100 ಕೋಟಿ ಕ್ಲಬ್ ಸೇರಿದ ಆಲಿಯಾ 8ನೇ ಚಿತ್ರ! '100 ಕೋಟಿ ರಾಣಿ' ಪಟ್ಟಕ್ಕೇರಿದ ನಟಿ
ನಟಿ ಆಲಿಯಾ ಭಟ್ ಅವರ ಎಂಟು ಚಿತ್ರಗಳು 100 ಕೋಟಿ ರೂಪಾಯಿ ಕ್ಲಬ್ ಸೇರಿದೆ. ಯಾವುವು ಈ ಚಿತ್ರಗಳು?
ನಟಿ ಆಲಿಯಾ ಭಟ್ (Alia Bhatt) ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಇವರ ಅಭಿನಯಕ್ಕೆ ಮನಸೋಲದವರೇ ಇಲ್ಲವೆನ್ನಬಹುದೇನೋ. ಹಲವಾರು ಚಿತ್ರಗಳಲ್ಲಿ ವಿಭಿನ್ನವಾಗಿ ನಟಿಸಿ ಸೈ ಎನಿಸಿಕೊಂಡಿದ್ದಾರೆ ಆಲಿಯಾ. ಇತ್ತೀಚೆಗೆ ಬಿಡುಗಡೆಯಾದ ಅವರ ಚಿತ್ರ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ'. ಈ ಸಿನಿಮಾವು ವ್ಯತಿರಿಕ್ತ ಹಿನ್ನೆಲೆ ಮತ್ತು ಸಂಸ್ಕೃತಿಗಳಿಗೆ ಸೇರಿದ ದಂಪತಿಯ ನಡುವಿನ ಪ್ರೇಮಕಥೆಯನ್ನು ಹೇಳುತ್ತದೆ. ಆಲಿಯಾ ಭಟ್ ನಾಯಕಿಯಾಗಿ ನಟಿಸಿದ್ದು, ನಟ ರಣವೀರ್ ಸಿಂಗ್ ನಾಯಕನಾಗಿ ನಟಿಸಿದ್ದಾರೆ. ಕರಣ್ ಜೋಹರ್ ನಿರ್ದೇಶಿಸಿರೋ ಈ ಚಿತ್ರ ಬಿಡುಗಡೆಗೊಂಡ ಮೊದಲ ವಾರದಲ್ಲಿ ಗಲ್ಲಾಪೆಟ್ಟಿಗೆಯಲ್ಲಿ 45.90 ಕೋಟಿ ರೂ. ಸಂಗ್ರಹಿಸಿತ್ತು. ಜುಲೈ 28ರಂದು ತೆರೆಕಂಡಿರೋ ಈ ಚಿತ್ರ ಇದೀಗ ಬಾಕ್ಸ್ ಆಫೀಸ್ ಕಲೆಕ್ಷನ್ 100 ಕೋಟಿ ಮೀರಿದೆ. ಈ ಮೂಲಕ ನಟಿ ಆಲಿಯಾ ಕಿರೀಟಕ್ಕೆ ಇನ್ನೊಂದು ಗರಿ ಬಂದಿದೆ. ಅದೇನೆಂದರೆ ಬಾಕ್ಸ್ ಆಫೀಸ್ ಕಲೆಕ್ಷನ್ 100 ಕೋಟಿ ಮೀರಿದ ಆಲಿಯಾ ಭಟ್ ಅವರ 8ನೇ ಚಿತ್ರವಾಗಿದೆ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ.
ಇದರೊಂದಿಗೆ ಆಲಿಯಾ ಭಟ್ ಅವರಿಗೆ 100 ಕೋಟಿ ಕ್ಲಬ್ನ ರಾಣಿ ಎಂಬ ಬಿರುದು ದಕ್ಕಿದೆ. ಹಾಗಿದ್ದರೆ ಇದಕ್ಕೂ ಮೊದಲು ಆಲಿಯಾ ಅವರ ಯಾವ ಚಿತ್ರಗಳು 100 ಕೋಟಿ ರೂಪಾಯಿ ಕ್ಲಬ್ ಸೇರಿದೆ ಎಂದು ನೋಡುವುದಾದರೆ, ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ (Rocky aur Rani Kii Prem Kahaani) ಮುಂಚಿತವಾಗಿ 2014ರಲ್ಲಿ ಬಿಡುಗಡೆಯಾದ ಅಭಿಷೇಕ್ ವರ್ಮನ್ ನಿರ್ದೇಶನದ ಚೊಚ್ಚಲ ಚಿತ್ರ 2 ಸ್ಟೇಟ್ಸ್ 102.13 ಕೋಟಿ ಕಲೆಕ್ಷನ್ ಮಾಡಿದೆ. ಇದರಲ್ಲಿ ಆಲಿಯಾ ಐಐಎಂ ಅಹಮದಾಬಾದ್ ತಮಿಳು ವಿದ್ಯಾರ್ಥಿನಿ ಅನನ್ಯಾ ಪಾತ್ರವನ್ನು ನಿರ್ವಹಿಸಿದ್ದಾರೆ. ಬಳಿಕ 2017ರಲ್ಲಿ ಬಿಡುಗಡೆಯಾದ ಶಶಾಂಕ್ ಖೇತಾನ್ ರ ರೊಮ್ಯಾಂಟಿಕ್ ಕಾಮಿಡಿ ಚಿತ್ರ ಬದರಿನಾಥ್ ಕಿ ದುಲ್ಹನಿಯಾದ ಬಾಕ್ಸ್ ಆಫೀಸ್ ಕಲೆಕ್ಷನ್ 76.81 ಕೋಟಿ. ಇದು ಆಲಿಯಾ ಅವರ ಸ್ವಂತ 2014 ಚಿತ್ರ ಹಂಪ್ಟಿ ಶರ್ಮಾ ಕಿ ದುಲ್ಹನಿಯಾದ ಮುಂದುವರಿದ ಭಾಗ.
ಆಲಿಯಾಳನ್ನು ರಣಬೀರ್ ಸಿಂಗ್ ತಬ್ಬಿಕೊಂಡ್ರೆ ಫ್ಯಾನ್ಸ್ ಹೀಗ್ ಹೇಳೋದಾ?
ಆಲಿಯಾ ಅವರ ರಾಝಿ ಸಿನಿಮಾ ಕೂಡ 123.84 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಮೇಘನಾ ಗುಲ್ಜಾರ್ ಸ್ಪೈ ಥ್ರಿಲ್ಲರ್ ಸಿನಿಮಾ ಇದಾಗಿದ್ದು, ಪಾಕಿಸ್ತಾನಿ ಸೇನಾ ಜನರಲ್ ಕುಟುಂಬದಿಂದ ಬಂದ ಕಾಶ್ಮೀರಿ ಗೂಢಚಾರ ಸೆಹ್ಮತ್ ಪಾತ್ರದಲ್ಲಿ ಆಲಿಯಾ ಮಿಂಚಿದ್ದರೆ, ವಿಕ್ಕಿ ಕೌಶಲ್ (Vicky Koushal) ಪ್ರಮುಖ ಪಾತ್ರ ವಹಿಸಿದ್ದರು. ಜೋಯಾ ಅಖ್ತರ್ ಅವರ ಗಲ್ಲಿ ಬಾಯ್ ಚಿತ್ರದ ಬಾಕ್ಸ್ ಆಫೀಸ್ ಕಲೆಕ್ಷನ್ 140.25 ಕೋಟಿ ರೂ. ಇದರಲ್ಲಿ, ಆಲಿಯಾ ರಣವೀರ್ ಸಿಂಗ್ ಪಾತ್ರದ ಮುರಾದ್ನ ಸಿಟ್ಟಿನ ಗರ್ಲ್ ಫ್ರೆಂಡ್ ಸಫೀನಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
2022 ಬಾಲಿವುಡ್ ನಲ್ಲಿ ಭಾರೀ ಚರ್ಚೆಯಾದ ಸಿನಿಮಾ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಗಂಗೂಬಾಯಿ ಕಥಿಯಾವಾಡಿ. ಈ ಚಿತ್ರ 129.10 ಕೋಟಿ ಕಲೆಕ್ಷನ್ ಮಾಡಿದೆ. 1950-60ರ ದಶಕದಲ್ಲಿ ಮುಂಬೈನ ಲೈಂಗಿಕ ಕಾರ್ಯಕರ್ತೆ ಪಾತ್ರವನ್ನು ಆಲಿಯಾ ನಿರ್ವಹಿಸಿದ್ದರು. ಇದಾದ ಬಳಿಕ ರಾಜಮೌಳಿ ಅವರ RRR ಸಿನಿಮಾದ ಬಗ್ಗೆ ಹೇಳುವುದೇ ಬೇಡ. ರಾಮ್ಚರಣ್ ಮತ್ತು ಜೂನಿಯರ್ ಎನ್ಟಿಆರ್ ಜೊತೆ ಆಲಿಯಾ ನಟಿಸಿದ್ದು, ತೆಲುಗು ಚಿತ್ರವು ಬಾಕ್ಸ್ ಆಫೀಸ್ನಲ್ಲಿ 274.31 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿತು. ಅಯಾನ್ ಮುಖರ್ಜಿ ನಿರ್ದೇಶನದ ಬ್ರಹ್ಮಾಸ್ತ್ರ ಸಿನಿಮಾ ಕೂಡ ಭರ್ಜರಿ ಕಲೆಕ್ಷನ್ ಮಾಡಿತ್ತು. ಇದು ಪತಿ ರಣಬೀರ್ ಕಪೂರ್ (Ranbeer Kapoor) ಜೊತೆಗಿನ ಮೊದಲ ಚಿತ್ರವಾಗಿದ್ದು, ಈ ಸಿನಿಮಾ 257.44 ಕೋಟಿ ಕಲೆಕ್ಷನ್ ಮಾಡಿದೆ.
RRPK: 72 ವರ್ಷದ ಶಬನಾ ಜೊತೆ ಲಿಪ್ಲಾಕ್ ಅನುಭವ ಹಂಚಿಕೊಂಡ ಧರ್ಮೇಂದ್ರ, ರೊಮ್ಯಾನ್ಸ್‌ಗೆಲ್ಲಿಯ ವಯಸ್ಸು?