ನಿರೂಪಕಿ ಚೈತ್ರಾ ವಾಸುದೇವನ್ ಉದ್ಯಮಿ ಜಗದೀಪ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅವರ ಮದುವೆಯ ಸೀರೆ ಮತ್ತು ಮೇಕಪ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಟೀಕೆ ಮಾಡಿದ್ದಾರೆ. ಆದರೆ, ಅಭಿಮಾನಿಗಳು ಚೈತ್ರಾ ಪರವಾಗಿ ನಿಂತಿದ್ದಾರೆ. ಅರಮನೆ ಮೈದಾನದಲ್ಲಿ ನಡೆದ ಮದುವೆಯಲ್ಲಿ ಅನೇಕ ಗಣ್ಯರು ಭಾಗವಹಿಸಿದ್ದರು. ಚೈತ್ರಾ ಸದ್ಯಕ್ಕೆ ಅಕಾಡೆಮಿ ಶುರು ಮಾಡುವ ಗುರಿಯಲ್ಲಿದ್ದಾರೆ.

ಬಿಗ್ ಬಾಸ್ (Bigg Boss) ಮಾಜಿ ಸ್ಪರ್ಧಿ ಹಾಗೂ ನಿರೂಪಕಿ ಚೈತ್ರಾ ವಾಸುದೇವನ್ (anchor Chaitra Vasudevan) ಗೆ ಕಂಕಣ ಭಾಗ್ಯ ಕೂಡಿ ಬಂದಿದೆ. ಉದ್ಯಮಿ ಜಗದೀಪ್ (businessman Jagdeep) ಜೊತೆ ದಾಂಪತ್ಯ ಜೀವನಕ್ಕೆ ಚೈತ್ರಾ ಕಾಲಿಟ್ಟಿದ್ದಾರೆ. ಚೈತ್ರಾಗೆ ಇದು ಎರಡನೇ ಮದುವೆ. ಮೆಹಂದಿ, ಸಂಗೀತ ಕಾರ್ಯಕ್ರಮ ಸೇರಿದಂತೆ ಚೈತ್ರಾ ಮದುವೆ ಅದ್ಧೂರಿಯಾಗಿ ನಡೆದಿದೆ. ಇವೆಂಟ್ ಮ್ಯಾನೇಜರ್ ಆಗಿರುವ ಚೈತ್ರಾ ವಾಸುದೇವನ್ ಎಲ್ಲವನ್ನೂ ಸ್ಪೇಷಲ್ ಆಗಿ ಮಾಡ್ತಾರೆ. ಅವರ ಡ್ರೆಸ್, ಅವರ ಮೇಕಪ್ ಸೇರಿದಂತೆ ಅವರು ಕಾರ್ಯಕ್ರಮ ನಡೆಸಿಕೊಡುವ ಸ್ಟೈಲ್ ಅಭಿಮಾನಿಗಳಿಗೆ ಇಷ್ಟವಾಗುತ್ತದೆ. ಆದ್ರೆ ಈ ಬಾರಿ ಯಾಕೋ ಫ್ಯಾನ್ಸ್ ಸ್ವಲ್ಪ ನಿರಾಸೆಯಾಗಿದ್ದಾರೆ. ಮದುವೆಯಲ್ಲಿ ಚೈತ್ರಾ ಧರಿಸಿದ್ದ ಸೀರೆ ಹಾಗೂ ಮೇಕಪ್, ಬಳಕೆದಾರರಿಗೆ ಇಷ್ಟವಾಗಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಚೈತ್ರಾ ಸೀರೆ ಬಗ್ಗೆ ಸಾಕಷ್ಟು ಕಮೆಂಟ್ ಬಂದಿದೆ. 

ಮದುವೆ ದಿನ ಚೈತ್ರಾ ಇಂಥ ಸೀರೆ ಧರಿಸಬಾರದಿತ್ತು. ಅವರ ಮೇಕಪ್ ಕೂಡ ಚೆನ್ನಾಗಿಲ್ಲ ಅಂತ ಅನೇಕರು ಕಮೆಂಟ್ ಮಾಡಿದ್ದಾರೆ. ಆದ್ರೆ ಚೈತ್ರಾ ಫ್ಯಾನ್ಸ್ ಅವರ ಪರ ಬ್ಯಾಟ್ ಬೀಸಿದ್ದಾರೆ. ಮದುವೆ ಆಗ್ತಿದ್ದಾರೆ, ಹೊಸ ಜೀವನಕ್ಕೆ ಕಾಲಿಡ್ತಿದ್ದಾರೆ. ನೂರು ಕಾಲ ಸುಖವಾಗಿ ಬಾಳಿ ಅಂತ ಹರಸುವ ಬದಲು ಅವರ ಮೇಕಪ್, ಸೀರೆ ಬಗ್ಗೆ ಯಾಕೆ ಬ್ಯಾಡ್ ಕಮೆಂಟ್ ಹಾಕ್ತೀರಾ ಅಂತ ಗರಂ ಆಗಿದ್ದಾರೆ. 

ತನಿಷಾಗೆ ಫ್ಯಾನ್ಸ್ ಏನೆಲ್ಲಾ ಗಿಫ್ಟ್ ಕೊಡ್ತಾರೆ..? ಗೊತ್ತಾದ್ರೆ ನೀವೂ ನಟಿ ಆಗ್ಬಿಡ್ತಿರಾ.. Yes or

ಚೈತ್ರಾ ವಾಸುದೇವನ್ ಮದುವೆಗೆ ಭರ್ಜರಿಯಾಗಿ ಸಿದ್ಧವಾಗಿದ್ದರು. ಅವರು ಎರಡು ಲಕ್ಷ ಮೌಲ್ಯದ ಸೀರೆಯನ್ನು ಧರಿಸಿದ್ದರು. ಮದುವೆ ದಿನ ಮಾಧ್ಯಮದ ಮುಂದೆ ಬಂದಿದ್ದ ಚೈತ್ರಾ ವಾಸುದೇವನ್, ತಮ್ಮ ಸೀರೆ ಬೆಲೆ 2 ಲಕ್ಷ ಅಂತ ಹೇಳಿದ್ದರು. ಮೋಸ್ಟ್ಲಿ ಬೆಲೆಗೆ ತಕ್ಕಂತೆ ಸೀರೆ ಇಲ್ಲ ಎನ್ನುವುದು ಬಳಕೆದಾರರ ಅಭಿಪ್ರಾಯವಾಗಿರ್ಬಹುದು. ಅಲ್ಲದೆ ಚೈತ್ರಾ ಯಾವಾಗ್ಲೂ ಸ್ಪೇಷಲ್ ಆಗಿ ಆಲೋಚನೆ ಮಾಡೋದ್ರಿಂದ ಮದುವೆ ಟೈಂನಲ್ಲಿ ಡಲ್ ಆದ್ರೂ ಅನ್ನೋದು ಬಳಕೆದಾರರ ಅಭಿಪ್ರಾಯವಿರ್ಬಹುದು. 

ಮದುವೆ ದಿನ ಮಾಧ್ಯಮದ ಜೊತೆ ಮಾತನಾಡಿದ ಚೈತ್ರಾ, ನಾನು ಇವೆಂಟ್ ಮ್ಯಾನೇಜರ್. ನಿರೂಪಕಿಯೂ ಹೌದು. ವೇದಿಕೆ ಮೇಲೆ ಹೋದಾಗ ಜನರು ನಮ್ಮನ್ನು ನೋಡ್ಬೇಕು, ಮೆಚ್ಚಿಕೊಳ್ಬೇಕು. ಹಿಂದಿನಿಂದಲೂ ನಾನು ನನ್ನ ಕಾಸ್ಟ್ಯೂಮ್ಗೆ ಸ್ಪೇಷಲ್ ಇಂಪಾರ್ಟೆಂಟ್ ನೀಡ್ತಾ ಬಂದಿದ್ದೇನೆ. ಅದನ್ನು ವೀಕ್ಷಕರು ಇಷ್ಟಪಟ್ಟಿದ್ದಾರೆ. ಈಗ ನನ್ನದೇ ಮದುವೆ ಆಗಿರುವ ಕಾರಣ ಮತ್ತಷ್ಟು ಸ್ಪೇಷಲ್ ಆಗಿ ರೆಡಿಯಾಗಿದ್ದೇನೆ. ನಿಮಗೆ ಇಷ್ಟವಾಗಿದೆ ಅಂತ ನಾನು ಭಾವಿಸಿದ್ದೇನೆ ಎಂದು ಚೈತ್ರಾ ಹೇಳಿದ್ದರು. 

ಅಪ್ಪು-ಅಣ್ಣಾವ್ರ ಬಗ್ಗೆ ಲಕ್ಷ್ಮೀ ಹೀಗ್ ಹೇಳೋದಾ? ಮಹಾನ್ ನಟಿ ಹೇಳದ್ಮೇಲೆ ನಿಜ ಆಗಿರ್ಬಹುದು

ಅರಮನೆ ಮೈದಾನದಲ್ಲಿ ಚೈತ್ರಾ ವಾಸುದೇವನ್ ಮದುವೆ ಏರ್ಪಡಿಸಲಾಗಿತ್ತು. ಸ್ಯಾಂಡಲ್ವುಡ್ನ ಅನೇಕ ಕಲಾವಿದರು, ಸೆಲೆಬ್ರಿಟಿಗಳು ಮದುವೆಯಲ್ಲಿ ಪಾಲ್ಗೊಂಡಿದ್ದರು. ಇನ್ಸ್ಟಾ ಖಾತೆಯಲ್ಲಿ ಚೈತ್ರಾ ಮದುವೆಯ ಅನೇಕ ವಿಡಿಯೋಗಳು ವೈರಲ್ ಆಗ್ತಿವೆ. ಚೈತ್ರಾ ಸಹೋದರಿ ಅಕ್ಕನ ಮದುವೆಯಲ್ಲಿ ಮಿಂಚಿದ್ದಾರೆ. ಅಷ್ಟೇ ಅಲ್ಲ ಅಕ್ಕನ ಮದುವೆ ಆಗ್ತಿದ್ದಂತೆ ಕಣ್ಣೀರಿಟ್ಟಿದ್ದಾರೆ. ಚೈತ್ರಾ ವಾಸುದೇವನ್ ಹಾಗೂ ಚಂದನ ಬರೀ ಸಹೋದರಿಯರಲ್ಲ. ಆಪ್ತ ಸ್ನೇಹಿತೆಯರು. ಚೈತ್ರಾ ಮದುವೆಯಲ್ಲಿ ಸಾಕಷ್ಟು ಓಡಾಡಿರುವ, ಭಾವನಿಗಾಗಿ ಡಾನ್ಸ್ ಮಾಡಿ, ಅವರ ಪಾದ ತೊಳೆದಿರುವ ಚಂದನ ವಿಡಿಯೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 

ಮೆಹಂದಿ ಶಾಸ್ತ್ರದಲ್ಲೂ ಚೈತ್ರಾ ಚೆಂದದ ಡ್ರೆಸ್ ಧರಿಸಿ ಮಿಂಚಿದ್ದರು. ಫ್ಯಾರೀಸ್ನಲ್ಲಿ ಉಂಗುರ ಬದಲಿಸುವ ಶಾಸ್ತ್ರ ಮಾಡ್ಕೊಂಡು, ಫೋಟೋ ಶೂಟ್ ಮಾಡಿಸಿಕೊಂಡಿದ್ದರು ಚೈತ್ರಾ. ಬಡವರಿಗೆ ಸಹಾಯ ಮಾಡುವ ಗುರಿಯನ್ನು ಹೊಂದಿರುವ ಚೈತ್ರಾ ಮುಂದಿನ ಫೋಕಸ್ ಅಕಾಡಮಿ ಶುರು ಮಾಡೋದಾಗಿದೆ. ಇವೆಂಟ್ ಮ್ಯಾನೇಜ್ಮೆಂಟ್ ಜೊತೆ ನಿರೂಪಣೆ, ರಿಯಾಲಿಟಿ ಶೋ ಹಾಗೂ ಯುಟ್ಯೂಬರ್ ಆಗಿ ಚೈತ್ರಾ ಎಲ್ಲರಿಗೂ ಹತ್ತಿರವಾಗಿದ್ದಾರೆ. 

View post on Instagram