ಹೆಸರಿಸಲಾಗಿದೆ. ಮಲಯಾಳಂ ಭಾಷೆಯ ಥ್ರಿಲ್ಲರ್‌ ಸಿನಿಮಾವನ್ನು ಇಲ್ಲಿ ಹೇಳೋದಕ್ಕೂ ಕಾರಣವಿದೆ. ಹಾಗೇನಾದರೂ ಈ ಸಿನಿಮಾವನ್ನು ಮನೆಯವರ ಜೊತೆ ನೋಡಿದ್ರೆ ಅವರು ನನ್ನನ್ನೂ ಎಲ್ಲೂ ಟ್ರಿಪ್‌ಗೆ ಕಳಿಸೋದಿಲ್ಲ ಎಂದು ಬರೆದುಕೊಂಡಿದ್ದಾರೆ.  ಇಡೀ ಮನೆಯವರು ಕುಳಿತು ನೋಡುವಂಥ ಸಿನಿಮಾ ಏನಾದರೂ ಇದ್ದರೆ, ಅದು ಅಪ್ಪು ಹಾಗೂ ಅಣ್ಣಾವ್ರು ಅವರ ಸಿನಿಮಾ ಎಂದು ಅಭಿಮಾನಿಯೊಬ್ಬರು ಬರೆದಿದ್ದಾರೆ.

'ಲೇ ನಾಯಿ..' ಎಂದವನಿಗೆ ಮುಟ್ಟಿನೋಡಿಕೊಳ್ಳುವಂತ ಉತ್ತರ ನೀಡಿದ ರೀಲ್ಸ್‌ ರಾಣಿ ಭೂಮಿಕಾ ಬಸವರಾಜ್‌!

ಕ್ಲಾಟ್ಲೆ ಸತೀಶ್‌ ಹಾಗೂ ಹರಿಪ್ರಿಯಾ ಅಭಿನಯದ ಪೆಟ್ರೋಮ್ಯಾಕ್ಸ್‌, ಜಗ್ಗೇಶ್‌ ಅವರ ನೀರ್‌ದೋಸೆ ಸಿನಿಮಾವನ್ನೂ ಕೆಲವರು ಹೆಸರಿಸಿದ್ದಾರೆ. ರವಿಚಂದ್ರನ್‌ ಅವರ ಸಿನಿಮಾಗಳು, ಕಾಶಿನಾಥ್‌ ಅವರ ಅನುಭವ ಸಿನಿಮಾ, ಗಂಡ ಹೆಂಡತಿ,  ಎ, ದಂಡುಪಾಳ್ಯ, ರವಿಚಂದ್ರನ್‌ ಅವರ ಮಲ್ಲ ಸಿನಿಮಾ, ಕಾಶಿನಾಥ್‌ ಅವರ ಅಜಗಜಾಂತರ ಹೀಗೆ ಹಲವಾರು ಸಿನಿಮಾಗಳನ್ನು ಹೆಸರಿಸಿದ್ದಾರೆ.

'ನೀವಿಬ್ಬರು ಕರ್ನಾಟಕ ರತ್ನ..' ರಕ್ಷಿತ್‌ ಶೆಟ್ಟಿ ಜೊತೆಗಿನ ಹಳೇ ಫೋಟೋ ಹಂಚಿಕೊಂಡ ಡಾ.ಬ್ರೋಗೆ ಬಿಗ್‌ ಕಾಮೆಂಟ್‌!

 

Latest Videos
Follow Us:
Download App:
  • android
  • ios