Asianet Suvarna News Asianet Suvarna News

'ಲೇ ನಾಯಿ..' ಎಂದವನಿಗೆ ಮುಟ್ಟಿನೋಡಿಕೊಳ್ಳುವಂತ ಉತ್ತರ ನೀಡಿದ ರೀಲ್ಸ್‌ ರಾಣಿ ಭೂಮಿಕಾ ಬಸವರಾಜ್‌!

ನಟಿ ಭೂಮಿಕಾ ಬಸವರಾಜ್‌ ಇಂಟರ್ನೆಟ್‌ ಸೆನ್ಸೇಷನ್‌. ಆಕೆಯ ಪ್ರತಿಯೊಂದು ರೀಲ್ಸ್‌ಗೂ ಲಕ್ಷಾಂತರ ವೀವ್ಸ್‌ಗಳು ಕಾಮೆಂಟ್‌ಗಳು ಬರುತ್ತವೆ. ಆದರೆ, ಇತ್ತೀಚೆಗೆ ಆಕೆ ಹಾಕಿದ ರೀಲ್ಸ್‌ಗೆ ವ್ಯಕ್ತಿಯೊಬ್ಬ ಕೆಟ್ಟದಾಗಿ ಕಾಮೆಂಟ್‌ ಮಾಡಿದ್ದ.
 

bhumika basavaraj Angry on Fan Comment in Instagram Reels san
Author
First Published Jun 6, 2024, 7:43 PM IST

ಇಂಟರ್ನೆಟ್‌ನಲ್ಲಿ ತಮ್ಮ ಡಾನ್ಸ್‌ ವಿಡಿಯೋಗಳ ಮೂಲಕವೇ ಸೆನ್ಸೇಷನ್‌ ಕ್ರಿಯೇಟ್‌ ಮಾಡಿರುವ ಭೂಮಿಕಾ ಬಸವರಾಜ್‌ ಸಿಟ್ಟಾಗಿದ್ದಾರೆ. ಅದಕ್ಕೆ ಕಾರಣ ಅವರು ಮಾಡಿರುವ ರೀಲ್ಸ್‌ಗೆ ಬಂದಿರುವ ಒಂದು ಕಾಮೆಂಟ್‌. ಯೂಟ್ಯೂಬ್‌ ಹಾಗೂ ಇನ್ಸ್‌ಟಾಗ್ರಾಮ್‌ನಲ್ಲಿ ಸಾಕಷ್ಟು ಅಭಿಮಾನಿ ಬಳಗವನ್ನು ಭೂಮಿಕಾ ಬಸವರಾಜ್‌ ಹೊಂದಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ಪ್ರತಿ ಬಾರಿಯೂ ಇವರ ಡಾನ್ಸ್‌ ವಿಡಿಯೋಗಳಿಗೆ ಅಪಾರ ಪ್ರಮಾಣದ ಲೈಕ್ಸ್‌ ಬರುತ್ತದೆ. ಚಿಕ್ಕಮಗಳೂರು ಮೂಲದವರಾದ ಭೂಮಿಕಾ ಬಸವರಾಜ್‌, ಸಾಕಷ್ಟು ವಿಡಿಯೋಗಳಲ್ಲಿ ತಮ್ಮ ಕಾಫಿನಾಡಿನ ಬಗ್ಗೆ ಮಾತನಾಡಿದ್ದಾರೆ. ಕಳೆದ ತಿಂಗಳು ಇವರು ಇನ್ಸ್‌ಟಾಗ್ರಾಮ್‌ನಲ್ಲಿ ಒಂದು ರೀಲ್ಸ್ ಪೋಸ್ಟ್‌ ಮಾಡಿದ್ದರು. ಚಿಕ್ಕ ಟಾಪ್‌ ಧರಿಸಿಕೊಂಡು ಬೀಚ್‌ನಲ್ಲಿ ಡಾನ್ಸ್‌ ಮಾಡಿದ ರೀಲ್ಸ್‌ ಅದಾಗಿತ್ತು. ನೆನಪಿರಲಿ ಚಿತ್ರದ ಇಂದು ಬಾನಿಗೆಲ್ಲಾ ಹಬ್ಬ.. ಹಾಡಿಗೆ ಅವರು ಡಾನ್ಸ್ ಮಾಡಿದ್ದರು. ಈ ರೀಲ್‌ ಮಾಡುವಾಗ ಹಾಡಿ ರಿದಮ್‌ ರೀಲ್ಸ್‌ ಮುಗಿದ ಸಾಕಷ್ಟು ಸಮಯದ ಬಳಿಕವೂ ಕೇಳುತ್ತಿತ್ತು. ಇಂದು ಬಾನಿಗೆಲ್ಲ ಹಬ್ಬ ಎಂದು ಅವರು ಬರೆದುಕೊಂಡು ಪೋಸ್ಟ್‌ ಮಾಡಿದ್ದರು.

ಅವರ ಮಾಡಿದ್ದ ಈ ರೀಲ್ಸ್‌ಗೆ ಶಶಿ ಕುಮಾರ್‌ ಎನ್ನುವವರು ಕಾಮೆಂಟ್‌ ಮಾಡಿದ್ದು, 'ಲೇ ನಾಯಿ, ಮೈ ತುಂಬಾ ಬಟ್ಟೆ ಹಾಕಳೆ ಮೊದಲು. ನಿಮ್ಮಂಥವರನ್ನ ನೋಡಿ ನಮ್ಮ ಹೆಣ್ಣು ಮಕ್ಕಳು ಕೆಟ್ಟಿರೋದು, ಥೂ ನಿನ್ನ ಜನ್ಮಕ್ಕೆ..' ಎಂದು ಬರೆದಿದ್ದರು. ಸಾಮಾನ್ಯವಾಗಿ ಇಂಥ ಕಾಮೆಂಟ್‌ಗಳಿಗೆ ರಿಪ್ಲೈ ಮಾಡದ ಭೂಮಿಕಾ ಬಸವರಾಜ್‌, ಶಶಿಕುಮಾರ್‌ ಅವರ ಕಾಮೆಂಟ್‌ ಇಂದ ಹರ್ಟ್‌ ಆದ ರೀತಿ ಕಂಡಿದ್ದು, ಅದಕ್ಕೆ ಮುಟ್ಟಿನೋಡಿಕೊಳ್ಳುವಂಥ ಉತ್ತರ ನೀಡಿದ್ದಾರೆ.

'ನನ್ನ ಬಟ್ಟೆ, ನನ್ನ ಚಾಯ್ಸ್‌.. ನಿಮ್ಮ ಹೆಣ್ಣು ಮಕ್ಕಳು ಅವರ ಸ್ವಂತ ಸ್ಪೂರ್ತಿಯಿಂದ ಡ್ರೆಸ್‌ ಹಾಕಿದ್ರೆ ಅದಕ್ಕೆ ನಾನು ಹೇಗೆ ಕಾರಣ ಆಗ್ತೀನಿ. ಇವೆಲ್ಲ ಬಿಟ್ಟು ಒಳ್ಳೆ ಯೋಚ್ನೆ ಇಂದ ನಿಮ್ಮ ಕೆಲಸ ಮಾಡಿ. ಭಗವಂತ ಒಳ್ಳೆಯದು ಮಾಡಲಿ..' ಎಂದು ರಿಪ್ಲೈ ಮಾಡಿದ್ದಾರೆ.

ಇನ್ನು ಭೂಮಿಕಾ ಅವರ ಕಾಮೆಂಟ್‌ಗೆ ಪ್ರತಿಕ್ರಿಯೆ ನೀಡಿದ ಹೆಚ್ಚಿನವರು, ಶಶಿಕುಮಾರ್ ಅವರೇ ನಿಮ್ಮ ಹೆಣ್ಣು ಮಕ್ಕಳಿಗೆ ನೀವು ಬುದ್ಧಿ ಹೇಳಿ. ಕೆಟ್ಟಿರೋದು ಅಂತೆ. ಏನ್‌ ಬೇಕಾದ್‌ ಹೇಳೋದು. ಎಂದು ಬರೆದಿದ್ದಾರೆ. ನಿಂಗ್‌ ಏನ್‌ ಬೇಕೋ ಅದನ್ನ ಹಾಕೋ ಭೂಮಿ. ಅವನಿಗೆ ಯಾಕೆ ಕಾಮೆಂಟ್‌ ಮಾಡೋಕೆ ಹೋಗ್ತಿಯಾ ಎಂದು ಬುದ್ಧಿವಾದ ಹೇಳಿದ್ದಾರೆ. ಮೊದಲು ಶಶಿಕುಮಾರ್‌ ಅವರು ನೋಡೋ ದೃಷ್ಟಿ ಬದಲಾಯಿಸಿಕೊಳ್ಳಬೇಕು. ಆಮೇಲೆ ಮಾತನಾಡಬೇಕು ಎಂದು ಮತ್ತೊಬ್ಬರು ಬರೆದಿದ್ದಾರೆ.

ಅವಳು ಯಾವ ಬಟ್ಟೆ ಹಾಕೋಬೇಕು ಅನ್ನೋದು ಆಕೆಯ ನಿರ್ಧಾರ. ನಿನಗೆ ಅದು ಇಷ್ಟ ಆಗಿಲ್ಲ ಅಂದ್ರೆ, ನಿಮ್ಮ ಮನೆಯ ಹೆಣ್ಣು ಮಕ್ಕಳನ್ನ ಕಂಟ್ರೋಲ್‌ನಲ್ಲಿಡು. ಇತರರಿಗೆ ಅವಮಾನ ಮಾಡೋಕೆ ಹೋಗಬೇಡಿ. ನಿಮ್ಮ ಮೈಂಡ್‌ಸೆಟ್‌ಅನ್ನು ಬದಲಿಸಿಕೊಳ್ಳಿ. ನಮ್ಮ ಮನಸ್ಸನ್ನ ಪರಿಶುದ್ಧವಾಗಿ ಇಟ್ಟುಕೊಳ್ಳಿ. ಆಗ ಎಲ್ಲವೂ ಚೆನ್ನಾಗಿಯೇ ಕಾಣುತ್ತದೆ. ಬೇರೆ ಯಾರಿಗೂ ಈ ರೀತಿ ಬೈಯೋಕೆ ಹೋಗಬೇಡಿ ಎಂದು ಶಶಿಕುಮಾರ್‌ಗೆ ಬುದ್ಧಿವಾದ ಹೇಳಿದ್ದಾರೆ.

ಬಿಗ್‌ ಬಾಸ್‌ನಲ್ಲಿ ಬಿಂದುನೂ ಇಲ್ಲ ಭೂಮಿಕಾನೂ ಇಲ್ಲ, ವರ್ಷಾ ಕಾವೇರಿ ಇಲ್ವೇ ಇಲ್ಲ; ಟ್ರೋಲಿಗರ ಸುಳ್ಳು ಪಟ್ಟಿ ನೋಡಿ ಜನ ಗರಂ

ಶಶಿಕುಮಾರ್‌ ಅವರೇ ಬಿಡಿ, ಇಂಥ ಕಿತ್ತೋದವರಿಗೆ ನಮ್ಮ ಕೆಲವು ಕಿತ್ತೋಗಿರೋ ಜನಗಳು ಪ್ರೋತ್ಸಾಹ ಕೊಡೋದು. ನೀವು ನಮ್ ಹೆಣ್ಣುಮಕ್ಳು ಅಂತಾ ಹೇಳಿದ್ದೀರ. ಅಂದ್ರೆ ಎಲ್ಲರಿಗೂ ನಿಮ್ ಮನೆ ಹೆಣ್ಮಕ್ಳು ಅನ್ನೋ ಭಾವನೆಯಲ್ಲಿ ಹೇಳಿದ್ಧೀರಿ. ಆದರೆ, ಈ ಕಾಮೆಂಟ್‌ಗೆ ಅದೇ ಕೆಲವು ಕಿತ್ತೋಗಿರೋ ಜನಗಳು ಸೂಪರ್‌ ಭೂಮಿ, ನೈಸ್ ರಿಪ್ಲೈ ಅಂತ ಕಾಮೆಂಟ್‌ ಹಾಕಿದ್ದಾರೆ, ಎಂಥ ಜನಗಳು ಇವರು ಥೂ ಅವರಿಗೂ ಇವಳಿಗೂ ಬೆಂಕಿ ಹಾಕಾ. ಸೌಜನ್ಯ ನೇಹಾ ಇವರ ಪರ ಯಾರೂ ಈ ರೀತಿ ಕಾಮೆಂಟ್‌ ಹಾಕಿ ಸಪೋರ್ಟ್‌ ಮಾಡೋದಿಲ್ಲ ಎಂದು ಶಶಿಕುಮಾರ್‌ ಅವರ ಮಾತಿಗೆ ಸಹಮತ ವ್ಯಕ್ತಪಡಿಸಿದ್ದಾರೆ.

ಹಳ್ಳಿ ಮೇಷ್ಟ್ರೇ ಹಾಡಿಗೆ ಸೀರೆಯಲ್ಲಿ ಸೊಂಟ ಬಳುಕಿಸಿ ಫ್ಯಾನ್ಸ್​ ನಶೆಯೇರಿಸಿದ ಭೂಮಿಕಾ!

Latest Videos
Follow Us:
Download App:
  • android
  • ios