Asianet Suvarna News Asianet Suvarna News

ಈಗಿನವರ ಲವ್ ಬ್ರೇಕ್ ಅಪ್‌ಗೆ ಕಾರಣ ಕೇಳಿದರೆ ಸಿಲ್ಲಿ ಅನ್ಸುತ್ತೆ! ಡಾರ್ಲಿಂಗ್ ಕೃಷ್ಣ ಬೆಸ್ಟ್ ಫ್ರೆಂಡ್ ಯಾರು?

ರ್ಯಾಪಿಡ್ ರಶ್ಮಿ ಯುಟ್ಯೂಬ್ ಚಾನೆಲ್ ನಲ್ಲಿ ಈ ಬಾರಿ ಡಾರ್ಲಿಂಗ್ ಕೃಷ್ಣ ಕಾಣಿಸಿಕೊಂಡಿದ್ರು. ಪ್ರೀತಿಯಿಂದ ಹಿಡಿದು ಪತ್ನಿ, ಹೂಡಿಕೆ ಸೇರಿದಂತೆ ಅನೇಕ ವಿಷ್ಯವನ್ನು ಮನಬಿಚ್ಚಿ ಮಾತನಾಡಿದ್ದಾರೆ ಕೃಷ್ಣ.
 

What Darling Krishna Said In Rapid Rashmi Just Curious roo
Author
First Published Jul 16, 2024, 1:17 PM IST | Last Updated Jul 16, 2024, 1:17 PM IST

ಲವ್ ನೋಡೋಕೆ ಮೆಚ್ಯುರಿಟಿ ಬೇಕು. ಅದನ್ನು ಗಂಭಿರವಾಗಿ ನೋಡ್ಬೇಕು ಅನ್ನೋದು ಡಾರ್ಲಿಂಗ್ ಕೃಷ್ಣ  ಅಭಿಪ್ರಾಯ. ಈ ಬಾರಿ ರ್ಯಾಪಿಡ್ ರಶ್ಮಿ ಕಾರ್ಯಕ್ರಮಕ್ಕೆ ಬಂದ ಅವರು, ಪ್ರೀತಿಯ ಬಗ್ಗೆ ತಮ್ಮ ಅನುಭವ ಹಂಚಿಕೊಂಡಿದ್ದಾರೆ. 

ಈಗಿನ ದಿನಗಳಲ್ಲಿ ಪ್ರೀತಿ (Love) ಗೆ ಬಗ್ಗೆ ಯುವಕರು ಸಿರಿಯಸ್ ಇಲ್ಲ ಎನ್ನುತ್ತಾರೆ ಡಾರ್ಲಿಂಗ್ ಕೃಷ್ಣ (Darling Krishna) . ಇಂದು ಪ್ರೀತಿ ಮಾಡಿ, ನಾಳೆ ಬೋರ್ ಆಯ್ತು ಅನ್ನೋರೇ ಹೆಚ್ಚು ಎಂದ ಅವರು, ಅದಕ್ಕೆ ಉದಾಹರಣೆ ಕೂಡ ನೀಡಿದ್ದಾರೆ. ಲವ್ ಮಾಕ್ಟೇಲ್ 2 ಆಡಿಷನ್ ಗೆ ಬಂದಾಗ ಯುವಕರ ಮನಸ್ಥಿತಿ ಗೊತ್ತಾಯ್ತು. ಯಾಕಪ್ಪ ಬ್ರೇಕಪ್ ಆಯ್ತು ಅಂತ ಕೇಳಿದ್ರೆ ಬೋರ್ ಆಯ್ತು ಅಂತ ಒಬ್ಬರು ಉತ್ತರ ನೀಡಿದ್ರು. ಇದು ನನಗೆ ಅಚ್ಚರಿ ಅನ್ನಿಸ್ತು. ಒಂದು ವಯಸ್ಸಿನ ನಂತ್ರ ಪ್ರೀತಿ ಬಗ್ಗೆ ಜನರಿಗೆ ಅರ್ಥವಾಗುತ್ತೆ. ಪ್ರೀತಿ ಮಹತ್ವದ್ದು, ಅದೊಂದು ಬ್ಯೂಟಿಫುಲ್, ಅದು ನಮ್ಮ ಜೀವನ ಅನ್ನೋದು ಅರ್ಥವಾಗುತ್ತೆ ಎನ್ನುತ್ತಾರೆ ಡಾರ್ಲಿಂಗ್ ಕೃಷ್ಣ. ಇಲ್ಲಿ ವಯಸ್ಸಿಗಿಂತ ಪಾರ್ಟನರ್ ಹೇಗೆ ನೀವು ಆಯ್ಕೆ ಮಾಡುತ್ತೀರಿ ಎಂಬುದು ಮುಖ್ಯ. ನೀವು ಸಂಗಾತಿ ಜೊತೆ ಕಂಫರ್ಟ್ ಆಗಿದ್ದೀರಾ ಎನ್ನುವುದು ಬಹಳ ಇಂಪಾರ್ಟೆಂಟ್ ಆಗುತ್ತೆ ಎನ್ನುತ್ತಾರೆ ಡಾರ್ಲಿಂಗ್ ಕೃಷ್ಣ. 

41 ವರ್ಷಕ್ಕೆ ಕಾಲಿಟ್ಟ ಕತ್ರಿನಾ ಕೈಫ್; ಅಂಡಾಣು ಫ್ರೀಜ್‌ ಮಾಡಿಟ್ಟಿದ್ದೀರಾ ಎಂದ ನೆಟ್ಟಿಗರು

ಪತ್ನಿ ಮಿಲನಾ ನನ್ನ ಬೆಸ್ಟ್ ಫ್ರೆಂಡ್ : ಇನ್ನು ಮಿಲನಾ ಪ್ರೀತಿ ಬಗ್ಗೆ ಮಾತನಾಡಿದ ಡಾರ್ಲಿಂಗ್ ಕೃಷ್ಣ, ಡೇಟ್ ಮಾಡೋಕೆ ಶುರು ಮಾಡಿದ ಮೂರ್ನಾಲ್ಕು ದಿನಗಳಲ್ಲೇ ಅವರು ನನಗೆ ಪರ್ಫೆಕ್ಟ್ ಅನ್ನಿಸಿದ್ರು. ನನಗೆ ಯಾರೂ ಸ್ನೇಹಿತರಿಲ್ಲ. ಮಿಲನ ಒಬ್ಬರಿದ್ರೆ ಸಾಕು ಅನ್ನಿಸ್ತಿತ್ತು. ಯಾರು ಬೆಸ್ಟ್ ಫ್ರೆಂಡ್ ಅಂತ ಕೇಳಿದ್ರೆ ನಾನು ಮಿಲನ ಹೆಸರು ಹೇಳ್ತೇನೆ ಎನ್ನುವ ಮೂಲಕ ಮಿಲನ ಹಾಗೂ ಅವರ ಪ್ರೀತಿ ಎಷ್ಟು ಆಳವಾಗಿದೆ ಎಂಬುದನ್ನು ಹೇಳಿದ್ದಾರೆ. 

ಮಿಲನ ಹಾಗೂ ಡಾರ್ಲಿಂಗ್ ಕೃಷ್ಣ ಇಷ್ಟು ಪ್ರೀತಿ ಮಾಡೋಕೆ, ಅಂಟಿಕೊಂಡಿರೋಕೆ, ಸ್ನೇಹಿತರಾಗಿರೋಕೆ ಕಾರಣ ಇಬ್ಬರ ಇಂಟರೆಸ್ಟ್. ವೃತ್ತಿಯಿಂದ ಹಿಡಿದು, ಎಲ್ಲ ಕ್ಷೇತ್ರಗಳಲ್ಲೂ ಇಬ್ಬರೂ ಒಂದೇ ಆಸಕ್ತಿ ಹೊಂದಿದ್ದೀವಿ ಎನ್ನುತ್ತಾರೆ ಅವರು. ಟ್ರಾವೆಲ್ ಇಷ್ಟಪಡುವ ಜೋಡಿಗೆ, ಪಾರ್ಟಿ ಇಷ್ಟವಾಗೋಲ್ಲ. ಡ್ರಿಂಕ್, ಸಿಗರೇಟ್‌ನಿಂದ ಇಬ್ಬರೂ ದೂರ. ವೃತ್ತಿ ಜೀವನಕ್ಕೆ ಪಾರ್ಟಿ ಸಹಾಯ ಮಾಡುತ್ತೆ ಅನ್ನೋದನ್ನು ನಾನು ನಂಬೋಲ್ಲ. ನನಗೆ ಪಾರ್ಟಿ ಇಷ್ಟವಿಲ್ಲ ಎನ್ನುತ್ತಾರೆ ಡಾರ್ಲಿಂಗ್ ಕೃಷ್ಣ. ಕ್ರಿಕೆಟ್ ಟೈಂನಲ್ಲಿ ನಟ ಸುದೀಪ್ ಸೇರಿ ಉಳಿದ ಕಲಾವಿದರ ಜೊತೆ ಪಾರ್ಟಿ ಮಾಡಿದ್ರೂ ಅಲ್ಲಿ ನೋ ಡ್ರಿಂಕ್ಸ್ ಎನ್ನುತ್ತಾರೆ ಅವರು. 

ಸೂಪರ್ ಸ್ಟಾರ್ ಗುಣ ಯಾವುದು? : ಟ್ಯಾಲೆಂಟ್ ಹಾಗೂ ಫ್ಯಾಷನ್ ಜೊತೆ ಹಾರ್ಡ್ ವರ್ಕ್ ನಿಂದ ಜನರು ಸೂಪರ್ ಸ್ಟಾರ್ ಆಗಿದ್ದು ಎನ್ನುತ್ತಾರೆ ಡಾರ್ಲಿಂಗ್ ಕೃಷ್ಣ.  ಪ್ರತಿ ಕೆಲಸವನ್ನು ಹಚ್ಚಿಕೊಂಡು ಮಾಡಿದಾಗ್ಲೇ ಯಶಸ್ಸು. ಅದಕ್ಕೆ ಸುದೀಪ್ ಉದಾಹರಣೆ ಎನ್ನುತ್ತಾರೆ ಡಾರ್ಲಿಂಗ್ ಕೃಷ್ಣ. 

ಪತ್ನಿ ಅಪರ್ಣಾ ಜೊತೆ ಕಳೆದ ಆಪ್ತ ಕ್ಷಣಗಳ ಫೋಟೋಗಳನ್ನು ಹಂಚಿಕೊಂಡ ನಾಗರಾಜ್ ವಸ್ತಾರೆ

ಇವತ್ತು ನಾನು ಹೇಗೆ ಇದ್ರೂ ಅದಕ್ಕೆ ಅಪ್ಪು ಸರ್ ಕಾರಣ ಎನ್ನುತ್ತಾರೆ ಡಾರ್ಲಿಂಗ್ ಕೃಷ್ಣ. ಮೇಕಪ್‌ನಿಂದ ಹಿಡಿದು ಪ್ರತಿಯೊಂದನ್ನೂ ಅವರಿಂದ ಕಲಿತಿದ್ದಾರಂತೆ. ವಾಲೆಟ್ ನಲ್ಲಿ ಅಪ್ಪು ಫೋಟೋ ಇಟ್ಕೊಂಡಿದ್ದಾರಂತೆ. ಇನ್ನು ಹಣದ ಬಗ್ಗೆ ಮಾತನಾಡಿದ ಡಾರ್ಲಿಂಗ್ ಕೃಷ್ಣ, ಹೂಡಿಕೆ ಮೇಲೆ ನಂಬಿಕೆ ಇಡ್ತಾರೆ. ಎಷ್ಟೇ ಹಣ ಗಳಿಸಿ, ಶೇಕಡಾ 75ರಷ್ಟು ಹಣವನ್ನು ಹೂಡಿಕೆ ಮಾಡುವ ಪ್ಲಾನ್ ಮಾಡಿದ್ದಾರೆ ಕೃಷ್ಣ. ಸ್ಟಾಕ್ಸ್, ಎನ್‌ಪಿಎಸ್, ಮ್ಯೂಚ್ಯುವಲ್ ಫಂಡ್ (Mutual Fund)ನಲ್ಲಿ ಹಣ ಹೂಡಿದ್ದಾರೆ. ಅಪ್ಪನಾಗುವ ಕ್ಷಣವನ್ನು ಎಂಜಾಯ್ ಮಾಡ್ತಿದ್ದೇನೆ, ಇದು ಒಳ್ಳೆ ಟೈಂ ಎನ್ನುತ್ತಾರೆ ಡಾರ್ಲಿಂಗ್ ಕೃಷ್ಣ. ಮಕ್ಕಳ ಬಗ್ಗೆ ಒಂದಿಷ್ಟು ಕನಸಿದೆ ಎಂದಿದ್ದಾರೆ. 

Latest Videos
Follow Us:
Download App:
  • android
  • ios