Asianet Suvarna News Asianet Suvarna News
breaking news image

ಸಪೋರ್ಟ್ ಮಾಡಿದವ್ರು ಗೂಬೆಗಳ ಥರ ಕಾಣ್ತಾರೆ; ಹಳೆಯ ಘಟನೆಗೆ ಟಾಂಗ್ ಕೊಟ್ರಾ ಕಿಚ್ಚ ಸುದೀಪ್?

ಪಾಠ ಮುಗೀತು. ನಾವು ಏನ್ ಮಾಡ್ಬೇಕು? ಚಾನೆಲ್ ಆನ್ ಮಾಡ್ಬೇಕು, ನಿಮ್ ನ್ಯೂಸ್ ನೋಡ್ತಾ ಇರ್ಬೇಕು, ನೀವು ಏನ್‌ ಏನ್ ಹೇಳ್ತೀರಾ ಅಂತ ನೋಡ್ಬಿಟ್ಟು ನಾವ್ ಏನ್ ಏನ್..

Kannada actor Kichcha Sudeep says not to ask sandalwood industry opinion in this incident srb
Author
First Published Jun 19, 2024, 5:13 PM IST

ಸ್ಯಾಂಡಲ್‌ವುಡ್‌ ನಟ 'ಡಿ ಬಾಸ್' ಖ್ಯಾತಿಯ ನಟ ದರ್ಶನ್ ಅವರು ಸದ್ಯ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಪೊಲೀಸ್ ಕಸ್ಟಡಿಯಲ್ಲಿ ಇರುವುದು ಗೊತ್ತೇ ಇದೆ. ಈಗಾಗಲೇ ಈ ಘಟನೆ ನಡೆದು ಒಂದು ವಾರ ಕಳೆದು ಹೋಗಿದೆ. ಈ ನಡುವೆ ಕೊಲೆ ಕೇಸ್‌ ತನಿಖೆ ಸಾಕಷ್ಟು ಹಂತಗಳನ್ನು ದಾಟಿದೆ. ಆದರೆ, ಕೇಸ್‌ ತನಿಖೆ ಹಂತ ದಾಟಿ ಕೋರ್ಟ್‌ ಹಂತಕ್ಕೆ ಇನ್ನೂ ಹೋಗಿಲ್ಲ. ಈ ವೇಳೆ ಹಲವು ಸ್ಯಾಂಡಲ್‌ವುಡ್ ತಾರೆಯರು ದರ್ಶನ್ ಕೊಲೆ ಕೇಸ್‌ ಬಗ್ಗೆ ತಮ್ಮದೇ ಆದ ಅಭಿಪ್ರಾಯ ಹೊರಹಾಕಿದ್ದಾರೆ. 

ನಟ ಕಿಚ್ಚ ಸುದೀಪ್, ರಿಯಲ್ ಸ್ಟಾರ್ ಉಪೇಂದ್ರ, ನಟಿ ರಚಿತಾ ರಾಮ್ ಸೇರಿದಂತೆ ಹಲವರು ತಮ್ಮ ಅಭಿಪ್ರಾಯ ಹೇಳಿದ್ದಾರೆ. ನಟ ದರ್ಶನ್ ಘಟನೆ ಬಗ್ಗೆ ಸುದೀಪ್ 'ಕೊಲೆಯಾಗಿರುವ ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಬೇಕು. ಹಾಗೇ ಕನ್ನಡ ಚಿತ್ರರಂಗಕ್ಕೆ ಅಂಟಿರುವ ಕಪ್ಪು ಕಲೆ ಹೋಗಬೇಕು' ಎಂಬರ್ಥದಲ್ಲಿ ಮಾತನಾಡಿದ್ದಾರೆ. ಚಿತ್ರೋದ್ಮದ ನಿಲುವೇನು ಎಂಬ ಪ್ರಶ್ನೆಗೆ ಸುದೀಪ್ ಮಾರ್ಮಿಕ ಉತ್ತರ ನೀಡಿದ್ದಾರೆ ಎನ್ನಬಹುದೇ? ನೀವೇ ನೋಡಿ ನಿರ್ಧರಿಸಿ.. ಈ ಬಗ್ಗೆ ಕಿಚ್ಚ ಸುದೀಪ್ ಹೇಳಿದ್ದೇನು?

ಕರ್ನಾಟಕದ ಋಣ ತೀರಿಸೋಕಾಗಲ್ಲ, ಆದ್ರೂ ನನ್ ಕರ್ತವ್ಯ ಮಾಡ್ತೀನಿ; ರಾಕಿಂಗ್ ಸ್ಟಾರ್ ಯಶ್

'ಚಿತ್ರೋದ್ಯಮಕ್ಕೆ ಏನು ನಿಲುವು ತಗೊಂತೀರಾ ಅಂತ ದಯವಿಟ್ಟು ಕೇಳ್ಬೇಡಿ. ತಗೊಂಡಾಗೆಲ್ಲಾ ನಾವೆಲ್ಲಾ ಎಷ್ಟು ಜೋಕ್ಸ್ ಆಗಿದೀವಿ ಅಂದ್ರೆ, ಯಾರೋ ಒಬ್ಬರು ಬರ್ತಾರೆ, ನಂಗೆ ಸಿಕ್ಕಾಪಟ್ಟೆ ಹೊಡಿತಾರೆ ಇವ್ರು ಮನೆಲ್ಲಿ ಅಂತ ಹೇಳಿ ಇನ್ನೊಬ್ರ ಮನೆಗೆ ಹೋಗ್ತಾರೆ. ಅವ್ರಿಗೆ ಸಪೋರ್ಟ್‌ ಕೇಳ್ತಾರೆ. ಅವ್ರು ಅವ್ರಿಗೆ ಸಪೋರ್ಟ್‌ ಮಾಡ್ತಾರೆ. ಫೈನಲ್ ಆಗಿ ಅವ್ರಿಬ್ರು ಒಂದಾಗ್ತಾರೆ, ಸಪೋರ್ಟ್ ಮಾಡಿದವ್ರು ಒಂದಾಗ್ತಾರೆ, ಸಪೋರ್ಟ್ ಮಾಡಿದವ್ರು ಗೂಬೆಗಳ ಥರ ಕಾಣ್ತಾರೆ.

ರಮ್ಯಾ-ರಕ್ಷಿತಾ ಸಿನಿಮಾ ಬಗ್ಗೆ ನಿರ್ಮಾಪಕರು ಹೇಳಿದ್ದೇನು; ಸಕ್ಸಸ್‌ಗೆ ಯಾವ ಫಾರ್ಮುಲಾ ಬಳಸಿದ್ರು? 

ಪಾಠ ಮುಗೀತು. ನಾವು ಏನ್ ಮಾಡ್ಬೇಕು? ಚಾನೆಲ್ ಆನ್ ಮಾಡ್ಬೇಕು, ನಿಮ್ ನ್ಯೂಸ್ ನೋಡ್ತಾ ಇರ್ಬೇಕು, ನೀವು ಏನ್‌ ಏನ್ ಹೇಳ್ತೀರಾ ಅಂತ ನೋಡ್ಬಿಟ್ಟು ನಾವ್ ಏನ್ ಏನ್ ಮಾಡ್ಬಾರ್ದು ಅಂತ ಕಲೀತಾ ಇರ್ಬೇಕು. ಇಂಥದ್ರಲ್ಲಿ, ನಿಲುವು ಗಿಲುವು ಏನೂ ಬೇಡ' ಎಂದಿದ್ದಾರೆ ಸುದೀಪ್. 11 ವರ್ಷದ ಹಿಂದೆ ನಡೆದ ಘಟನೆ ಗೊತ್ತಿರುವವರಿಗೆ ಈ ಬಗ್ಗೆ ಎಲ್ಲವೂ ಗೊತ್ತಿದೆ. ಆದರೆ, ಆ ಘಟನೆಯ ಬಗ್ಗೆ ಅರಿವು ಇಲ್ಲದವರಿಗೆ ಏನೂ ಅರ್ಥವಾಗಲಿಕ್ಕಿಲ್ಲ. ಸುದೀಪ್ ನೇರವಾಗಿ ಹೇಳದಿರುವುದನ್ನು ನಾವು ಹೇಗೆ ಹೇಳುವುದು?

ರೋಬೋಟ್ ತರ ಕೆಲಸ ಮಾಡಬೇಡಿ, ಫ್ಯಾಷನ್ ಇರಲಿ; ಪ್ರಿಯಾಂಕಾ ಚೋಪ್ರಾ ಕಿವಿ ಮಾತು!

ಒಟ್ಟಿನಲ್ಲಿ, ನಟ ದರ್ಶನ್ ಆರೋಪಿಯಾಗಿರುವ ಕೊಲೆ ಕೇಸ್‌ ತನಿಖೆ ಮುಗಿದು ಯಾವ ರಿಪೋರ್ಟ್ ಬರುತ್ತೋ ಎಂದು ಎಲ್ಲರೂ ಕಾಯುತ್ತಿದ್ದಾರೆ. ದರ್ಶನ್ ಅಭಿಮಾನಿಗಳು, ವಿರೋಧಿಗಳು ಎಲ್ಲರೂ ಅವರದೇ ಆದ ರೀತಿಯಲ್ಲಿ ಸೋಷಿಯಲ್ ಮೀಡಿಯಾಗಳಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಕಾಮೆಂಟ್ ಮಾಡಿಯೇ ಒಬ್ಬ ಪ್ರಾಣ ಕಳೆದುಕೊಂಡಿದ್ದರೂ ಇನ್ನೂ ಕೆಲವರು ಅದನ್ನೇ ಕೆಲಸ ಮಾಡಿಕೊಂಡಿದ್ದಾರೆ ಎಂಬುದಂತೂ ಸದ್ಯಕ್ಕೆ ಕಂಡುಬರುವ ಸತ್ಯ. 

Latest Videos
Follow Us:
Download App:
  • android
  • ios