ಮೈಸೂರಿನಲ್ಲಿ ಮಾತನಾಡಿದ ವಿಷ್ಣು ಪುತ್ರಿ ಕೀರ್ತಿ, ತಂದೆಯ ಪುತ್ಥಳಿ ಧ್ವಂಸಗೊಳಿಸಿದವರಿಗೆ ಖಡಕ್ ತಿರುಗೇಟು ಕೊಟ್ಟಿದ್ದಾರೆ.
ಸಿಂಹ ಯಾವತ್ತಿದ್ದರೂ ಸಿಂಹವೇ. ತಂದೆ ಸಿಂಹದಂತೆ ಇದ್ದರು, ಯಾವಾಗಲೂ ಸಿಂಹದಂತೆ ಇರ್ತಾರೆ. ನಾಯಿಗಳು ಬೊಗಳಿದ ತಕ್ಷಣ ದೇವಲೋಕ ಹಾಳಾಗೋಲ್ಲ ಎಂದು ವಿಷ್ಣು ಪುತ್ರಿ ಕೀರ್ತಿ ಹೇಳಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಕೀರ್ತಿ, ತಂದೆಯ ಪುತ್ಥಳಿ ಧ್ವಂಸಗೊಳಿಸಿದವರಿಗೆ ಖಡಕ್ ತಿರುಗೇಟು ಕೊಟ್ಟಿದ್ದಾರೆ. ತಂದೆಯ ಪುತ್ಥಳಿ ಧ್ವಂಸ ಮಾಡಿದವರಿಂದ ತಂದೆಯ ಹೆಸರು ಅಳಿಸಲಾಗೋಲ್ಲ. ಅವರ ಅಸ್ತಿತ್ವಕ್ಕೆ , ಅವರ ಹೆಸರಿಗೆ ಯಾವತ್ತು ಧಕ್ಕೆ ಬರೋಲ್ಲ. ತಂದೆಯ ಹೆಸರು ಅವರ ಮೇಲಿನ ಪ್ರೀತಿ ಅಭಿಮಾನಿಗಳ ಮನಸ್ಸಲ್ಲಿ ಇದೆ ಎಂದಿದ್ದಾರೆ.
ಸಿನಿಮಾ ಆಗಲಿದೆಯೇ ನಟಿ ಸುಮಲತಾ ರಾಜಕೀಯ ಜೀವನ!
ಇನ್ನೊಂದು ವರ್ಷದಲ್ಲಿ ತಂದೆಯ ಸ್ಮಾರಕ ಮೈಸೂರಿನಲ್ಲಿ ನಿರ್ಮಾಣ ಆಗಲಿದೆ. ಒಳ್ಳೆಯ ಕೆಲಸಗಳು ಸ್ವಲ್ಪ ತಡವಾಗಿಯೇ ಆಗೋದು. ತಂದೆ ಎಂದಾಕ್ಷಣ ಅವರ ಪ್ರೀತಿಯೆ ನೆನಪಾಗುತ್ತೆ. ಇಂದು ಅವರ ಸ್ಮರಣೆ ಮಾಡುವ ಎಲ್ಲ ಅಭಿಮಾನಿಗಳಿಗೆ ನಮ್ಮ ಧನ್ಯವಾದ ಹೇಳ್ತಿವಿ ಎಂದಿದ್ದಾರೆ.
ಮೈಸೂರಿನಲ್ಲಿ ಸಾಹಸಸಿಂಹ ಡಾ.ವಿಷ್ಣುವರ್ಧನ್ 11ನೇ ವರ್ಷದ ಪುಣ್ಯಸ್ಮರಣೆ ಆಚರಣೆ ಕಾರ್ಯಕ್ರಮದಲ್ಲಿ ವಿಷ್ಣು ಪತ್ನಿ ಭಾರತಿ ವಿಷ್ಣುವರ್ಧನ್, ಪುತ್ರಿ ಕೀರ್ತಿ ಭಾಗಿಯಾದರು.
ವಿಷ್ಣು ಪ್ರತಿಮೆ ಧ್ವಂಸ: ಆಕ್ರೋಶ ವ್ಯಕ್ತ ಪಡಿಸಿದ ದರ್ಶನ್, ಸುದೀಪ್!
ಮೈಸೂರಿನ ಹಾಲಾಳು ಗ್ರಾಮದಲ್ಲಿರುವ ವಿಷ್ಣು ಸ್ಮಾರಕ ಸ್ಥಳದಲ್ಲಿ ವಿಷ್ಣು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪರ್ಚನೆ ಮಾಡಿ ಪುಣ್ಯಸ್ಮರಣೆ ಮಾಡಲಾಗಿದೆ. ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆ ಅಭಿಮಾನಿಗಳು ಭಾಗಿಯಾದರು.
ವಿಷ್ಣುವರ್ಧನ್ ಬಗ್ಗೆ ಮಾತನಾಡುವವರು ಇರಬೇಕು. ಹಾಗಿದ್ದಲ್ಲಿ ಮಾತ್ರ ಅವರ ಇರುವಿಕೆ ಗೊತ್ತಾಗುತ್ತೆ ಎಂದು ವಿಷ್ಣು ಪುತ್ಥಳಿ ಧ್ವಂಸ ಪ್ರಕರಣಕ್ಕೆ ನಟಿ ಭಾರತಿ ವಿಷ್ಣುವರ್ಧನ್ ಮೈಸೂರಿನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಮೊನ್ನೆಯ ಘಟನೆಗೆ ಇಡೀ ಚಿತ್ರರಂಗ ಪ್ರತಿಕ್ರಿಯೆಸಿದೆ. ಘಟನೆಗೆ ಪ್ರತಿಕ್ರಿಯಿಸಿದ ಎಲ್ಲರಿಗು ಧನ್ಯವಾದಗಳು. ಎಲ್ಲರ ಮನದಲ್ಲು ವಿಷ್ಣು ಇದ್ದಾರೆ. ಯಾರೋ ಕೆಲವರು ಅವರ ಬಗ್ಗೆ ಮಾತನಾಡುತ್ತಾರೆ. ಮಾತನಾಡುವವರು ಇದ್ದಾಗಲೇ ನಮ್ಮವರು ಇದ್ದಾರೆ ಅನಿಸೋದು. ಪುತ್ಥಳಿ ಧ್ವಂಸವನ್ನ ಅವಮಾನ ಅಂದುಕೊಳ್ಳಬಾರದು. ಅದನ್ನ ಆರ್ಶಿವಾದ ಅಂದುಕೊಳ್ಳೋಣ. ಅಂತವರಿಗೆ ನಾನು ಏನು ಹೇಳೋದು ಇಲ್ಲ. ಅಂತವರ ಬಗ್ಗೆ ಏನು ಹೇಳದೆ ಇರೋದೆ ಉತ್ತಮ ಎಂದಿದ್ದಾರೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Dec 30, 2020, 1:50 PM IST