‘ವಿಕ್ರಾಂತ ರೋಣ’ ಚಿತ್ರದ ಡೆಡ್ ಮ್ಯಾನ್‌ಸ್ ಆ್ಯಂಥಮ್ ವೀಡಿಯೋ ಕೋಟಿಗೂ ಅಧಿಕ ವೀಕ್ಷಣೆ ದಾಖಲಿಸಿ ಜನಪ್ರಿಯ

ಸುದೀಪ್ ನಟನೆಯ ‘ವಿಕ್ರಾಂತ ರೋಣ’ ಚಿತ್ರದ ಡೆಡ್ ಮ್ಯಾನ್‌ಸ್ ಆ್ಯಂಥಮ್ ವೀಡಿಯೋ ಕೋಟಿಗೂ ಅಧಿಕ ವೀಕ್ಷಣೆ ದಾಖಲಿಸಿ ಜನಪ್ರಿಯ ವಾಗಿದೆ. ಈ ಹಿನ್ನೆಲೆಯಲ್ಲಿ ನಿರ್ದೇಶಕ ಅನೂಪ್ ಭಂಡಾರಿ ತಂಡದ ಪರಿಚಯ ಮಾಡಿದ್ದಾರೆ. ಮುಖ್ಯ ಧ್ವನಿ ನಿರಂಜ್ ಸುರೇಶ್ ಅವರದು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

YouTube video player

ಕೇರಳದ ಪ್ರತಿಭಾವಂತ ಹಿನ್ನೆಲೆ ಗಾಯಕರಾಗಿ ಗುರುತಿಸಿಕೊಂಡಿರುವ ನಿರಂಜ್ ಹಿಂದೆ ವಿಲನ್ ಚಿತ್ರದ ಪೊ್ರೀಮೋ ಹಾಡಿಗೆ ದನಿಯಾಗಿದ್ದರು. ಈ ವೀಡಿಯೋದಲ್ಲಿನ ಮಗುವಿನ ದನಿ ಪುಟಾಣಿ ಆರಾಧ್ಯಾಳದು. ಸಾಹಿತ್ಯ ಅನೂಪ್ ಭಂಡಾರಿ ಅವರದು. ಅಜನೀಶ್ ಲೋಕನಾಥ್ ಸಂಗೀತವಿದೆ. ಜಾಕ್ ಮಂಜು ಚಿತ್ರದ ನಿರ್ಮಾಪಕರು.

ವಿಕ್ರಾಂತ್ ರೋಣ ಲುಕ್‌ ನೋಡಿ ವಾವ್ಹಾ ಎಂದ ನಟ ಸಲ್ಮಾನ್ ಖಾನ್!

ಬಾಲಿವುಡ್ ನಟಿ ಜಾಕ್ವೆಲಿನ್ ಬೆಂಗಳೂರಿಗೆ ಆಗಮಿಸಿ ವಿಕ್ರಾಂತ್ ರೋಣ ಚಿತ್ರದ ಸ್ಪೆಷಲ್ ಹಾಡಿಗೆ ಡ್ಯಾನ್ಸ್ ಪ್ರ್ಯಾಕ್ಟಿಸ್ ಮಾಡುತ್ತಿದ್ದರು. ಸುಮಾರು 4.5 ರಿಂದ 5 ಕೋಟಿ ರೂ. ವೆಚ್ಚದ ಅದ್ದೂರಿ ಸೆಟ್‌ನಲ್ಲಿ ಈ ಹಾಡು ಚಿತ್ರೀಕರಣಗೊಂಡಿದೆ ಎಂದು ನಿರ್ಮಾಪಕ ಜಾಕ್ ಮಂಜು ಹೇಳಿದ್ದರೆ.

ನೃತ್ಯ ನಿರ್ದೇಶಕ ಜಾನಿ ಮಾಸ್ಟರ್ ಸಾರಥ್ಯದಲ್ಲಿ ಹಾಡನ್ನು ಚಿತ್ರೀಕರಿಸಲಾಗಿದೆ. ಜಾಕ್ವೆಲಿನ್ ಹಾಡಿನಲ್ಲಿ ಮಾತ್ರವಲ್ಲ, ಚಿತ್ರದ ಪ್ರಮುಖ ದೃಶ್ಯಗಳಲ್ಲೂ ನಟಿಸುತ್ತಿದ್ದಾರೆ. ಜಾಕ್ವೆಲಿನ್ ಡ್ಯಾನ್ಸ್, ಕೆಲಸದ ಮೇಲಿನ ಶ್ರದ್ಧೆ, ಪ್ರತಿ ದೃಶ್ಯಕ್ಕೂ ಪೂರ್ವ ತಯಾರಿ ಮಾಡಿಕೊಂಡು ಬರುತ್ತಿದ್ದ ರೀತಿಗೆ ನಟ ಸುದೀಪ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.